ರಂಗೀಲಾ ರಂಗೋಲಿ


Team Udayavani, Mar 13, 2020, 4:41 AM IST

rangoli-

ರಂಗೋಲಿ ಹುಡಿ ಮಾರುವ ಹುಡುಗಿ ಬಂದಿದ್ದಳು. ಕಳೆದ ಬಾರಿ ತೆಗೆದುಕೊಂಡ ಹುಡಿ ಖರ್ಚಾಗಲೇ ಇಲ್ಲ. ಈ ಸಲ ಇವಳ ಒತ್ತಾಯಕ್ಕೆ ಮಣಿದು ಹುಡಿ ಖರೀದಿಸಬಾರದು ಎಂದುಕೊಂಡೆ. ಅವಳು ಅಷ್ಟಕ್ಕೇ ಬಿಡದೆ, “”ಅಕ್ಕಾ ಪ್ಲೀಸ್‌!” ಅಂತ ಅಂಗಲಾಚತೊಡಗಿದಳು.

“”ನೋಡಮ್ಮಾ… ನಮ್ಮ ಕಡೆ ರಂಗೋಲಿ ಹಾಕುವ ಪದ್ಧತಿ ಇಲ್ಲ. ಹಾಗಾಗಿ, ನನಗೆ ರಂಗೋಲಿ ಹಾಕಲು ಬರುವುದಿಲ್ಲ. ಕಳೆದ ಸಲ ಬಂದಾಗ ನೀನು ಕೊಟ್ಟ ಹುಡಿ ಇನ್ನೂ ಹಾಗೆ ಇದೆ” ಎಂದೆ.

ದೀರ್ಘ‌ಕಾಲ ಮಳೆಗಾಲ ಇರುವ ಕರಾವಳಿ ಪ್ರದೇಶದಲ್ಲಿ ಹುಡಿಯನ್ನು ಬಳಸಿ ಮನೆಮುಂದೆ ರಂಗೋಲಿ ಹಾಕುವ ಸಂಪ್ರದಾಯವಿಲ್ಲ. ಅಲ್ಲೇನಿದ್ದರೂ ಬಿಳಿಯ ಮಣ್ಣು ಅಥವಾ ಶೇಡಿಯಿಂದ ಹೊಸ್ತಿಲಿನ ಮೇಲೆ ಚಿತ್ತಾರ ಬರೆಯುವ ಕ್ರಮವಿದೆ.

ಮದುವೆಯಾಗಿ ಬೆಂಗಳೂರಿನಲ್ಲಿ ವಾಸಿಸುವ ಅನಿವಾರ್ಯತೆ ಬಂದ ಮೇಲೂ ಇಲ್ಲಿಯ ಈ ಪದ್ಧತಿಯನ್ನು ನಾನು ರೂಢಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ. ನಾನೀಗ ರಂಗೋಲಿ ಹುಡಿ ಖರೀದಿಸುವುದಿಲ್ಲ ಎಂದು ಗೊತ್ತಾಗಿ ಅವಳಿಗೆ ಬೇಸರವಾಯಿತು. ಆದರೆ, ನನಗೆ ರಂಗೋಲಿ ಕುರಿತು ಒಂದು ಬಗೆಯ ಆಕರ್ಷಣೆ ಇರುವುದು ಅಷ್ಟೇ ಸತ್ಯ. ಬೆಳ್ಳಂಬೆಳಗ್ಗೆ ಬೆಳಕು ಹರಿಯುವ ಮುನ್ನ ಚಳಿಯನ್ನು ಲೆಕ್ಕಿಸದೆ ಮನೆಯ ಮುಂದೆ ಹೆಂಗಳೆಯರು ಬಿಡಿಸುವ ವಿನ್ಯಾಸಗಳನ್ನು ನೋಡಿ ಬೆರಗಾಗಿ¨ªೆ. ಯಾವುದೇ ಅಳತೆ-ಮಾಪನಗಳಿಲ್ಲದೆ ಚುಕ್ಕಿಗಳನ್ನು ಜೋಡಿಸುವ ಆ ರೇಖೆಗಳು ಮೂಡಿಸುವ ವಿನ್ಯಾಸಗಳಿಗೆ ಬೆರಗಾಗದಿರಲು ಹೇಗೆ ಸಾಧ್ಯ ಹೇಳಿ?

ಹೆಂಗಳೆಯರ ಸೃಜನಶೀಲತೆ ಮನೆಬಾಗಿಲಮುಂದೆ ಅನಾವರಣಗೊಳ್ಳುತ್ತಿತ್ತು. ಒಬ್ಬರ ಮನೆಯ ಮುಂದೆ ಇರುವ ಹಾಗೆ ಇನ್ನೊಬ್ಬರ ಮನೆಯ ಮುಂದೆ ರಂಗೋಲಿ ಇರುತ್ತಿರಲಿಲ್ಲ. ಜೊತೆಗೆ ಇಂದು ಮಾಡಿದ ವಿನ್ಯಾಸ ನಾಳೆ ಇರುತ್ತಿರಲಿಲ್ಲ. ಹಬ್ಬಹರಿದಿನ ಬಂತೆಂದರೆ ಮತ್ತಷ್ಟು ನೂತನ ವಿನ್ಯಾಸಗಳು ಮೂಡಿ ಬರುತ್ತಿತ್ತು. ಇದೆಲ್ಲ ಕಂಡಾಗ ನನಗನಿಸುತ್ತಿತ್ತು- ಇವರು ಯಾವ ಚಿತ್ರಕಾರನಿಗೂ ಕಮ್ಮಿ ಇಲ್ಲಾ!
ನಾನು ಮದುವೆಯಾಗಿ ಬೆಂಗಳೂರಿಗೆ ಬಂದ ಹೊಸದರಲ್ಲಿ  ನಮ್ಮ ಮನೆಯ ಮುಂದೆ ನಾನು ರಂಗೋಲಿ ಹಾಕುತ್ತಿರಲಿಲ್ಲ. ಇದೇ ವಿಚಾರಕ್ಕೆ ಓನರ್‌ಆಂಟಿ ಗಲಾಟೆ ಮಾಡಿದ್ದರು. ನಮ್ಮ ಕಡೆ ರಂಗೋಲಿ ಹಾಕೊಲ್ಲ. ನನಗೆ ಅದೆಲ್ಲ ಬರುವುದಿಲ್ಲ ಎಂದು ಜಾರಿಕೊಂಡಿದ್ದೆ. ಮತ್ತೆ ಪತಿರಾಯರ ಹತ್ತಿರ ತಿಂಗಳಿಗೆ ಸರಿಯಾಗಿ ಬಾಡಿಗೆ ಕೊಡ್ತೀವಲ್ಲ? ಈ ಎಲ್ಲಾ ಕಂಡೀಷನ್‌ ನನಗೆ ಹಿಡಿಸದು ಅಂತ ಹರಿಹಾಯ್ದಿದ್ದೆ.

ನಾನು ಕ್ರಿಶ್ಚಿಯನ್‌ ಅಥವಾ ಮುಸ್ಲಿಮ್‌ ಸಮುದಾಯದವಳಿರಬಹುದು ಎಂದು ಸಂಶಯಪಟ್ಟು ಮಾತನಾಡಿದವರೂ ಇದ್ದಾರೆ. ಇದೆಲ್ಲಾ ಅನುಭವವಾದ ಮೇಲೆ ಮುಂದಿನ ದಿನಗಳಲ್ಲಿ ಬಾಡಿಗೆಮನೆ ನೋಡಲು ಹೋಗುವಾಗ ಮೊದಲೇ ಓನರಲ್ಲಿ ನನಗೆ ರಂಗೋಲಿ ಹಾಕಲು ಬರುವುದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು ಬಿಡುತ್ತಿದ್ದೆ. ರಂಗೋಲಿ ಏನು ನಿನ್ನೆಮೊನ್ನೆಯಲ್ಲಿ ಉದ್ಭವಗೊಂಡ ಕಲೆಯಲ್ಲ. ಹೊಸಿಲ ಮೇಲೆ, ದೇವರ ಮುಂದೆ, ತುಳಸಿಕಟ್ಟೆ ಮುಂದೆ ರಂಗೋಲಿ ಇದ್ದರೆ ಶುಭದ ಸಂಕೇತ. ದುಷ್ಟ ಶಕ್ತಿಗಳು ಮನೆಯೊಳಗೆ ಮತ್ತು ನಕಾರಾತ್ಮಕತೆಯನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆಗಟ್ಟಲು ರಂಗೋಲಿಯನ್ನು ಹಾಕಬೇಕು ಎಂಬ ನಂಬಿಕೆ ಇದೆ.

ಇತ್ತೀಚೆಗೆ ರಂಗೋಲಿ ಬರಿ ಹುಡಿಗೆ ಮೀಸಲಾಗದೆ ದೀಪದ ರಂಗೋಲಿ, ಹೂವಿನ ರಂಗೋಲಿ, ಧಾನ್ಯದಲ್ಲಿ ರಂಗೋಲಿ… ಮತ್ತೆ ಹೀಗೆ ಏನೇನೋ ವಿನೂತನ ಶೈಲಿಯವು ಕಂಡುಬರತೊಡಗಿವೆ. ಇದು ರಂಗೋಲಿ ಹಾಕುವವವರ ಸೃಜನಶೀಲತೆಗೆ ಸಾಕ್ಷಿಯಾಗಿದ್ದವು. ಒಂದು ಕಡೆ ಯುವಕರು ಕೂಡ ಈ ಕಲೆಯನ್ನು ರೂಢಿಸಿಕೊಂಡು ತಾವು ಹೆಂಗಸರಿಗಿಂತ ಕಮ್ಮಿ ಇಲ್ಲವೆಂದು ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡರೆ, ಮಕ್ಕಳು ಕೂಡ ಲೀಲಾಜಾಲವಾಗಿ ರಂಗೋಲಿ ಹಾಕುವುದು ನೋಡಿ, ನಮ್ಮ ಮನೆಮಕ್ಕಳೂ ರಂಗೋಲಿ ಹಾಕುವಂತೆ ಒತ್ತಾಯಿಸಿದ್ದುಂಟು.

ಕಾಲ ಕಳೆದಂತೆ ಇದು ಯಾವ ಮಹಾವಿದ್ಯೆ, ನಾನು ಯಾಕೆ ಕಲಿಯಬಾರದು ಎಂಬ ಛಲ ನನ್ನೊಳಗೆ ಹುಟ್ಟಿತು. ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವಾಗಿ, ಯೂಟ್ಯೂಬ್‌ ನೋಡಿ ರಂಗೋಲಿ ಹಾಕಲು ವ್ಯರ್ಥ ಪ್ರಯತ್ನಪಟ್ಟು ಮನೆಯವರೆಲ್ಲರ ಎದುರು ನಗೆಪಾಟಲಾದೆ. ಆದರೂ ಹಬ್ಬಹರಿದಿನಗಳಲ್ಲಿ ಎಲ್ಲರ ಮನೆಯ ಮುಂದೆ ಮೂಡುವ ಮನಸೆಳೆಯುವ ಚಿತ್ತಾರಗಳನ್ನು ನೋಡುವಾಗ ನಮ್ಮ ಮನೆಯ ಮುಂಭಾಗದ ಖಾಲಿ ಜಾಗ ನೋಡಿದಾಗ ಯಾಕೋ ಕೀಳರಿಮೆ ಉಂಟಾಗಿತ್ತು. ನಮ್ಮ ಮನೆ ಕೆಲಸದವಳಿಗೆ ಮನೆಯ ಮುಂದೆ ಬೆಳಗ್ಗೆ ರಂಗೋಲಿ ಹಾಕು ಎಂದು ಕೇಳಿಕೊಂಡೆ. ಆದರೆ, ಅವಳು ಅದಕ್ಕೆ ಪ್ರತಿಫ‌ಲವಾಗಿ ಕೇಳಿದ ದುಬಾರಿ ಹಣದಿಂದ ಆ ಯೋಜನೆಯೂ ಫ‌ಲಿಸಲಿಲ್ಲ.

ಇವೆಲ್ಲದರ ನಡುವೆ ಪ್ರತಿ ಸಲದಂತೆ ನಮ್ಮ ಬೀದಿಯವರೆಲ್ಲ ಸೇರಿ ಗಣೇಶನ ಹಬ್ಬ ಮಾಡಹೊರಟಿದ್ದರು. ಅದರ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಅದರಲ್ಲಿ “ಮನೆಯ ಮುಂದೆ ರಂಗೋಲಿ’ ಎಂಬ ಸ್ಪರ್ಧೆಯೂ ಒಂದು. ಪ್ರತಿಯೊಂದು ಮನೆಯವರು ಇದಕ್ಕಾಗಿ ಸರ್ವ ಸಿದ್ಧತೆ ಮಾಡಿಕೊಂಡಿದ್ದರು. “ರಂಗೋಲಿ ಹಾಕಲು ಬಾರದ ನೀವು ಏನು ಮಾಡಲು ಸಾಧ್ಯ ಎಂದು ಗೆಳತಿಯರು ನನ್ನೊಡನೆ ಅಣಕವಾಡಿದರು. ಇದನ್ನು ಚಾಲೆಂಜ್‌ ಆಗಿ ತೆಗೆದುಕೊಂಡ ನಾನು ನನ್ನ ಆತ್ಮೀಯ ಗೆಳತಿಯೊಬ್ಬಳ ಜೊತೆ ಮಾತನಾಡಿ ನಮ್ಮ ಮನೆಯ ಎದುರುಗಡೆ ರಂಗೋಲಿ ಹಾಕಲು ರಹಸ್ಯವಾಗಿ ಪ್ಲಾನ್‌ ಮಾಡಿಕೊಂಡಿ¨ªೆ. ಅದಕ್ಕೆ ಬೇಕಾಗಿ ವಿವಿಧ ಬಣ್ಣದ ರಂಗೋಲಿ ಹುಡಿಯನ್ನು ತಂದಿರಿಸಿ¨ªೆ. ಆದರೆ, ಕೊನೆಯ ಕ್ಷಣದಲ್ಲಿ ಅವಳ ಅತ್ತೆಯ ಆರೋಗ್ಯ ಕೆಟ್ಟಿದ್ದರಿಂದ ಅವಳಿಗೆ ಬರಲಾಗಲಿಲ್ಲ. ನನ್ನ ಪಿತೂರಿ ವಿಫ‌ಲವಾಗಿ ಬೇಸರದಿಂದ ಮಲಗಿಬಿಟ್ಟೆ.

ಮರುದಿನ ಬೆಳಗ್ಗೆ ನಿಧಾನವಾಗಿಯೇ ಎದ್ದೆ. ಆ ತಕ್ಷಣ ಮಗ ಬಂದವ, “”ಅಮ್ಮಾ ನಿನಗೆ ಸರ್‌ಪ್ರೈಸ್‌ ಇದೆ” ಎಂದು ಮನೆಯ ಮುಂಭಾಗಕ್ಕೆ ಕರೆದೊಯ್ದ.
ಏನಾಶ್ಚರ್ಯ! ನಮ್ಮ ಮನೆಯ ಮುಂದೆ ಲಕಲಕ ಹೊಳೆಯುತ್ತಿದೆ. ಗಣೇಶನ ದೊಡ್ಡ ರಂಗೋಲಿ. ನನ್ನ ಕಣ್ಣುಗಳನ್ನು ನಾನು ನಂಬಲಾರದ ಸ್ಥಿತಿಯಲ್ಲಿದ್ದೆ. ಇದು ಯಾರ ಕೆಲಸವಿರಬಹುದು ಎಂದು ಯೋಚಿಸುತ್ತಿರಬೇಕಾದರೆ ರಂಗೋಲಿ ಹುಡಿಗಳನ್ನು ಮೆತ್ತಿಕೊಂಡಿದ್ದ ನನ್ನ ಪತಿರಾಯರ ಕೈ ಕಾಣಿಸಿತು.

ಇದು ಹೇಗೆ ಸಾಧ್ಯ ಎಂಬ ನನ್ನ ಕುತೂಹಲದ ಪ್ರಶ್ನೆಗೆ ಪತಿ ಉತ್ತರಿಸಿದರು.
“”ಫೈನ್‌ಆರ್ಟ್‌ ಓದಿರುವ ನನಗೆ ಚಿತ್ರ ಬಿಡಿಸುವುದು ಸುಲಭ. ಇನ್ನು ಯೂ ಟ್ಯೂಬ್‌ನಲ್ಲಿ ನೋಡಿ ರಂಗೋಲಿ ಕಲಿಯುವುದು ಸಾಧ್ಯವಿಲ್ಲವೇ? ನಿನ್ನೆ ರಾತ್ರಿ ನೀನು ಬೇಸರ ಮಾಡಿಕೊಂಡದ್ದು ನೋಡಿ, ನಾನೇ ರಂಗೋಲಿ ಹಾಕೋಣ ಅಂತ ಪ್ರಯತ್ನಿಸಿದೆ” ಎಂದು ಉತ್ತರಿಸಿದರು.
ಅದೇ ಹೊತ್ತಿಗೆ, “”ನೀವು ಲಕ್ಕಿ ಕಣ್ರಿ. ನಿಮ್ಮ ಯಜಮಾನರು ಎಷ್ಟು ಚೆನ್ನಾಗಿ ರಂಗೋಲಿ ಬಿಡಿಸುತ್ತಾರೆ” ಎಂದು ಅಕ್ಕಪಕ್ಕದವರು ಅಭಿನಂದಿಸಿದರು. ಅಂತೂ ಇಂತೂ ಮನೆಯ ಮುಂದೆ ರಂಗೋಲಿ ಮೂಡಿತಲ್ಲಾ ನನ್ನ ಬಹುದಿನದ ಕನಸು ನನಸಾಯಿತಲ್ಲಾ ಎನ್ನುವ ಸಂತೋಷ ನನಗೆ. ಈ ಸಂತೋಷ ಇಮ್ಮಡಿಯಾಗುವಂತೆ, ಸ್ಪರ್ಧೆಯಲ್ಲಿಯೂ ಬಹುಮಾನ ನಮ್ಮ ಮನೆ ಮುಂದಿನ ರಂಗೋಲಿಗೇ ಬಂದಿತ್ತು.

ಪದ್ಮಲತಾ ಮೋಹನ್‌

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.