ಆಹಾ… ಮಿಡಿ ಉಪ್ಪಿನಕಾಯಿ
Team Udayavani, Jun 15, 2018, 6:00 AM IST
ಗಂಜಿಯೂಟಕ್ಕೆ ಉಪ್ಪಿನಕಾಯಿ ಸೇವಿಸಲು ಬಲು ರುಚಿ. ನಮ್ಮ ಊರಿನಲ್ಲಿ ಕುಚ್ಚಲಕ್ಕಿ ಗಂಜಿ ಹೆಚ್ಚು ಬಳಕೆಯಲ್ಲಿರುವುದರಿಂದ ಬೆಳಿಗ್ಗೆ ಎದ್ದು ಗಂಜಿಯೂಟ ಸೇವಿಸಬೇಕಾದರೆ ಒಂದು ತುಂಡು ಉಪ್ಪಿನಕಾಯಿ ಇರಲೇಬೇಕು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಡಿ ಉಪ್ಪಿನಕಾಯಿ ಹೆಚ್ಚಾಗಿ ಮಾಡುವ ಕ್ರಮವಿದೆ. ಅದರ ರುಚಿ, ಪರಿಮಳಕ್ಕೆ ಯಾವ ಉಪ್ಪಿನಕಾಯಿಯೂ ಸರಿಸಾಟಿಯಾಗದು
ಮಾವಿನಮಿಡಿ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 100 ಸಣ್ಣ ಗಾತ್ರದ ಕಾಡುಮಾವಿನ ಮಿಡಿ, 1 ಕಿಲೋ ಉಪ್ಪು , 1/2 ಕಿಲೋ ಸಾಸಿವೆ, 1/4 ಕಿಲೋ ಕೆಂಪುಮೆಣಸು, 100 ಗ್ರಾಂ ಅರಸಿನ ಪುಡಿ.
ತಯಾರಿಸುವ ವಿಧಾನ: ಮಾವಿನ ಮಿಡಿಗಳನ್ನು ತೊಟ್ಟು ತೆಗೆದು ತೊಳೆದು, ಬಟ್ಟೆಯಿಂದ ಉಜ್ಜಿ , ನೀರ ಪಸೆ ತೆಗೆಯಿರಿ. ನಂತರ ಭರಣಿಗೆ ತುಂಬಿ, ಮೇಲಿನಿಂದ ಬಿಳಿ ಉಪ್ಪು ತುಂಬಿ, ಬಾಳೆಲೆಯಿಂದ ಮುಚ್ಚಿ. ಭಾರಕ್ಕೆ ಮೇಲೆ ಒಂದು ಕಲ್ಲು ಇಡಿ. ಪ್ರತಿದಿನ ಕಲ್ಲು ತೆಗೆದು, ಮಿಡಿಗಳನ್ನು ಕೈಯಿಂದ ಮಗುಚಿರಿ. ನೀರು ಸೋಕದಂತೆ ಜಾಗ್ರತೆ ವಹಿಸಿ. ನಾಲ್ಕು ದಿನಗಳ ನಂತರ ಮಿಡಿ ಚೆನ್ನಾಗಿ ಮುದುಡಿರುತ್ತದೆ. ಒಂದು ಚಾಪೆಯ ಮೇಲೆ ಹರಡಿ ಒಳ್ಳೆ ಮಿಡಿಗಳನ್ನು ಆರಿಸಿ ಮಾಡಿಟ್ಟ ಮೆಣಸಿನ ಹಿಟ್ಟಿನೊಂದಿಗೆ ಕಲಸಿ ಭರಣಿ ತುಂಬಿಡಿ. ಮಿಡಿ ಅದ್ದಿದ ನೀರನ್ನು ಸೋಸಿ ಎಷ್ಟು ಬೇಕೋ ಅಷ್ಟು ಉಪ್ಪಿನಕಾಯಿಗೆ ಸೇರಿಸಿ. ಈ ಉಪ್ಪಿನಕಾಯಿ ವರ್ಷವಾದರೂ ಕೆಡದು.
ಉಪ್ಪಿನಕಾಯಿ ಹಸಿಹಿಟ್ಟು
ಬೇಕಾಗುವ ಸಾಮಗ್ರಿ: 4 ಕಪ್ ಕೆಂಪು ಒಣಮೆಣಸು, 2 ಕಪ್ ಸಾಸಿವೆ, 1/4 ಕಪ್ ಅರಸಿನ, 3 ಕಪ್ ಉಪ್ಪು .
ತಯಾರಿಸುವ ವಿಧಾನ: ಸಾಸಿವೆಯನ್ನು ಶುದ್ಧೀಕರಿಸಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಮೆಣಸಿನಕಾಯಿ ಬಿಸಿಲಿಗಿಟ್ಟು ಒಣಗಿಸಿ. ಒಂದು ಪಾತ್ರೆಗೆ ಎರಡು ಕಪ್ ನೀರು ಹಾಕಿ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಉಪ್ಪು ಕರಗಿ ಮತ್ತೆ ಕೆನೆಯಾಗಿ ಗಟ್ಟಿಯಾಗುತ್ತ ಬರುವವರೆಗೆ ಕುದಿಸಿ. ಮೆಣಸು ಮತ್ತು ಸಾಸಿವೆಗೆ ಉಪ್ಪು ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಅರಸಿನಪುಡಿ ಬೆರೆಸಿ. ಬಾಟಲಿಗೆ ಹಾಕಿ ಭದ್ರವಾಗಿ ಮುಚ್ಚಿರಿ. ಬೇಕಾದಾಗ ಮಾವು, ನೆಲ್ಲಿ, ಕಣಿಲೆ, ಅಂಬಟೆ ಇತ್ಯಾದಿಗಳೊಂದಿಗೆ ಸೇರಿಸಿ ಉಪ್ಪಿನಕಾಯಿ ತಯಾರಿಸಬಹುದು. ಮೆಣಸಿನಕಾಯಿ ಬದಲಿಗೆ ಮೆಣಸಿನಪುಡಿ ಬಳಸಬಹುದು.
ಮಾವಿನಕಾಯಿ ಭಾಗ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 10 ಮಾವಿನಕಾಯಿ, 1 ಕಪ್ ಕೆಂಪು ಮೆಣಸು, 1/2 ಕಪ್ ಸಾಸಿವೆ, 4 ಚಮಚ ಅರಸಿನಪುಡಿ, 2 ಕಪ್ ಉಪ್ಪು.
ತಯಾರಿಸುವ ವಿಧಾನ : ಮಾವಿನಕಾಯಿ ತೊಟ್ಟು ತೆಗೆದು ತೊಳೆದು ಬಟ್ಟೆಯಿಂದ ಉಜ್ಜಿ ನಂತರ 8 ಭಾಗವಾಗಿ ತುಂಡು ಮಾಡಿ. ಕೋಗಿಲೆ ತೆಗೆಯಿರಿ. ಉಪ್ಪು ಬೆರೆಸಿ ಭರಣಿ ಅಥವಾ ಬಾಟಲಿಯಲ್ಲಿ ಹಾಕಿಡಿ. ದಿನವೂ ಒಮ್ಮೆ ಕೈಯಾಡಿಸಿ. ಮೂರು ದಿನ ಕಳೆದ ಮೇಲೆ ಉಪ್ಪಿನಕಾಯಿ ಹಸಿಹಿಟ್ಟು ಮಿಶ್ರಮಾಡಿ. ಮೆಣಸು ಮತ್ತು ಸಾಸಿವೆಯನ್ನು ಒಣಗಿಸಿ ಮಾವಿನಮಿಡಿಯಲ್ಲಿ ಬಿಟ್ಟ ನೀರನ್ನೇ ಉಪಯೋಗಿಸಿ ರುಬ್ಬಿದರೂ ಆಗುತ್ತದೆ.
ಮಾವಿನಕಾಯಿ ಭಾಗ ಹುರಿದ ಹಿಟ್ಟಿನ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 10 ಮಾವಿನಕಾಯಿ, 1 ಕಪ್ ಕೆಂಪುಮೆಣಸು, 1/2 ಕಪ್ ಸಾಸಿವೆ, 4 ಚಮಚ ಅರಸಿನಪುಡಿ, 1 ಚಮಚ ಮೆಂತೆ, ಸ್ವಲ್ಪ ಇಂಗು, 4 ಚಮಚ ಎಣ್ಣೆ, 2 ಕಪ್ ಉಪ್ಪು.
ತಯಾರಿಸುವ ವಿಧಾನ: ಉಪ್ಪಿಗೆ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕುದಿಸಿ. ತುಂಡು ಮಾಡಿದ ಮಾವಿನಕಾಯಿ ಹೋಳುಗಳನ್ನು ಹಾಕಿ ಒಂದು ಕುದಿ ಕುದಿಸಿ ಆರಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿ ಆದಾಗ ಸಾಸಿವೆ, ಮೆಂತೆ, ಕೆಂಪುಮೆಣಸು ಹಾಕಿ ಚಟಪಟನೆ ಸ್ವಲ್ಪ ಹುರಿದು, ಇಂಗು-ಅರಸಿನ ಹಾಕಿ ಉರಿ ನಂದಿಸಿ. ನಂತರ ಪುಡಿ ಮಾಡಿ ಮಾವಿನ ಹೋಳುಗಳೊಂದಿಗೆ ಮಿಶ್ರ ಮಾಡಿ. ಕಾಡುಮಾವು ಇಲ್ಲದಿದ್ದರೆ ನೆಕ್ಕರೆ, ತೋತಾಪುರಿ ಅಥವಾ ಇನ್ನಿತರ ಹುಳಿ ಮಾವಿನಕಾಯಿ ಉಪ್ಪಿನಕಾಯಿ ಹಾಕಬಹುದು.
ಮಾವಿನಹಣ್ಣು ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 10 ಕಾಡುಮಾವಿನ ಹಣ್ಣು, 2 ಕಪ್ ಒಣಮೆಣಸು, 1/2 ಕಪ್ ಸಾಸಿವೆ, 2 ಕಪ್ ಉಪ್ಪು , 4 ಚಮಚ ಅರಸಿನಪುಡಿ, 6 ಚಮಚ ಎಣ್ಣೆ.
ತಯಾರಿಸುವ ವಿಧಾನ: ಮಾವಿನಹಣ್ಣುಗಳನ್ನು ಒರೆಸಿ ತೊಟ್ಟು ತೆಗೆದು, ಉಗಿಯಲ್ಲಿ 10 ನಿಮಿಷ ಬೇಯಿಸಿ. ನಂತರ ತೆಗೆದು, ಚಾಪೆಯಲ್ಲಿ ಹರಡಿ ಒಣಗಲು ಬಿಡಿ. ನಂತರ ಮೆಣಸು, ಸಾಸಿವೆಯ ಹಸಿಹಿಟ್ಟು ತಯಾರಿಸಿ. ಮಾವಿನ ಜೊತೆ ಕಲಸಿ ನಂತರ ಭರಣಿಯಲ್ಲಿ ತುಂಬಿ. ಮೇಲೆ ಬಿಳಿ ಬಟ್ಟೆ ಹರಡಿ ಭದ್ರವಾಗಿ ಕಟ್ಟಿಡಿ. ಸ್ವಲ್ಪ ದಿನ ಕಳೆದ ಮೇಲೆ ಉಪಯೋಗಿಸಿ.
ಇಡಿಕಾಯಿ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ಬಲಿತ 20 ಸಣ್ಣ ಮಾವಿನಕಾಯಿ, 3 ಕಪ್ ಉಪ್ಪು , 2 ಕಪ್ ಹಸಿಹಿಟ್ಟು ಅಥವಾ ಹುರಿದ ಹಿಟ್ಟು.
ತಯಾರಿಸುವ ವಿಧಾನ: ಉಪ್ಪಿಗೆ ಸ್ವಲ್ಪ ನೀರು ಹಾಕಿ ನೊರೆ ನೊರೆ ಬರುವಂತೆ ಚೆನ್ನಾಗಿ ಕುದಿಸಿ. ಮಾವಿನಕಾಯಿ ತೊಟ್ಟಿನ ಬಳಿ ಸ್ವಲ್ಪ ಕತ್ತರಿಸಿ ಉಪ್ಪು ನೀರಿಗೆ ಹಾಕಿ ಒಂದು ಕುದಿ ಕುದಿಸಿ ಆರಿಸಿ. ಆರಿದ ಮೇಲೆ ಹಸಿಹಿಟ್ಟು ಅಥವಾ ಹುರಿದ ಹಿಟ್ಟು ಸೇರಿಸಿ ಕಲಸಿ. ಭರಣಿ ಅಥವಾ ಬಾಟಲಿಯಲ್ಲಿ ಹಾಕಿಡಿ.
ಸರಸ್ವತಿ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.