ಅಕ್ಷರ ಕಲಿಸುವ ಸಾವಿತ್ರಿ ಜೀವನ ವ್ರತ

ಸಾವಿತ್ರಿ ಬಾಯಿ ಫ‌ುಲೆ ಜನ್ಮದಿನ ಇಂದು

Team Udayavani, Jan 3, 2020, 5:23 AM IST

13

ಮಹಿಳೆಯರಿಗೆ, ಅದರಲ್ಲಿಯೂ ಸಮಾಜದಲ್ಲಿ ಕೆಳವರ್ಗ ದವರೆಂದು ಅವಗಣನೆಗೆ ಒಳಗಾಗುತ್ತಿದ್ದ ಸಮುದಾಯಕ್ಕೆ ಅಕ್ಷರ ಜ್ಞಾನವನ್ನು ನೀಡಿದವರು ಸಾವಿತ್ರಿ ಬಾಯಿ ಫ‌ುಲೆ. ಅವರು ಅಕ್ಷರ ಕಲಿತದ್ದೇ ತಮ್ಮ ಪತಿ ಜ್ಯೋತಿಬಾ ಫ‌ುಲೆಯವರಿಂದ. ಈ ಅಕ್ಷರ ಜ್ಞಾನದ ಮೂಲಕ ಸಮಾಜದಲ್ಲಿ ಹೊಸ ಜ್ಞಾನೋದಯಕ್ಕೆ ಕಾರಣರಾದವರು.

ಕೆಳವರ್ಗದವರೆಂದು ಅವಗಣನೆಗೆ ಒಳಗಾದವರಿಗೆ ಅಕ್ಷರವನ್ನು ಕಲಿಸಿದ ಸಾವಿತ್ರಿ ಬಾಯಿ ಫ‌ುಲೆ ಅವರಿಗೆ ಮದುವೆಯಾದಾಗ ಎಂಟು ವರ್ಷ. ಅವರ ಪತಿ ಜ್ಯೋತಿಬಾ ಫ‌ುಲೆ ಅವರಿಗೆ 13 ವರ್ಷ.

ಸಾಂಗತ್ಯವೆಂದರೆ ಪರಸ್ಪರರ ಏಳಿಗೆಯನ್ನು ಬಯಸುವುದು ಎಂದು ಜ್ಯೋತಿಬಾ ಫ‌ುಲೆ ಅರಿತಿದ್ದರು. ಹಾಗಾಗಿ, ಪತ್ನಿ ಸಾವಿತ್ರಿಗೆ ಅಕ್ಷರ ಕಲಿಯಲು ಒತ್ತಾಸೆಯಾಗಿ ನಿಂತರು. ಹೀಗೆ ಶಿಕ್ಷಣ ಲೋಕವನ್ನು ಪ್ರವೇಶಿಸಿದ ಸಾವಿತ್ರಿ ಬಾಯಿ ಸಮಾಜದಲ್ಲಿದ್ದ ಏರುಪೇರುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಸಾಮರ್ಥ್ಯ ಪಡೆದರು. ಅಕ್ಷರವಷ್ಟೇ ಅಲ್ಲ, ಹೊಸ ನೋಟವನ್ನೂ ಜ್ಯೋತಿಬಾ ಅವರಿಗೆ ನೀಡಿದ್ದರು. ಅಕ್ಷರ ವಂಚಿತಳಾಗಿದ್ದ ತನಗೆ ದೊರೆತ ಈ ಜ್ಞಾನದ ಬಾಗಿಲನ್ನು ಸಾವಿತ್ರಿಬಾಯಿ ತನ್ನಂತೆಯೇ ವಂಚಿತರಾಗಿದ್ದ ಬೃಹತ್‌ ಸಮಾಜಕ್ಕೆ ನೀಡಲು ಬದುಕನ್ನು ಮುಡಿಪಿಟ್ಟರು. ಜ್ಯೋತಿಬಾ ಅವರೂ ಸಾಮಾಜಿಕ ಹೋರಾಟಗಾರನಾಗಿ ಅದಾಗಲೇ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.

1831ರಲ್ಲಿ ಮಹಾರಾಷ್ಟ್ರದ ನೈಗಾಂನ್‌ ಎಂಬಲ್ಲಿ ಹುಟ್ಟಿದ ಸಾವಿತ್ರಿಬಾಯಿ ಮದುವೆಯಾಗಿ ಅಕ್ಷರ ಜ್ಞಾನವನ್ನು ಪಡೆದು 1847ರಲ್ಲಿ ಮಿಚೆಲ್‌ ಎಂಬವರ ನಾರ್ಮಲ್‌ ಶಾಲೆಯಲ್ಲಿ ಶಿಕ್ಷಕ ತರಬೇತಿ ಪಡೆದರು. ಅವರು ಮಹಾರಾಷ್ಟ್ರದ ಮೊದಲ ಶಿಕ್ಷಕಿಯಾಗಿ ಅಕ್ಷರ ಪ್ರೀತಿಯುಳ್ಳವರಿಗೆ ಅಕ್ಷರ ಜ್ಞಾನ ನೀಡಿದ ಮೊದಲ ಗುರುವೂ ಹೌದು. ಬ್ರಿಟಿಷ್‌ ಸರಕಾರ ಅವರಿಗೆ ಇಂಡಿಯಾಸ್‌ ಫ‌ಸ್ಟ್‌ ಲೇಡಿ ಟೀಚರ್‌ ಎಂಬ ಗೌರವವನ್ನು ನೀಡಿದೆ.

ಬಾಲ್ಯವಿವಾಹ, ಸತಿ ಸಹಗಮನ, ಕೇಶಮುಂಡನ ಕ್ರಮಗಳ ವಿರುದ್ಧ ನಡೆದ ಆಂದೋಲನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಸಾವಿತ್ರಿ ಬಾಯಿ ಮತ್ತು ಜ್ಯೋತಿಬಾ ದಂಪತಿ. ಅಷ್ಟೇ ಅಲ್ಲ, ಸಂತ್ರಸ್ತ ಮಹಿಳೆಯರಿಗೆ ನೆರವಾಗುವ ಕೆಲಸಗಳಲ್ಲಿಯೂ ಸಾವಿತ್ರಿಬಾಯಿ ತೊಡಗಿಸಿಕೊಂಡರು. 1848ರಲ್ಲಿ ಪುಣೆಯ ನಾರಾಯಣ ಪೇಟೆಯ ಬಿಂದೇವಾಡದಲ್ಲಿ ತಳಸಮುದಾಯದ ಹೆಣ್ಣುಮಕ್ಕಳಿಗೆಂದೇ ಪ್ರತ್ಯೇಕ ಶಾಲೆ ತೆರೆದರು. ಇದು ದೇಶದ ಮೊದಲ ಬಾಲಕಿಯರ ಶಾಲೆ. ಮಹಿಳೆಯರಿಗೋಸ್ಕರ ಅವರು 14 ಶಾಲೆಗಳನ್ನು, ಸಂತ್ರಸ್ತರಿಗೆ ನೆಲೆ ಕಲ್ಪಿಸಲು ಅಬಲಾಶ್ರಮಗಳನ್ನು ತೆರೆದರು. ಅನಾಥ ಮಕ್ಕಳನ್ನು ಗುರುತಿಸಿ ಕರೆತಂದು ಆಶ್ರಮವನ್ನು ಕಟ್ಟಿ ಅವರಿಗೆ ವಿದ್ಯಾಭ್ಯಾಸ ನೀಡಿದರು.

ವಿಧವೆಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲದಲ್ಲಿ ಅವರ ಪರ ನಿಂತು ಶಿಕ್ಷಣದ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ವಿಧವೆಯೊಬ್ಬರ ಮಗನನ್ನೇ ದತ್ತು ಪಡೆದುಕೊಂಡು ಆತನನ್ನು ಸಾಕಿ ಸಲಹಿಸಿದರು.

ಸಮಾಜಮುಖೀಯಾದ ಈ ಕೆಲಸಗಳನ್ನು ಮಾಡುವುದು ಸಾವಿತ್ರಿಬಾಯಿ ಅವರಿಗೆ ಸುಲಭದ ಕೆಲಸವಾಗಿರಲಿಲ್ಲ. ಅವರು ಸಮಾಜದ ಪದ್ಧತಿಗಳ ವಿರುದ್ಧ ನಿಂತು ಕೆಲಸ ಮಾಡಬೇಕಿತ್ತು. ಮಹಿಳೆಯರು ಅಕ್ಷರ ಕಲಿಯುವುದೇ ಅಪರಾಧ ಎಂಬ ನಂಬಿಕೆ ಇದ್ದ ಕಾಲದಲ್ಲಿ ಶಿಕ್ಷಕಿಯಾಗಿ ಶಾಲೆಯನ್ನು ತಲುಪುವುದೂ ಕಷ್ಟವಾಗಿತ್ತು. ದಾರಿಯಲ್ಲಿ ಜನರು ಅವರ ಮೇಲೆ ಕಲ್ಲುಗಳನ್ನು ತೂರಿ, ಸೆಗಣಿ ಎರಚಿ ಅವಮಾನಿಸುತ್ತಿದ್ದರು. ಆಕೆ ಮನೋದೃಢತೆ ಹೊಂದಿರುವ ಗಟ್ಟಿಗಿತ್ತಿ. ಮತ್ತೂಂದು ಸೀರೆಯನ್ನು ಬ್ಯಾಗಿನಲ್ಲಿ ಇರಿಸಿಕೊಂಡು ಶಾಲೆಗೆ ತೆರಳಿ, ಸೀರೆ ಬದಲಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ದೈನಂದಿನ ಜೀವನದಲ್ಲಿ ಅವರು ಎಷ್ಟೊಂದು ಅವಮಾನಗಳನ್ನು ನುಂಗಿಕೊಂಡಿದ್ದರು ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ. ವಿಧವೆಯರಿಗೆ, ಕಾನೂನು ಬಾಹಿರವಾಗಿ ಗರ್ಭಿಣಿಯಾದವರಿಗೆ ಅಬಲಾಶ್ರಮಗಳನ್ನು ಸ್ಥಾಪಿಸಿದ ಸಾವಿತ್ರಿ ಬಾಯಿ, ಮಾನವೀಯತೆಯನ್ನೂ ಮನೋಬಲವನ್ನೂ ಹೊಂದಿದ್ದ‌ ಧೀಮಂತೆ.

ಪುರೋಹಿತರ ಉಪಸ್ಥಿತಿಯಿಲ್ಲದ, ಕಾನೂನು ರೀತ್ಯಾ ಮದುವೆಗಳನ್ನು ಏರ್ಪಾಟು ಮಾಡಿ ಹಲವಾರು ಮಂದಿಗೆ ಬಾಳು ನೀಡಿದರು. ಪಶ್ಚಿಮ ಬಂಗಾಳದಲ್ಲಿ ತೀವ್ರ ಕ್ಷಾಮ ಎದುರಾದಾಗ ದಂಪತಿಗಳಿಬ್ಬರೂ ಅಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು.

1892ರಲ್ಲಿ ಪ್ಲೇಗ್‌ ಪೀಡಿತರ ಸೇವೆ ಮಾಡುವಾಗಲೇ, ಆ ರೋಗವು ಸಾವಿತ್ರಿಬಾಯಿ ಎಂಬ ಮಹಾಮಾತೆಯ ಬಲಿ ಪಡೆಯಿತು.ಮಹಿಳೆಯರಿಗಾಗಿ ಅವರು ಹಚ್ಚಿಟ್ಟ ಅಕ್ಷರ ದೀಪ ಇಂದು ಪ್ರಕಾಶಮಾನವಾಗಿ ಬೆಳಗತ್ತಿದೆ. ಅದರ  ಬೆಳಕಿನಡಿ ಅರಿವಿನ ಪ್ರಜ್ಞೆ ವಿಸ್ತರಿಸಿಕೊಳ್ಳಬೇಕಾಗಿದೆ.

ಕೆಆರ್‌

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.