ಮೊಗದ ಅಂದಕ್ಕೆ ಹೂವಿನ ಫೇಸ್‌ಪ್ಯಾಕ್‌


Team Udayavani, Jan 13, 2017, 3:45 AM IST

Vividha-hugala-face-pack…jpg

ಹೂಗಳು ಅಂದ ಚಂದದ ಕೇಂದ್ರ ಮಾತ್ರವಲ್ಲ ಈ ಹೂವು ಗಳನ್ನು ಬಗೆಬಗೆಯಲ್ಲಿ ಫೇಸ್‌ಪ್ಯಾಕ್‌ ರೂಪದಲ್ಲಿ ಮೊಗಕ್ಕೆ ಲೇಪಿಸಿದರೆ ಮುಖದ ಸೌಂದರ್ಯ ವೃದ್ಧಿಯ ಜೊತೆಗೆ ಮೊಡವೆ, ಕಲೆ, ಗುಳ್ಳೆ , ತುರಿಕೆಯಂತಹ ತೊಂದರೆಗಳೂ ನಿವಾರಣೆಯಾಗುತ್ತವೆ.

ನಿಮ್ಮ ಮನೆಯ ತೋಟದ, ಅಂಗಳದ ಅಥವಾ ನಿಮಗಿಷ್ಟವಾದ ಹೂವಿನಿಂದ ಫೇಸ್‌ಪ್ಯಾಕ್‌ ಲೇಪಿಸಿ ಆನಂದಿಸಿ ಜೊತೆಗೆ ಮುಖದ ಸೌಂದರ್ಯವನ್ನು ವರ್ಧಿಸಿಕೊಳ್ಳಿ ! ಇವುಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಗುಲಾಬಿ ಹೂವಿನ ಫೇಸ್‌ಪ್ಯಾಕ್‌
ಗುಲಾಬಿ ಎಂದರೆ ಹೆಂಗಳೆಯರಿಗೆ ಎಲ್ಲಿಲ್ಲದ ಆಕರ್ಷಣೆ! ಹಾಂ! ಮೊಗದ ಚರ್ಮದ ಕಾಂತಿ, ಮೃದುತ್ವ ವರ್ಧಿಸಿ ಶ್ವೇತ ವರ್ಣ ಉಂಟುಮಾಡಲು ಗುಲಾಬಿ ಹೂವು ಸಹಕಾರಿ.
ವಿಧಾನ: ಎರಡು ತಾಜಾ ಗುಲಾಬಿಯ ಪಕಳೆಗಳನ್ನು 15 ಚಮಚ ನೀರಿನಲ್ಲಿ ಅರ್ಧ ಗಂಟೆ ನೆನೆಸಬೇಕು. ತದನಂತರ ಅದನ್ನು ಅರೆದು 2 ಚಮಚ ಜೇನು ಬೆರೆಸಿ ಲೇಪ ತಯಾರಿಸಬೇಕು. ಇದನ್ನು ತುದಿಬೆರಳುಗಳಿಂದ ಮುಖಕ್ಕೆ ಲೇಪಿಸಿ ಫೇಸ್‌ಪ್ಯಾಕ್‌ ಮಾಡಬೇಕು. ತದನಂತರ ಈ ಫೇಸ್‌ಪ್ಯಾಕ್‌ ಮೇಲೆ ಹಾಲಿನಲ್ಲಿ ಅದ್ದಿದ ಗುಲಾಬಿಯ ಪಕಳೆಗಳನ್ನು ಲೇಪಿಸಬೇಕು.

20 ನಿಮಿಷಗಳ ಬಳಿಕ ತೊಳೆದರೆ ಮುಖ ಶುಭ್ರ ಮೃದು ಕಾಂತಿಯುತವಾಗುತ್ತದೆ. ವಾರಕ್ಕೆ ಮೂರು ಸಾರಿಯಂತೆ 6-8 ವಾರ ಬಳಸಿದರೆ ಮುಖದ ಚರ್ಮ ಬೆಳ್ಳಗಾಗುತ್ತದೆ.

ಮೊಡವೆ ನಿವಾರಕ ಮಲ್ಲಿಗೆಯ ಫೇಸ್‌ಪ್ಯಾಕ್‌
ಹದಿಹರೆಯದ ಹೆಣ್ಣು ಮಕ್ಕಳಿಗೆ, ಕಾಲೇಜಿನ ಯುವತಿಯರಿಗೆ ಮೊಡವೆಯ, ಬ್ಲ್ಯಾಕ್‌ಹೆಡ್ಸ್‌ , ವ್ಹೆ „ಟ್‌ ಹೆಡ್ಸ್‌ ಗಳ ಬಾಧೆ ಅಧಿಕ.ಇವುಗಳ ನಿವಾರಣೆಗೆ ಜಾಜಿ, ಮಲ್ಲಿಗೆ ಅಥವಾ ದುಂಡುಮಲ್ಲಿಗೆಯ ಫೇಸ್‌ಪ್ಯಾಕ್‌ ಬಳಸಿದರೆ ಗುಣಕಾರಿ.
ವಿಧಾನ: ಎರಡು ಹಿಡಿ ಮಲ್ಲಿಗೆಯನ್ನು 1/4 ಕಪ್‌ ಹಾಲಿನಲ್ಲಿ ನೆನೆಸಿ ಅದರಲ್ಲಿಯೇ 8 ಬಾದಾಮಿಯನ್ನು ನೆನೆಸಿಡಬೇಕು. ಅರ್ಧ ಗಂಟೆಯ ಬಳಿಕ ಎಲ್ಲವನ್ನು ಚೆನ್ನಾಗಿ ಅರೆದು ಲೇಪ ತಯಾರಿಸಬೇಕು. ಮುಖಕ್ಕೆ ಚೆನ್ನಾಗಿ ಲೇಪಿಸಿ ಮೃದುವಾಗಿ ಮಾಲೀಶು ಮಾಡಬೇಕು.

20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದು ತೆಗೆಯಬೇಕು. ಹೀಗೆ ವಾರಕ್ಕೆ ಎರಡರಿಂದ ಮೂರು ಬಾರಿ ಮಲ್ಲಿಗೆಯ ಫೇಸ್‌ಪ್ಯಾಕ್‌ ಮಾಡಿದರೆ 1-2 ತಿಂಗಳಲ್ಲಿ ಮೊಡವೆ ಕಲೆ ಮೊದಲಾದವು ನಿವಾರಣೆಯಾಗಿ ಮುಖ ಶುಭ್ರವಾಗಿ ಹೊಳೆಯುತ್ತದೆ.

ಚೆಂಡು ಹೂವು (ಗೊಂಡೆ ಹೂವಿನ) ಫೇಸ್‌ಪ್ಯಾಕ್‌
ಮುಖ ಬೆಳ್ಳಗಾಗಲು ಬ್ಲೀಚಿಂಗ್‌ ಮಾಡುವುದು ಸಾಮಾನ್ಯ. ಆದರೆ ಕೆಮಿಕಲ್‌ ಬ್ಲೀಚಿಂಗ್‌ಗೆ ಬದಲಾಗಿ ಚೆಂಡು ಹೂವನ್ನೇ ಬಳಸಿ ನೈಸರ್ಗಿಕವಾಗಿ ಬ್ಲೀಚಿಂಗ್‌ ಪರಿಣಾಮ ಪಡೆಯಬಹುದು!
ವಿಧಾನ: ಒಂದು ದೊಡ್ಡ ತಾಜಾ ಚೆಂಡು ಹೂವಿನ ಎಸಳುಗಳನ್ನು ನಾಲ್ಕು ಚಮಚ ದಪ್ಪ ಮೊಸರಲ್ಲಿ 15 ನಿಮಿಷ ನೆನೆಸಿಡಬೇಕು. ತದನಂತರ ಅದನ್ನು ಅರೆಯಬೇಕು. ಈ ಮಿಶ್ರಣಕ್ಕೆ ಕತ್ತರಿಸಿ ಅರೆದ ಹಸಿ ಆಲೂಗಡ್ಡೆಯ ಪೇಸ್ಟ್‌ ಮೂರು ಚಮಚ ಬೆರೆಸಬೇಕು. ಎರಡನ್ನೂ ಚೆನ್ನಾಗಿ ಬೆರೆಸಿ, ಮುಖಕ್ಕೆ ಲೇಪಿಸಿ ತುದಿ ಬೆರಳುಗಳಿಂದ ಮಾಲೀಶು ಮಾಡಬೇಕು. ಒಂದು ಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದರೆ ನೈಸರ್ಗಿಕ ಬ್ಲೀಚಿಂಗ್‌ ಪರಿಣಾಮ ಉಂಟಾಗುತ್ತದೆ. ಇದನ್ನು ಎರಡು ದಿನಕ್ಕೊಮ್ಮೆಯಂತೆ 1-2 ತಿಂಗಳು ಬಳಸಬಹುದು.

ಪಾರಿಜಾತ ಹೂವಿನ ಫೇಸ್‌ಪ್ಯಾಕ್‌
ಪಾರಿಜಾತ ಹೂವು ಚರ್ಮದ ಸೌಂದರ್ಯದ ಜೊತೆಗೆ ತುರಿಕೆ ಗುಳ್ಳೆಗಳನ್ನೂ ನಿವಾರಣೆ ಮಾಡುತ್ತದೆ.
ವಿಧಾನ: 15 ಪಾರಿಜಾತ ಹೂವುಗಳನ್ನು 5 ಚಮಚ ಕಿತ್ತಳೆ ರಸದಲ್ಲಿ ಅರೆದು ಅದಕ್ಕೆ ಎರಡು ಚಮಚ ಶುದ್ಧ ಜೇನುತುಪ್ಪ ಬೆರೆಸಿ, ಎರಡು ಚಿಟಿಕೆ ಅರಸಿನ ಹುಡಿ ಸೇರಿಸಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ತೊಳೆದರೆ ಮೊಗದ ಚರ್ಮ ಶುಭ್ರ ಕಾಂತಿಯುತವಾಗುವುದರ ಜೊತೆಗೆ ತುರಿಕೆ ಗುಳ್ಳೆಗಳಿದ್ದರೂ ನಿವಾರಣೆಯಾಗುತ್ತದೆ. ಹೀಗೆ ಹೂಗಳು ಮುಖದ ಸೌಂದರ್ಯಕ್ಕೆ ಹೊಸ ಭಾಷ್ಯ ನೀಡುವ ಸೌಂದರ್ಯದ ಖನಿಯಾಗಿವೆ!

– ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

arrested

Kasaragod: ಪತ್ನಿಯ ಹಂತಕನಿಗೆ 10 ವರ್ಷ ಕಠಿನ ಸಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.