ಸೀರೆ, ಹೂವು, ಬಳೆ, ಕುಂಕುಮ ಸದ್ದಿಲ್ಲದೆ ಮರೆಯಾಗುತ್ತಿವೆ !
Team Udayavani, Jun 1, 2018, 6:00 AM IST
“ಅಯ್ಯೋ, ಅದನ್ಯಾರು ಉಡ್ತಾರೆ? ಒಂದು ಗಂಟೆ ಬೇಕು ಉಡಬೇಕಾದರೆ. ಇದೇ ಈಸಿ, ಐದು ನಿಮಿಷದಲ್ಲಿ ಹಾಕ್ಕೊಳ್ಳಬಹುದು’
ಕಾಶೀ ಕ್ಷೇತ್ರದಲ್ಲಿದ್ದೆವು ಆಗ ನಾವು. ಅಲ್ಲಿನ ಮಹಿಳೆಯರು ತೊಟ್ಟ ಬಳೆಗಳ ಸೊಬಗು ನಮ್ಮ ಕಣ್ಸೆಳೆಯಿತು. ತುಂಬಾ ಚೆಂದ. ವಿಶಿಷ್ಟ ವಿನ್ಯಾಸ. ನಮ್ಮಲ್ಲಿ ಅದು ಸಿಗುವುದಿಲ್ಲ. ಇಷ್ಟು ಅಂದದ ಬಳೆಗಳು ನಮಗೂ ಬೇಕು. ಸರಿ, ಸಂಜೆ ಅಲ್ಲಿನ ವಿಸ್ತಾರವಾದ ರಸ್ತೆಯಲ್ಲಿ ಹೊರಟೆವು. ಸಾಲು ಸಾಲು ಬಳೆಗಳ ಶಾಪ್‌ಗ್ಳು. ಮಹಿಳೆಯರೇ ಎಲ್ಲ ಕಡೆ ತುಂಬಿದ್ದರು. ಮತ್ತೂ ನೋಡಿ ಸ್ವಲ್ಪ ಕಮ್ಮಿ ಗ್ರಾಹಕರಿದ್ದ ಶಾಪ್‌ಗೆ ಹೋದೆವು. ಮಾಲಕ ಮತ್ತು ಒಬ್ಬರು ಸೇಲ್ಸ್ ಸಹಾಯಕರಿದ್ದರು ಅಷ್ಟೆ.
ಮಾಲಕನ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತ ಇತ್ತು. ನಾವಿನ್ನೂ ಒಳಗೆ ಕಾಲಿಡುತ್ತಿದ್ದೇವೆ ಅಷ್ಟೆ. ಮುಖವೇ ಗಂಟು ಇರಬಹುದು ಅಂತ ಬಳೆಗಳನ್ನು ನೋಡುತ್ತಿದ್ದೆವು. ಒಂದಕ್ಕಿಂತ ಮತ್ತೂಂದು ಸುಂದರ, ಆಕರ್ಷಕ. ಆರಿಸಿ ಆರಿಸಿ ಒಂದೊಂದು ಡಜನ್ ತೆಗೆದು ಮಾಲಕನ ಟೇಬಲ್ ಮೇಲಿಟ್ಟೆವು. ಒಮ್ಮೆ ನಮ್ಮನ್ನು; ಮತ್ತೂಮ್ಮೆ ಟೇಬಲ್‌ನ್ನು ನೋಡಿದ. ನಮ್ಮೂರಲ್ಲಿ ಮಾಲೆ ಪಟಾಕಿ ಸಿಡಿಯುತ್ತದಲ್ಲ ; ಹಾಗೆ ಅವನ ಸಿಟ್ಟು ಹೊರಸಿಡಿಯಿತು. ದುರುಗುಡುತ್ತ ನೋಡಿದ.
“”ನೀವು ದಕ್ಷಿಣದವರು ಬಳೆ ಹಾಕಿಕೊಳ್ಳುವುದಿಲ್ಲ. ಹೆಣ್ಮಕ್ಕಳು ಕೈತುಂಬ ಬಳೆ ಹಾಕಬೇಕು. ಒಂದು ಕೈಗೆ ಒಂದೇ ಬಳೆ ಹಾಕಿ ಇನ್ನೊಂದು ಕೈಗೆ ವಾಚ್ ಕಟ್ಟಿಕೊಳ್ತೀರಿ” ತತ್‌ಕ್ಷಣ ನಮ್ಮ ಕೈ ನೋಡ್ಕೊಂಡರೆ ಆತ ಹೇಳಿದ್ದು ಸತ್ಯ. ಸುಮ್ಮನೆ ಅಲ್ಲ ಆತನಿಗೆ ಕೋಪ ಏರಿದ್ದು . ಮತ್ತೆ ಮುಂದುವರಿಸಿ “”ಒಂದೊಂದು ಕೈಗೆ ಎರಡೆರಡು ಡಜನ್ ಬಳೆ ಹಾಕಿಕೊಳ್ಳಬೇಕು. ಅದು ಮಂಗಲ. ನೀವುಗಳು ಲಗ್ನವಾದ ಹೆಣ್ಮಕ್ಕಳೂ ಬೋಳು ಕೈ ಬಿಟ್ಕೊಂಡು ತಿರುಗಾಡ್ತೀರಿ. ಚೆನ್ನಾಗಿರೋಲ್ಲ ಅದೆಲ್ಲ. ನಮ್ಮ ಕಡೆ ನೋಡಿ ಮಹಿಳೆಯರನ್ನು ಕೈತುಂಬ ಬಳೆ. ಹಾಗಿರಬೇಕು ಸ್ತ್ರೀಯರು”
ಆತ ತೋರಿಸಿದತ್ತ ನೋಡಿದರೆ ವಿವಾಹ ಬಾರಾತ್ ಸಾಗಿ ಬರುತ್ತಿತ್ತು ರಸ್ತೆಯಲ್ಲಿ. ಹಾಡುತ್ತ, ಕೈ ಮೇಲೆತ್ತಿ ನರ್ತಿಸುತ್ತ ಬರುತ್ತಿದ್ದವರ ಒಂದೊಂದು ಕೈಗಳಲ್ಲಿ ತುಂಬಿದ್ದ ಬಳೆಗಳು ನಿಜವಾಗಿ ಎರಡು ಡಜನ್ ಮೀರಿ ಇದ್ದಿರಬಹುದು. ಲಕಲಕ ಹೊಳಪು. ಗಿಜಿ ಗಿಜಿ ಸದ್ದು.
ಎರಡೆರಡು ಡಜನ್ ಖರೀದಿಸಿದೆವು. ತೃಪ್ತಿಯಿಂದ ಪ್ಯಾಕ್ ಮಾಡಿ ತುಸು ಬೆಲೆ ತಗ್ಗಿಸಿದ. ಅಲ್ಲಿನ ಅಪರೂಪದ ಸೊಬಗಿನ ಬಳೆಗಳಿಗೆ ಡಜನ್‌ಗೆ ಕಡಿಮೆಯೆಂದರೆ ಮುನ್ನೂರು ರೂಪಾಯಿ. ಅಷ್ಟೇ ಚೆಂದದ ವಿನ್ಯಾಸ. ಅಂತಹುದು ನಮ್ಮ ಕಡೆ ಕಂಡ ನೆನಪಿಲ್ಲ. ಅಲ್ಲಿಂದ ಹೊರಟಾಗ ನಮಗೆ ಎಸ್ಕಾರ್ಟ್ ಆಗಿ ಬಂದ ಮಹನೀಯರು ಗೊಣಗಿದರು. “”ನಾನು ಬಳೆ ಹಾಕ್ಕೊಳ್ಳಿ ಅಂತ ಹೇಳಿದಾಗ ಅದಕ್ಕೆ ಬೆಲೆಯಿಲ್ಲ. ಶಂಖದಿಂದ ಬಂದರೇ ತೀರ್ಥ”
ನಮ್ಮದೇ ನಾಡಿನಲ್ಲಿ ಒಂದೊಮ್ಮೆ, ಬಹುಶಃ ತೀರಾ ಸಂಪ್ರದಾಯವಾದಿಗಳಾಗಿರುವ ಈಗಿನವರಲ್ಲೂ ಅದೆಷ್ಟು ಹೆಣ್ಣುಮಕ್ಕಳು ಸುಂದರವಾಗಿದ್ದು ಬಿಡಿ; ತೀರಾ ಸಾಮಾನ್ಯವಾದರೂ ಸಾಕು, ಬಳೆ ಹಾಕಿಕೊಳ್ಳುವ ಆಸೆಯಿಂದ ವಂಚಿತರಾಗಿ ಕಣ್ಣೀರು ಹಾಕಿದ್ದರೋ. ಹೂವು, ಬಳೆ , ಕುಂಕುಮ ಹೆಣ್ಣುಮಕ್ಕಳ ಜನ್ಮಸಿದ್ಧ ಹಕ್ಕೇ ವಿನಾ ಅದು ಕೇವಲ ಮುತ್ತೈದೆಯರಿಗೇ ಮೀಸಲು ಎನ್ನುವ ಅಲಿಖೀತ ಕಾನೂನಿಗೆ ಯಾವ ಅರ್ಥವೂ ಇಲ್ಲ. ಕೇವಲ ಸಂಪ್ರದಾಯದ ಸಂಕೋಲೆಯಲ್ಲಿ ಬಿಗಿಸಿಕೊಂಡು, ಅದೂ ತಾವು ಎಷ್ಟು ಮಾತ್ರಕ್ಕೂ ಕಾರಣರಲ್ಲದ ವೈಧವ್ಯದ ಕಟ್ಟುನಿಟ್ಟುಗಳಿಗೆ ಬಲಿಪಶುಗಳಾಗಿ ಕತ್ತಲ ಮುಸುಕಿನಲ್ಲಿ ಹರಿಸಿದ್ದ ಕಂಬನಿಯ ಹನಿಗಳನ್ನು ಲೆಕ್ಕ ಹಾಕಲು ಸಾಧ್ಯವೇ? ಬಣ್ಣ ಬಣ್ಣದ ಬಳೆಗಳು ಇತರ ಕನ್ಯೆಯರ ಕೈತುಂಬ ಝಣಝಣಿಸುವಾಗ ಆಸೆತುಂಬಿದ ನೋಟ ಬಳೆಗಳ ಸೊಬಗಿನತ್ತ ಹರಿದೇ ಹರಿಯುತ್ತದೆ. ಅಂಗಳದ ಗಿಡದಲ್ಲಿ ಅರಳಿದ ಹೂವು ವಜ್ಯì; ಕುಂಕುಮದ ತಿಲಕ ಊಹೂಂ, ಬಣ್ಣಬಣ್ಣದ ಸೀರೆ, ಸಾಧ್ಯವೇ ಇಲ್ಲ. ಇನ್ನು ಮುಕ್ತವಾಗಿ ಸಾರ್ವಜನಿಕವಾಗಿ ಬೆರೆಯುವ ಹಂಬಲಕ್ಕೆ ಎಳ್ಳುನೀರು ಬಿಡಲೇಬೇಕು. ಮನೆಯಲ್ಲಿ ಆಕೆಯೊಬ್ಬ ಸಂಬಳವಿಲ್ಲದ ದಾಸಿ. ಕಾಲಲ್ಲಿ ತೋರಿಸಿದ್ದು ನೆತ್ತಿಯಲ್ಲಿ ಹೊತ್ತು ಮಾಡಲೇಬೇಕಾದ ಹಳೆಗಾಲದ ಯಜಮಾನಿಕೆಯ ಮನೆಗಳು. ಒಂದು ಪುಟ್ಟ ಪಾರಿಜಾತದ ಎಸಳಿಗೆ, ಮಲ್ಲಿಗೆಯ ತುಣುಕಿಗೆ, ಹೊಳಪಿನ ಕೆಂಪು ಬಳೆಗೆ, ರಂಗುರಂಗಿನ ಸೀರೆಗೆ ಆಸೆಪಡದ ಹೆಣ್ಮಕ್ಕಳಿಲ್ಲ ಎನ್ನಬಹುದು.
ಇಂತಿದ್ದ ನಮ್ಮ ಸಂಪ್ರದಾಯವಾದಿ ಸಮಾಜ ಇದೀಗ ತಾನು ಮುಕ್ತಮನಸ್ಸಿನಿಂದ ತೆರೆದುಕೊಂಡ ಆಧುನಿಕತೆಗೆ ಏನೆನ್ನಬೇಕೆಂದು ಗೊತ್ತಾಗುತ್ತಿಲ್ಲ. ಹೆಣ್ಣುಮಕ್ಕಳು ಕೈಗೆ ತುಂಬ ಬಿಟ್ಟು ಒಂದೊಂದು ಬಳೆಯನ್ನೂ ಹಾಕಿಕೊಳ್ಳುವುದೇ ಇಲ್ಲ. ಅಂಥಾದ್ದೊಂದು ಪದ್ಧತಿಯಿಂದ ಅವರೇ ದೂರವಾಗುತ್ತಿ¨ªಾರೋ ಅಲ್ಲ ; ಮನೆಯÇÉೇ ಅಗತ್ಯವಿಲ್ಲವೆಂಬ ನಿರ್ಧಾರವೋ ತಿಳಿಯದು. ಸೀರೆ, ಬಳೆಗಳನ್ನು ತೊಟ್ಟುಕೊಳ್ಳುವ ಪದ್ಧತಿ ಬರಿದೇ ಹಳ್ಳಿಗರದು ಎಂಬ ಭಾವ ಸದ್ದಿಲ್ಲದೆ ಮೊಳಕೆಯೊಡೆದಿದ್ದು ಹೆಮ್ಮರವಾಗುತ್ತಿದೆ. ಮನೆಯವರ ಒತ್ತಾಯಕ್ಕೆ ಒಂದೊಮ್ಮೆ ಹಾಕಿಕೊಂಡರೂ ನಂತರ ಮೂಲೆ ಸೇರುತ್ತದೆ ಈ ಅಲಂಕಾರಗಳು. ಬಳೆಗಳ ಶಾಪ್‌ಗ್ಳು ಇಂದು ವ್ಯಾಪಾರ ಕಡಿಮೆಯಾಗಿ ಕೂತಿವೆ. ಹಳ್ಳಿಗಳ ಕುಮಾರಿಯರೂ ಮದುವೆ ಮುಂತಾದ ಶುಭಕಾರ್ಯಗಳಿಗೆ ಕೈತುಂಬ ಬಳೆ ಝಣತ್ಕಾರ ಮಾಡಿದರೆ ಮಾರನೆದಿನ ಕೈ ಖಾಲಿ. ಶುಭಕಾರ್ಯಗಳಂದು ರೇಷಿಮೆ ಸೀರೆಗೆ ಮ್ಯಾಚಿಂಗ್ ಬಳೆಗಳು, ಮಲ್ಲಿಗೆಹೂವು, ಮುಖದ ಚೆಂದವನ್ನು ಇಮ್ಮಡಿಸುವ ತಿಲಕ, ನಗುಮುಖದ ಓಡಾಟ ಕಾಣುವಾಗ ಹೀಗಿದ್ದರೆ ಅದೆಷ್ಟು ಚೆನ್ನಾಗಿರ್ತಾರೆ ಅನ್ನಿಸುವುದು ಸುಳ್ಳಲ್ಲ. ಇಂದು ಸೀರೆಯ ಬೇಡಿಕೆ ಕಮ್ಮಿಯಾಗಿ ವಯೋಮಾನದ ಎಗ್ಗಿಲ್ಲದೆ ಆಧುನಿಕ ಉಡುಗೆಗಳ ಭರಾಟೆ ವ್ಯಾಪಿಸಿ ಮೆರೆಯುತ್ತಿರುವುದು ನಿಜ. “ಅಯ್ಯೋ, ಅದನ್ಯಾರು ಉಡ್ತಾರೆ? ಒಂದು ಗಂಟೆ ಬೇಕು ಉಡಬೇಕಾದರೆ. ಇದೇ ಈಸಿ, ಐದು ನಿಮಿಷದಲ್ಲಿ ಹಾಕ್ಕೊಳ್ಳಬಹುದು’ ಅದೂ ಅತ್ಯಾಧುನಿಕ ಡ್ರೆಸ್‌ಗಳು! ಆಹ್ ! ಬಿಡಲೇ ಮನಸ್ಸಾಗುವುದಿಲ್ಲ. ರೇಟ್ ಅದೆಷ್ಟು ಬೇಕಿದ್ರೂ ಇರಲಿ. ತರಹೇವಾರಿ. ವಾವ್ ! ಮೈಯ ಅಂಕುಡೊಂಕುಗಳಿಗೆ ಬಿಗಿಯಾಗಿ ಹೊಂದಿ ಎತ್ತಿಹಿಡಿಯುವ ಆಧುನಿಕ ಡ್ರೆಸ್‌ಗಳಿಗೆ ಮನಸೋಲದ ತರಳೆಯರಿಲ್ಲ.
ಎವೆರಿ ಲಾ ಹ್ಯಾಸ್ ಇಟ್ಸ… ಓನ್ ಎಕ್ಸೆಪ್ಶನ್. ಎಲ್ಲ ವಾದಗಳಿಗೂ ಆತೀತವಿದೆ. ಉತ್ತರದಲ್ಲಿ ಹೂವು ಮುಡಿಯುವ ಪದ್ಧತಿ ಕಮ್ಮಿ. ದಕ್ಷಿಣದಲ್ಲಿ ಹೂವು ಒÇÉೆನೆಂಬವರಷ್ಟೇ ಬೇಕು ಎಂದು ಮುಡಿಯುವವರ ಸಂಖ್ಯೆ ಸಾಕಷ್ಟಿದೆ. ಮುಂದುವರಿದವರು ನಾವು; ಬರಿದಾದ ಕೈ, ಖಾಲಿ ಮುಡಿ ಆರಾಮವಾಗಿರುತ್ತದೆ. ನಮ್ಮ ಕ್ಲಾಸ್‌ನಲ್ಲಿ ಯಾರೂ ಹೂ, ಬಳೆ ಇರಿಸಿಕೊಳ್ಳುವುದೇ ಇಲ್ಲ. ಕೂದಲು ಸಿಕ್ಕು ಸಿಕ್ಕಾಗುತ್ತದೆ ಹೂವಿದ್ದರೆ, ಬಳೆಯ ಅಂಚುಗಳು ಉಡುಗೆಯಲ್ಲಿ ಸಿಕ್ಕಿಕೊಳ್ಳುತ್ತದೆ, ತಿಲಕ ಈಗ್ಯಾರೂ ಇರಿಸಿಕೊಳ್ಳುವುದಿಲ್ಲ, ಈ ಅಮ್ಮನಿಗೆ ಹೊರಪ್ರಪಂಚವೇ ಗೊತ್ತಿಲ್ಲ ಎಂಬೆಲ್ಲ ವಾದಗಳಿಗೆ ಅನಿವಾರ್ಯವಾಗಿ ಹೆತ್ತವರು ಬಾಗಲೇಬೇಕಾಗುತ್ತದೆ. ಅವರನ್ನು ಒಪ್ಪಿಸಲು ಫಿಲ್ಮ… ಸ್ಟಾರ್‌ಗಳ, ಮಾಡೆಲ್‌ಗಳ ಚಿತ್ರ ತೋರಿಸಿ ಇವರೆಲ್ಲಿ ಬಳೆ, ಹೂವು, ಜಡೆ ಹಾಕ್ಕೊಂಡಿದ್ದಾರೆ? ಈಗೆಲ್ಲ ಹೀಗಿರೋದೇ ಫ್ಯಾಷನ್ ಅಂತ ಒಪ್ಪಿಸುತ್ತಾರೆ. ಕೂದಲು ಬಾಚಿಕೊಳ್ಳುವ ಅಗತ್ಯವಿಲ್ಲ, ಕತ್ತರಿಸಿ ಬಾಬ್, ಜಡೆ ಹಾಕುವ ಕೆಲಸ ಅಮ್ಮನಿಗಿಲ್ಲ. ರಿಬ್ಬನ್, ಬಳೆಗಳಿಗೆ ಬೇಡಿಕೆಯಿಲ್ಲದೆ ವ್ಯಾಪಾರವಿಲ್ಲ. ಕುಂಕುಮ ತಯಾರಿಸುವಾಗ ಅದು ಏನು ಮಿಕ್ಸ್ ಮಾಡ್ತಾರೋ, ಹಣೆಗಿಟ್ಟರೆ ಸಾಕು, ಸಣ್ಣದಾಗಿ ನವೆ ಶುರು. ಅದನ್ನಿರಿಸುವ ಸ್ಥಳದ ಚರ್ಮದ ಬಣ್ಣ ಬದಲಾಗುತ್ತದೆ, ಒಪ್ಪಿಕೊಳ್ಳುವಂಥಾದ್ದೇ.
ಆದರೆ, ನಿಧಾನವಾಗಿ ಸ್ತ್ರೀಯರ ಸೌಮಾಂಗಲ್ಯ ಚಿಹ್ನೆಗಳು ಮರೆಯಾಗುತ್ತಿರುವುದು ಈ ಕಾರಣಕ್ಕಾಗಿ ಅಲ್ಲ , ಸಂಸ್ಕೃತಿಯ ಮೇಲಿನ ಅವಜ್ಞೆಯ ಕಾರಣಕ್ಕಾಗಿ. ಇತ್ತೀಚೆಗಿನ ದಿನಗಳಲ್ಲಿ ಸಂಸ್ಕೃತಿ ಉಳಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಅಂಥವರು ಕ್ರಿಯಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡುವುದಿಲ್ಲ. ನಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳುವಲ್ಲಿ ಸರಿಯಾದ ಹೆಜ್ಜೆಯನ್ನು ಇಡುವುದಿಲ್ಲ. ಸೀರೆಯ ಕುರಿತು ಕಾಳಜಿ ವಹಿಸಿದರೆ ಸಾಲದು, ಅದನ್ನು ಧರಿಸುವಲ್ಲಿಯೂ ಎಲ್ಲ ಮಹಿಳೆಯರು ಮನಸ್ಸು ಮಾಡಬೇಕು.
ಕೃಷ್ಣವೇಣಿ ಕಿದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.