ಪಿಯಾ ಪಿಯಾ ಹೋ ಪಿಯಾ!
Team Udayavani, Mar 31, 2017, 3:45 AM IST
ಪಿಯಾ ಬಾಜಪೇಯಿ ಎಂಬ ಹೆಸರು ಬಾಲಿವುಡ್‌ಗೆ ಹೊಸತಾಗಿರಬಹುದು. ಆದರೆ ಇತ್ತ ತಮಿಳು, ಮಲಯಾಳ ಮತ್ತು ತೆಲುಗಿನಲ್ಲಿ ಜನಪ್ರಿಯ ನಟಿ ಪಿಯಾ ಬಾಜಪೇಯಿ. ಹೆಸರೇ ಹೇಳುವಂತೆ ಉತ್ತರ ಭಾರತೀಯಳಾದರೂ ಈಕೆಯನ್ನು ಕರೆದು ಸ್ಟಾರ್ ಮಾಡಿದ್ದು ತಮಿಳು ಚಿತ್ರರಂಗ. ಚೆನ್ನಾಗಿ ಕಲಿತು, ಯಾವುದಾದರೊಂದು ಉದ್ಯೋಗ ಹಿಡಿದ ಬಳಿಕ ಮದುವೆಯಾಗಿ ಗೃಹಿಣಿಯಾಗಲಿ ಎಂದು ತಂದೆ-ತಾಯಿ ಬಯಸಿದರೆ ಪಿಯಾಳ ತುಡಿತವಿದ್ದುದೇ ಬೇರೆ ಕಡೆ.
ಮನೆಯವರ ಒತ್ತಾಯಕ್ಕೆಂದು ಕಂಪ್ಯೂಟರ್ ಸಯನ್ಸ್ ಓದಿದಳು. ಇದರಲ್ಲೊಂದು ಪದವಿ ಪಡೆದು ರಿಸೆಪ್ಷನಿಸ್ಟ್ , ಅದು ಇದು ಎಂದು ಕೆಲವು ನೌಕರಿಗಳನ್ನು ಮಾಡಿದಳು. ಆದರೆ, ಯಾವುದರಲ್ಲೂ ಮನಸು ನಿಲ್ಲಲಿಲ್ಲ. ಕೈಯಲ್ಲಿ ನಾಲ್ಕು ಕಾಸು ಜಮೆಯಾದದ್ದೇ ತಡ ಯಾರಿಗೂ ಹೇಳದೆ ಕೇಳದೆ ದಿಲ್ಲಿಯಿಂದ ಮುಂಬಯಿಯ ರೈಲು ಹತ್ತಿದಳು. ಸಂಪೂರ್ಣ ಹೊಸ ಊರು ಜನಾರಣ್ಯದಂತಹ ಶಹರದಲ್ಲಿ ಅವಳಿಗೆ ಕರೆದು ಕೆಲಸ ಕೊಡುವವರು ಯಾರೂ ಇರಲಿಲ್ಲ. ಆದರೂ ಪ್ರಯತ್ನ ಬಿಡದ ಪಿಯಾ ಸ್ಟುಡಿಯೊಗಳಿಗೆ ಎಡತಾಕ ತೊಡಗಿದಳು. ಕೈಯಲ್ಲಿದ್ದ ಹಣವೆಲ್ಲ ಮುಗಿದು ಇನ್ನು ಒಂದೋ ಮರಳಿ ಹೋಗಬೇಕು ಅಥವಾ ಕೈಗೆ ಸಿಕ್ಕಿದ ಯಾವುದಾದರೂ ನೌಕರಿ ಹಿಡಿಯಬೇಕೆಂದು ನಿರ್ಧರಿಸುವಷ್ಟರಲ್ಲಿ ಜಾಹೀರಾತಿನಲ್ಲಿ ನಟಿಸಲು ಬುಲಾವ್ ಬಂತು.
ಹೀಗೆ ಮೊದಲ ಸಲ ಬಣ್ಣ ಹಚ್ಚಿದ ಪಿಯಾ ಅನಂತರ ಬಹಳ ಕಷ್ಟಪಟ್ಟು ಒಂದೊಂದೇ ಮೆಟ್ಟಿಲೇರಿದಳು. ಚೆನ್ನಾಗಿ ಹಿಂದಿ ಮಾತನಾಡುತ್ತಿದ್ದ ಕಾರಣ ಡಬ್ಬಿಂಗ್‌ಗೆ ಅವಕಾಶ ಸಿಕ್ಕಿತು. ಹೀಗೆ ತಮಿಳು ಚಿತ್ರವೊಂದನ್ನು ಹಿಂದಿಗೆ ಡಬ್ಬಿಂಗ್ ಮಾಡುತ್ತಿದ್ದಾಗ ತಮಿಳರ ಕಣ್ಣಿಗೆ ಬಿದ್ದು ಪೊಲಿ ಸೊಲಲ ಪೋರಮ್ ಎಂಬ ಚಿತ್ರಕ್ಕೆ ನಾಯಕಿಯಾದಳು. ಇದೆಲ್ಲ ಒಂಬತ್ತು ವರ್ಷದ ಹಿಂದಿನ ಮಾತು. ಮೊದಲ ಚಿತ್ರ ಹಿಟ್ ಆದದ್ದೇ ತಡ ತಮಿಳಿನಲ್ಲಿ ಧಾರಾಳ ಅವಕಾಶಗಳು ಸಿಕ್ಕಿದವು. ಅಲ್ಲಿಂದ ಮಲಯಾಳಂಗೆ ಜಿಗಿದಳು. ತೆಲುಗಿನಲ್ಲೂ ನಾಲ್ಕೈದು ಅವಕಾಶ ಸಿಕ್ಕಿತು. ನಟಿಯಾಗಿ ನಾಲ್ಕು ಮಂದಿ ಗುರುತಿಸುವಂತಾದ ಮೇಲೆ ಬಾಲಿವುಡ್‌ನಿಂದ ಕರೆ ಬಂದು ಮುಂಬಯಿ-ದಿಲ್ಲಿ- ಮುಂಬಯಿ ಎಂಬ ಚಿತ್ರದಲ್ಲಿ ನಟಿಸಿದಳು. ಚಿತ್ರ ಬಿಡುಗಡೆಯಾಗದ ಕಾರಣ ಪಿಯಾಳ ಬಾಲಿವುಡ್ ಕನಸು ಕನಸಾಗಿಯೇ ಉಳಿಯಿತು. ಕಳೆದ ವರ್ಷ ಲಾಲ್ ರಂಗ್ ಎಂಬ ಚಿತ್ರದಲ್ಲಿ ನಟಿಸಿದರೂ ಇದು ಸೋತು ಹೋಯಿತು. ಇದೀಗ ಮಿರ್ಜಾ ಜೂಲಿಯಟ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಚಿತ್ರದ ಕತೆಯ ಪಿಯಾಳಿಗೆ ಬಹಳ ಮೆಚ್ಚುಗೆಯಾಗಿದೆ. ಹೆಚ್ಚುಕಡಿಮೆ ನನ್ನ ಬದುಕಿನಂತಿದೆ ಕತೆ ಎಂದು ಸಂಭ್ರಮಪಟ್ಟುಕೊಳ್ಳುತ್ತಿದ್ದಾಳೆ ಪಿಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.