ಇದೀಗ ಬಂದ ಸುದ್ದಿ : ಸೋನಲ್ ಮೊದಲ ಚಿತ್ರ ಬಿಡುಗಡೆಯಾಗಿದೆ !
Team Udayavani, Apr 21, 2017, 3:45 AM IST
ಸೋನಲ್ ಸೆಹಗಲ್ ಎಂಬ ನಟಿಯ ಹೆಸರು ಬಾಲಿವುಡ್‌ನಲ್ಲಿ ಪದೇ ಪದೇ ಕೇಳಿ ಬರುವುದಿಲ್ಲ. ಆದರೆ, ಯಾವಾಗಲಾದರೊಮ್ಮೆ ಸೋನಲ್ ಸುದ್ದಿ ಮಾಡಿದಳೆಂದರೆ ಅದಕ್ಕೆ ಬಲವಾದ ಕಾರಣಗಳಿರುತ್ತವೆ. ಅಷ್ಟಕ್ಕೂ ಯಾರು ಈ ಸೋನಲ್ ಸೆಹಗಲ್ ಎಂದು ಕೇಳಿದ್ದೀರಾ?
ಈಕೆ ಬಾಲಿವುಡ್‌ನ ಎ ಗ್ರೇಡ್ ನಟಿಯಲ್ಲ. ಆಗೊಮ್ಮೆ ಈಗೊಮ್ಮೆ ಬಂದು ಮುಖ ತೋರಿಸುವ ಹೋಗುವ ಅಪರೂಪದ ನಟಿ. ಈಕೆಯ ಮೂಲವಿರುವುದು ಕಿರುತೆರೆಯಲ್ಲಿ. ಹಲವು ಜನಪ್ರಿಯ ಹಿಂದಿ ಧಾರಾವಾಹಿಗಳ ನಾಯಕಿಯೇ ಸೋನಲ್. ಹಾಗೆಂದು ಬಾಲಿವುಡ್‌ಗೆ ಹೊಸಬಳು ಎನ್ನುವಂತಿಲ್ಲ. ಮೊದಲ ಚಿತ್ರದಲ್ಲಿ ನಟಿಸಿ 12 ವರ್ಷ ಆಯಿತು. ಯು, ಬೊಮಿÕ ಆ್ಯಂಡ್ ಮಿ ಅವಳ ಮೊದಲ ಚಿತ್ರ. ವಿಶೇಷವೆಂದರೆ, ಇದು ಬಿಡುಗಡೆಯಾಗಲೇ ಇಲ್ಲ. ಏಳು ವರ್ಷ ಹಿಂದೆ ಜಾನ್ ಅಬ್ರಹಾಂ ಎದುರು ನಾಯಕಿಯಾಗಿ ನಟಿಸಿದ ಆಶಾಯೇ ಸೋನಲ್‌ಗೆ ತುಸು ಹೆಸರು ತಂದುಕೊಟ್ಟ ಸಿನೆಮಾ. ಅಧಿಕೃತವಾಗಿ ಇದು ಅವಳ ಮೊದಲ ಚಿತ್ರ.
ಅಂದ ಹಾಗೆ ಅವಳನ್ನು ನಾಯಕಿ ಮಾಡಿದ ನಿರ್ದೇಶಕ ನಾಗೇಶ್ ಕುಕನೂರ್. ಅಂತಹ ಪ್ರಸಿದ್ಧ ನಿರ್ದೇಶಕನ ಚಿತ್ರದಲ್ಲಿ ನಟಿಸಿಯೂ ಸೋನಲ್‌ಗೆ ಮುಂದೆ ಉತ್ತಮ ಅವಕಾಶಗಳು ಸಿಗದಿದ್ದದ್ದು ಅವಳ ದುರಾದೃಷ್ಟ. ರೇಡಿಯೊ, ಜಾನೇ ಕಹಾಂ ಸೇ ಆಯೀ ಹೈ, ಫ್ಯೂಚರ್ ತೋ ಬ್ರೈಟ್ ಹೈ ಜೀ, ಮಂಟೋಸ್ಥಾನ್ ದಮಾದಮ್¾ – ಇವೆಲ್ಲ ಸೋನಲ್ ನಟಿಸಿದ ಚಿತ್ರಗಳು. ಚಿತ್ರಗಳೇನೋ ಚೆನ್ನಾಗಿದ್ದವು, ಆದರೆ ಎಲ್ಲವೂ ತೋಪಾಗಿದ್ದವು. ಹೀಗಾಗಿ ಸೋನಲ್‌ಳ ಹಿರಿತೆರೆ ಕನಸು ಈಡೇರಲೇ ಇಲ್ಲ. ಇದೀಗ ಸೋನಲ್ ಎರಡು ಕಾರಣಗಳಿಗೆ ಸುದ್ದಿಯಾಗಿದ್ದಾಳೆ. ಒಂದು, ಅವಳೇ ಚಿತ್ರ ನಿರ್ದೇಶನದ ತಯಾರಿ ನಡೆಸುತ್ತಿದ್ದಾಳೆ. ಎರಡನೆಯದಾಗಿ ದೇಶವ್ಯಾಪಿ ನಡೆಯುತ್ತಿರುವ ವರ್ಣಬೇಧ ಚರ್ಚೆಯಲ್ಲಿ ಅವಳೂ ಸಹಭಾಗಿಯಾಗಿದ್ದಾಳೆ. ಇದಕ್ಕೊಂದು ಕಾರಣವಿದೆ.
ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ಸೋನಲ್ ಕೂಡ ಯಾವುದೋ ಫೇಸ್‌ಕ್ರೀಮ್‌ಗೆ ರೂಪದರ್ಶಿಯಾಗಿದ್ದಳಂತೆ. ಬಿಳಿ ತ್ವಚೆಯೇ ಸೌಂದರ್ಯ ಎಂದು ಆ ದಿನಗಳಲ್ಲಿ ಜನರನ್ನು ನಂಬಿಸಿದ್ದು ತಪ್ಪು ಎನ್ನುವುದು ಅವಳಿಗೆ ಈಗ ಅರ್ಥವಾಗಿದೆಯಂತೆ. ಹೀಗಾಗಿ, ತನ್ನ ಅಂದಿನ ಜಾಹೀರಾತಿಗೆ ಅವಳು ಈಗ ವಿಷಾದ ವ್ಯಕ್ತಪಡಿಸಿದ್ದಾಳೆ. ರಾಜಕೀಯ ಕಾರಣಕ್ಕಾಗಿ ಅವಳ ಹೇಳಿಕೆ ಮಹತ್ವ ಪಡೆದುಕೊಂಡು ಜಗತ್ತಿಗೆ ಬಾಲಿವುಡ್‌ನಲ್ಲಿ ಸೋನಲ್ ಸೆಹಗಲ್ ಎಂಬ ನಟಿಯೊಬ್ಬಳು ಇದ್ದಾಳೆ ಎಂದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.