ಕಾಮನಬಿಲ್ಲಿನಂಥ ಹುಬ್ಬು
Team Udayavani, Mar 9, 2018, 7:30 AM IST
ಕಣ್ಸನ್ನೆಯ ಕರಾಮತ್ತು ಎಂಥಾದ್ದು ನೋಡಿ. ಪ್ರಿಯಾ ಪ್ರಕಾಶ್ ವಾರಿಯರ್ ಎಂಬ ಮಲಯಾಳಂ ಚೆಲುವೆ “ಕಣ್ಸನ್ನೆ’ಯಿಂದಲೇ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು ಮೊನ್ನೆ ಮೊನ್ನೆ ಹುಡುಗಿಯರು ಹುಬ್ಬು ಹಾರಿಸಿದರೆ, ಕಣ್ಣು ಕುಣಿಸಿದರೆ ಇಷ್ಟೆಲ್ಲಾ ಸದ್ದು ಮಾಡುತ್ತೆ ಅಂದಮೇಲೆ ಹುಬ್ಬಿನ ಆಕಾರ, ಆರೋಗ್ಯವನ್ನು ಕಡೆಗಣಿಸೋಕೆ ಸಾಧ್ಯವೇ? ಕಾಮನಬಿಲ್ಲಿನಂಥ ಹುಬ್ಬಿಗಾಗಿ ಕೆಲವು ಟಿಪ್ಸ್‌ಗಳು ಇಲ್ಲಿವೆ.
.ಹುಬ್ಬಿನ ಒಂದು ತುದಿ ಮೂಗಿನ ಹೊಳ್ಳೆಗೆ ನೇರವಾಗಿರಬೇಕು.
.ಹುಬ್ಬು ಶೇಪ್ ಮಾಡಿಸಲು ಯಾವಾಗಲೂ ಒಬ್ಬರೇ ಬ್ಯೂಟೀಶಿಯನ್ ಬಳಿ ಹೋಗುವುದು ಉತ್ತಮ. ಆಗಾಗ ಪಾರ್ಲರ್‌ಗಳನ್ನು ಬದಲಿಸಿದರೆ ಹುಬ್ಬಿನ ಶೇಪ್ ಹಾಳಾಗಬಹುದು.
.ಹುಬ್ಬು ಶೇಪ್ ಕಳೆದುಕೊಂಡಿದೆ ಅಂತ ಅನ್ನಿಸಿದರೆ 6-8 ವಾರ ಬೆಳೆಯಲು ಬಿಟ್ಟು ನಂತರ ನಿಮಗೆ ಬೇಕಾದ ಶೇಪ್ ನೀಡಿ.
.ಹುಬ್ಬನ್ನು ಪ್ಲಕರ್‌ನಿಂದ ಕೀಳುವಾಗ, ಸ್ವತಃ ಐಬ್ರೋ ಮಾಡಿಕೊಳ್ಳುವಾಗ ಕನ್ನಡಿಯಿಂದ ಸ್ವಲ್ಪ ದೂರ ನಿಂತುಕೊಳ್ಳುವುದು ಹೆಚ್ಚು ಸೂಕ್ತ. ಆಗ ಶೇಪ್ ಸರಿಯಾಗಿ ಗೊತ್ತಾಗುತ್ತದೆ.
.ಮುಖದ ಆಕಾರಕ್ಕೆ ಸರಿ ಹೊಂದುವಂತೆ ಹುಬ್ಬು ಶೇಪ್ ಮಾಡಿಸಿ.
.ಮೊಟ್ಟೆಯಾಕಾರದ ಮುಖ: ಹುಬ್ಬಿನ ಶೇಪ್ ಇಡೀ ಕಣ್ಣನ್ನು ಕವರ್ ಮಾಡುವಂತೆ ಇರಲಿ.
.ವೃತ್ತಾಕಾರದ ಮುಖ: ಮಧ್ಯಭಾಗ ಎತ್ತರಿಸಲ್ಪಟ್ಟಂತೆ ಕಾಣುವ ಹುಬ್ಬಿನ ತುದಿ ಚೂಪಾಗಿರಲಿ.
.ಚೌಕಾಕಾರದ ಮುಖ: ಕಮಾನಿನಂತೆ ತುದಿಯಿಂದ ಕೊನೆಯವರೆಗೆ ಒಂದೇ ಸಮ ದಪ್ಪಗಿರಲಿ.
.ಹೃದಯಾಕಾರದ ಮುಖ: ವೃತ್ತಾಕಾರದ ಕಮಾನಿನಂತಿದ್ದು ತುದಿ ಸ್ವಲ್ಪ ಚೂಪಾಗಿರಲಿ.
.ಉದ್ದ ಮುಖ: ಹುಬ್ಬು ಕಡಿಮೆ ಉದ್ದವಿದ್ದು ತುದಿ ತೆಳ್ಳಗೆ ಕಾಣಿಸುವಂತಿರಲಿ.
.ವಿಟಮಿನ್ “ಬಿ’, ಕಬ್ಬಿಣಾಂಶ, ಸಲರ್, ಪ್ರೋಟೀನ್ ಹೇರಳವಾಗಿ ಇರುವ ಹಾಲಿನ ಉತ್ಪನ್ನ, ಮೀನು-ಮಾಂಸ, ತರಕಾರಿ, ಹಣ್ಣುಗಳನ್ನು ಚೆನ್ನಾಗಿ ಸೇವಿಸಿದರೆ ದಪ್ಪ, ಕಪ್ಪು ಹುಬ್ಬು ನಿಮ್ಮದಾಗುತ್ತದೆ.
ಈಕನ್ನಡಕ ಧರಿಸುವವರು ತಮ್ಮ ಫ್ರೆಮ್‌ಗೆ ಅನುಗುಣವಾಗಿ ಹುಬ್ಬು ಶೇಪ್ ಮಾಡಿಸಬೇಕು. ದಪ್ಪ ಹುಬ್ಬಿನವರು ತೆಳ್ಳಗಿನ ಪ್ರೇಮ್‌ಗೆ ಅನುಗುಣವಾಗಿ ಹುಬ್ಬು ಶೇಪ್ ಮಾಡಿಸಬೇಕು. ದಪ್ಪ ಹುಬ್ಬಿನವರು ತೆಳ್ಳಗಿನ ಫ್ರೆಮ್‌ನ ಕನ್ನಡಕ ಹಾಗೂ ತೆಳು ಹುಬ್ಬಿನವರು ದಪ್ಪ ಫ್ರೆಮ್‌ನ ಕನ್ನಡಕ ಧರಿಸಿದರೆ ಉತ್ತಮ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.