ಮಗಧೀರನ ಚೆಲುವೆಯ ಮದುವೆಯ ಸುದ್ದಿ ಜೋರಾಯ್ತು!
Team Udayavani, Nov 8, 2019, 4:00 AM IST
ಚಿತ್ರರಂಗದಲ್ಲಿ ನಟಿಯರ ಅದರಲ್ಲೂ ಬಹುಬೇಡಿಕೆಯ ನಾಯಕ ನಟಿಯರ ವಿವಾಹ ಮತ್ತಿತರ ಖಾಸಗಿ ವಿಷಯಗಳ ಬಗ್ಗೆ ಚಿತ್ರರಂಗದಲ್ಲಿ ಕೊಂಚ ಹೆಚ್ಚಾಗಿಯೇ ರಂಗುರಂಗಾಗಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಚಿತ್ರರಂಗದ ಮಂದಿಗೆ ಮತ್ತು ಸಿನಿಪ್ರಿಯರಿಗೂ ಅದೇನೋ ಇಂಥ ವಿಷಯಗಳ ಬಗ್ಗೆ ಕೊಂಚ ಹೆಚ್ಚಾಗಿಯೇ ಆಸಕ್ತಿಯಿರುತ್ತದೆ. ಈಗ ಟಾಲಿವುಡ್, ಕಾಲಿವುಡ್‌ನಿಂದ, ಬಾಲಿವುಡ್‌ವರೆಗೂ ಸಿನಿಪ್ರಿಯರಿಗೆ ಪೂಜಿತವಾಗಿರುವ ಮಗಧೀರ ಖ್ಯಾತಿಯ ಕಾಜಲ್ ಅಗರ್‌ವಾಲ್ ಬಗ್ಗೆಯೂ ಇಂಥದ್ದೇ ಸುದ್ದಿ ಹರಿದಾಡುತ್ತಿದೆ.
ಹೌದು, ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್ ಶೀಘ್ರದಲ್ಲೇ ಉದ್ಯಮಿ ಜೊತೆ ಮದುವೆ ಆಗಲಿದ್ದಾರೆ ಎಂದು ಸುದ್ದಿ ಬಾಲಿವುಡ್‌ನಿಂದ ಸೌತ್ ಇಂಡಿಯಾದ ಸಿನಿಮಾ ಇಂಡಸ್ಟ್ರಿಯವರೆಗೂ ಜೋರಾಗಿ ಹರಿದಾಡುತ್ತಿದೆ. ಇವೆಲ್ಲ ದಕ್ಕೂ ಕಾರಣವಾಗಿದ್ದು, ಇತ್ತೀಚೆಗೆ ಕಾಜಲ್ ಅಗರ್‌ವಾಲ್ ನೀಡಿರುವ ಹೇಳಿಕೆ.
ಕೆಲ ದಿನಗಳ ಹಿಂದೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಕಾಜಲ್ ಅವರಿಗೆ, ನಿರೂಪಕಿ ಲಕ್ಷ್ಮೀ ಮಂಚು, “ಮದುವೆ ಯಾವಾಗ?’ ಎಂದು ಪ್ರಶ್ನಿಸಿದ್ದಾರೆ. ಆಗ ಕಾಜಲ…, “ನಾನು ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ. ಆದರೆ ಮದುವೆಯಾಗುವ ವ್ಯಕ್ತಿ ಯಾರೆಂಬುದನ್ನು ಕಾಜಲ್ ರಿವೀಲ್ ಮಾಡಲಿಲ್ಲ. ಇದಾದ ಬಳಿಕ ಲಕ್ಷ್ಮೀ, ನಟಿ ಕಾಜಲ್ ಅವರಿಗೆ ತಮ್ಮ ಪತಿ ಹೇಗಿರಬೇಕೆಂದು ಪ್ರಶ್ನಿಸಿದ್ದಾರೆ. ಆಗ ಅವರು, “ಸಾಕಷ್ಟು ವಿಷಯಗಳಿದೆ. ಆದರೆ ಮುಖ್ಯವಾಗಿ ಅವರು ತುಂಬ ಕಾಳಜಿ ತೋರಿಸಬೇಕು ಹಾಗೂ ಆಧ್ಯಾತ್ಮಿಕನಾಗಿರಬೇಕು’ ಎಂದು ಕಾಜಲ್ ತಿಳಿಸಿದ್ದಾರೆ.
ಈ ಮೊದಲು ಬೇರೆ ಸಂದರ್ಶನದಲ್ಲಿ ಕಾಜಲ್, “ನಾನು ಚಿತ್ರರಂಗದವರನ್ನು ಮದುವೆಯಾಗುವುದಿಲ್ಲ. ಚಿತ್ರರಂಗದಲ್ಲಿ ಇರದ ವ್ಯಕ್ತಿ ಜೊತೆ ಡೇಟ್ ಮಾಡುತ್ತೇನೆ’ ಎಂದು ಹೇಳಿದ್ದರು. ಸದ್ಯ ಈಗ ಕಾಜಲ್ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇದರ ನಡುವೆಯೇ ವೆಬ್‌ಸೈಟ್ ಒಂದು, ಕಾಜಲ್ ಅವರಿಗೆ ಅವರ ಪೋಷಕರೇ ಮದುವೆಯ ತಯಾರಿ ಮಾಡಿಕೊಳ್ಳುತ್ತಿದ್ದು, ಹುಡುಗನನ್ನು ಹುಡುಕಿದ್ದಾರೆ. ಇದು ಅರೆಂಜ್ಡ್ ಮ್ಯಾರೇಜ್ ಆಗಿದೆ ಎಂದು ವರದಿ ಮಾಡಿದೆ.
ಸದ್ಯ ನಟ ಕಮಲ್ ಹಾಸನ್ ನಟಿಸುತ್ತಿರುವ ಇಂಡಿಯನ್-2 ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಾಜಲ್, ಮದುವೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.