ಸ್ಕಾರ್ಫುಗಳು ಮತ್ತು ಸ್ಕಾರ್ಫ್ ಜುವೆಲ್ಲರಿಗಳು


Team Udayavani, Sep 15, 2017, 6:15 AM IST

Scarf.jpg

ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿಡುವಲ್ಲಿ ಸ್ಕಾಫ‌ುìಗಳ ಪಾತ್ರ ಮಹತ್ವದ್ದಾಗಿದೆ. ಏಕೆಂದರೆ ಕಿವಿ ಮತ್ತು ಕುತ್ತಿಗೆಯ ಭಾಗ ಬೆಚ್ಚಗಿದ್ದರೆ ಇಡೀ ದೇಹಕ್ಕೂ ಬೆಚ್ಚಗಿನ ಅನುಭವವನ್ನು ಕೊಡುತ್ತದೆ. ಮೊದಲು ಕೇವಲ ಚಳಿಯಿಂದ ರಕ್ಷಣೆಗಾಗಿ ಬಳಸುತ್ತಿದ್ದ ಸ್ಕಾರ್ಫುಗಳು ಇಂದು ಸ್ಟೈಲ್‌ 

ಸ್ಟೇಟೆಟುಗಳಾಗಿ ಪರಿಣಮಿಸಿವೆ. ಕೇವಲ ಸ್ಕಾಫ‌ುìಗಳಷ್ಟೇ ಅಲ್ಲದೆ ಸ್ಕಾರ್ಫ್ ಜ್ಯುವೆಲ್ಲರಿಗಳೂ ಅತ್ಯಂತ ವೇಗ ಗತಿಯಲ್ಲಿ ಮಹಿಳೆಯರನ್ನು ತನ್ನತ್ತ ಆಕರ್ಷಿಸುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಮಹಿಳೆಯರೂ ಇವುಗಳಲ್ಲಿಯೂ ಹೊಸ ಹೊಸ ಬಗೆಯ ಸ್ಕಾಫ‌ುìಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಅಂಥವರಿಗಾಗಿಯೇ ಇಲ್ಲಿ ಕೆಲವು ಸ್ಕಾಫ‌ುìಗಳ ಬಗೆಗೆ ಕೆಲವು  ವಿಶೇಷವಾದ ಮಾಹಿತಿಗಳನ್ನು ಪಟ್ಟಿಮಾಡಲಾಗಿದೆ. 

1. ರೆಕ್ಟಾಂಗ್ಯುಲರ್‌ ಸ್ಕಾರ್ಫುಗಳು
ಇವುಗಳು ಹೆಸರೇ ಹೇಳುವಂತೆ ರೆಕ್ಟಾಂಗ್ಯುಲರ್‌ ಆಕಾರದಲ್ಲಿರುವಂತಹ ಸ್ಕಾರ್ಫುಗಳಾಗಿವೆ. ಇವುಗಳು ಪ್ಲೆ„ನ್‌ ಅಥವ ಪ್ರಿಂಟೆಡ್‌ ಎರಡೂ ಬಗೆಗಳಲ್ಲಿಯೂ ಮತ್ತು ಅನೇಕ ಬಗೆಯ ಫ್ಯಾಬ್ರಿಕ್‌ಗಳಿಂದಲೂ ತಯಾರಾಗಿರುವಂಥವುಗಳು. ತುದಿಗಳಲ್ಲಿ ಪಾಮ್‌ಗಳು, ಟ್ಯಾಸೆಲ್‌ಗಳು, ಲೇಸುಗಳನ್ನೂ ಹೊಂದಿರುವಂತಹ ಸ್ಕಾಫ‌ುìಗಳು ದೊರೆಯುತ್ತವೆ. ಈ ಬಗೆಯ ಸ್ಕಾಫ‌ುìಗಳನ್ನು ಹಲವು ಬಗೆಗಳಲ್ಲಿ ಧರಿಸಲು ಸಾಧ್ಯವಿರುತ್ತವೆ. ಎಲ್ಲಾ ವಯೋಮಾನದವರಿಗೂ, ಮಾಡರ್ನ್ ಹಾಗೂ ಫ್ಯೂಷನ್‌ ವೇರುಗಳಿಗೂ ಒಪ್ಪುವಂಥ
ದ್ದಾಗಿದ್ದು ಸುಂದರವಾಗಿರುತ್ತವೆ.

2.ಸ್ಕ್ವೇರ್‌ ಸ್ಕಾರ್ಫುಗಳು
ಇವುಗಳು ಚೌಕಾಕಾರದ ಸ್ಕಾಫ‌ುìಗಳಾಗಿದ್ದು  ವಿವಿಧ ಬಗೆಯ ಬಟ್ಟೆಗಳಲ್ಲಿ ದೊರೆಯುತ್ತವೆ. ಧರಿಸುವಿಕೆಯಲ್ಲಿ ರೆಕ್ಟಾಗ್ಯುಲರ್‌ ಸ್ಕಾರ್ಫುಗಳಿಗಿಂತ ಭಿನ್ನವಾದ ಶೈಲಿಯನ್ನು ಬಿಂಬಿಸುತ್ತವೆ. ಇವುಗಳಲ್ಲಿ ಸಿಲ್ಕ್ ಸ್ಕಾರ್ಫುಗಳು ರಿಚ್‌ ಮತ್ತು ಕ್ಲಾಸೀ  ಲುಕ್ಕನ್ನು ನೀಡುತ್ತವೆ. ಹೆಚ್ಚಾಗಿ ಮಾಡರ್ನ್ ವೇರುಗಳಿಗೆ ಹೆಚ್ಚು ಸೂಕ್ತವೆನಿಸುವ ಸ್ಕಾಫ‌ುìಗಳು ದಿರಿಸಿನ ಅಂದವನ್ನು ಹೆಚ್ಚಿಸುವಲ್ಲಿ ಸಹಾಯಕವಾದುದು.

3. ಇನ್ಫಿನಿಟಿ ಸ್ಕಾರ್ಫುಗಳು
ಇ.ವುಗಳು ಹೆಸರಿಗೆ ತಕ್ಕಂತೆ ಅಳತೆಯಲ್ಲಿ ಉದ್ದವಾಗಿರುವ ಸ್ಕಾರ್ಫುಗಳು. ಇವುಗಳು ಲೂಪ್‌ನಂತಿರುವವುಗಳು. ಅಂದರೆ ಇವುಗಳಿಗೆ ಓಪನ್‌ ತುದಿಗಳಿರುವುದಿಲ್ಲ. ಆದ್ದರಿಂದ ಧರಿಸಲು  ಬಹಳ ಆರಾಮದಾಯಕವಾಗಿರುತ್ತವೆ. ಇವುಗಳನ್ನು ಲೂಪ್‌ ಸ್ಕಾಫ್ì ಅಥವಾ ಸರ್ಕಲ್‌ ಸ್ಕಾರ್ಫ್ಎಂದೂ ಕರೆಯಲಾಗುತ್ತದೆ. ಇವುಗಳು ಸ್ಟೈಲಿಶ್‌ ಆಗಿರುವುದಲ್ಲದೆ ಚಳಿಗಾಲದಲ್ಲಿ ದೇಹವನ್ನೂ ಬೆಚ್ಚಗಿಡುವಲ್ಲಿ ಸಹಾಯಕವಾಗಬಲ್ಲವು.

4. ವುಲ್ಲನ್‌ ಸ್ಕಾರ್ಫುಗಳು
ಬೇರೆ ಬೇರೆ ಬಗೆಯ ಬಟ್ಟೆಗಳಂತೆಯೇ ವುಲ್ಲನ್‌ ಸ್ಕಾರ್ಫುಗಳೂ ದೊರೆಯುತ್ತವೆ ಮತ್ತು ಬಹಳ ಸ್ಟೈಲಿಶ್‌ ಆಗಿರುತ್ತವೆ. ಆದರೆ ಇವುಗಳು ಚಳಿಗಾಲಕ್ಕೆ ಹೆಚ್ಚು ಸೂಕ್ತವಾದುದಾಗಿರುತ್ತವೆ. ತೆಳುವಾದ ವುಲ್ಲನ್‌ ದಾರಗಳಿಂದ ಹಲವು ಬಗೆಯ ಮಾದರಿಗಳಲ್ಲಿ ಸ್ಕಾಫ‌ುìಗಳನ್ನು ತಯಾರಿಸಲಾಗಿರುತ್ತದೆ. ಇವು ಹ್ಯಾಂಡ್‌ಲೂಮ್‌ ಕಲೆಯಾಗಿದ್ದು ಬಹಳ ಹಿಂದಿನಿಂದಲೂ ತಯಾರಿಸಲ್ಪಡುತ್ತಿರುವ ಬಗೆಯಾಗಿದೆ.

5. ಪ್ರಿಂಟೆಡ್‌ ಕಾಟನ್‌ ಮತ್ತು ಸಿಂಥೆಟಿಕ್‌ ಸ್ಕಾರ್ಫುಗಳು
ಪ್ರಿಂಟೆಡ್‌ ಸ್ಕಾಫ‌ುìಗಳು ಕ್ಯಾಷುವಲ್‌ ವೇರ್‌ ಆಗಿ ಬಹಳ ಸೂಕ್ತವಾದುದಾಗಿರುತ್ತದೆ. ಜೀನ್ಸ್‌ ಪ್ಯಾಂಟ್‌, ಜೀನ್ಸ್‌ ಟ್ಯುನಿಕ್ಸ್‌ ಮಿನಿ ಸ್ಕರ್ಟ್ಸ್, ಪೆನ್ಸಿಲ್‌ ಕಟ್‌ ಸ್ಕರ್ಟುಗಳೊಂದಿಗೆ ಬಹಳ ಚೆನ್ನಾಗಿ ಒಪ್ಪತ್ತವೆ. ಈ ಬಗೆಯ ಸ್ಕಾಫ‌ುìಗಳು ಕಾಟನ್‌ ಮತ್ತು ಸಿಂಥೆಟಿಕ್‌ ಬಟ್ಟೆಗಳಲ್ಲಿ ದೊರೆಯುತ್ತವೆ. 

6. ಕಾಶ್ಮೀರಿ ಸ್ಕಾರ್ಫುಗಳು
ಕಾಶ್ಮೀರಿ ವೂಲಿನಿಂದ ತಯಾರಿಸಿದ ಸ್ಕಾಫ‌ುìಗಳು ಇವಾಗಿವೆ. ಉಣ್ಣೆಗೆ ಸ್ವಲ್ಪ ಪ್ರಮಾಣದ ಸಿಲ್ಕನ್ನು (ರೇಷ್ಮೆ) ಸೇರಿಸುವುದರ ಮೂಲಕ ಅವುಗಳಿಗೆ ಶೈನಿ ಲುಕ್ಕನ್ನು ನೀಡಲಾಗುತ್ತದೆ. ಇವು ಬೆಚ್ಚಗಿನ ಸ್ಕಾಫ‌ುìಗಳಾಗಿದ್ದು ನೋಡಲು ಸುಂದರವಾಗಿರುತ್ತವೆ. ಇವುಗಳು ಟ್ರೆಡಿಶನಲ್‌ ವೇರುಗಳಾದ ಸೀರೆಗಳಿಗೆ ಬಹಳ ಸುಂದರವಾಗಿ ಕಾಣುತ್ತವೆ.

7. ಸಿಲ್ಕ್ ಸ್ಕಾರ್ಫುಗಳು
ಸಿಲ್ಕ್ ಬಟ್ಟೆಯಿಂದ ತಯಾರಿಸುವ ಈ ಬಗೆಯ ಸ್ಕಾರ್ಫುಗಳು ಪ್ರಿಂಟೆಡ್‌ ಮಾದರಿಯಲ್ಲಿಯೂ ದೊರೆಯುತ್ತವೆ. ಪ್ರಾಣಿಗಳ ಪ್ರಿಂಟ್‌, ಫ್ಲೋರಲ್‌ ಪ್ರಿಂಟುಗಳು, ಇನ್ನಿತರ ಪ್ರಿಂಟುಗಳಲ್ಲಿ ದೊರೆಯುತ್ತವೆ.

8. ಹೆಡ್‌ ಟೈ ಸ್ಕಾರ್ಫುಗಳು
ಹೆಸರೇ ಹೇಳುವಂತೆ ಇವುಗಳು ತಲೆಗೆ ಸುತ್ತಿಕೊಳ್ಳುವಂತಹ ಸ್ಕಾರ್ಫುಗಳು. ಮಹಿಳೆಯರಿಗಿಂತ ಪರುಷರಲ್ಲಿ ಈ ಮಾದರಿಯ ಸ್ಕಾರ್ಫ್ ಫ್ಯಾಷನ್‌ ರನ್ನಿಂಗ್‌ ಟ್ರೆಂಡಿನಲಿರುವಂಥದ್ದಾಗಿದೆ. ಈ ಬಗೆಯ ಸ್ಕಾಫ‌ುìಗಳು ತಲೆಯ ಭಾಗವನ್ನು ನೇರ ಸೂರ್ಯನ ಕಿರಣಗಳಿಂದ ರಕ್ಷಿಸುವಂತಹ ಕಾರ್ಯವನ್ನೂ ಮಾಡುತ್ತವೆ. ಮಹಿಳೆಯರೂ ಬಳಸುತ್ತಾದರೂ ಬೀಚ್‌ ಥೀಮ್‌ ಅಥವ ಕೆಲವು ಸಂದರ್ಭಗಳಿಗೆ ಮಾತ್ರ ಸೂಕ್ತವಾದವು ಗಳಾಗಿವೆ. ಇವುಗಳು ಜನಸಾಮಾನ್ಯರಲ್ಲಿ ಇನ್ನು ಪ್ರಚಲಿತವಾಗದಿದ್ದರೂ ಸೆಲೆಬ್ರಿಟಿಗಳಿಂದ ಹೆಚ್ಚಾಗಿ ಬಳಸಲ್ಪಡುತ್ತವೆ.
 
9. ಮಫ್ಲರ್‌ ಸ್ಕಾರ್ಫುಗಳು
ಇವುಗಳು ಸಾಮಾನ್ಯವಾಗಿ ವುಲ್ಲನ್‌ ಸ್ಕಾಫ‌ುìಗಳಾಗಿದ್ದು ಕಿವಿಗೆ ಅಥವ ಕುತ್ತಿಗೆಯ ಭಾಗವನ್ನು ಕವರ್‌ ಮಾಡುವುದರ ಮೂಲಕ ದೇಹವನ್ನು ಬೆಚ್ಚಗಿಡುತ್ತವೆ. ಈ ಬಗೆಯ ಸ್ಕಾಫ‌ುìಗಳು ಸಿಂಪಲ್ಲಾದ ಲುಕ್ಕನ್ನ ನೀಡುತ್ತವೆ.

– ಪ್ರಭಾ ಭಟ್‌

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.