ಆಹಾ ಮೂಗುತಿಯೆ !


Team Udayavani, Dec 8, 2017, 3:56 PM IST

08-35.jpg

ಅನಾದಿ ಕಾಲದಿಂದಲೂ ಹೆಣ್ಣು ಮಕ್ಕಳು ಮೂಗುತಿ ಧರಿಸುತ್ತಿದ್ದಾರೆ. ವಜ್ರ, ಚಿನ್ನ, ಬೆಳ್ಳಿ, ಮುತ್ತು, ಹವಳ, ರತ್ನಗಳಿಗೆ ಸೀಮಿತವಾಗದೆ ಈ ಒಡವೆ ಪ್ಲಾಸ್ಟಿಕ್‌, ಗಾಜು, ತಾಮ್ರ, ಕಂಚು ಹಾಗೂ ಮರದ ತುಂಡಿನಿಂದಲೂ ತಯಾರಿಸಲ್ಪಡುತ್ತದೆ. ಹೂವು, ಸೂರ್ಯ, ಚಂದ್ರ, ನಕ್ಷತ್ರದಂಥ ಆಕೃತಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೂಗುತಿ ಇದೀಗ ಅಕ್ಷರಗಳು ಮತ್ತು ಪದಗಳ ಆಕೃತಿಯಲ್ಲೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಾಗಿ ಅಮ್ಮ, ಅಜ್ಜಿ ಮದುವೆಗೆ ತೊಟ್ಟ ನತ್ತು ಅಥವಾ ಮೂಗುತಿ ಮತ್ತೆ ಫ್ಯಾಷನ್‌ನ ಲೋಕಕ್ಕೆ ಮರಳಿ ಬಂದಿವೆ.

ಮೂಗುತಿಯಲ್ಲಿ ಅಕ್ಷರ
ನಿಮ್ಮ ಹೆಸರು, ಮಗುವಿನ ಅಥವಾ ಪ್ರೀತಿಪಾತ್ರರ ಹೆಸರು, ಜನ್ಮ ದಿನಾಂಕ, ಶ್ರೀ, ಓಂ, ಸ್ವಸ್ತಿಕ್‌, ಶಿಲುಬೆಯ ಆಕೃತಿ ಮುಂತಾದವುಗಳನ್ನು ತೊಟ್ಟು ಮಹಿಳೆಯರು ತಮ್ಮ ಮೂಗಿನ ಅಂದವನ್ನು ಹೆಚ್ಚಿಸುತ್ತಿದ್ದಾರೆ. ಮಹಿಳೆಯರು ಇಂಥದ್ದೇ ಅಕ್ಷರ ಅಥವಾ ಪದಗಳುಳ್ಳ ವಿನ್ಯಾಸದ ಮೂಗುತಿ ಬೇಕು ಎಂದು ಸೋನಾಗಾರದಲ್ಲಿ ಬೇಡಿಕೆ ಇಡುತ್ತಿದ್ದಾರೆ. ಈ ಫ್ಯಾಷನ್‌ನ ಪ್ರಭಾವ ಮದುವೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಎತ್ನಿಕ್‌ ಡೇಯಂಥ ಸಮಾರಂಭ, ಹಬ್ಬ ಮತ್ತು ಪೂಜೆಗಳ ದಿನ ಕಾಣಸಿಗುತ್ತದೆ.

ಮೂಗುತಿಯಲ್ಲಿ ಘಲ್‌ ಘಲ್‌
ಗೆಜ್ಜೆಗಳು ಸದ್ದು ಮಾಡುತ್ತವೆ ಎಂದು ಎಲ್ಲರಿಗೂ ಗೊತ್ತು. ಈಗ ಸದ್ದು ಮಾಡುವ ಮೂಗುತಿಯೂ ಸಿಗುತ್ತೆ. ಅದು ಹ್ಯಾಂಗಿಂಗ್ಸ್‌ ಮತ್ತು ಟ್ಯಾಸೆಲ್ಸ್‌ ಇರುವ ಮೂಗುತಿ. ಪುಟ್ಟದಾದ ಮಗುವಿನ ಪಾದದ ಆಕೃತಿಯ ಮೂಗುತಿಯನ್ನು ಗರ್ಭಿಣಿಯರು ತೊಡುತ್ತಿದ್ದಾರೆ. ನಿಶ್ಚಿತಾರ್ಥವಾಗಿರೋ ಮಹಿಳೆಯರು, ಮದುವೆ ಆಗಲಿರೋ ಗಂಡಿನ ಹೆಸರನ್ನು ಅಥವಾ ಅವನ ಪೆಟ್‌ನೆàಮ್‌ ಅನ್ನು ಮೂಗುತಿಯಾಗಿ ತೊಡುತ್ತಿದ್ದಾರೆ. ತಮ್ಮ ಸಾಕುಪ್ರಾಣಿಗಳ ಹೆಸರನ್ನು ಮೂಗುತಿಯಲ್ಲಿ ಅರಳಿಸಿಕೊಂಡವರೂ ಇದ್ದಾರೆ. ಶ್ವಾನಪ್ರಿಯರ ಮೂಗಿನ ಮೇಲೆ ನಾಯಿಯ ಆಕೃತಿಯಿದ್ದರೆ, ಬೆಕ್ಕನ್ನು ಇಷ್ಟಪಡುವವರು ಬೆಕ್ಕನ್ನು ಮೂಗಿನ ಮೇಲೇರಿಸಿಕೊಳ್ಳುತ್ತಾರೆ. ಇಂಥ ಭಿನ್ನ ಭಿನ್ನ ಆಕೃತಿಯ ಕಿವಿಯೋಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಆಹಾ ಮೂಗುತಿಯ ಆಕಾರವೆ!
ಹೃದಯಾಕಾರದ, ಮನೆಯ ಚಿತ್ರದ, ಜನ್ಮರಾಶಿ ಚಿಹ್ನೆಯ, ಹಾವು, ಮಿಂಚಿನ ಆಕೃತಿ, ಬಲ್ಬ್ , ಬಲೂನ್‌, ಬೀಗ, ಕೀಲಿಕೈ, ಪಾದರಕ್ಷೆ… ಹೀಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಆಯ್ಕೆಗಳು ಇವೆ. ಇಂಥ ಮುದ್ರೆಗಳು ಆನ್‌ಲೈನ್‌ನಲ್ಲೂ ಲಭ್ಯವಿವೆ. ಪರ್ಸನಲೈಸ್ಡ್ ಅಥವಾ ಕಸ್ಟಮೈಸ್ಡ್ ಮೂಗಿನ ಬೊಟ್ಟು ಮಾಡಿಕೊಡುವ ಅಂಗಡಿ ಮತ್ತು ಆನ್‌ಲೈನ್‌ ಸರ್ವಿಸ್‌ಗಳು ಲಭ್ಯ ಇರುವ ಕಾರಣ ಮೂಗುತಿಯನ್ನು ಉಡುಗೊರೆಯಾಗಿಯೂ ನೀಡಬಹುದು!

ಹಾಯ್‌ ಮೂಗುತಿ !
ಮೂಗು ಚುಚ್ಚಿಸಿಕೊಳ್ಳಲು ಇಷ್ಟವಿಲ್ಲದೇ ಇರುವವರೂ ಈ ಫ್ಯಾಷನ್‌ ಫಾಲೋ ಮಾಡಬಹುದು. ಇಂಥ ಮೂಗುತಿಗಳು  ಕ್ಲಿಪ್‌ ಅಥವಾ ಹುಕ್‌ ರೂಪದಲ್ಲೂ ಸಿಗುತ್ತದೆ. ಹಾಗಾಗಿ, ಮೂಗು ಚುಚ್ಚಿಸಿಕೊಳ್ಳುವ ತಾಪತ್ರಯವಿಲ್ಲ. ಮೂಗುತಿಯನ್ನು ಸಿಕ್ಕಿಸಿಕೊಳ್ಳಬಹುದು ಕೂಡ. ಉಟ್ಟ ಉಡುಪಿಗೆ ಹೋಲುವ ಮೂಗುತಿ ತೊಡಬೇಕಿದ್ದರೆ ಹುಕ್‌ ಅಥವಾ ಕ್ಲಿಪ್‌ ಮೂಗುತಿ ಉತ್ತಮ. ಉಟ್ಟ ಉಡುಪಿನಲ್ಲಿ ಕಮಲದ ಚಿಹ್ನೆ ಇದ್ದರೆ, ಅದೇ ಅಕೃತಿಯ ಮೂಗಿನ ಬೊಟ್ಟು ಹಾಕಿಕೊಳ್ಳಬಹುದು.

ಒಂದು ವೇಳೆ ನಿಮ್ಮ ಬಳಿ ಚಿನ್ನ ಅಥವಾ ಬೆಳ್ಳಿಯ ಮೂಗುತಿ ಈಗಾಗಲೇ ಇದ್ದರೆ, ಅದಕ್ಕೆ ಬೇಕಾದ ಹೊಸ ವಿನ್ಯಾಸ, ಆಕೃತಿ ನೀಡಿ ಹೊಸ ಲುಕ್‌ ಪಡೆಯಬಹುದು. ಆಗ ಮೂಗಿನ ಬೊಟ್ಟು ತೊಡುವುದು ಬೋರಿಂಗ್‌ ಎನಿಸಲಾರದು. ಮತ್ತೇಕೆ ತಡ? ಸಾಂಪ್ರದಾಯಿಕ ಮೂಗುತಿಗೆ ಹೊಸ ಟ್ವಿಸ್ಟ್‌ ನೀಡಿ ಅದನ್ನು ತೊಟ್ಟು ಮಿಂಚಿರಿ!

ಅದಿತಿ

ಟಾಪ್ ನ್ಯೂಸ್

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.