ಅಂದದ ಮೊಗಕೆ ಚೆಂದದ ಮೂಗುತಿಗಳು


Team Udayavani, Mar 16, 2018, 7:30 AM IST

a-15.jpg

ದೈನಂದಿನ ಜೀವನದಲ್ಲಿ  ಅನೇಕ ಬಗೆಯ ಆಭರಣಗಳನ್ನು ಪ್ರತಿಯೊಬ್ಬ ಮಹಿಳೆಯೂ ಬಳಸುತ್ತಲೇ ಇರುತ್ತಾಳೆ. ಆಭರಣಗಳು ಫ್ಯಾಷನೇಬಲ್ ಆಗಿರಬೇಕೆಂಬುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಅಂತಹ ಆಭರಣಗಳಲ್ಲಿ ಮುಖದ ಅಂದವನ್ನು ಹೆಚ್ಚಿಸುವ ಆಭರಣಗಳಲ್ಲೊಂದು ಮೂಗುತಿ. ಈ ಮೂಗುತಿಯು ಕೇವಲ ಒಂದು ಫ್ಯಾಷನ್‌ ಆಭರಣವಾಗಿರದೆ ತನ್ನದೇ ಆದ ವೈಜ್ಞಾನಿಕವಾದ ಕಾರಣದಿಂದ ಆರೋಗ್ಯಕ್ಕೆ ಸಂಬಂಧಿಸಿದ  ಮಹತ್ವವನ್ನು  ಹೊಂದದೆ  ಆಯುರ್ವೇದದ ಪ್ರಕಾರ ಮಹಿಳೆಯ ಎಡಮೂಗಿನ ಮೂಗುತಿಯ ರಂಧ್ರದ ಭಾಗವು ಮಹಿಳೆಯ ಗರ್ಭಕೋಶಕ್ಕೆ  ಸಂಬಂಧಿಸಿರುವುದರಿಂದ ರೆಪೊ›ಡಕ್ಟೀವ್‌ ಸಿಸ್ಟಮ್ಮನ್ನು ಸೂಕ್ತವಾಗಿ ಕಾರ್ಯನಿರ್ವಹಿಸುವಲ್ಲಿ ಸಹಾಯಕ ಈ ಮೂಗುತಿಗಳು. ಮೂಗುತಿಗಳು ಅಥವಾ ನತ್ತುಗಳು ಮಹಿಳೆಯ ಶೃಂಗಾರಗಳಲ್ಲೊಂದಾಗಿದೆ. ಇವುಗಳು ಮೂಗಿನ ಅಂದವನ್ನು ಮತ್ತು ಮುಖದ ಅಂದವನ್ನು ಕೂಡ ಹೆಚ್ಚಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇಂದಿನ ಕಾಲದಲ್ಲಿ ಮೂಗನ್ನು ಚುಚ್ಚಿಸಿಕೊಳ್ಳುವವರು ಕಡಿಮೆಯಾದರೂ ಕೂಡ ನಾನಾ ಮಾದರಿಗಳಲ್ಲಿ ದೊರೆಯುವ ಮೂಗುತಿಗಳನ್ನು ಧರಿಸಲು ಇಚ್ಛಿಸುತ್ತಾರೆ. ಅಂಥವರಿಗಾಗಿ ನೋಸ್‌ ರಿಂಗುಗಳು ಕ್ಲಿಪ್‌ ಮಾದರಿಯಲ್ಲಿಯೂ ದೊರೆಯುವುದರಿಂದ ಫ್ಯಾಷನ್‌ಪ್ರಿಯರ ಆಕರ್ಷಣೆಗೊಳಗಾಗುತ್ತದೆ ಈ ಬಗೆಯ ನೋಸ್‌ ರಿಂಗುಗಳು. ಕೇವಲ ಸಾ‌ಂಪ್ರದಾಯಿಕ ಆಭರಣವಾಗಿ ಬಳಸಲ್ಪಡುತ್ತಿದ್ದ ಈ ಮೂಗುತಿಗಳು ಕಾಲಕ್ರಮೇಣ ಟ್ರೆಂಡಿ ಆಭರಣವಾಗಿ ಪರಿಣಮಿಸಿ ಇಂದು ಹಲವು ಬಗೆಗಳಲ್ಲಿ ದೊರೆಯತೊಡಗಿವೆ. 

ಬುಡಕಟ್ಟು ಜನಾಂಗದವರ ಮೂಗತಿಗಳ ಕ್ರಮಗಳನ್ನು ಅವಲೋಕಿಸಿದಾಗ ಕಂಡುಬರುವ ಅಂಶವೆಂದರೆ ನಮ್ಮಂತೆ ಕೇವಲ ಒಂದು ಮೂಗುತಿಗೆ ರಂಧ್ರವಿರದೆ ಬಗೆ ಬಗೆಯ ರೀತಿಯಲ್ಲಿ ಮೂಗನ್ನು ಚುಚ್ಚುವಂತಹ ಕ್ರಮಗಳನ್ನು ಕಾಣಬಹುದಾಗಿದೆ.  ಮೂಗಿನ ವಿವಿಧ ಭಾಗಗಳಲ್ಲಿ ರಂಧ್ರಗಳನ್ನು ಮಾಡಿ ಆಭರಣಗಳನ್ನು ಧರಿಸುವ ಪದ್ಧತಿಯನ್ನು ಕಾಣಬಹುದಾಗಿದೆ. ಅವೇ ವಿಧಾನಗಳಿಂದ ಪ್ರೇರಿತವಾಗಿ ಮೂಗಿನ ಬೇರೆ ಬೇರೆ ಭಾಗಗಳಲ್ಲಿ ಆಭರಣಗಳನ್ನು ಧರಿಸುವುದು ಇಂದಿನ ಫ್ಯಾಷನ್‌ ಲೋಕದ ಹೊಸದಾದ ಮತ್ತು ಹಾಟ… ಫೇವರೆಟ್ ಟ್ರೆಂಡ್‌ ಎನಿಸಿವೆ. ಅವುಗಳಲ್ಲಿ ಕೆಲವು ಇಂತಿವೆ:

1ನಾಸ್ಟ್ರಿಲ್ ಭಾಗದಲ್ಲಿ ಮೂಗುತಿಗಳು: ಮೂಗುತಿಯ ಸಾಂಪ್ರದಾಯಿಕ ಸ್ಥಾನವಾದ ನಾಸ್ಟ್ರಿಲ… ಭಾಗದಲ್ಲಿ ಒಂದು ರಂಧ್ರವನ್ನು ಮಾಡಿ ಬೇಕಾದ ಬಗೆಯ ಮೂಗುತಿಗಳನ್ನು ಧರಿಸುವ ಮಾದರಿಯಾಗಿದ್ದು ಸಾಮಾನ್ಯವಾಗಿ ಎಲ್ಲರೂ ಬಳಸುವಂತಹ ಬಗೆಯಾಗಿದೆ. ಬೇರೆ ಬೇರೆ ಬಗೆಯ ಮೂಗುತಿಗಳು ಲಭಿಸುವುದರಿಂದ ಈ ಮಾದರಿಯನ್ನೂ ಸ್ಟೈಲಿಶ್‌ ಆಗಿ ಕಾಣುವಂತೆ ಮಾಡಿಕೊಳ್ಳಬಹುದಾಗಿದೆ. 

2ಡಬಲ್ ನಾಸ್ಟ್ರಿಲ್ ಮೂಗುತಿಗಳು: ಹೆಸರೇ ಹೇಳುವಂತೆ ಎರಡು ರಂಧ್ರಗಳನ್ನು ಮಾಡಿಕೊಂಡು ಮೂಗು‌ತಿಗಳನ್ನು ಧರಿಸುವ ಕ್ರಮವಿದು. ಬಹಳ ಸ್ಟೈಲಿಶ್‌ ಲುಕ್ಕನ್ನು ನೀಡುವುದರಿಂದ ಹೆಚ್ಚು ಟೀನೇಜರ್ಸ್‌ ಇವುಗಳತ್ತ ಬೇಗ ಆಕರ್ಷಿತರಾಗುತ್ತಾರೆ.

3ಟ್ರಿಪಲ್ ನಾಸ್ಟ್ರಿಲ್ ಮೂಗುತಿಗಳು: ಮೂರು ರಂಧ್ರಗಳ ಚುಚ್ಚಿಸಿಕೊಳ್ಳುವಿಕೆಯಿಂದಾಗುವ ಮಾದರಿಯಿದು. ಇಲ್ಲಿಯೂ ಸಹ ಬ್ಲ್ಯಾಕ್‌ವೆುಟಲ್ ಚಿಕ್ಕ ಚಿಕ್ಕ ಮೂಗುತಿಗಳನ್ನು ಮೂರು ರಂಧ್ರಗಳಲ್ಲಿ ಧರಿಸಿ ಮಾಡರ್ನ್ ಲುಕ್ಕನ್ನು ಪಡೆಯುವುದು ಪ್ರಚಲಿತವಾದ ಬಗೆಯಾಗಿದೆ.

4ಹೈ ನಾಸ್ಟ್ರಿಲ್ : ಮೂಗಿನ ಮೇಲ್ಭಾಗದಲ್ಲಿ ರಂಧ್ರವನ್ನು ಮಾಡಿಕೊಂಡು ಮೂಗುತಿಗಳನ್ನು ಹಾಕಿಕೊಳ್ಳುವುದು ಫ್ಯಾಷನೇಬಲ್ ಲುಕ್ಕನ್ನು ನೀಡುತ್ತವೆ. ಆದರೆ ಈ ಬಗೆಯಲ್ಲಿ ಆಭರಣಗಳಲ್ಲಿ ಬಹಳ ಆಯ್ಕೆಗಳಿರುವುದಿಲ್ಲ ಬದಲಾಗಿ ಸ್ಟಡ್‌ಗಳು ಮತ್ತು ನೋಶ್‌ ಸೂಗಳು ಮಾತ್ರ ಹೊಂದುತ್ತವೆ. ಇವುಗಳು ಯುನಿಕ್‌ ಎನಿಸುವ ಬಗೆಯವಾಗಿದ್ದು ಬಹಳ ಟ್ರೆಂಡಿ ಲುಕ್ಕನ್ನು ನೀಡುತ್ತವೆ.

5ಸೆಪ್ಟಮ… ನಾಸ್ಟ್ರಿಲ್: ಮೂಗಿನ ವಿಭಾಜಕ ಭಿತ್ತಿ (ಮೂಗಿನ ಒಳಾಂಗಣದ ನಡುಗೋಡೆ) ಯಲ್ಲಿ  ರಂಧ್ರವನ್ನು ಮಾಡಿ ರಿಂಗುಗಳನ್ನು ಧರಿಸಬಹುದು. ಬಹಳ ಸ್ಟೈಲಿಶ್‌ ಆಗಿ ಕಾಣುವ ಈ ಸ್ಟೈಲ್ ಬುಡಕಟ್ಟು ಜನಾಂಗದ ಮಹಿಳೆಯರು ತೊಡುವುದನ್ನು ಕಾಣಬಹುದಾಗಿದೆ. 

6ವರ್ಟಿಕಲ್ ಟಿಪ್‌: ಮೂಗಿನ ತುದಿಯಲ್ಲಿ ರಂಧ್ರವನ್ನು ಮಾಡಿ ಇಲ್ಲಿ  ಸ್ಟಡ್‌ ಅಥವಾ ನೋಸ್‌ ಸೂಗಳನ್ನು ಧರಿಸಬಹುದು. 
ಈ ಮೇಲಿನ ಹಲವು ಬಗೆಗಳು ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಕಾಣಸಿಗದಿದ್ದರೂ ಕೂಡ ಮಹಾನಗರಗಳಲ್ಲಿ ಈ ಬಗೆಯ ಪ್ಯಾಷನ್‌ ಕಾಣಸಿಗುತ್ತವೆ. ಇವುಗಳನ್ನು ನೀವೂ ಕೂಡ ಪ್ರಯೋಗಿಸಿ ನೋಡಬಹುದು. ಸಾಧಾರಣವಾಗಿ ಧರಿಸುವ ಮೂಗುತಿಗಳಲ್ಲಿ ಹಲವು ವಿಧಗಳನ್ನು ನೋಡಬಹುದಾಗಿದೆ. ಅಂತಹ ಮೂಗುತಿಗಳ ಬಗೆಗಳನ್ನು ಮುಖ್ಯವಾಗಿ ಮೂರು ಪ್ರಕಾರಗಳಾಗಿ ವಿಂಗಡಿಸಬಹುದಾಗಿದೆ.

ಸಾಮಾನ್ಯ  ಮೂಗುತಿಗಳು: ಇವುಗಳು ದೈನಂದಿನ ಬಳಕೆಗೆ ಸೂಕ್ತವೆನಿಸುವ ಮೂಗುತಿಗಳು. ಇವುಗಳು ಸಾಧಾರಣ ಸ್ಟಡ್‌ಗಳು, ಬಂಗಾರದ ವಿವಿಧ ಆಕೃತಿಯ ಡಿಸೈನುಗಳುಳ್ಳ ಮೂಗುತಿಗಳು, ರಿಂಗಿಗಳು, ಹಾಲ್ ರಿಂಗುಗಳು, ಸ್ಟೋನ್ಸುಗಳಿರುವ ಮೂಗುತಿಗಳು, ಇತ್ಯಾದಿ ಬಗೆಯ ಮೂಗುತಿಗಳು ಲಭಿಸುತ್ತವೆ.  

ಮಾಡರ್ನ್ ಫ್ಯೂಷನ್‌ ಮೂಗುತಿಗಳು: ಬ್ಲ್ಯಾಕ್‌ ಮೆಟಲ್ಲುಗಳಿಂದ ತಯಾರಿಸಿದ ಫ್ಯೂಷನ್‌ ಮೂಗುತಿಗಳು ಕೂಡ ಲಭಿಸುತ್ತವೆ. ಇವುಗಳು ಹಲವು ಡಿಸೈನುಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಮಾಡರ್ನ… ಧಿರಿಸುಗಳಿಗೆ ಇವುಗಳು ಹೆಚ್ಚು ಸೂಕ್ತವೆನಿಸುತ್ತವೆ. 

ಸಾಂಪ್ರದಾಯಿಕ ಬ್ರೈಡಲ್ ಮೂಗುತಿಗಳು: ಮದುಮಗಳ ಅಲಂಕಾರಗಳಲ್ಲಿ ಬಳಸಲಾಗುತ್ತಿರುವ ಆಭರಣಗಳಲ್ಲಿ ಮೂಗುತಿಗಳೂ ಕೂಡ ಅತ್ಯಂತ ಮುಖ್ಯವಾದುದು. ಮೂಗುತಿಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಸಾಂಪ್ರದಾಯಿಕ ಡಿಸೈನುಗಳನ್ನೊಳಗೊಂಡು ಮದುವಣಗಿತ್ತಿಯ ಅಲಂಕಾರಕ್ಕೆಂದೇ ತಯಾರಿಸುವ ಮೂಗುತಿಗಳಿವು. ಬಹಳ ವೈವಿಧ್ಯಮಯವಾದ ಮಾದರಿಗಳಲ್ಲಿ ದೊರೆಯುವ ಇವುಗಳು ಮದುವಣಗಿತ್ತಿಯ ಅಲಂಕಾರವನ್ನು ಪರಿಪೂರ್ಣಗೊಳಿಸುತ್ತವೆ. ಅಂತಹ ಡಿಸೈನುಗಳಲ್ಲಿ ಕೆಲವನ್ನು ಈ ಕೆಳಗಿನಂತೆ ಚರ್ಚಿಸಲಾಗಿದೆ. ಬ್ರೈಡಲ್ ಮೂಗುತಿಗಳಲ್ಲಿ ಸದ್ಯದ ಟ್ರೆಂಡಿ ಮೂಗುತಿಯೆಂದರೆ ಚೈನ್‌ ಅನ್ನು ಒಳಗೊಂಡಿರುವ ರಿಂಗುಗಳು. ಆಕರ್ಷಕವಾದ ಮಾದರಿಗಲ್ಲಿ ದೊರೆಯುವ ಇವುಗಳು ಬ್ರೈಡಲ್ ಧಿರಿಸನ್ನು ಆಕರ್ಷಕವನ್ನಾಗಿಸುತ್ತವೆ. ಅಂತಹ ಕೆಲವು ಬ್ರೈಡಲ್ ನೋಸ್‌ ರಿಂಗುಗಳ ಬಗೆಗೆ ಮುಂದಿನ ಭಾಗದಲ್ಲಿ ನೋಡೋಣ.

ಪ್ರಭಾ ಭಟ್‌

ಟಾಪ್ ನ್ಯೂಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.