ವಧೂಪರೀಕ್ಷೆ ಎಂಬ ಪಿಕ್‌ನಿಕ್‌ ಸ್ಪಾಟ್‌!


Team Udayavani, Aug 4, 2017, 12:15 PM IST

04-YUVA-10.jpg

ಕೆಲವು ಹುಡುಗರ ಮನೆಯವರು ತಾವು ಯಾವ ಯಾವ ಮನೆಗೆ ವಧೂಪರೀಕ್ಷೆಗೆ ಹೋಗಿದ್ದೇವೆಂದು ಒಂದು ಪುಸ್ತಕದಲ್ಲಿ ಬರೆದಿಡುತ್ತಾರೆ. ಇಲ್ಲದಿದ್ದರೆ ಮತ್ತೂಮ್ಮೆ ಅದೇ ಮನೆಗೆ ಹೋಗಿ ವಧುಪರೀಕ್ಷೆ ಮಾಡಬೇಕಾದ ಗೊಂದಲಕ್ಕೆ ಒಳಗಾಗಬೇಕಾಗುತ್ತದೆ. ಇಷ್ಟಕ್ಕೂ ವಧುಪರೀಕ್ಷೆ ಎಂದರೆ ಇವರೆಲ್ಲ ಏನೆಂದು ತಿಳಿದುಕೊಂಡಿದ್ದಾರೆ? ಅದೇನು, ವ್ಯವಹಾರವೆ? ಪಿಕ್‌ನಿಕ್‌ ಟೈಂಪಾಸೇ? ಉಚಿತ ಉಪಾಹಾರ ಸ್ವೀಕರಿಸುವ ಅವಕಾಶವೆ? ಪುಕ್ಕಟೆ ಸೌಂದರ್ಯಾಸ್ವಾದನೆ ಎಂಬ ಮನೋರಂಜನೆಯೆ? ವಧುಪರೀಕ್ಷೆ ಮಾಡಿ ಹೋದವರು ಮರಳಿ ತಮ್ಮ ಅಭಿಪ್ರಾಯವನ್ನು ತಿಳಿಸುವ ಸೌಜನ್ಯವನ್ನೂ ತೋರಿಸುವುದಿಲ್ಲ !

ನನ್ನ ಗೆಳತಿಯ ವ್ಯಾನಿಟಿ ಬ್ಯಾಗ್‌ ಅನ್ನು ಸಕಾರಣವೊಂದಕ್ಕೆ ನಾನು ನೋಡಬೇಕಾಯಿತು. ಅಲ್ಲಿ ಹತ್ತಾರು ಚೀಟಿಗಳು ಮುದುಡಿಕೊಂಡಿದ್ದವು. ಅದು ಅವರ ಮನೆಯ ಕರೆಂಟು ಬಿಲ್‌ಗ‌ಳಲ್ಲ, ಆಕೆಗೆ ಯಾರೋ ಬರೆದ ಪ್ರೇಮಪತ್ರಗಳೂ ಆಗಿರಲಿಲ್ಲ, ಅವು ಕೇವಲ ಲೆಕ್ಕಪತ್ರಗಳಷ್ಟೇ. ಅವಳ ಕೈಯಲ್ಲಿಯೇ ಬರೆದ ಲೆಕ್ಕದ ಚೀಟಿಗಳವು. ಒಂದರಲ್ಲಿ ಕೇಸರಿಬಾತ್‌-5 ಪ್ಲೇಟ್‌, ಚಹಾ-3, ಕಾಫಿ- 2 ಅಂತ ಬರೆದಿದ್ದರೆ, ಮತ್ತೂಂದರಲ್ಲಿ ಚಕ್ಕುಲಿ-ಬಿಸ್ಕತ್ತು-ಎರಡೆರಡು ಪ್ಯಾಕ್‌, ಕಾಫಿ 6, ಚಹಾ 2 ಎಂದು ಬರೆದಿತ್ತು. ಮತ್ತೂಂದರಲ್ಲಿ ಮೈಸೂರುಪಾಕ್‌-10, ಖಾರಾ- 1 ಕಿಲೋ, ಹಾಲು-2 ಪ್ಯಾಕ್‌, ಚಹಾ-6 ಎಂದು ಬರೆಯಲಾಗಿತ್ತು. ಹಾಗೆ ಸುಮಾರು, ಹತ್ತಕ್ಕೂ ಅಧಿಕ ಚೀಟಿಗಳಿದ್ದವು.

“ಇದೇನಪ್ಪಾ?’ ಎಂದು ತಲೆ ಕೆರೆದುಕೊಂಡೆ. ಹೊರಗೆಲ್ಲೋ ಹೋಗಿದ್ದ ಗೆಳತಿ ವಾಪಾಸು ಬಂದಾಗ ಕೇಳಿದೆ: “”ಅಲ್ವೇ… ನೀನೇನೋ ಬ್ಯಾಗ್‌ ಓಪನ್‌ ಮಾಡು ಅಂದೆ. ಆದರೆ, ಅದರಲ್ಲೆಲ್ಲ ಬರೀ ಚೀಟಿಗಳೇ ಇದೆಯಲ್ವೇನೇ… ಸಾರಿ, ಕಣೇ… ನಾನು ಅದನ್ನೆಲ್ಲ ಓದ್ಬಿಟ್ಟೆ. ಆದರೆ, ಅದರಲ್ಲಿ ಬರೆದ ಕೇಸರಿಬಾತ್‌, ಮೈಸೂರುಪಾಕ್‌ಗಳ ವಿಚಾರ ಮಾತ್ರ ಗೊತ್ತಾಗ್ಲೆ ಇಲ್ಲ. ಅದ್ಸರಿ, ಏನವು?” ಅವಳ ಮುಖ ತುಸು ಕಪ್ಪಾಯಿತು. “ಪತ್ತೇದಾರಿ ಪ್ರತಿಭಾ’ ಥರ ನಾನೇನಾದ್ರೂ ತನಿಖೆ ಮಾಡಿದ್ದು ಅವಳಿಗೆ ಹಿಡಿಸದೇ ಹೋಯಿತಾ ಅಂದುಕೊಂಡೆ. ಆದರೆ, ಆಕೆ ಕೋಪಗೊಂಡಿದ್ದು ನನ್ನ ಮೇಲಲ್ಲ, ಕೆಲವು ಪುರುಷರ ಮೇಲೆ ಅಂತ ತಡವಾಗಿ ಗೊತ್ತಾಯಿತು.

ಆಕೆಗೆ ಇದುವರೆಗೆ 12 ಸಂಬಂಧಗಳು ಬಂದಿದ್ದವು. ಹಾಗೆ ವಧುಪರೀಕ್ಷೆಗೆ ಬಂದವರೆಲ್ಲ, ತಿಂದುಂಡು ಹೋದ ಮಾಹಿತಿಗಳನ್ನು ಆಕೆ ಚೀಟಿಯಲ್ಲಿ ನೀಟಾಗಿ ಬರೆದಿದ್ದಳು. ವಯಸ್ಸಾದ ಅಪ್ಪ ಯಾವುದೋ ಕ್ಯಾಂಟೀನ್‌ನಲ್ಲಿ ದುಡಿಯುತ್ತಾರೆ. ಗೆಳತಿಯ ಅಮ್ಮನಿಗೆ ಯಾವಾಗಲೂ ಮೈ ಹುಷಾರಿರುವುದಿಲ್ಲ. ಇವೆಲ್ಲದರ ನಡುವೆ ಅವಳಿಗೆ ತಿಂಗಳಿಗೊಂದು ಸಂದರ್ಶನ. ಅಪ್ಪನ ಚೂರು-ಪಾರು ಸಂಬಳದಲ್ಲಿ ಈ ಸಂದರ್ಶನದ ಆಯವ್ಯಯವನ್ನು ಪ್ರತ್ಯೇಕವಾಗಿ ತೆಗೆದಿಟ್ಟೂ ತೆಗೆದಿಟ್ಟು ಅವರ ಕುಟುಂಬಕ್ಕೆ ಸಾಕಾಗಿ ಹೋಗಿದೆ.

ಮದುವೆಯೇ ಒಂದು ದುಂದುವೆಚ್ಚದ ಸಂಭ್ರಮ. ಒಂದು ಮದುವೆ ಮುಗಿಸುವ ಹೊತ್ತಿಗೆ ಹೆಣ್ಣಿನ ತಂದೆ, ಹತ್ತಾರು ಕೈಗಳಿಂದ ಸಾಲ ಮಾಡಿ, ಬದುಕಿನಲ್ಲಿ ಕುಸಿದುಹೋಗಿರುತ್ತಾರೆ. ಇವೆಲ್ಲದರ ನಡುವೆ “ಟ್ರೆçಲರ್‌’ ಎಂಬಂತೆ ಸಂದರ್ಶನಗಳ ಹೊರೆ, ವಧುಪರೀಕ್ಷೆಯ ಕಾಫಿ-ತಿಂಡಿಯ ವೆಚ್ಚಗಳನ್ನು ಹೆಣ್ಣಿನ ತಂದೆಯ ಕುತ್ತಿಗೆಗೆ ಕಟ್ಟುವುದು ಯಾವ ನ್ಯಾಯ ಎನ್ನುವುದು ನನ್ನ ವಾದ. ಉಪ್ಪಿಟ್ಟು-ಕಾಫಿಯಿಂದ ಆರಂಭವಾಗುವ ವಧುಪರೀಕ್ಷೆಯಲ್ಲಿ ದುಡ್ಡು ಕರಗುವುದೇ ಗೊತ್ತಾಗುವುದಿಲ್ಲ. ಭಾವನೆಗಳಿಗೆ ಇಲ್ಲಿ ಸ್ಥಾನವಿಲ್ಲ, ಅಂತಸ್ತಿಗೆ, ಸಂಭಾವನೆಗೆ ಇಲ್ಲಿ ಹೆಚ್ಚು ಬೆಲೆ.

ಇವೆಲ್ಲದರ ನಡುವೆ ಜಾತಕ ನೋಡುವ ಪ್ರಹಸನ ಕೂಡ ಒಂದು ಕಾಲಹರಣದ ಸಂಗತಿ. ಹತ್ತಾರು “ಗಂಡುಗಳು’ ಬಂದು, ಚೆನ್ನಾಗಿ ತಿಂದು ನಗುತ್ತಲೇ ಹೋಗುತ್ತಾರೆ. “ಊರಿಗೆ ಹೋಗಿ ಫೋನ್‌ ಮಾಡ್ತೇವೆ’ ಎಂದು ಸೌಜನ್ಯದಿಂದಲೇ ಹೇಳುವ ಜನ ಆನಂತರದಲ್ಲಿ ಉಗುಳು ನುಂಗುತ್ತಾ, “”ನಮಗೇನೋ ಸಂಬಂಧ ಇಷ್ಟ ಆಯ್ತು, ಆದರೆ ಜಾತಕ ಹೊಂದುತ್ತಿಲ್ಲ”, “”ಹುಡುಗಿ ಕೊಂಚ ದಪ್ಪಗಾದಳು”, “”ಈ ಸಂಬಂಧ ಬೆಳೆಸಲು ನಮ್ಮ ಮನೆ ದೇವರು ಅಪ್ಪಣೆ ನೀಡಲಿಲ್ಲ…” ಎಂಬ ಬಣ್ಣ ಬಣ್ಣದ ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆ. ಹಾಗೆ ಜಾತಕಗಳ ಝೆರಾಕ್ಸ್‌ಗೆ ಹತ್ತಿಪ್ಪತ್ತು ರೂಪಾಯಿ ಖೋತಾ!

ಇವೆಲ್ಲ ಬೆಳವಣಿಗೆಗಳನ್ನು ಕಂಡು, ಹುಡುಗಿ ಹಾಗೂ ಅವಳ ಪೋಷಕರು ಕಂಗಾಲಾಗುವುದು ಸಹಜ. ಒಂದು ಸಂಬಂಧ ಮುರಿದುಬಿದ್ದಿತೆಂದರೆ, ಆ ಹುಡುಗಿಯನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಅವಳಲ್ಲೇ ಏನೋ ದೋಷವಿದೆ ಅನ್ನುವ ಅಪವಾದವನ್ನು ಹೊರಿಸುವ ಪ್ರಳಯಾಂತಕರೂ ನಮ್ಮ ಸುತ್ತಮುತ್ತ ಇದ್ದಾರೆ.

ಹೀಗಿದ್ದರೂ ಹುಡುಗಿ ಮತ್ತವಳ ಮನೆಯ ಕಡೆಯವರು ಸುಮ್ಮನೇ ಚಿಂತಿಸುತ್ತಾ ಕೂರುವಂತಿಲ್ಲ. ಇಂದಲ್ಲ ನಾಳೆ ಕಂಕಣಬಲ ಕೂಡಿ ಬರುತ್ತದೆ ಎನ್ನುವ ಆಶಾವಾದವನ್ನು ಹೊತ್ತುಕೊಂಡೇ ತಿರುಗಬೇಕಾಗುತ್ತದೆ. ನೆಂಟರಿಷ್ಟರ ಚುಚ್ಚು ನುಡಿಗಳು, ಅಸಂಬದ್ಧ ಪ್ರಶ್ನೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. “ಎಷ್ಟು ಗಂಡುಗಳು ಬಂದರೂ, ಯಾರೂ ಯಾಕೆ ಒಪ್ಪಿಲ್ಲ? “ಸದ್ಯಕ್ಕೆ ಮದ್ವೆ ಮಾಡೋದಿಲ್ವೇ?’, “ಎಷ್ಟು ದಿನಾ ಅಂತ ಮನೇಲಿ ಇಟ್ಕೊàತಿರಾ?’- ಇಂಥ ಪ್ರಶ್ನೆಗಳ ದಾಳಿ ಯಾವಾಗಲೂ ಇದ್ದಿದ್ದೇ. 

ಹುಡುಗಿಯನ್ನು ನೋಡಲು ಬರುವ ಗಂಡಿನ ತಾಯಿಯೂ ಹೆಣ್ಣೇ ಅಲ್ಲವೇ? ಮದುವೆಯ ಮುಂಚೆ ಆಕೆಯೂ ಒಬ್ಬ ತಂದೆಗೆ ಮಗಳಾಗಿದ್ದವಳೇ ಅಲ್ಲವೇ? ಆದರೂ ತನ್ನ ಮಗನಿಗೆ ಹೆಣ್ಣು ನೋಡುವ ಸಂದರ್ಭ ಬಂದಾಗ ಅವೆಲ್ಲವನ್ನೂ ಆಕೆ ಮರೆತುಬಿಡೋದು ಯಾಕೆ? ಮನೆಯಲ್ಲಿ ಮದುವೆಯಾಗದ ಹೆಣ್ಣಿದ್ದಾಳೆ ಎಂದಾಕ್ಷಣ, ಸುಮ್ಮನೇ ನೋಡಿ ಬಂದರಾಯಿತು ಎನ್ನುವ “ಪಿಕ್‌ನಿಕ್‌’ ಮನೋಭಾವವನ್ನು ಗಂಡಿನ ಮನೆಯವರು ಬಿಡಬೇಕು. ಹುಡುಗಿಯನ್ನು ನೋಡಲು ಹೋಗುವ ಮುನ್ನ ಹುಡುಗಿ ಬಗ್ಗೆ, ಅವಳ ಕುಟುಂಬದ ಬಗ್ಗೆ ನಾನಾ ಕಡೆಗಳಿಂದ ವಿವರಗಳನ್ನು ಕಲೆಹಾಕಿ ನಂತರವಷ್ಟೇ ಮುಂದಡಿಯಿಡಬೇಕು.

ಒಮ್ಮೊಮ್ಮೆ ತಂದೆತಾಯಿಗೆ ಒಪ್ಪಿಗೆಯಾಗಿದ್ದರೂ, ಉದ್ಯೋಗದಲ್ಲಿರುವ ಹಾಗೂ ವ್ಯಾವಹಾರಿಕ ಪ್ರಪಂಚದೊಡನೆ ಬದುಕುವ ಹುಡುಗನಿಗೆ ಮನೆಯಲ್ಲಿರುವ ಹುಡುಗಿ ಇಷ್ಟವಾಗುವುದಿಲ್ಲ. ಹಾಗಾಗಿ, ಬಾಳಸಂಗಾತಿಯಾಗಿ ಎಂಥ ಹುಡುಗಿ ಬೇಕು ಎಂಬುದನ್ನು ಗಂಡುಗಳು ಹೆತ್ತವರೊಂದಿಗೆ ಮೊದಲೇ ಚರ್ಚಿಸುವುದು ಒಳಿತು. ನೀವು ಬಯಸಿದಂಥ ಗುಣ, ಬಣ್ಣ, ಆರ್ಥಿಕ ಸಬಲತೆ ಬಗ್ಗೆ ಚೆಕ್‌ ಮಾಡಿ. ಎಲ್ಲವೂ ಹೊಂದಿಕೊಳ್ಳಬಹುದೆಂಬ ಭರವಸೆಯಿದ್ದಲ್ಲಿ ಮಾತ್ರ ಹುಡುಗಿ ನೋಡಲು ಹೋಗಿ.

ಸಂಗಾತಿಯ ಹುಡುಕಾಟ ಸುಲಭವಲ್ಲ, ಹಾಗೆಂದು ಹೆಣ್ಣು ಸಹ ಮಾರಾಟಕ್ಕಿಲ್ಲವಲ್ಲ… ಮದುವೆಯ ನಂತರ ಮನಃಸ್ಥಿತಿಯ ಹೊಂದಾಣಿಕೆಯ ಲೋಪದಲ್ಲಾಗುವ ಸಂಬಂಧಗಳ ಬಿರುಕಿಗೆ ಯಾರೂ ಹೊಣೆಯಲ್ಲ, ಅದು, ಗಂಡು-ಹೆಣ್ಣಿನಲ್ಲಿರಬೇಕಾದ ಅರಿವು ಮತ್ತು ಬದುಕುವ ಸಾಮರ್ಥ್ಯದ ಮೇಲೆ ನಿರ್ಧಾರವಾಗುವ ವಿಚಾರ. ಬಂದವರ ಮುಂದೆಲ್ಲಾ ನಿಂತು ಹೋಗಲು ಹೆಣ್ಣು ಶೋಕೇಸ್‌ನಲ್ಲಿ ಇಡುವ ಗೊಂಬೆಯಲ್ಲವಲ್ಲ !

ಪೂಜಾ ಎಚ್‌. ವಿ.

ಟಾಪ್ ನ್ಯೂಸ್

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Pune: Batter collapses on the field!; Video goes viral

Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!;‌ ವಿಡಿಯೋ ವೈರಲ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

6-dandeli

Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.