ಪಾಲಕ್-ಕ್ಯಾರೆಟ್-ಸೇಬು ಸ್ಮೋದಿ
Team Udayavani, Mar 29, 2019, 6:10 AM IST
ಆರೋಗ್ಯಕರ ಲಸ್ಸಿ – ಸ್ಮೋದಿ
ಈ ವರ್ಷದ ಬೇಸಿಗೆಯ ತೀಕ್ಷ್ಣತೆಯು ಕಳೆದ ವರ್ಷಕ್ಕಿಂತಲೂ ಜೋರಾಗಿದೆ. ಏನಾದರೂ ಕುಡಿಯಬೇಕೆಂದು ಮನಸ್ಸು ಬಯಸುತ್ತದೆ. ಮನೆಯಲ್ಲಿಯೇ ಆರೋಗ್ಯಕರವಾದ ಲಸ್ಸಿ ಮತ್ತು ಸ್ಮೋದಿಗಳನ್ನು ಮಾಡಿ ಕುಡಿದರೆ ದೇಹಕ್ಕೂ ಹಿತ ಹಾಗೂ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿ: ಸಿಪ್ಪೆ ಸುಲಿದು ಹೆಚ್ಚಿದ 1 ಸೇಬು, ಹೆಚ್ಚಿದ 1 ಕ್ಯಾರೆಟ್, 2 ಎಲೆ ಪಾಲಕ್, ಸಿಹಿಗೆ ಬೇಕಾದಷ್ಟು ಸಕ್ಕರೆ, 1 ಕಪ್ ಹಾಲು, ಸ್ವಲ್ಪ ಐಸ್ ತುಂಡುಗಳು.
ತಯಾರಿಸುವ ವಿಧಾನ: ಸೇಬಿನ ತುಂಡುಗಳು, ಕ್ಯಾರೆಟ್ ತುಂಡುಗಳು, ತೊಳೆದ ಪಾಲಕ್ ಎಲೆ, ಸಕ್ಕರೆ, ಹಾಲು, ಐಸ್ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗಾಜಿನ ಗ್ಲಾಸಿಗೆ ಹಾಕಿ ಸವಿಯಿರಿ.
ಪಪ್ಪಾಯ ಸ್ಮೋದಿ
ಬೇಕಾಗುವ ಸಾಮಗ್ರಿ: 1 ಕಪ್ ಹಣ್ಣಾದ ಪಪ್ಪಾಯ ಹಣ್ಣಿನ ತಿರುಳು, 1 ಕಪ್ ಹಾಲು, ಸಿಹಿಗೆ ಬೇಕಾಗುವಷ್ಟು ಜೇನು.
ತಯಾರಿಸುವ ವಿಧಾನ: ಪಪ್ಪಾಯ ಹಣ್ಣಿನ ತಿರುಳನ್ನು ಮೊದಲಿಗೆ ರುಬ್ಬಿ. ನಂತರ ಹಾಲು, ಜೇನು ಸೇರಿಸಿ ಮತ್ತೂಮ್ಮೆ ರುಬ್ಬಿ. ಗ್ಲಾಸಿಗೆ ಹಾಕಿ ಕುಡಿಯಿರಿ.
ಪಪ್ಪಾಯ-ಮಾವಿನ ಹಣ್ಣಿನ ಲಸ್ಸಿ
ಬೇಕಾಗುವ ಸಾಮಗ್ರಿ: 1/2 ಕಪ್ ಪಪ್ಪಾಯಿ ಹಣ್ಣಿನ ಹೋಳುಗಳು, 1/2 ಕಪ್ ಮಾವಿನ ಹಣ್ಣಿನ ಹೋಳುಗಳು, 1 ಕಪ್ ಮೊಸರು, ಚಿಟಿಕೆ ಏಲಕ್ಕಿ ಪುಡಿ, 2 ಚಮಚ ಜೇನುತುಪ್ಪ.
ತಯಾರಿಸುವ ವಿಧಾನ: ಸಿಪ್ಪೆ-ಬೀಜ ತೆಗೆದ ಪಪ್ಪಾಯ ಹಣ್ಣು , ಸಿಪ್ಪೆ ತೆಗೆದ ಮಾವಿನ ತಿರುಳು ಸೇರಿಸಿ ರುಬ್ಬಿ. ನಂತರ ಮೊಸರು, ಏಲಕ್ಕಿ ಪುಡಿ, ಜೇನುತುಪ್ಪ ಹಾಕಿ ಇನ್ನೊಮ್ಮೆ ರುಬ್ಬಿ ತೆಗೆದು ಗ್ಲಾಸಿಗೆ ಹಾಕಿ ಸವಿಯಿರಿ.
ಅಗಸೆಬೀಜ- ಖರ್ಜೂರ-ಬಾದಾಮಿ ಸ್ಮೋದಿ
ಬೇಕಾಗುವ ಸಾಮಗ್ರಿ: 2 ಚಮಚ ಅಗಸೆಬೀಜ, 3-4 ಖರ್ಜೂರ, 4-5 ಬಾದಾಮಿ, 2 ಕಪ್ ಹಾಲು.
ತಯಾರಿಸುವ ವಿಧಾನ: ಅಗಸೆ ಬೀಜವನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಪುಡಿ ಮಾಡಿ. ಖರ್ಜೂರ ಬೀಜ ತೆಗೆದಿಡಿ. ನೀರಲ್ಲಿ ನೆನೆಸಿದ ಬಾದಾಮಿ ಸಿಪ್ಪೆ ತೆಗೆದು, ಖರ್ಜೂರ, ಜೇನುತುಪ್ಪ , ಬಾದಾಮಿ ಸೇರಿಸಿ ರುಬ್ಬಿ. ಹಾಲು ಹಾಕಿ ಒಂದು ಸುತ್ತು ತಿರುಗಿಸಿ. ಸ್ವಲ ಏಲಕ್ಕಿ ಪುಡಿ ಹಾಕಿ ಸರಿಯಾಗಿ ಬೆರೆಸಿ ರುಬ್ಬಿದ ಅಗಸೆಬೀಜ ಸೇರಿಸಿ ಇನ್ನೊಮ್ಮೆ ತೊಳಸಿ ಗ್ಲಾಸಿಗೆ ಹಾಕಿ ಕುಡಿಯಿರಿ.
ಪಾಲಕ್-ಗೋಡಂಬಿ-ಬಾದಾಮಿ ಲಸ್ಸಿ
ಬೇಕಾಗುವ ಸಾಮಗ್ರಿ: 1 ಕಪ್ ಮೊಸರು, 1/2 ಕಪ್ ಪಾಲಕ್ ಸೊಪ್ಪು , 4-5 ಬಾದಾಮಿ, 1/4 ಕಪ್ ಗೋಡಂಬಿ, 4 ಚಮಚ ಸಕ್ಕರೆ, ಚಿಟಿಕೆ ಕರಿ ಉಪ್ಪು , 1/4 ಚಮಚ ಜೀರಿಗೆ, ಸ್ವಲ್ಪ ನೀರು.
ತಯಾರಿಸುವ ವಿಧಾನ: ಸ್ವಚ್ಛವಾಗಿ ತೊಳೆದ ಪಾಲಕ್ ಸೊಪ್ಪು , ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದ ಬಾದಾಮಿ, ನೀರಲ್ಲಿ ನೆನೆಸಿದ ಗೋಡಂಬಿ, ಸಕ್ಕರೆ, ಜೀರಿಗೆ, ಕರಿ ಉಪ್ಪು ಸೇರಿಸಿ, ಮೊಸರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಸ್ವಲ್ಪ ನೀರು ಸೇರಿಸಿ ಸ್ವಲ್ಪ ಹೊತ್ತು ಮಿಕ್ಸಿಯಲ್ಲಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಸವಿಯಿರಿ.
ಅನಾನಸು- ಎಳನೀರು ಸ್ಮೋದಿ
ಬೇಕಾಗುವ ಸಾಮಗ್ರಿ: 1 ಕಪ್ ಗಂಜಿ ಸಹಿತ ಎಳನೀರು, 1/2 ಕಪ್ ಅನಾನಸು ತಿರುಳು, 1 ಸಣ್ಣ ಚಮಚ ನಿಂಬೆರಸ, 1/2 ಕಪ್ ನೀರು, ರುಚಿಗೆ ತಕ್ಕಷ್ಟು ಜೇನು.
ತಯಾರಿಸುವ ವಿಧಾನ: ಅನಾನಸು ತಿರುಳು, ಎಳನೀರು, ಎಳನೀರಿನ ಗಂಜಿ, ನಿಂಬೆರಸ, ಜೇನು ಸೇರಿಸಿ ಮಿಕ್ಸಿ ಹಾಕಿ ತಿರುವಿ. ನಂತರ ಗ್ಲಾಸಿಗೆ ಹಾಕಿ ಕೂಡಲೇ ಸವಿಯಿರಿ.
ಮಾವಿನ ಹಣ್ಣಿನ ಲಸ್ಸಿ
ಬೇಕಾಗುವ ಸಾಮಗ್ರಿ: 1 ಕಪ್ ಮಾವಿನ ಹಣ್ಣಿನ ತಿರುಳು, 1 ಕಪ್ ಮೊಸರು, 2 ಬಿಂದು ವೆನಿಲ್ಲಾ ಎಸೆನ್ಸ್ , ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಜೇನು ಯಾ ಜೋನಿ ಬೆಲ್ಲ.
ತಯಾರಿಸುವ ವಿಧಾನ: ಮಾವಿನ ಹಣ್ಣಿನ ತಿರುಳು, ಮೊಸರು, ವೆನಿಲ್ಲಾ ಎಸೆನ್ಸ್ , ನೀರು, ಜೇನು ಯಾ ಜೋನಿ ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಕುಡಿಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.