ಸೀಶೆಲ್ ಆಭರಣಗಳು
Team Udayavani, Apr 27, 2018, 6:00 AM IST
ಕಡಿಮೆ ಬೆಲೆಯ ಮತ್ತು ವಿಶೇಷವಾದ ಲುಕ್ಕನ್ನು ನೀಡುವ ಆಭರಣಗಳಲ್ಲಿ ಸೀಶೆಲ… ಆಭರಣಗಳೂ ಕೂಡ ಒಂದು. ಸಮುದ್ರದಲ್ಲಿ ದೊರೆಯುವ ಸುಂದರವಾದ ಕಪ್ಪೆ ಚಿಪ್ಪುಗಳಿಂದ ತಯಾರಾಗುವ ಈ ಬಗೆಯ ಆಭರಣಗಳು ನೋಡಲು ಬಲು ಸುಂದರವಾಗಿರುತ್ತವೆ. ಇವುಗಳು ಎವರ್‌ಗ್ರೀನ್ ಆಭರಣಗಳಾಗಿದ್ದು ಇತ್ತೀಚಿಗೆ ಮತ್ತೆ ಟ್ರೆಂಡಿಗೆ ಬಂದಿರುವ ಆಭರಣಗಳಲ್ಲಿ ಒಂದಾಗಿವೆ. ಕೇವಲ ಆಭರಣಗಳಷ್ಟಕ್ಕೇ ಸೀಮಿತವಾಗಿರದ ಸೀ ಶೆಲ್ಲುಗಳ ಬಳಕೆ ಫ್ಯಾಷನ್ ಆಕ್ಸೆಸ್ಸರಿಗಳಾದ ಬ್ಯಾಗುಗಳು, ಕೀ ಚೈನುಗಳು, ಚಪ್ಪಲಿಗಳು, ದುಪಟ್ಟಾಗಳು ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸಲೂ ಕೂಡ ಬಳಸಲ್ಪಡುತ್ತವೆ. ಸಮುದ್ರ ತಟದಲ್ಲಿ ದೊರೆಯುವ ವಿಶೇಷವಾದ ಆಕಾರಗಳುಳ್ಳ ಚಿಪ್ಪುಗಳನ್ನು ತಮ್ಮ ಆಭರಣಗಳೊಂದಿಗೆ ಜೋಡಿಸಿಕೊಂಡು ಧರಿಸುವುದರ ಮೂಲಕ ಆರಂಭಗೊಂಡ ಇವುಗಳ ಬಳಕೆ ಇಂದು ವಿಧ ವಿಧ ಬಗೆಯ ಸೀಶೆಲ… ಆಭರಣಗಳನ್ನು ಮಾದರಿಗೊಳಿಸುವ ಹಂತಕ್ಕೆ ಬಂದು ಟ್ರೆಂಡಿ ಆಭರಣಗಳ ಪಟ್ಟಿಗೆ ಸೇರ್ಪಡಿಗೊಂಡಿವೆ. ಇವುಗಳಿಗೆ ವಿವಿಧ ಬಗೆಯ ಬೀಡುಗಳನ್ನು ಮತ್ತು ಬಣ್ಣಗಳನ್ನು ಕೊಡುವುದರ ಮೂಲಕ ಇನ್ನೂ ಆಕರ್ಷಕವನ್ನಾಗಿಸಬಹುದಾಗಿದೆ.
1 ಪೆಂಡೆಂಟ್ ಸೆಟ್ಟುಗಳು: ಒಂದೇ ತೆರನಾದ ಶೆಲ್ಲುಗಳನ್ನು ಬಳಸಿ ಸುಂದರವಾದ ಪೆಂಡೆಂಟ್ ಸೆಟ್ಟುಗಳನ್ನು ತಯಾರಿಬಹುದಾಗಿದೆ. ವಿವಿಧ ಗಾತ್ರಗಳಲ್ಲಿ ದೊರೆಯುವ ಈ ಬಗೆಯ ಪೆಂಡೆಂಟುಗಳು ಸುಂದರವಾಗಿಯೂ ಮತ್ತು ವಿಶೇಷವಾಗಿಯೂ ಇರುತ್ತವೆ. ಮೆಟಲ… ಚೈನುಗಳೊಂದಿಗೆ ಅಥವ ಥೆಡ್ ಚೈನುಗಳೊಂದಿಗೆ ಪೆಂಡೆಂಟುಗಳನ್ನು ಧರಿಸಬಹುದಾಗಿದೆ. ಫ್ಯೂಷನ್‌ವೇರುಗಳಾದ ಲೆಹೆಂಗಾ, ಲಾಂಗ್ ಸ್ಕರ್ಟುಗಳು ಮತ್ತು ಕಾಟನ್ ಸೀರೆಗಳೊಂದಿಗೆ ಈ ಬಗೆಯ ಪೆಂಡೆಂಟ್ ಸೆಟ್ಟುಗಳು ಸ್ಟೈಲಿಶ್ ಲುಕ್ಕನ್ನು ಕೊಡುತ್ತವೆ. ವಿಶೇಷವಾದ ಡಿಸೈನುಳ್ಳ ಶಂಖವನ್ನು ಲಾಂಗ್ ಚೈನಿನೊಂದಿಗೆ ಹಾಕಿಕೊಂಡು ಸುಂದರವಾದ ಪೆಂಡೆಂಟ್ ಚೈನಾಗಿಯೂ ಬಳಸಬಹುದಾಗಿದೆ.
2 ಬ್ರೇಸ್ಲೆಟ್ಟುಗಳು: ಇತರೆ ಬ್ರೇಸ್ಲೆಟ್ಟುಗಳಂತೆ ಸೀಶೆಲ್ಲುಗಳನ್ನು ಬಳಸಿ ತಯಾರಿಸಿದ ಬಗೆ ಬಗೆಯ ಬ್ರೇಸ್ಲೆಟ್ಟುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಸಿಂಗಲ್ ಲೇಯರ್ ಮತ್ತು ಮಲ್ಟಿ ಲೇಯರ್ ಎರಡೂ ಬಗೆಗಳಲ್ಲಿ ದೊರೆಯುವ ಇವುಗಳು ವಿವಿಧ ಬಣ್ಣಗಳ ಶೆಲ್ಲುಗಳಿಂದಲೂ ತಯಾರಿಸಲ್ಪಟ್ಟಿರುತ್ತವೆ. ಇವುಗಳೊಂದಿಗೆ ಸಣ್ಣ ಸಣ್ಣ ಟ್ಯಾಸಲ್ಲುಗಳು ಬಂದಾಗ ಸುಂದರವಾದ ಲುಕ್ಕನ್ನು ಕೊಡುತ್ತವೆ.
3 ನೆಕ್ಲೇಸುಗಳು: ಇವುಗಳು ಫೆಬೆಲ್ ನೆಕ್ಲೇಸುಗಳಂತೆ ಶೆಲ್ಲುಗಳಿಂದಲೂ ಕೂಡ ಸುಂದರವಾದ ನೆಕ್ಲೇಸುಗಳನ್ನು ತಯಾರಿಸಲಾಗುತ್ತದೆ. ಶೆಲ್ಲುಗಳಿಗೆ ಬೇಕಾದ ಬಣ್ಣಗಳನ್ನು ನೀಡುವುದರ ಮೂಲಕ ಕಣ್ಮನ ಸೆಳೆಯುವ ನೆಕ್ಲೇಸುಗಳನ್ನೂ ಕೂಡ ತಯಾರಿಸಲಾಗಿರುತ್ತದೆ. ಮಕ್ಕಳಿಗೂ ಹಾಕಬಹುದಾದ ನೆಕ್ಲೇಸುಗಳಿವುಗಳಾಗಿದೆ.
4 ಆಂಕ್ಲೆಟುಗಳು: ಈ ಬಗೆಯ ಶೆಲ್ಲುಗಳನ್ನು ಬಳಸಿ ವಿವಿಧ ಬಗೆಯ ಆಂಕ್ಲೆಟ್ಟುಗಳು ಮತ್ತು ಫೂಟ್ ಆಭರಣಗಳನ್ನೂ ಕೂಡ ತಯಾರಿಸಲಾಗುತ್ತದೆ. ವಿವಿಧ ಆಕೃತಿಗಳ ಶಂಖಗಳನ್ನು ಮತ್ತು ಚಿಪ್ಪುಗಳನ್ನು ಬಳಸಿ ತಯಾರಿಸಲಾದ ಸುಂದರವಾದ ಆಂಕ್ಲೆಟುಗಳ್ಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಬೀಚ್ ಥೀಮ… ಪಾರ್ಟಿಗಳಿಗೆ ಬಹಳ ಚೆನ್ನಾಗಿ ಸೂಕ್ತವೆನಿಸುವಂತದ್ದಾಗಿದೆ. ಮೆಟಲ್, ಸ್ಟ್ರಿಂಗ್, ಕ್ರಾಚೆಟ್, ಬ್ಲ್ಯಾಕ್‌ವೆುಟಲ್ ಹೀಗೆ ಎಲ್ಲಾ ಬಗೆಯ ಫೂಟ್ ಆಭರಣಗಳಲ್ಲ ಸೀಶೆಲ್ಲುಗಳನ್ನು ಬಳಸಿ ಆಭರಣವನ್ನು ಇನ್ನೂ ಸುಂದರವನ್ನಾಗಿಸಲಾಗಿರುತ್ತದೆ. ತ್ರೀಫೋರ್ತ್ ಜೀನ್ಸುಗಳನ್ನು ತೊಟ್ಟಾಗ ಈ ಬಗೆಯ ಆಂಕ್ಲೆಟ್ಟುಗಳು ಫಂಕಿ ಲುಕ್ಕನ್ನು ನೀಡುತ್ತವೆ. ವಿವಿಧ ಬಣ್ಣಗಳಲ್ಲಿ ದೊರೆಯುವುದರಿಂದ ದಿರಿಸಿಗೆ ತಕ್ಕಂತಹ ಅಂಕ್ಲೆಟ್ಟುಗಳನ್ನು ಧರಿಸಿ ಟ್ರೆಂಡಿ ಲುಕ್ಕನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
5 ಕಿವಿಯಾಭರಣಗಳು: ಸ್ಟಡ್ಡುಗಳು, ಹ್ಯಾಂಗಿಂಗುಗಳು, ರಿಂಗುಗಳಲ್ಲಿ ಶೆಲ್ಲುಗಳನ್ನು ಬಳಸಿದ ಕಿವಿಯಾಭರಣ, ಆಂಟಿಕ್ ಲುಕ್ಕನ್ನು ನೀಡುವಂತಹ ಸೀ ಶೆಲ್ ಕಿವಿಯಾಭರಣಗಳು, ಶಂಖಗಳನ್ನು ಬಳಸಿದ ಕಿವಿಯಾಭರಣಗಳು, ಲಾಂಗ್ ಹ್ಯಾಂಗಿಂಗ್ ಕಿವಿಯಾಭರಣಗಳು ಹೀಗೆ ಅನೇಕ ಬಗೆಗಳ ಸೀಶೆಲ್ ಆಭರಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಸುಂದರವಾಗಿರುವ ಈ ಬಗೆಯ ಆಭರಣಗಳು ಹೊಸ ಸ್ಟೈಲ್ ಸ್ಟೇಟ್ಮೆಂಟನ್ನು ಸೃಷ್ಟಿಸುವಲ್ಲಿ ನೆರವಾಗುತ್ತವೆ. ಅಷ್ಟೇ ಅಲ್ಲದೆ ಫೆದರುಗಳು, ಟ್ಯಾಸೆಲ್ಲುಗಳು, ಬೀಡುಗಳು ಇತರೆ ಅಲಂಕಾರಿಕ ವಸ್ತುಗಳೊಂದಿಗೆ ಸೀ ಶೆಲ್ಲುಗಳನ್ನು ಬಳಸಿ ಟ್ರೆಂಡಿ ಕಿವಿಯಾಭರಣಗಳನ್ನು ತಯಾರಿಸಲಾಗುತ್ತದೆ.
6 ಬಳೆಗಳು: ಮೆಟಲ್ ಬಳೆಗಳಿಗೆ ಶಂಖಗಳನ್ನು ಮತ್ತು ವಿವಿಧ ಆಕೃತಿಗಳುಳ್ಳ ಶೆಲ್ಲುಗಳನ್ನು ಪೋಣಿಸಿ ಬಳೆಗಳನ್ನು ತಯಾರಿಸಲಾಗಿರುತ್ತದೆ. ಬ್ಲ್ಯಾಕ್‌ವೆುಟಲ್ ಮತ್ತು ವೈಟ್ಮೆಟಲ್ ಎರಡೂ ಬಗೆಯ ಬಳೆಗಳೊಂದಿಗೆ ಶೆಲ್ಲುಗಳಿಗೆ ಅಗತ್ಯ ಬಣ್ಣಗಳನ್ನು ನೀಡಿ ಅತ್ಯಂತ ವಿಭಿನ್ನವಾದ ಬಳೆಗಳನ್ನು ತಯಾರಿಸಲಾಗಿರುತ್ತದೆ. ಮಾಡರ್ನ್ ದಿರಿಸುಗಳೊಂದಿಗೆ ಇವುಗಳು ಬಹಳ ಚೆನ್ನಾಗಿ ಕಾಣುತ್ತವೆ. ಒಂದೇ ಕೈಗಳಿಗೆ ಇವುಗಳನ್ನು ಧರಿಸಿ ಟ್ರೆಂಡಿಯಾಗಿ ಕಾಣಬಹುದಾಗಿದೆ. ಕಡಗದಂತಹ ಬಳೆಗಳೂ ಕೂಡ ಈ ಬಗೆಯಲ್ಲಿ ದೊರೆಯುತ್ತವೆ. ಶೆಲ್ಲುಗಳನ್ನು ಹ್ಯಾಂಗಿಂಗ್ ರೀತಿಯಲ್ಲಿ ಪೋಣಿಸಿದ ಬಳೆಗಳೂ ದೊರೆಯುತ್ತವೆ. ಇವು ಯಂಗ್‌ಸ್ಟರ್ ಹೆಚ್ಚು ಇಷ್ಟ ಪಡುವಂತಹ ಬಗೆಗಳಾಗಿವೆ.
7 ಪರ್ಸು ಮತ್ತು ಬ್ಯಾಗುಗಳಲ್ಲಿ ಬಳಕೆ: ಬ್ಯಾಗುಗಳನ್ನು ಮತ್ತು ಪರ್ಸುಗಳನ್ನು ಅಲಂಕರಿಸಲು ಸೀಶೆಲ್ಲುಗಳನ್ನು ಬಳಸಲಾಗುತ್ತದೆ. ಇವುಗಳು ಮೊದಲಿನಿಂದಲೂ ಇದ್ದ ಫ್ಯಾಷನ್ ಆದರೂ ಎವರ್ ಗ್ರೀನ್ ಸ್ಟೈಲ್ ಎನಿಸಿವೆ. ಇತ್ತೀಚೆಗೆ ಈ ಬಗೆಯ ಫ್ಯಾಷನ್ ಬ್ಯಾಗುಗಳು ಮತ್ತೆ ಟ್ರೆಂಡಿಗೆ ಬಂದಿವೆ ಎನ್ನಬಹುದಾಗಿದೆ. ಹ್ಯಾಂಡ್ ಬ್ಯಾಗ್, ಕ್ಲಚ್, ಪರ್ಸುಗಳು, ಕ್ರಾಸ್ ಬಾಡಿ ಬ್ಯಾಗ್ ಹೀಗೆ ಎಲ್ಲಾ ಬಗೆಯ ಬ್ಯಾಗುಗಳಲ್ಲಿಯೂ ಇವುಗಳನ್ನು ಬಳಸಲಾಗುತ್ತದೆ.
8 ದುಪ್ಪಟ್ಟಾಗಳನ್ನು ಅಲಂಕರಿಸಲು: ಕೇವಲ ಆಭರಣಗಳಷ್ಟೇ ಅಲ್ಲದೆ ದುಪ್ಪಟ್ಟಾಗಳ ತುದಿಗಳಲ್ಲಿ ಶಂಖಗಳನ್ನು ಸೀಶೆಲ್ಲುಗಳನ್ನು ಹ್ಯಾಂಗಿಂಗ್ ಆಗಿ ಬಳಸಲಾಗುತ್ತದೆ. ಅಲ್ಲದೆ ಕೇಪುಗಳ ಬಾರ್ಡರ್‌ಗಳಲ್ಲಿ ಕೂಡ ಶಂಖಗಳ ಹ್ಯಾಂಗಿಂಗ್ಸ್ ಅನ್ನು ಬಳಸಿ ಡಿಫರೆಂಟ್ ಎನಿಸುವ ಲುಕ್ಕನ್ನು ನೀಡುತ್ತವೆ.
9 ಫೂ ಟ್ ವೇರುಗಳಲ್ಲಿ ಬಳಕೆ: ಮಹಿಳೆಯರ ಶೂಗಳಲ್ಲಿಯೂ ಕೂಡ ಸೀಶೆಲ್ಲುಗಳನ್ನು ಬಳಸಲಾಗುತ್ತದೆ. ಆಂಟಿಕ್ ಲುಕ್ಕನ್ನು ಹೊಂದಿರುವ ಶೂಗಳನ್ನು ಚಿಕ್ಕ ಚಿಕ್ಕ ಶೆಲ್ಲುಗಳನ್ನು ಬಳಸಿ ಅಲಂಕಾರ ಮಾಡಲಾಗಿರುತ್ತದೆ. ಇವುಗಳೂ ಕೂಡ ಸಧ್ಯದ ಟ್ರೆಂಡ್ ಎನಿಸುತ್ತವೆ.
10 ಆಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಬಳಕೆ: ಇವುಗಳನ್ನು ಬಳಸಿ ಕೇವಲ ಆಭರಣಗಳಷ್ಟೇ ಅಲ್ಲದೆ ಗೃಹಾಲಂಕಾರಿಕ ವಸ್ತುಗಳನ್ನೂ ಕೂಡ ತಯಾರಿಸಲಾಗುತ್ತದೆ. ಸಣ್ಣ ಸಣ್ಣ ಶಂಖಗಳು, ವೈವಿಧ್ಯವಾದ ಡಿಸೈನುಗಳುಳ್ಳ ಶೆಲ್ಲುಗಳನ್ನು ಬಳಸಿ ಅಲಂಕಾರಿಕ ಕನ್ನಡಿಗಳು, ವಾಲ… ಪ್ಲೇಟುಗಳು, ವಾಲ… ಹ್ಯಾಂಗಿಂಗುಗಳು, ಬಾಗಿಲ ತೋರಣಗಳು ಇತ್ಯಾದಿಗಳನ್ನು ತಯಾರಿಸಬಹುದಾಗಿದೆ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.