ಪಲ್ಲವಿ ಶಾರದಾ ಪುರಾಣಂ 


Team Udayavani, Mar 3, 2017, 11:43 AM IST

pallavi.jpg

ಹೆಸರು ಅಪ್ಪಟ ದೇಶಿ; ಹುಡುಗಿ ಮಾತ್ರ ವಿದೇಶಿ. ಇದು ಪಲ್ಲವಿ ಶಾರದಾ ಕತೆ.

ಬಾಲಿವುಡ್‌ಗೆ ಬಂದು ಏಳು ವರ್ಷವಾಗಿದ್ದರೂ ಇನ್ನೂ ಅಪರಿಚಿತೆಯಾಗಿಯೇ ಉಳಿದಿದ್ದಾಳೆ. ಹೆಸರು ನೋಡಿದಾಗ ಯಾರಾದರೂ ಎಲ್ಲೋ ತಮಿಳುನಾಡು ಅಥವಾ ಕರ್ನಾಟಕದಿಂದ ಬಂದವಳೆಂದು ಭಾವಿಸಬಹುದು. ಆದರೆ ಪಲ್ಲವಿ ಶಾರದಾ ಆಸ್ಟ್ರೇಲಿಯದವಳು. ಹುಟ್ಟಿದ್ದು , ಬೆಳೆದದ್ದು ಓದಿದ್ದು ಎಲ್ಲ ಆಸ್ಟ್ರೇಲಿಯದ ಪರ್ತ್‌ನಲ್ಲಿ. ಯಾವ ಮೋಹನ ಮುರಳಿ ಕರೆಯಿತೋ ನಿನ್ನ ದೂರದ ತೀರಕೆ ಎಂಬಂತೆ ಅಗಾಧ ಪ್ರತಿಭಾವಂತೆಯಾಗಿದ್ದ ಪಲ್ಲವಿಯನ್ನು ಅದ್ಯಾವುದೋ ಮಾಯೆ ಬಾಲಿವುಡ್‌ಗೆ ಕರೆತಂದಿದೆ.

ಪಲ್ಲವಿಯ ತಂದೆ ಮತ್ತು ತಾಯಿ ಇಬ್ಬರೂ ಪಿಎಚ್‌ಡಿ ಪದವೀಧರರು. ಹೆತ್ತವರ ಶೈಕ್ಷಣಿಕ ಪ್ರತಿಭೆ ಪಲ್ಲವಿಗೆ ಬಳುವಳಿಯಾಗಿ ಬಂದಿತ್ತು. ಹೆತ್ತವರು ದಿಲ್ಲಿಯಿಂದ ಆಸ್ಟ್ರೇಲಿಯಕ್ಕೆ  ವಲಸೆ ಹೋಗಿ ನೆಲೆಸಿದ ಕಾರಣ ಪಲ್ಲವಿ ಎನ್‌ಆರ್‌ಐ ಆದಳು.  ಹೀಗೆ ಪ್ರೈಮರಿಯಿಂದಲೇ ಪಲ್ಲವಿ ಕ್ಲಾಸಿಗೆ ಫ‌ಸ್ಟ್‌. ಹೀಗಾಗಿ ಎಲ್‌ಎಲ್‌ಬಿ, ಮಾಸ್‌ ಮೀಡಿಯಾ, ಡಿಪ್ಲೊಮ ಇನ್‌ ಮೋಡರ್ನ್ ಲ್ಯಾಂಗ್ವೇಜ್‌ ಪದವಿ ಹೀಗೆ ಒಂದಷ್ಟು ಪದವಿಗಳನ್ನು ಅನಾಯಾಸವಾಗಿ ಗಳಿಸಿದಳು. ಬಾಲ್ಯದಿಂದಲೇ ಪಲ್ಲವಿಗೆ ಭಾರತ ಮತ್ತು ಭಾರತೀಯತೆಯತ್ತ ವಿಶೇಷ ಒಲವು. ಹೀಗಾಗಿ ಬಾಲ್ಯದಲ್ಲಿ ಭರತನಾಟ್ಯ ಕಲಿತು ನೈಪುಣ್ಯ ಸಾಧಿಸಿದಳು. 

ಓದುವುದು ಮುಗಿದ ಬಳಿಕ ನಾಟಕ, ನೃತ್ಯ ಎಂದು ಅಲೆದಾಡಿದರೂ ಯಾವುದರಲ್ಲೂ ತೃಪ್ತಿ ಸಿಗಲಿಲ್ಲ. ಕೊಂಚ ಸಮಯ ಕಚೇರಿಯಲ್ಲಿ ಕುಳಿತು ನೌಕರಿ ಮಾಡಿದಳು. ಇದೂ ಬೋರಾದಾಗ ನೇರವಾಗಿ ಮುಂಬಯಿಗೆ ವಿಮಾನ ಏರಿದಳು. ಹೀಗೆ ಬಂದವಳಿಗೆ ಮೊದಲು ಸಿಕ್ಕಿದ್ದು ಮೈ ನೇಮ್‌ ಈಸ್‌ ಖಾನ್‌ನಲ್ಲಿ ಒಂದು ಚಿಕ್ಕ ಪಾತ್ರ. ಅದೇ ವರ್ಷ ದಸ್‌ ತೊಲ ಮತ್ತು ವಾಕ್‌ವೆà ಎಂಬೆರಡು ಚಿತ್ರಗಳಲ್ಲೂ ನಟಿಸಿದಳು. ಲವ್‌ ಬ್ರೇಕ್‌ಅಪ್‌ ಜಿಂದಗಿ, ಹಿರೋಯಿನ್‌, ಸೇವ್‌ ಯುವರ್‌ ಲೆಗ್ಸ್‌, ಬೇಶರಮ್‌, ಹವಾಯಿಜಾದ, ಲಯನ್‌ ಎಂದು ಅನಂತರ ಅನೇಕ ಚಿತ್ರಗಳಲ್ಲಿ ನಟಿಸಿದರೂ ಗುರುತಿಸುವಂತಹ ಪಾತ್ರಗಳು ಸಿಗಲಿಲ್ಲ. ಬೇಶರಮ್‌ನಲ್ಲಿ ಗಮನ ಸೆಳೆದರೂ ಚಿತ್ರ ಸೋತ ಕಾರಣ ವಿಶೇಷ ಲಾಭವಾಗಲಿಲ್ಲ. ಕತೆ ಭಿನ್ನವಾಗಿರಬೇಕು, ಪಾತ್ರ ಚಿಕ್ಕದಾದರೂ ಪರವಾಗಿಲ್ಲ ಅಭಿನಯಕ್ಕೆ ಅವಕಾಶ ಇರಬೇಕು ಎಂದೆಲ್ಲ ದೊಡ್ಡ ದೊಡ್ಡ ಕನಸುಗಳು ಇದ್ದ ಕಾರಣ ಪಲ್ಲವಿ ಆರಂಭದಲ್ಲಿಯೇ ಎಡವಿದಳು. ಚಿಕ್ಕಪುಟ್ಟ ಪಾತ್ರಗಳನ್ನು ಒಪ್ಪಿಕೊಂಡ ಕಾರಣ ಅವುಗಳಿಗೆ ಬ್ರಾಂಡ್‌ ಆದಳು. ಇದೀಗ ತಪ್ಪು ಅರಿವಾಗಿರುವ ಪಲ್ಲವಿ ಗುರುತಿಸುವಂತಹ ಪಾತ್ರವಾದರೆ ಮಾತ್ರ ನಟಿಸುತ್ತೇನೆ ಎನ್ನುತ್ತಿದ್ದಾಳೆ. 

ಹಾಗೆಂದು ಇಷ್ಟರತನಕ ಆಯ್ದುಕೊಂಡ ಪಾತ್ರಗಳ ಬಗ್ಗೆ ಅವಳಿಗೆ ವಿಷಾದವಿಲ್ಲ. ನನಗೆ ನನ್ನ ಕನಸು ಮುಖ್ಯ. ಉಳಿದವರು ಏನೆನ್ನುತ್ತಾರೆ ಎನ್ನುವುದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವುದು ಅವಳ ಖಚಿತ ನಿಲುವು. ಇದೀಗ ವಿದ್ಯಾಬಾಲನ್‌ ಮುಖ್ಯ ಭೂಮಿಕೆಯಲ್ಲಿರುವ ಬೇಗಮ್‌ ಜಾನ್‌ನಲ್ಲಿ ಪಲ್ಲವಿಗೂ ಮಹತ್ವದ ಪಾತ್ರವಿದೆ. ಎಪ್ರಿಲ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಅನಂತರವಾದರೂ ನನ್ನ ಪ್ರತಿಭೆ ಬಾಲಿವುಡ್‌ನ‌ವರ ಕಣ್ಣಿಗೆ ಬಿದ್ದೀತು ಎಂಬ ನಿರೀಕ್ಷೆಯಲ್ಲಿದ್ದಾಳೆ ಪಲ್ಲವಿ. 
 

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.