ಚೆಂದುಳ್ಳಿಗೆ ಈರುಳ್ಳಿ
Team Udayavani, Mar 16, 2018, 7:30 AM IST
ಈರುಳ್ಳಿ ಬಜ್ಜಿ , ಬೋಂಡ, ಪಕೋಡ ಓಕೆ, ಆದ್ರೆ ಹಸಿ ಈರುಳ್ಳಿ ಬೇಡಪ್ಪಾ ‘ ಅಂತ ದೂರ ಓಡದಿರಿ. ಯಾಕೆ ಗೊತ್ತಾ, ಈರುಳ್ಳಿ ಬರೀ ಕಣ್ಣೀರು ತರಿಸಲ್ಲ, ಮುಖದಲ್ಲಿ ನಗುವನ್ನೂ ತರುತ್ತೆ. ಈರುಳ್ಳಿಯ ಪ್ರಯೋಜನಗಳೂ ಅನೇಕ. ಈರುಳ್ಳಿ ಮಹಾತ್ಮೆ ಏನಂತ ಇಲ್ಲಿದೆ ನೋಡಿ.
ಕಾಂತಿಯುತ ಚರ್ಮ: ಈರುಳ್ಳಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ , ಸಲರ್ ಮತ್ತು ವಿಟಮಿನ್‌ಗಳು ಚರ್ಮಕ್ಕೆ ಒಳ್ಳೆಯದು. ಈರುಳ್ಳಿ ರಸವನ್ನು ಲೇಪಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ರಕ್ತದ ಕಲ್ಮಶಗಳನ್ನು ಶುದ್ಧೀಕರಿಸುವುದರಿಂದ ಚರ್ಮದ ಸಮಸ್ಯೆಗಳು ದೂರಾಗುತ್ತವೆ.
ಚರ್ಮದ ಸುಕ್ಕು ನಿವಾರಣೆ: 30-40 ವರ್ಷಕ್ಕೆಲ್ಲಾ ಕೆಲವರ ಚರ್ಮ ಕಾಂತಿ ಕಳೆದುಕೊಂಡು, ಸುಕ್ಕು ಸುಕ್ಕಾಗುತ್ತದೆ. ಈರುಳ್ಳಿಯಲ್ಲಿನ ಆ್ಯಂಟಿಆಕ್ಸಿಡೆಂಟ್ಸ್ ಅಂಶ ಚರ್ಮ ನೆರಿಗೆ ಬೀಳುವುದನ್ನು ತಡೆಯುತ್ತದೆ. ಈರುಳ್ಳಿಯಲ್ಲಿರುವ ಎ, ಸಿ, ಇ ವಿಟಮಿನ್ ಕೂಡ ಚರ್ಮಕ್ಕೆ ಒಳ್ಳೆಯದು.
ಬಿಳುಪಿನ ತ್ವಚೆಗೆ: ಈರುಳ್ಳಿ ರಸಕ್ಕೆ ಅರಸಿನ ಸೇರಿಸಿ ಹಚ್ಚಿದರೆ ಚರ್ಮದ ಕಲೆ, ಪ್ಯಾಚ್ ಮತ್ತು ಡಾರ್ಕ್ ಪಿಗೆಟೇಶನ್‌ಗಳು ನಿವಾರಣೆಯಾಗಿ, ಚರ್ಮಕ್ಕೆ ಬಿಳುಪು ಸಿಗುತ್ತದೆ. ಸೂಕ್ಷ್ಮ ಚರ್ಮದವರು ಈರುಳ್ಳಿ ರಸದ ಜೊತೆಗೆ ಕಡಲೆಹಿಟ್ಟು , ಕೆನೆ ಸೇರಿಸಿ ಹಚ್ಚಿ.
ಮೊಡವೆ ಕಲೆ ನಿವಾರಣೆ: ಮೊಡವೆ, ಸುಟ್ಟಗಾಯದ ಕಲೆ ಮತ್ತು ಚರ್ಮದ ಅಲರ್ಜಿಗಳಿಗೆ ಈರುಳ್ಳಿ ರಸ ರಾಮಬಾಣ. ಈರುಳ್ಳಿ ರಸದ ಜೊತೆಗೆ ಆಲಿವ್ ಅಥವಾ ಅಲ್ಮಂಡ್ ಎಣ್ಣೆ ಸೇರಿಸಿ. ಫೇಸ್‌ಪ್ಯಾಕ್‌ನಂತೆ ಮುಖಕ್ಕೆ ಹಚ್ಚಿ.
ಸೊಂಪಾದ ಕೂದಲಿಗೆ: ಈರುಳ್ಳಿಯಲ್ಲಿನ ಸಲರ್ ಅಂಶ, ತಲೆಗೆ ರಕ್ತ ಸಂಚಲನೆ ಸರಾಗವಾಗಿಸುತ್ತದೆ. ಅದರಿಂದ, ಉದುರಿದ ಕೂದಲು ಮರುಹುಟ್ಟು ಪಡೆಯುತ್ತದೆ. ಈರುಳ್ಳಿ ರಸದ ಜೊತೆಗೆ ರೋಸ್‌ವಾಟರ್ ಸೇರಿಸಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.
ತಲೆಹೊಟ್ಟು ನಿವಾರಣೆ: ತಲೆಹೊಟ್ಟಿನ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿರುವವರು ಅನೇಕ. ಅವರು ಮಾಡಬೇಕಾದ್ದಿಷ್ಟೆ , ಕೂದಲಿನ ಬುಡಕ್ಕೆ ಈರುಳ್ಳಿ ರಸ ಹಚ್ಚಿ , ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.
ಕೂದಲ ನೆರೆ ತಡೆಯಲು: ಕಲುಷಿತ ನೀರು, ಪೌಷ್ಟಿಕಾಂಶ ಕೊರತೆ ಹೀಗೆ ಬೇರೆ ಬೇರೆ ಕಾರಣಗಳಿಂದ ಕೂದಲು ಬೇಗ ಬಿಳಿಯಾಗುತ್ತದೆ. ಆಗ ಕೃತಕ ಬಣ್ಣ ಹಚ್ಚುವುದರ ಬದಲು ಈರುಳ್ಳಿ ರಸಕ್ಕೆ ಸಾಸಿವೆ ಎಣ್ಣೆ ಸೇರಿಸಿ ಹಚ್ಚಿ. ಕೂದಲಿಗೆ ನೈಸರ್ಗಿಕ ಶೈನ್ ಕೂಡ ಸಿಗುತ್ತದೆ.
ತುಟಿಯ ಆರೋಗ್ಯ: ಕಪ್ಪಾದ ತುಟಿಗೆ ನೈಜ ಬಣ್ಣ ಸಿಗಲು, ಒಡೆದ ತುಟಿ ಗುಣವಾಗಲು ಈರುಳ್ಳಿ ಸಹಕಾರಿ. ಈರುಳ್ಳಿ ರಸದ ಜೊತೆಗೆ ವಿಟಮಿನ್ “ಇ’ ಎಣ್ಣೆ ಸೇರಿಸಿ ದಿನಾ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹಚ್ಚಿ.
ಕಣ್ಣಿನ ಆರೋಗ್ಯ: ಎ, ಸಿ, ಇ ವಿಟಮಿನ್ ಅಧಿಕವಾಗಿರುವ ಈರುಳ್ಳಿ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿಯಲ್ಲಿನ ಸಲ#ರ್ ಅಂಶ ಕೂಡ ಕಣ್ಣನ್ನು ಹಲವಾರು ಸಮಸ್ಯೆಗಳಿಂದ ರಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.