ಮತ್ತೂಬ್ಬಳು ಪ್ರಿಯಾಂಕಾ

Team Udayavani, May 5, 2018, 6:00 AM IST

s-28.jpg

ಪ್ರಿಯಾಂಕಾ ಚೋಪ್ರಾ ಯಾರೆಂದು ಕೇಳಿದರೆ ಚಿಕ್ಕ ಮಗುವಿಗೂ ಗೊತ್ತು. ಆದರೆ, ಬಾಲಿವುಡ್‌ನ‌ಲ್ಲಿ ಇನ್ನೂ ಒಬ್ಬಳು ಪ್ರಿಯಾಂಕಾ ಇದ್ದಾಳೆ. ಅವಳಾರೆಂದು ಉಳಿದವರು ಬಿಡಿ, ಸ್ವತಃ  ಸಿನೆಮಾದ ರಂಗದಲ್ಲಿರುವವರಿಗೂ ಗೊತ್ತಿರಲಿಕ್ಕಿಲ್ಲ. ಅವಳೇ ಪ್ರಿಯಾಂಕಾ ಬೋಸ್‌! 

ಯಾರೀಕೆ ಬೋಸ್‌ ಎಂಬ ಪ್ರಶ್ನೆ ಎದುರಾಗುವುದು ಸಹಜ. ಈ ಪ್ರಿಯಾಂಕಾ ಬಾಲಿವುಡ್‌ಗೆ ಹೊಸಬಳಂತೂ ಅಲ್ಲ. ನಟಿಸಲು ತೊಡಗಿ ದಶಕವೇ ಕಳೆಯಿತು. ಆದರೆ, ಇನ್ನೂ ಬಾಲಿವುಡ್‌ನ‌ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿಲ್ಲ ಅಷ್ಟೆ. ಹನ್ನೊಂದು ವರ್ಷದ ಹಿಂದೆ ಬಂದ ಜಾನಿ ಗದ್ದಾರ್‌ ಪ್ರಿಯಾಂಕಾ ನಟಿಸಿದ ಮೊದಲ ಹಿಂದಿ ಚಿತ್ರ. ಅನಂತರ ಸಾರಿ ಭಾ, ಗುಝಾರಿಶ್‌, ಪದ್ದುರಾಮ್‌, ಯೇ ಜವಾನಿ ಹೈ ದೀವಾನಿ , ಗುಲಾಬ್‌ ಗ್ಯಾಂಗ್‌… ಹೀಗೆ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಇಟೆಲಿಯ ನಿರ್ದೇಶಕ ಇಟಲೊ ಸ್ಪಾ„ನೆಲ್‌ ನಿರ್ದೇಶಿಸಿದ ಬಂಗಾಲಿ ಚಿತ್ರ ಗಂಗೋರ್‌ ಅವಳಿಗೆ ಅಂತರಾಷ್ಟ್ರೀಯ ಪ್ರಸಿದ್ಧಿಯನ್ನೂ ಜತೆಗೆ ನ್ಯೂಜೆರ್ಸಿ ಚಿತ್ರೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಯನ್ನೂ ತಂದು ಕೊಟ್ಟಿದೆ.

 ಇಷ್ಟಾದರೂ ಈ ಪ್ರಿಯಾಂಕಾ ಪ್ರಚಾರದಿಂದ ದೂರ ಉಳಿಯಲು ಕಾರಣ ಅವಳು ನಿಭಾಯಿಸಿರುವ ಪಾತ್ರಗಳು. ಬಾಲಿವುಡ್‌ ಭಾಷೆಯಲ್ಲಿ ಹೇಳುವುದಾದರೆ ಡಾರ್ಕ್‌ ಕ್ಯಾರಕ್ಟರ್‌ಗಳಿಗೆ ಹೇಳಿಮಾಡಿಸಿದ ನಟಿ ಪ್ರಿಯಾಂಕಾ. ಗಂಗೋರ್‌ನ ಆದಿವಾಸಿ ಮಹಿಳೆ, ಯೇ ಜವಾನಿ ಹೈ ದೀವಾನಿ ಚಿತ್ರದ ವೇಶ್ಯೆ ಮುಂತಾದ ಪಾತ್ರಗಳಲ್ಲಿ ಪ್ರಿಯಾಂಕಾ ನೀಡಿದ ಅಭಿನಯ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಹಿಂದಿ ಮಾತ್ರವಲ್ಲದೆ ಬಂಗಾಲಿ, ಮರಾಠಿ, ಇಂಗ್ಲಿಶ್‌ ಚಿತ್ರಗಳಲ್ಲಿ, ರಂಗಭೂಮಿಯಲ್ಲಿ ಪ್ರಿಯಾಂಕಾ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ. ಇದೀಗ ಸಮಿತ್‌ ಕಕ್ಕಡ್‌ ನಿರ್ದೇಶಿಸುತ್ತಿರುವ ಆಶ್ಚರ್ಯ ಫ‌….ಇಟ್‌ ಚಿತ್ರದಲ್ಲಿ ಪ್ರಿಯಾಂಕಾ ಮತ್ತೂಮ್ಮೆ “ವೇಶ್ಯೆ’ಯಾಗುತ್ತಿದ್ದಾಳೆ. ಇದು ಕೂಡ ಡಾರ್ಕ್‌ ಕ್ಯಾರಕ್ಟರ್‌. ಒಂದೇ ರೀತಿಯ ಪಾತ್ರವನ್ನು ಮಾಡಿದರೆ ಟೈಪ್‌ಕಾಸ್ಟ್‌ ಆಗುವುದಿಲ್ಲವೆ ಎಂಬ ಪ್ರಶ್ನೆ ಪ್ರಿಯಾಂಕಾಗೆ ಪದೇ ಪದೇ ಎದುರಾಗುತ್ತಿರುತ್ತದೆ. ಯಾವುದೇ ಪಾತ್ರವನ್ನಾದರೂ ಯೋಚಿಸಿಯೇ ಆರಿಸಿರುತ್ತೇನೆ. ಸತ್ವ ಇಲ್ಲದ ಪಾತ್ರವನ್ನೂ ಮಾಡುವುದಿಲ್ಲ. ಹೀಗಾಗಿ, ಟೈಪ್‌ಕಾಸ್ಟ್‌ ಆಗುವ ಪ್ರಶ್ನೆಯೇ ಇಲ್ಲ ಎನ್ನುವುದು ಇದಕ್ಕೆ ಪ್ರಿಯಾಂಕಾ ಕೊಡುವ ಉತ್ತರ.

ಟಾಪ್ ನ್ಯೂಸ್

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.