ನಿಧಿ ಸಂಗ್ರಹ
Team Udayavani, Mar 9, 2018, 8:15 AM IST
ಮುನ್ನಾ ಮೈಕೆಲ್ ಎಂಬ ವಿಫಲ ಚಿತ್ರದ ನಾಯಕಿ ನಿಧಿ ಅಗರ್ವಾಲ್‌ಳನ್ನು ಒನ್ ಫಿಲ್ಮ್ ವಂಡರ್ ಹೀರೊಯಿನ್ ಎಂದು ಕಿಚಾಯಿಸುತ್ತಿದ್ದರು. ಭಾರೀ ನಿರೀಕ್ಷೆ ಇಟ್ಟುಕೊಂಡು ನಟಿಸಿದ್ದ ಮುನ್ನಾ ಮೈಕೆಲ್ ಹೇಳಿಕೊಳ್ಳುವಂತಹ ಯಶಸ್ಸು ಕಾಣದಿದ್ದಾಗ ನಿಧಿಯ ಬಾಲಿವುಡ್ ಪಯಣ ಅಲ್ಲಿಗೆ ಮೊಟಕುಗೊಂಡಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ತೆಲುಗಿನಲ್ಲಿ ಸವ್ಯಸಾಚಿ ಎಂಬ ಚಿತ್ರವೊಂದಕ್ಕೆ ನಿಧಿ ನಾಯಕಿಯಾಗಿದ್ದಾಳೆ. ಇದರ ಬೆನ್ನಿಗೆ ಇನ್ನೂ ಎರಡು ತೆಲುಗು ಹಾಗೂ ಒಂದು ತಮಿಳು ಚಿತ್ರದ ನಿರ್ಮಾಪಕರು ಅವಳನ್ನು ಸಂಪರ್ಕಿಸಿದ್ದಾರಂತೆ. ಇಷ್ಟು ಮಾತ್ರವಲ್ಲ ಈಗ ಬಾಲಿವುಡ್‌ನಿಂದಲೂ ಕರೆಗಳು ಬರತೊಡಗಿದೆಯಂತೆ. ಹೀಗೆ ಮೂಲೆಗುಂಪಾದಳು ಎಂದು ಭಾವಿಸಲಾಗಿದ್ದ ನಿಧಿ ಏಕಾಏಕಿ ಎದ್ದು ನಿಂತಿದ್ದಾಳೆ. ಇಷ್ಟಕ್ಕೂ ಇದಕ್ಕೆಲ್ಲ ಕಾರಣವಾಗಿದ್ದು ಅವಳ ಮೋಡೆಲಿಂಗ್ ಹವ್ಯಾಸ. ಸಿನೆಮಾಕ್ಕೆ ಬರುವ ಮೊದಲೂ ನಿಧಿ ಮಾಡೆಲಿಂಗ್ ಮಾಡುತ್ತಿದ್ದಾಳೆ. ಇದೀಗ ಹೊಸದಾಗಿ ಒಳ ಉಡುಪು ಬ್ರಾಂಡ್ ಒಂದರ ಅಂಬಾಸಿಡರ್ ಆಗಿದ್ದಾಳೆ. ಇದರ ಹಸಿಬಿಸಿ ಜಾಹೀರಾತುಗಳನ್ನು ನೋಡಿದವರು ನಿಧಿ ನಿಜಕ್ಕೂ ಸೌಂದರ್ಯದ ನಿಧಿ ಎಂದು ಹೇಳುತ್ತಿದ್ದಾರೆ. ಇದರ ಪರಿಣಾಮವಾಗಿಯೇ ನಿಧಿಗೆ ತೆಲುಗು ತಮಿಳಿನಿಂದ ಅವಕಾಶಗಳು ಬರುತ್ತಿವೆ. ಅಂದ ಹಾಗೆ ನಿಧಿ ಬೆಂಗಳೂರಿನ ಹುಡುಗಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹುಟ್ಟಿ, ಬೆಳೆದದ್ದು, ಕಲಿತದ್ದೆಲ್ಲ ಬೆಂಗಳೂರಿನಲ್ಲೇ.ಆದರೆ ಅವಕಾಶ ಅರಸಿಕೊಂಡು ಹೋದದ್ದು ಮಾತ್ರ ಮುಂಬಯಿಗೆ. ಆದರೆ ಮುಂಬಯಿಯಲ್ಲಿ ಆರಂಭದ ದಿನಗಳು ಬಹಳ ಕಷ್ಟದಾಯಕವಾಗಿತ್ತು. ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅವಳನ್ನು ಆರು ತಿಂಗಳ ಬಳಿಕ ಮನೆಮಾಲಕರು ಯಾವುದೋ ಕುಂಟು ನೆಪ ಹೇಳಿ ಮನೆಯಿಂದ ಹೊರಗೆ ಹಾಕಿದ್ದರಂತೆ. ಈ ಸಂದರ್ಭದಲ್ಲಿ ಟೈಗರ್ ಶ್ರಾಫ್ ನಾಯಕನಾಗಿದ್ದ ಮುನ್ನಾ ಮೈಕೆಲ್ ಚಿತ್ರ ಸಿಗದಿರುತ್ತಿದ್ದರೆ ನಿಧಿ ಅಕ್ಷರಶಃ ಬೀದಿ ಪಾಲಾಗುತ್ತಿದ್ದಳು. ಸಿನೆಮಾ ರಂಗಕ್ಕೆ ಅಗತ್ಯವಿರುವ ಡ್ಯಾನ್ಸ್, ಕರಾಟೆ, ಕುದುರೆ ಸವಾರಿ ಎಲ್ಲದರಲ್ಲೂ ಪಳಗಿರುವ ನಿಧಿಗೆ ಈಗ ಬೇಕಾಗಿರುವುದು ಉತ್ತಮ ಚಿತ್ರಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.