ಆಫೀಸ್‌,ಲೇಡೀಸ್‌,ಕಮೆಂಟ್ಸ್‌ ,ಇತ್ಯಾದಿ


Team Udayavani, Sep 15, 2017, 6:05 AM IST

1-aa.jpg

“ವ್ಹಾ, ಮೇಡಂ ಸೂಪರ್‌… ಈ ಪಿಂಕ್‌ ಸೀರೆ ನಿಮಗೆ ಚೆನ್ನಾಗಿ ಒಪ್ಪುತ್ತದೆ. ಆಚೀಚೆ ಹೋಗುವಾಗ ಜಾಗ್ರತೆ’  ಪುರುಷ ಸಹೋದ್ಯೋಗಿಯ ಈ ರೀತಿಯ ಮಾತು ಹೆಣ್ಣುಮಕ್ಕಳಿಗೆ ಬಹಳ ಖುಷಿಕೊಡುತ್ತದೆ. ಆ ದಿನ ಆತ ಆಗೊಮ್ಮೆ ಈಗೊಮ್ಮೆ ತನ್ನತ್ತ ಕಣ್ಣು ಹಾಯಿಸಿದರಂತೂ ಆಕೆಗೆ ಮತ್ತೂ ಖುಷಿ. ಮತ್ತೆ ಯಾವಾಗಲಾದರೂ ಹೊಸ ಸೀರೆಯುಟ್ಟರೆ ಅವನಿಂದ ಅಂತಹ ಪ್ರತಿಕ್ರಿಯೆಗಾಗಿ ಕಾತರಿಸುತ್ತಾಳೆ. ಅವನಾಗಿ ಕಮೆಂಟ್‌ ಮಾಡದಿದ್ದರೆ ತಾನಾಗಿ ಕೇಳಿ ಮೆಚ್ಚುಗೆ ಗಿಟ್ಟಿಸುವ ಪ್ರಯತ್ನ ಮಾಡುತ್ತಾಳೆ. 

ಯಾವುದೇ ರೀತಿಯ ಕಚೇರಿಯಿರಲಿ, ಅಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳಿಬ್ಬರೂ ಇರುತ್ತಾರೆ. ಪ್ರತಿನಿತ್ಯವೂ ಉದ್ಯೋಗದ ಭಾಗವಾಗಿ ಇವರು ಪರಸ್ಪರ ಸಂವಹನ ನಡೆಸಲೇ ಬೇಕು. ಹಲವು ದಿನ, ತಿಂಗಳು ಅಥವಾ ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡುವಾಗ ಸಹೋದ್ಯೋಗಿಗಳಲ್ಲಿ ಪರಸ್ಪರ ಆತ್ಮೀಯತೆ ಬೆಳೆಯುವುದು ಸಹಜ. ದೀರ್ಘ‌ಕಾಲದ ಪರಿಚಯ ಹಾಗೂ ಆತ್ಮೀಯತೆಯು ಸುಖ-ದುಃಖಗಳನ್ನು ಹಂಚಿಕೊಳ್ಳುವಷ್ಟರಮಟ್ಟಿಗೆ ಗಾಢವಾಗುತ್ತದೆ. ಆದರೆ, ಈ ಆತ್ಮೀಯತೆಯು ಸ್ತ್ರೀ-ಪುರುಷರ ಮಧ್ಯೆ ಆಗಿರುವಾಗ ಮಹಿಳೆಯರು ಎಚ್ಚರವಹಿಸುವುದು ಒಳಿತು.

“”ವ್ಹಾ, ಮೇಡಂ ಸೂಪರ್‌… ಈ ಪಿಂಕ್‌ ಸೀರೆ ನಿಮಗೆ ಚೆನ್ನಾಗಿ ಒಪ್ಪುತ್ತದೆ. ಆಚೀಚೆ ಹೋಗುವಾಗ ಜಾಗ್ರತೆ”  ಪುರುಷ ಸಹೋದ್ಯೋಗಿಯ ಈ ರೀತಿಯ ಮಾತು ಹೆಣ್ಣುಮಕ್ಕಳಿಗೆ ಬಹಳ ಖುಷಿಕೊಡುತ್ತದೆ. ಆದಿನ ಆತ ಆಗೊಮ್ಮೆ ಈಗೊಮ್ಮೆ ತನ್ನತ್ತ ಕಣ್ಣು ಹಾಯಿಸಿದರಂತೂ ಆಕೆಗೆ ಮತ್ತೂ ಖುಷಿ. ಮತ್ತೆ ಯಾವಾಗಲಾದರೂ ಹೊಸ ಸೀರೆಯುಟ್ಟರೆ ಅವನಿಂದ ಅಂತಹ ಪ್ರತಿಕ್ರಿಯೆಗಾಗಿ ಕಾತರಿಸುತ್ತಾಳೆ. ಅವನಾಗಿ ಕಮೆಂಟ್‌ ಮಾಡದಿದ್ದರೆ ತಾನಾಗಿ ಕೇಳಿ ಮೆಚ್ಚುಗೆ ಗಿಟ್ಟಿಸುವ ಪ್ರಯತ್ನ ಮಾಡುತ್ತಾಳೆ. ಎಲ್ಲ ಸಹೋದ್ಯೋಗಿಗಳ ಬಳಿಯೂ ಇದೇ ರೀತಿ ಕಮೆಂಟ್‌ ಮಾಡುವುದು, ಆ ವ್ಯಕ್ತಿಯ ಅಭ್ಯಾಸವಾಗಿದ್ದರೆ ಅದರಿಂದ ತೊಂದರೆಯಾಗದು. ಆದರೆ, ನಿರ್ದಿಷ್ಟ ಒಬ್ಬರ ಬಳಿ ಮಾತ್ರ ಇಂತಹ ಕಮೆಂಟ್ಸ್‌  ಮುಂದುವರಿದಾಗ ಕಚೇರಿಯ ಇತರ ಸಿಬ್ಬಂದಿಯ ಮಧ್ಯೆ ಇವರ ಬಗ್ಗೆ ಗುಸುಗುಸು ಪ್ರಾರಂಭವಾಗುತ್ತದೆ. ಅನ್ಯರ ಬಗ್ಗೆ ಕಮೆಂಟ್ಸ್‌ ಮಾಡುವಾಗ ಸಾಕಷ್ಟು ಜಾಗ್ರತೆ ಅಗತ್ಯ. ಮಾತುಗಳನ್ನು ವಿವೇಚನೆಯಿಂದ ಬಳಸಬೇಕಾಗುತ್ತದೆ. ತೀರಾ ವೈಯಕ್ತಿಕವೆನಿಸುವ ಕಮೆಂಟ್ಸ್‌ಗಳಿಂದ ದೂರವಿರುವುದು ಒಳಿತು.

ಮಾತನಾಡುವಾಗ ಇನ್ನೊಬ್ಬರ ಮೇಲೆ ಕೈಹಾಕುವುದು, ಜೋಕುಗಳಿಗೆ ನಗುತ್ತ ಎದುರಿರುವವರಿಗೆ ಹೊಡೆಯುವುದು, ಇನ್ನೊಬ್ಬರ ಕೈಯಲ್ಲಿರುವ ವಸ್ತುವನ್ನು ಕಸಿದುಕೊಳ್ಳಲು ಮೇಲೇರಿ ಬಂದಂತೆ ವರ್ತಿಸುವುದು ಕೆಲವರ ಅಭ್ಯಾಸ. ಅನ್ಯರೊಂದಿಗಿನ ಈ ತರದ ವರ್ತನೆ ಇತರರು ಅಪಾರ್ಥ ಮಾಡಿಕೊಳ್ಳಲು ಎಡೆಯಾಗಬಹುದು. ಸ್ವತಃ ನಮ್ಮ ಈ ತರದ ವರ್ತನೆ ಸಹೋದ್ಯೋಗಿಗೆ ಇಷ್ಟವಾಗದೇ ಹೋಗಬಹುದು. ಕೆಲವರು ಇದನ್ನು “ಲವ್‌’ ಎಂದು ತಪ್ಪು ತಿಳಿದುಕೊಳ್ಳಲೂ ಕಾರಣವಾಗುತ್ತದೆ. ಯಾವುದೇ ನಕಾರಾತ್ಮಕ ಭಾವನೆಗಳಿಲ್ಲದೆ ಮೈಮುಟ್ಟಿದರೂ ಆ ವ್ಯಕ್ತಿ ಅಸಹ್ಯ ಪಟ್ಟುಕೊಳ್ಳುವ ಅಥವಾ ಪುಳಕಿತರಾಗುವ ಸಂಭವವಿರುತ್ತದೆ.  ಕೆಲವು ಜನರಿಗೆ ತಮ್ಮದೇ ಗುಂಪಿನವರೊಂದಿಗೆ ಮಾತನಾಡುವುದಕ್ಕಿಂತ ಅನ್ಯರೊಂದಿಗೆ ಮಾತನಾಡಲು, ಸಮಯ ಕಳೆಯಲು ಹೆಚ್ಚು ಆಸಕ್ತಿಯಿರುತ್ತದೆ. ಇದು ಅನಗತ್ಯ ಗಾಸಿಪ್‌ಗ್ಳಿಗೆ ಕಾರಣವಾಗಬಹುದು. ಅನ್ಯರೊಂದಿಗೆ ಹೊಡೆದು ಬಡಿದು ಆಟವಾಡಿ,ಮೈಮುಟ್ಟಿ ಮಾತನಾಡುವುದು ನಮ್ಮ ವರ್ಚಸ್ಸನ್ನು ಕುಂದಿಸುತ್ತದೆ. ನಮ್ಮ ಸ್ವಭಾವದ ಬಗ್ಗೆ ಲಘುಭಾವನೆ ಬರಲು ಕಾರಣವಾಗುತ್ತದೆ. 

ವ್ಯರ್ಥ ಅಪವಾದಗಳು
ಕಚೇರಿಯ ಸ್ತ್ರೀ-ಪುರುಷ ಸಿಬ್ಬಂದಿಗಳು ಜೊತೆಯಾಗಿ ದ್ವಿಚಕ್ರವಾಹನ ಅಥವಾ ಕಾರುಗಳಲ್ಲಿ ಸುತ್ತಾಡುವುದು, ಸಿನೆಮಾ, ಪಾರ್ಕ್‌, ಬೀಚ್‌, ಹೊಟೇಲ್‌ ಐಸ್‌ಕ್ರೀಮ್‌ ಪಾರ್ಲರ್‌ ಇತ್ಯಾದಿ ಕಡೆಗಳಲ್ಲಿ ಕಚೇರಿಯ ವೇಳೆಗೆ ಹೊರತಾಗಿ ಸುತ್ತಾಡುವುದು ಸಮಾಜದ ಮುಂದೆ ಅವರನ್ನು ಅಪಹಾಸ್ಯಕ್ಕೆಡೆಮಾಡಬಹುದು. ಹಲವು ಜನ ಸಹೋದ್ಯೋಗಿಗಳು ಒಟ್ಟಿಗೆ ಹೋದರೆ ಯಾರಿಗೂ ಏನೂ ಅನಿಸುವುದಿಲ್ಲ. ಆದರೆ ಒಂದು ನಿರ್ದಿಷ್ಟ  ಸಹೋದ್ಯೋಗಿಗಳು ಹಲವು ಸಲ ಹೀಗೆ ಒಟ್ಟಿಗೆ ತಿರುಗಾಡಿದರೆ ಇತರರು ಅದನ್ನು ನೋಡುವ ದೃಷ್ಟಿಕೋನ ಬೇರೆಯಿರುತ್ತದೆ.
 
ಕೆಲವು ಸೌಂದರ್ಯಾಸ್ವಾದಕರಾದ ಪುರುಷರು ಸುಂದರವಾಗಿರುವ, ಫ್ಯಾಶನೇಬಲ್‌ ಆಗಿರುವ ಸಹೋದ್ಯೋಗಿಗಳ ಜೊತೆ ವರ್ತಿಸುವುದಕ್ಕೂ, ಇತರ ಮಹಿಳಾ ಸಹೋದ್ಯೋಗಿಗಳೊಂದಿಗೆ ವರ್ತಿಸುವುದಕ್ಕೂ ವ್ಯತ್ಯಾಸವಿರುತ್ತದೆ. ಇದರಿಂದ ಅವರು ಉಳಿದವರ ಕೆಂಗಣ್ಣಿಗೆ, ಅಸೂಯೆಗೆ ಕಾರಣವಾಗುತ್ತಾರೆ. ಇರುವುದೂ, ಇಲ್ಲದ್ದೂ ಆದ ಕತೆಗಳು ಹುಟ್ಟಿ , ಪ್ರಸಾರವಾಗುವುದಕ್ಕೆ, ವೈವಾಹಿಕ-ಕೌಟುಂಬಿಕ ಜೀವನದಲ್ಲಿ ಅಪಸ್ವರಗಳು ಉಂಟಾಗುವುದಕ್ಕೆ ಇದು ಕಾರಣವಾಗಬಹುದು. ಕೆಲವರು ತಮ್ಮ ಕೌಟುಂಬಿಕ ಕಲಹದ ಬಗ್ಗೆ, ತಮ್ಮ ಗಂಡ/ಹೆಂಡತಿಯ ನಕಾರಾತ್ಮಕ ಸ್ವಭಾವಗಳ ಬಗ್ಗೆ ಸಹೋದ್ಯೋಗಿ ಮಹಿಳೆ/ಪುರುಷರೊಂದಿಗೆ ಹಂಚಿಕೊಳ್ಳುತ್ತಾರೆ. 

ಅನುಕಂಪದ ರೂಪದಲ್ಲಿ ಆರಂಭವಾಗುವ ಅವರ ಮಾತುಕತೆಗಳು ಪರಸ್ಪರ ಪ್ರೀತಿಯಾಗಿ, ಅನೈತಿಕ ಸಂಬಂಧವಾಗಿ ಮಾರ್ಪಡುವ ಸಂಭವಗಳೂ ಇರುತ್ತವೆ. ಹಂಚಿಕೊಳ್ಳುವ ವಿಷಯಗಳ ಬಗ್ಗೆಯೂ ಒಂದು ಗಡಿರೇಖೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಇಂತಹ ಘಟನೆಗಳು ಎಲ್ಲಾ ಸಂದರ್ಭಗಳಲ್ಲೂ ಆಗುವುದಿಲ್ಲ ನಿಜ. ಆದರೆ, ನಂಬಿಕೆಯನ್ನು  ದುರುಪಯೋಗ ಪಡಿಸಿಕೊಳ್ಳುವ ಕೆಲವರಾದರೂ ಇದ್ದೇ ಇರುತ್ತಾರೆ.

ಒಂದು ಕಚೇರಿಯೆಂಬುದು ಕೆಲವು ಜನ ಒಟ್ಟಿಗೆ ಕೆಲಸ ಮಾಡುವ ಸ್ಥಳವಷ್ಟೇ ಅಲ್ಲ, ಅದಕ್ಕೆ ಸಮಾಜದೊಂದಿಗೆ ಸಂಬಂಧವೂ ಇರುತ್ತದೆ. ಸಾರ್ವಜನಿಕರು ನಿರ್ದಿಷ್ಟ ರೀತಿಯ ಉದ್ಯೋಗಿಗಳಿಂದ ನಿರ್ದಿಷ್ಟ ರೀತಿಯ ನಡವಳಿಕೆಯನ್ನು ಬಯಸುತ್ತಾರೆ. ಸಭ್ಯತೆಗೆ ಹೊರತಾದ, ಅತಿಯೆನಿಸುವ ಚೆಲ್ಲು ಚೆಲ್ಲು ನಡವಳಿಕೆಗಳಿಂದ ಆ ಕಚೇರಿ ಅಥವಾ ಸಂಸ್ಥೆಯ ಹೆಸರು ಹಾಳಾಗುವ ಸಂಭವವಿರುತ್ತದೆ. ಪುರುಷ- ಮಹಿಳೆಯರು ಒಟ್ಟಿಗೆ ಕೆಲಸ ಮಾಡಬೇಕಾದುದು ಅನಿವಾರ್ಯ. ಅವರಲ್ಲಿ ಪರಸ್ಪರ ಗೆಳೆತನ, ಆತ್ಮೀಯತೆ ಮೂಡುವುದೂ ಸಾಮಾನ್ಯ. ಒಟ್ಟಿಗೆ ಊಟ ಮಾಡುವುದು, ಒಟ್ಟಿಗೆ  ಪ್ರಯಾಣ ಮಾಡುವುದೂ ಕೆಲವೊಮ್ಮೆ ಅನಿವಾರ್ಯವಾಗಬಹುದು. ಆದರೆ, ಅÇÉೆಲ್ಲ ಸಭ್ಯತೆಯ ಮಿತಿ ಮೀರದಂತೆ ಎಚ್ಚರವಹಿಸಬೇಕಾದುದು ಅಗತ್ಯ. ಅವರವರ ಉದ್ಯೋಗ, ಹುದ್ದೆ, ಸ್ಥಾನಮಾನಗಳಿಗೆ ಅನುಸಾರವಾಗಿ ಉದ್ಯೋಗಿಗಳು ವರ್ತಿಸಬೇಕು. ಗೂಢಾರ್ಥ ಪ್ರಯೋಗದ, ಅಶ್ಲೀಲವೆನಿಸುವ ಮಾತುಕತೆಗಳನ್ನು, ಮೈಕೈ ಮುಟ್ಟಿ  ಮಾತಾಡುವ ಅಭ್ಯಾಸಗಳನ್ನು ಬಿಡಬೇಕು. ಪರಸ್ಪರ ಪ್ರೀತಿಸುವ ಸಿಬ್ಬಂದಿಗಳೂ ಕಚೇರಿಯಲ್ಲಿರಬಹುದು. ಅದು ಅವರ ವೈಯಕ್ತಿಕ ವಿಚಾರ. ಆದರೆ ಕಚೇರಿಯೊಳಗೆ ಇತರರಿಗೆ ಮುಜುಗರ,  ಕಿರಿಕಿರಿಯುಂಟಾಗದಂತೆ ಅವರ ವರ್ತನೆ ಇರಬೇಕು. ಕಚೇರಿಯೆಂಬುದು  ಒಂದು ಸಾರ್ವಜನಿಕ ಸ್ಥಳ ಎಂಬ ವಿವೇಚನೆಯಿಂದ ಉದ್ಯೋಗಿಗಳು ವರ್ತಿಸುವುದು ಒಳ್ಳೆಯದು.

ತುರ್ತಿನಲ್ಲಿ ಸಹಾಯ
ಕಚೇರಿಯ ಗೆಳೆತನ ಆರೋಗ್ಯಕರವಾಗಿದ್ದರೆ ಉದ್ಯೋಗಿಗಳಿಗೆ ಅದರಿಂದ ತುಂಬಾ ಉಪಯೋಗವೂ ಇರುತ್ತದೆ. ತುರ್ತು ಹಣದ ಅಗತ್ಯ ಬಿದ್ದಾಗ ಸಹೋದ್ಯೋಗಿಗಳು ನೆರವಾಗಬಹುದು. ಅನಾರೋಗ್ಯದ ಸಂದರ್ಭದಲ್ಲಿ , ಕುಟುಂಬದಲ್ಲಿ ಏನೋ ಸಮಸ್ಯೆ ಏರ್ಪಟ್ಟಾಗಲೂ ಅವರ ನೆರವನ್ನು ನಿರೀಕ್ಷಿಸಬಹುದು. ಹೊಸದಾಗಿ ಆ ಊರಿಗೆ ಬಂದವರಿಗೆ ಬಾಡಿಗೆ ಮನೆ ಹುಡುಕಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ಶಾಲೆ ಯಾವುದು, ಯಾವ ಅಂಗಡಿಗಳು ವ್ಯವಹಾರಕ್ಕೆ ಹೆಚ್ಚು ಉತ್ತಮ ಇತ್ಯಾದಿ ಸಲಹೆ ಕೊಡಲು ಸಹೋದ್ಯೋಗಿಗಳು ಮುಂದೆ ಬರುತ್ತಾರೆ. ಆದರೆ ನಮ್ಮ ವರ್ತನೆ ಹಿತಕರವಾಗಿರಬೇಕು. ಯಾವಾಗಲೂ ಗಂಟುಮುಖ ಹಾಕಿ, ಸ್ತ್ರೀ-ಪುರುಷ ಬೇಧವಿಲ್ಲದೇ ಎಲ್ಲರಿಂದ ಅಕಾರಣವಾಗಿ ಒಂದು ಅಂತರ ಕಾಪಾಡುವವರಿಗೆ ಸಹಾಯ ಮಾಡಬೇಕೆಂದು ಯಾರಿಗೂ ಅನಿಸುವುದೇ ಇಲ್ಲ.

ತಮಗೆ ಉಳಿದವರಿಂದ ಬೇಕಾದ ಸಹಾಯವನ್ನೆಲ್ಲಾ ಪಡೆದುಕೊಂಡು, ಯಾವತ್ತೂ ಬೇರೆಯವರ ಸಹಾಯಕ್ಕೆ ಮುಂದಾಗದ ವ್ಯಕ್ತಿಗಳನ್ನು ಸಹೋದ್ಯೋಗಿಗಳು ನಿಧಾನವಾಗಿ ದೂರಮಾಡಿಕೊಳ್ಳುತ್ತಾರೆ. ಪಡೆದುಕೊಳ್ಳಲು ಮಾತ್ರವಲ್ಲ, ಸಹಾಯಹಸ್ತ ಚಾಚಲೂ ಸಿದ್ಧರಿರುವವರಷ್ಟೇ ಉತ್ತಮ ಸಹೋದ್ಯೋಗಿ ಎನಿಸಬಲ್ಲರು. ಕೆಲವು ಕಚೇರಿಗಳಲ್ಲಿ ಗುಂಪುಗಾರಿಕೆಯಿರುತ್ತದೆ. ಆ ಗುಂಪುಗಳ ನಡುವೆ ಶೀತಲಸಮರ ನಡೆಯುತ್ತಿರುತ್ತದೆ. ಪರಸ್ಪರ ದೋಷಾರೋಪಣೆ ಇತ್ಯಾದಿಗಳಲ್ಲಿ ಕಾಲಕಳೆಯುವ ಈ ಗುಂಪುಗಾರಿಕೆ ಸ್ವತಃ ಎರಡೂ ಪಕ್ಷದ ಸಿಬ್ಬಂದಿಗಳಿಗೂ ಕಚೇರಿಗೂ ಒಂದು ಕಳಂಕ. ಯಾರ ಕುರಿತಾದರೂ ದೂರು ಹೇಳದಿದ್ದರೆ ಚಡಪಡಿಕೆ ಅನುಭವಿಸುವ ಕೆಲವು ಜನ ಪ್ರತಿ ಕಚೆೇರಿಯಲ್ಲೂ ಇರುತ್ತಾರೆ. ಅಂತಹವರು ಇನ್ನೊಬ್ಬರ ಬಗ್ಗೆ ಹೇಳುವ ಮಾತುಗಳನ್ನು ಹಾಗೇ ನಂಬದೇ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಕಚೆೇರಿ ಬಾಂಧವ್ಯದ ಸುಸ್ಥಿರತೆಗೆ ಒಳ್ಳೆಯದು. ಉತ್ತಮ ಕೆಲಸಗಾರರೂ, ಪ್ರಾಮಾಣಿಕತೆಯಿಂದ ಸಂಸ್ಥೆಯ ಉನ್ನತಿಗಾಗಿ ದುಡಿಯುವವರೂ ಆದ ನೌಕರರ ಮೇಲೆ ಮೇಲಧಿಕಾರಿಗಳಿಗೆ ಹೆಚ್ಚಿನ ಒಲವಿರಬಹುದು. ಅದನ್ನು ಕಂಡು ಅಸೂಯೆಪಟ್ಟು ಅವರ ವಿರುದ್ಧ ಪಿತೂರಿ ನಡೆಸುವವರೂ ಕೆಲವರಿರುತ್ತಾರೆ. 

ಒಂದು ಕಚೇರಿಗೆ ಹೊಸದಾಗಿ ಸೇರುವಾಗ ಯಾರನ್ನಾದರೂ ಒಬ್ಬರನ್ನು ಜಾಸ್ತಿ ಹಚ್ಚಿಕೊಳ್ಳುವ ಮುನ್ನ ಎಲ್ಲರ ಸ್ವಭಾವವನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ನಂಬಿಕೆಗೆ ಹೆಚ್ಚು ಅರ್ಹರೆನಿಸುವವರ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಪ್ರಯತ್ನಿಸಿ. ಬಾಯಿ ಬಡುಕರು, ಮತ್ಸರಿಗಳು, ಗಾಸಿಪ್‌ ಹರಡುವವರ ಬಗ್ಗೆ ಎಚ್ಚರವಾಗಿರಿ. ನಿಮ್ಮ ಕೆಲಸಕ್ಕೆ ಪ್ರಥಮ ಆದ್ಯತೆ ಕೊಟ್ಟು , ಯಾರಿಗೂ ನಕಾರಾತ್ಮಕ ಭಾವನೆ ಬಾರದ ರೀತಿಯಲ್ಲಿ ವರ್ತಿಸಲು ಪ್ರಯತ್ನಿಸಿ. ಆದರೆ ಇನ್ನೊಬ್ಬರನ್ನು ಮೆಚ್ಚಿಸುವ  ಸಲುವಾಗಿ ಆತ್ಮಸಾಕ್ಷಿಗೆ ಮೋಸಮಾಡದಿರಿ. ಕಚೇರಿ ಜೀವನವನ್ನು ಎಂಜಾಯ್‌ ಮಾಡಿ.

– ಜೆಸ್ಸಿ ಪಿ. ವಿ.

ಟಾಪ್ ನ್ಯೂಸ್

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.