ಹಾ ಸೀತಾ: ಅರ್ಧಾಂಗಿನಿ


Team Udayavani, Nov 3, 2017, 11:56 AM IST

03-16.jpg

ಪ್ರಿಯ ಭೂಜಾತೆ,
ಸೀತೆಯಿಲ್ಲದ ಬದುಕಿಗೆ ಹಠತೊಟ್ಟು ಒಗ್ಗಿಕೊಳ್ಳಲು ಯತ್ನಿಸುತ್ತಿದ್ದ ಶ್ರೀರಾಮನಿಗೂ ಒಮ್ಮೆ ತನ್ನ ಪತ್ನಿàನಿಷ್ಠೆಯನ್ನು ಪರೀಕ್ಷೆಗೊಳಪಡಿಸುವ ಕಾಲ ಒದಗಿತ್ತು. ಅದು ರಾಮಾಶ್ವಮೇಧದ ಸಂದರ್ಭ. ಬಲಭಾಗದಲ್ಲಿ ಅರ್ಧಾಂಗಿಯಿಲ್ಲದೇ ರಾಮ “ಯಾಗ ದೀಕ್ಷಿತ’ನಾಗುವುದು ಸಾಧ್ಯವಿರ ಲಿಲ್ಲ. ಅದೂ ದೇವಕಾರ್ಯದಲ್ಲಿ ಬಲಭಾಗ. ಉಳಿದ ಕಡೆಯೆಲ್ಲ ಎಡಭಾಗ. ಅಷ್ಟರಲ್ಲಾಗಲೇ ರಾಮನ ಬದುಕಿನ ಬಂಡಿಯಿಂದ ಸೀತೆ ಎಂಬ ಗಾಲಿ ಕಳಚಿಕೊಂಡು ದೂರ ಉರುಳಿಯಾಗಿತ್ತು. ಈ ಹೊತ್ತಲ್ಲಿ ಏಕಪತ್ನಿàವ್ರತಸ್ಥ ರಾಮನ ನಡೆ ಹೇಗಿದ್ದೀತು? ಚತುರ ದಾಶರಥಿ, ಜಾನಕಿಯ ಸ್ವರ್ಣಪುತ್ಥಳಿಯನ್ನೇ ಪಕ್ಕದಲ್ಲಿ ಸ್ಥಾಪಿಸಿಕೊಂಡು ಯಾಗ ಪೂರೈಸಿದನಂತೆ!

ವೈದೇಹಿಯನ್ನಲ್ಲದೇ ಬೇರೆ ಹೆಣ್ಣನ್ನೊಲ್ಲೆ ಎಂಬ ರಾಘವನ ಈ ಬದ್ಧತೆಗೆ ತಲೆಬಾಗಲೇಬೇಕು. ಆದರೆ, ಇಲ್ಲೊಂದು ಸೂಕ್ಷ್ಮವನ್ನು ಗಮನಿಸು ತಾಯಿ, ಪತ್ನಿಯಿಲ್ಲದೆಯೇ ಮಹಾಯಾಗವನ್ನು ಕೈಗೊಳ್ಳುವ ಅವಕಾಶ ರಾಮನಿಗಿತ್ತು. ಆದರೆ, ಪತಿಯ ಅನುಪಸ್ಥಿತಿಯಲ್ಲಿ ನೀನೂ ಅಂತಹದ್ದೊಂದು ಮಂಗಳ ಕಾರ್ಯಕ್ಕೆ ಅಧೈರ್ಯುವಾಗಬೇಕು ಎಂದು ಬಯಸಿದ್ದರೆ ಅದು ಸಾಧ್ಯವಾಗುತ್ತಿತ್ತೆ? ಖಂಡಿತ ಇಲ್ಲ. “ಮಾನವ’, “ಮನುಷ್ಯ’ ಎಂಬಂತಹ ಪುರುಷವಾಚಕ ಕಲ್ಪನೆ ಮಾತ್ರವಿರುವ ಈ ಲೋಕದಲ್ಲಿ “ಯಾಗ ದೀಕ್ಷಿತೆ’ ಎಂಬ ಸಾಧ್ಯತೆಯನ್ನು ಊಹಿಸುವುದು ಸಾಧ್ಯವೆ? ಗಂಡನಿದ್ದರೆ, ಅವನಿಗೆ ಸಹಧರ್ಮಿಣಿಯಾಗಿ ಅವನ ಎಡಕ್ಕೆ ಕುಳಿತು ಅವನ ಸತ್ಕಾರ್ಯಗಳಿಗೆ ಸಹಕರಿಸಬಹುದಷ್ಟೇ ಹೊರತು, ಅವಳೇ ಪ್ರಧಾನ ಸ್ಥಾನದಲ್ಲಿ ಕುಳಿತು ಯಾವ ಮಂಗಳ ಕಾರ್ಯವನ್ನು ನೆರವೇರಿಸುವ ಹಕ್ಕನ್ನೂ ಆಕೆ ಪಡೆಯುವುದಿಲ್ಲ. ಹೀಗಿದ್ದ ಮೇಲೆ ಗಂಡ ಬಿಟ್ಟವಳಿಗೆ, ಆ “ಸಹಕರಿಸುವ’ ಅವಕಾಶವೂ ಇರುವುದಿಲ್ಲವಲ್ಲ ! ಗಂಡನನ್ನು ಕಳೆದುಕೊಂಡವರಂತೂ “ಅಪಶಕುನ’ವೆಂದೇ ಪರಿಗಣಿತರು. “ಮಂಗಳ’ದ ನೆರಳೂ ತಾಕದಂತೆ ಅವರು ದೂರವೇ ಉಳಿಯಬೇಕು!

ಕೇವಲ ಆಕಸ್ಮಿಕವಾಗಿ ಸಂಭವಿಸುವ “ಹುಟ್ಟು’ ಅನೇಕರಿಗೆ ಅನೇಕ ಅವಕಾಶಗಳನ್ನು ನಿರಾಕರಿಸಲು ಮುಂದಾಗುತ್ತದೆ. “ಇಂಥ ಜಾತಿಯಲ್ಲಿ ಹುಟ್ಟಿದರೆ, ಅವರು “ಅಂಥಾದ್ದಕ್ಕೆ’ ಅರ್ಹರಲ್ಲ ಎಂಬ ಷರಾ ಹೊರಡಿಸಲಾಗುತ್ತದೆ. ಆ “ಅಂಥದ್ದು’ ಈ ಜಾತಿಯವರಿಗೆ ಬೇಕೋ ಬೇಡವೋ ಎಂಬುದು ಬೇರೆಯೇ ಮಾತು. ಆದರೆ, “ಇದನ್ನು ಪಡೆಯುವ ಯೋಗ್ಯತೆ ನಿನಗಿಲ್ಲ’ ಎಂಬಂತಹ ಧೋರಣೆ ಅಮಾನವೀಯ ಮತ್ತು ಕ್ರೌರ್ಯ. ಇದು ತರುವ ಅವಮಾನದ ನೋವು ಅನುಭವಿಸಿದವರಿಗೇ ಗೊತ್ತು. ಆದರೆ, ಮೇಲೆ-ಕೆಳಗೆ ಎಂಬ ಭೇದವೇ ಇಲ್ಲದೆ ಎಲ್ಲ ಜಾತಿಯ ಹೆಣ್ಣುಮಕ್ಕಳು ಮಾತ್ರ ಈ “ನಿರಾಕರಣ ರಾಜಕೀಯ’ಕ್ಕೆ ಗಳಿಗೆ ಗಳಿಗೆಗೂ ತುತ್ತಾಗಬೇಕಾಗುವುದು ಮತ್ತೂಂದು ಕಟು ವಾಸ್ತವ! ಅಂದರೆ, ಈ ಪ್ರಪಂಚದ ಕಟ್ಟಕಡೆಯ ವ್ಯಕ್ತಿ “ಮಾನವಿ’ ಎಂದೇ ಹೇಳಬಹುದೇನೋ!

ಈ ಕೆಳದರ್ಜೆಯ ಸ್ಥಾನಮಾನ ಅವಳಿಗೇಕೆ ದಕ್ಕಿರಬಹುದು? ಅವಳು ದೈಹಿಕವಾಗಿ ಅಬಲೆ ಎಂಬ ಕಾರಣಕ್ಕೇನು? ಜೊತೆಗೆ, ಅವಳು ಪುರುಷನಷ್ಟು “ಶುದ್ಧ’ಳಲ್ಲ ಎಂಬ ನಂಬಿಕೆಯೂ ಸೇರಿಕೊಂಡಿರಬಹುದು. ಏಕೆಂದರೆ, ಆಕೆ ಪ್ರತೀ ತಿಂಗಳೂ ರಕ್ತ ಸ್ರವಿಸುವವಳು! ತನ್ನೊಳಗೇ ಧರಿಸಿರುವ ಈ “ಅಶುದ್ಧತೆ’ಯಿಂದಾಗಿ ಅನೇಕ ಪೂಜಾ ಸ್ಥಾನಗಳು ಇವಳಿಗೆ ಶಾಶ್ವತವಾಗಿ ಮುಚ್ಚಿಬಿಡುತ್ತವೆ. ಪೂಜೆ, ಪುನಸ್ಕಾರದಂತಹ “ಪವಿತ್ರ’ ಎಂದು ಕರೆಯಲ್ಪಡುವ ಧಾರ್ಮಿಕ ಕೈಂಕರ್ಯದಲ್ಲಿ ಅವಳಿಗೆ ನೇರವಾಗಿ ಪಾಲ್ಗೊಳ್ಳುವ ಅವಕಾಶವನ್ನೇ ನಿರಾಕರಿಸಲಾಗುತ್ತದೆ. ತಿಂಗಳಲ್ಲಿ ಮೂರು ದಿನ ಮುಟ್ಟಿಸಿಕೊಳ್ಳಬಾರದವಳಾಗಿ ಅಸ್ಪೃಶ್ಯತೆಯ ನರಳಿಕೆಯನ್ನು ಅನುಭವಿಸುವುದರ ಜೊತೆಗೆ ಈ ನಿಸರ್ಗದತ್ತವಾದ ದೈಹಿಕ ಲಯವನ್ನು “ಮುಚ್ಚಿಟ್ಟು’ಕೊಳ್ಳಬೇಕಾದ ಅನಿವಾರ್ಯತೆಯೂ ಅವಳಿಗಿದೆ. ಇದು ಅವಳ ಖಾಸಗೀತನವನ್ನು ಕಾಯ್ದಿಟ್ಟುಕೊಳ್ಳುವ ಆಯ್ಕೆ ಎಂಬುದಕ್ಕಿಂತಲೂ, ಉಳಿದವರು ಹೇರುವ ಒತ್ತಾಯದ “ಲಜ್ಜೆಯ ಮುಸುಕು’ ಮತ್ತು “ಅಸಹ್ಯ’ ಎಂಬ ಆರೋಪ- ಇವುಗಳಿಗಾಗಿ ಎನ್ನುವುದು ಇನ್ನೂ ಕಸಿವಿಸಿಯ ಸಂಗತಿ. ಪ್ರತಿ ತಿಂಗಳೂ ತನ್ನೊಳಗೆ ಬಲಿಯುವ ಅಂಡಾಣುವನ್ನು ವಿಸರ್ಜಿಸಲು ದೇಹವೇ ಮಾಡಿಕೊಂಡಿರುವ ಈ ವ್ಯವಸ್ಥೆ “ಅಶುದ್ಧತೆ’ ತರುತ್ತದೆ ಎಂದಾದರೆ, ಇದಕ್ಕೆ ಗಂಡೂ ಹೊರತಲ್ಲವಲ್ಲ, ಅವನು ಹೇಗೆ ಪರಿಶುದ್ಧನಾದಾನು?

ಅಯೋಧ್ಯೆಯ ರಾಜಕಾರಣದಲ್ಲಿ ಮಹತ್ತರ ಪಾತ್ರ ವಹಿಸಿದ ಕೈಕೇಯಿಯ ದನಿ ದಶರಥನ ಮರಣಾನಂತರ ಉಡುಗಿ ಹೋಯೆ¤àಕೆ? ಮಂಡೋದರಿಯಂತಹ ಅನನ್ಯ ಸ್ತ್ರೀ ರಾವಣನ ನಂತರ ಏನಾದಳು?

“ದೀರ್ಘ‌ ಸುಮಂಗಲೀ ಭವ’ ಎಂಬ ಆಶೀರ್ವಾದಕ್ಕೆ ಸಾವಿರ ಬಾರಿ ತಲೆಯೊಡ್ಡುತ್ತಲೇ ಇದ್ದಕ್ಕಿದ್ದ ಹಾಗೆ “ಅಮಂಗಲೆ’ಯರಾಗುವ ಈ ವಿಧವೆಯರು, ಒಂದೋ ಗಂಡನೊಂದಿಗೇ ಇಲ್ಲವಾಗಬೇಕು. ಇಲ್ಲವೇ, ಇದ್ದೂ ಇಲ್ಲದಂತಿರಬೇಕು ಎಂಬುದು ಈ ಜಗದ ನಿಯಮ.

“ಮಾ… ನಿಷಾದ’ ಸಂಗಾತಿ ಅಗಲಿದಾಗ ಆಗುವ ನೋವು, ಸಂಕಟಗಳು ಸ್ತ್ರೀ-ಪುರುಷರಿಬ್ಬರಿಗೂ ಸಮಾನ. ಆದರೆ ಆ ಅಗಲಿಕೆಯ ನಂತರ ಈರ್ವರೂ ಕಾಣುವ ಬದುಕು ಮಾತ್ರ ಎಷ್ಟೊಂದು ಭಿನ್ನವಾಗಿರುತ್ತದೆ? ಹೆಂಡತಿಯಿರದ ಅನನುಕೂಲ, ನೋವು ಮಾತ್ರ ವಿಧುರನನ್ನು ಕಾಡಿದರೆ, ಇವುಗಳ ಜೊತೆ, ಬಣ್ಣವೇ ಇರಬಾರದ ಬದುಕು ವಿಧವೆಯನ್ನು ಕಾಯುತ್ತಿರುತ್ತದೆ. ಅವಳ ನಡೆ, ನುಡಿ, ಊಟ, ಉಡುಪು ಎಲ್ಲವೂ ಹೀಗೆಯೇ ಇರಬೇಕು ಎಂಬುದು ಎಂದೋ ಮಾಡಿಟ್ಟ ಕಟ್ಟಳೆ. ಅರಿಶಿನ-ಕುಂಕುಮದ ಬಟ್ಟಲು “ನಿನಗಿನ್ನು ಇದು ಇಲ್ಲ’ ಎಂದು ಮೂತಿ ತಿರುವುತ್ತದೆ. ಇವಳ “ಒಳ್ಳೆ’ಯದನ್ನೇ ಬಯಸುವ ಕಣ್ಣುಗಳು “ಸಹಜ ಸಲಿಗೆ ನಿನಗೆ ಸಲ್ಲ’ ಎಂದು ಎಚ್ಚರಿಸಿ, ಮೂಲೆಯನ್ನು ತೋರಿಸುತ್ತಲೇ ಇರುತ್ತವೆ. “ಕಟ್ಟುಕಟ್ಟಳೆ’ಯ ಹಂಗು ತನಗಿಲ್ಲ ಎಂದು ಅವಳು ಬದುಕುತ್ತಿದ್ದಾಳೆಂದೇ ಭಾವಿಸಿದರೂ ಆಧುನಿಕ ವೇಷ ತೊಟ್ಟು ಸಾಂಪ್ರದಾಯಿಕ ಮನಸ್ಸುಗಳು ಅವಳನ್ನು ಖಾಯಂ ಆಗಿ “ಅವನ ವಿಧವೆ’ ಎಂದೇ ಕರೆಯುತ್ತ ಸಹಾನುಭೂತಿಯೋ, ಸಸಾರವೋ, ಒಂದು ಸಹಜವಲ್ಲದ ಭಾವದಲ್ಲಿ ಅವಳನ್ನು ತೋಯಿಸುತ್ತಲೇ ಅವಳು ಮುಜುಗರದಿಂದ ಮುರುಟಿಹೋಗುವಂತೆ ನೋಡಿಕೊಳ್ಳುತ್ತವೆ. ಆ ಅವಳಿಗೆ ಬೇರೆ “ಗುರುತೂ’ ಇದೆಯಲ್ಲವೆ? ಇನ್ನೂ ಎಷ್ಟು ಕಾಲ ಅವಳು ಕಾಯಬೇಕು ಈ “ವಿಧವೆ’ ಎಂಬ ಗುರುತುಚೀಟಿಯನ್ನು ನಿವಾರಿಸಿಕೊಳ್ಳಲು?

ರಾಮನಿಲ್ಲದ ಸೀತೆಯ ಬದುಕು ದುಸ್ತರವಾಗಿತ್ತು, ಒಪ್ಪುತ್ತೇನೆ. ಆದರೆ, ಅದು ರಾಮನ ವಿಷಯದಲ್ಲೂ ಸತ್ಯವಷ್ಟೇ! ಸೀತೆಯಿರದ ನಿರ್ವಾತವನ್ನೇ ಅವನು ಅಪ್ಪಿಕೊಂಡಿದ್ದನಲ್ಲ! ಹೀಗಿದ್ದರೂ ಸೀತೆಯ ಅಗಲಿಕೆ ರಾಜಾರಾಮನ ಧ್ಯೇಯೋದ್ದೇಶಗಳ ಈಡೇರಿಕೆಗೆ ಅಡ್ಡಿ ತರಲಿಲ್ಲ. ಹಾಗೆಯೇ ರಾಮನಿಲ್ಲದ ಸೀತೆಯೂ ವಾಲ್ಮೀಕಿ ಆಶ್ರಮದಲ್ಲಿ ತನ್ನತನವನ್ನು ಸ್ಥಾಪಿಸಿಕೊಂಡಿದ್ದಳಲ್ಲವೆ? ಅದನ್ನು ಗುರುತಿಸುವ ಕಣ್ಣುಗಳು, ಗೌರವಿಸುವ ಮನಸ್ಸುಗಳು ಬಹುವಾಗಬೇಕು ಅಷ್ಟೆ.

“ಹುಟ್ಟು’ ಅಥವಾ “ಬದುಕಿನಲ್ಲಿ ಘಟಿಸಬಹುದಾದ ಆಕಸ್ಮಿಕಗಳು’ ಇವು ಯಾವುವೂ ಈ ಹೆಣ್ಣುಗಳ ಆಶೋತ್ತರಗಳನ್ನು ಹತ್ತಿಕ್ಕಬಾರದು. ತನ್ನ ಬದುಕಿನ ಬಗೆಗೆ ಕನಸು ಕಟ್ಟಬಲ್ಲ ಅವಳ ದೃಷ್ಟಿ ಕಣ್ಣೀರಿನಿಂದ ಮಂಜಾಗದಿರಲಿ, ತಾನು ಬಯಸಿದ ದಾರಿಯನ್ನು ಒಡೆಯುತ್ತ ಸಾಗಬೇಕೆಂಬ ಅವಳ ಛಲ, ನೋವು-ಅಪಮಾನದಿಂದ ಕುಗ್ಗದಿರಲಿ. ಆಗ ರೀತಿ-ರಿವಾಜುಗಳ ಮುಸುಕನ್ನು ಸರಿಸಿ, ಆಕೆ ದಿಗದುದ್ದ ಬೆಳೆಯಬಲ್ಲಳು.
ಅಲ್ಲವೆ, ಸೀತಾ!

ಅಭಿಲಾಷಾ ಎಸ್‌.

ಟಾಪ್ ನ್ಯೂಸ್

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.