ನೌವಾರಿ ಸೀರೆಯೂ ಕುಪ್ಪಸವೂ


Team Udayavani, Aug 9, 2019, 5:00 AM IST

e-16

ಮಹಾರಾಷ್ಟ್ರ ರಾಜ್ಯ ಸಿರಿವಂತ ಸಂಸ್ಕೃತಿಯ ಆಗರ. ಇಲ್ಲಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ಸೊಗಡು ಬಲು ಅನುಪಮ.

ನೌವಾರಿ ಸೀರೆ ಮಹಾರಾಷ್ಟ್ರದ ಮಹಿಳೆಯರ ಸಾಂಪ್ರದಾಯಿಕ ಉಡುಗೆ. ಒಂಬತ್ತು ಯಾರ್ಡ್‌ಗಳಷ್ಟು ಉದ್ದದ ಅಂದದ ಸೀರೆಯನ್ನು ಉಡುವ ಶೈಲಿ ಭಾರತದಲ್ಲೇ ವೈಶಿಷ್ಟ್ಯಪೂರ್ಣ. ಧೋತಿಯಂತೆ ಸೀರೆ ಉಡುವ ಇಲ್ಲಿನ ಮಹಿಳೆಯರ ನೌವಾರಿ ಸೀರೆಯನ್ನು ವಿಶೇಷ ರೀತಿಯ ಸೆರಗಿನೊಂದಿಗೆ ಅಂದಗಾಣಿಸುತ್ತಾರೆ. ಈ ತರಹದ ಸೀರೆಗಳಿಗೆ ಲುಗಡ್‌ (LUGADE) ಎಂದೂ ಕರೆಯಲಾಗುತ್ತದೆ.

ಈ ನೌವಾರಿ ಸೀರೆಯನ್ನು ಉಡುವಾಗ ಕೆಲವರು ಪಾದಗಳವರೆಗೆ ಧೋತಿಯಂತೆ ತೊಟ್ಟರೆ ಇನ್ನು ಕೆಲವರು ಮೊಣಗಂಟಿನ ಉದ್ದಕ್ಕಿಂತ ಸ್ವಲ್ಪ ಹೆಚ್ಚು ಉದ್ದದಿಂದ ಉಡುತ್ತಾರೆ.

ಚೋಲಿ
ನೌವಾರಿ ಸೀರೆಯೊಂದಿಗೆ ಉಡುವ ಕುಪ್ಪಸವನ್ನು ಆಯಾ ಸಾಂಪ್ರದಾಯಿಕ ನೌವಾರಿ ಸೀರೆಯೊಂದಿಗೆ ಹೊಂದುವಂತೆ ಧರಿಸುತ್ತಾರೆ. ಸಾಮಾನ್ಯವಾಗಿ ಸಾಂಪ್ರದಾಯಿಕ ಸೀರೆಗಳ ರಂಗು ಹಸಿರು, ಕೆಂಪು ಹಾಗೂ ಹಳದಿಮಿಶ್ರಿತ ಕೇಸರಿ ಬಣ್ಣಗಳಲ್ಲಿ ಅಧಿಕವಾಗಿ ಕಾಣಸಿಗುತ್ತದೆ.

ನೌವಾರಿ ಸೀರೆಯನ್ನು ಹೆಚ್ಚಾಗಿ ಹತ್ತಿ ಅಥವಾ ರೇಶ್ಮೆಬಟ್ಟೆಯಿಂದ ತಯಾರಿಸುತ್ತಾರೆ. ಈ ಸೀರೆಯೊಂದಿಗೆ ವಿಶಿಷ್ಟ ಮೆರುಗು ನೀಡುವ ಮಹಾರಾಷ್ಟ್ರ ಮಹಿಳೆಯರ ಆಭರಣವೆಂದರೆ ಮೂಗಿನ ನತ್ತು! ಈ ವಿಶೇಷ ನತ್ತು ಅದರೊಂದಿಗೆ ಧರಿಸುವ ಹಾರ (ಕತ್ತಿನ ಆಭರಣ) ಹಾಗೂ ಕಿವಿಯೋಲೆಗಳೊಂದಿಗೆ ವಿಶಿಷ್ಟ ಛಾಪು ನೀಡುತ್ತದೆ ಮಹಿಳೆಯರಿಗೆ! ಕಾಲಿಗೆ ತೊಡುಗ “ಕೊಲ್ಹಾಪುರಿ’ ಪಾದರಕ್ಷೆಯೂ ಈ ದಿರಿಸಿಗೆ ಹೊಂದುವಂಥದ್ದೇ!

ಈ ನೌವಾರಿ ಸೀರೆಯನ್ನು ಉಟ್ಟು ತಮಾಶಾ, ಲಾವಣಿ ಮುಂತಾದ ನೃತ್ಯಗಳನ್ನು ಮಾಡುವುದು ಮಹಾರಾಷ್ಟ್ರದ ಮಹಿಳೆಯ ಮತ್ತೂಂದು ವೈಭವ. ಅಂತೆಯೇ ಪೊವಡಾ ಹಾಗೂ ಕೋಲಿ ಎಂಬ ಜಾನಪದ ನೃತ್ಯಗಳು ಅಷ್ಟೇ ವಿಶಿಷ್ಟ. ಮಹಾರಾಷ್ಟ್ರ ರಾಜ್ಯದ ಮಹಿಳೆಯರ ಮದುವೆಯ ಉಡುಗೆ ಹತ್ತುಹಲವು ಬಗೆಗಳನ್ನು ಹೊಂದಿದೆ. ಸಾಂಪ್ರದಾಯಿಕ ಸೀರಗಳಲ್ಲಿಯೇ ವಧುವಿಗೆ ವಿಶಿಷ್ಟ ಆಯ್ಕೆ ಮಾಡಲು ಹಲವು ಬಗೆಯ ಸೀರೆಗಳಿವೆ.

ವಧುವಿನ ವಿಶಿಷ್ಟ ಸೀರೆಯತ್ತ ಒಂದು ನೋಟ
ನೌವಾರಿ ಸಿಲ್ಕ್ ಸೀರೆ ಹೆಚ್ಚಿನ ವಧುಗಳ ಮೆಚ್ಚಿನ ಆಯ್ಕೆ. ಇದು ಜೀವನಪರ್ಯಂತ ಬಾಳಿಕೆ ಬರುವಂಥದ್ದು ! ಇಲ್ಲಿನ ವಧುಗಳು ಮೆಚ್ಚುವ ಇನ್ನೊಂದು ಸಾಂಪ್ರದಾಯಿಕ ಸೀರೆಯೆಂದರೆ ಕೊಲ್ಹಾಪುರಿ ರೇಶ್ಮೆ ಸೀರೆಗಳು. ಇನ್ನೊಂದು ವೈವಿಧ್ಯ ಪೈಠನಿ ರೇಶ್ಮೆ ಸೀರೆ.

ವಧುವಿನ ಕೊಲ್ಹಾಪುರಿ ರೇಶ್ಮೆ ಸೀರೆಯು 2-3 ಸಾವಿರ ರೂಪಾಯಿಗಳಿಂದ ಆರಂಭವಾಗಿ 20-40 ಸಾವಿರದವರೆಗೆ ವೈಭವೋಪೇತವಾಗಿ ಆಯ್ಕೆ ಹೊಂದಿದೆ.

ಕೊಲ್ಹಾಪುರಿ ರೇಶ್ಮೆ ಸೀರೆಯು ಹುಟ್ಟಿದ್ದು ಕೊಲ್ಹಾಪುರದಲ್ಲಿಯಾದರೂ, ಮಹಾರಾಷ್ಟ್ರದ ಈ ಸೀರೆಯು ಭಾರತದ ಹಲವೆಡೆ ಮಾತ್ರವಲ್ಲ , ವಿಶ್ವದ ಹಲವೆಡೆಯೂ ಪ್ರಸಿದ್ಧಿ ಪಡೆದಿದೆ, ಕೊಲ್ಹಾಪುರಿ ಪಾದರಕ್ಷೆಗಳಂತೆ!
ಈ ಬಗೆಯ ರೇಷ್ಮೆ ಸೀರೆಗಳಲ್ಲಿ ಅಧಿಕ ವರ್ಣಗಳ ಆಯ್ಕೆ ಕಡಿಮೆ. ಸಾಮಾನ್ಯವಾಗಿ ವಧುವು ವರನನ್ನು ಭೇಟಿಯಾಗುವ ಮದುವೆಯ ಮಂಟಪದಲ್ಲಿ ಹಸಿರು ಕೊಲ್ಹಾಪುರಿ ರೇಶ್ಮೆ ಸೀರೆಗೆ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚು.

ಮಹಾರಾಷ್ಟ್ರದ ವಧು ತೊಡುವ ಪೈಠನಿ ಸೀರೆ ವೈಭವೋಪೇತವಾಗಿ ಅಲಂಕೃತವಾಗಿರುತ್ತದೆ. ಈ ಸೀರೆ ವಿಶಿಷ್ಟ ಬಗೆಯ ಅಂಚು, ವಿನ್ಯಾಸ ಹೊಂದಿರುತ್ತದೆ. ನಡುನಡುವೆ ಜರತಾರಿ, ಮೋತಿ, ಹರಳುಗಳಿಂದಲೂ ಅಲಂಕೃತವಾಗಿರುತ್ತದೆ. ಐದು ಸಾವಿರದಿಂದ 50-60 ಸಾವಿರ ಬೆಲೆಯ ವಧುವಿನ ಪೈಠನಿ ಸೀರೆಗಳು ಎಲ್ಲೆಡೆ ಲಭ್ಯವಿರುತ್ತವೆ. ಈ ಸೀರೆಗಳ ವಿಶಿಷ್ಟ ತೆಯೆಂದರೆ ಗಾಢ ರಂಗುಗಳ ಆಯ್ಕೆ. ಗಾಢ ನೀಲಿ, ಕೇಸರಿ, ಗುಲಾಲಿ ಹಾಗೂ ನೇರಳೆ ಬಣ್ಣಗಳಿಂದ ಅಲಂಕೃತಗೊಂಡು ವಧುವು ನತ್ತು, ಝುಮಕಾ, ಮಾಂಗ್‌ ಠೀಕಾ ಹಾಗೂ ಹತ್ತುಹಲವು ಹಾರಗಳೊಂದಿಗೆ ವಿಶೇಷವಾಗಿ ಕಾಣಿಸುತ್ತಾರೆ.

ಇಂದು ಮಹಾರಾಷ್ಟ್ರ ರಾಜ್ಯದ ನೌವಾರಿ ವೈವಿಧ್ಯಮಯ ಸೀರೆಗಳು, ಕೊಲ್ಹಾಪುರಿ ರೇಷ್ಮೆ ಸೀರೆಗಳು ಮತ್ತೂಮ್ಮೆ ಮುಂಚಿಗಿಂತ ಹೆಚ್ಚು ಬೇಡಿಕೆ ಮತ್ತು ಜನಪ್ರಿಯತೆ ಪಡೆಯುತ್ತಿವೆ.

ಅದರಲ್ಲೂ ಪೈಠನಿ ಸೀರೆಗಳು ಮರಾಠಿ ಹಾಗೂ ಹಿಂದಿಯ “ಬಾಜಿರಾವ್‌ ಮಸ್ತಾನಿ’ ಮೊದಲಾದ ಸಿನೆಮಾಗಳಲ್ಲಿ ಕಾಣಿಸಿಕೊಂಡ ನಂತರ ಭಾರತದ ಎಲ್ಲೆಡೆ ಮಾತ್ರವಲ್ಲದೆ ವಿದೇಶಗಳಿಗೂ ರಫ್ತಾಗುತ್ತಿದೆ.
ಸಾಂಪ್ರದಾಯಿಕತೆಯೊಂದಿಗೆ ಆಧುನಿಕತೆಯ ಸಮಕಾಲೀನ ಬದಲಾವಣೆಗಳೊಂದಿಗೆ ಮರಾಠಿ ಮಹಿಳೆಯರ ತೊಡುಗೆ, ಸೀರೆಗಳನ್ನು ತೊಡುವ ಸಂಪ್ರದಾಯವನ್ನು ಇಂದಿಗೂ ಕಾಪಿಡುತ್ತಿವೆ.

ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.