ಶಹನಾ ಮತ್ತು ಲಿಪ್‌ಲಾಕ್
Team Udayavani, Oct 13, 2017, 6:15 AM IST
ಶಹನಾ ಗೋಸ್ವಾಮಿ ಉಳಿದ ನಾಯಕಿಯರಂತೆ ತುಂಬ ಚಿತ್ರಗಳಲ್ಲಿ ನಟಿಸದೇ ಇರಬಹುದು. ಆದರೆ, ನಟಿಸಿದ ಚಿತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ ಗಮನ ಸೆಳೆದಿದ್ದಾಳೆ. ಅದು ರಾಕ್ ಆನ್ ಇರಬಹುದು, ರುಬರು ಅಥವಾ ಹೀರೋಯಿನ್ ಇರಬಹುದು ಶಹನಾ ಪಾತ್ರ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.
ಬರೀ ನಾಯಕಿಯಾಗಿ ಮರಸುತ್ತುವ ಪಾತ್ರಕ್ಕೆ ಸೀಮಿತವಾಗದೆ ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚುವ ಮೂಲಕ ಸಿಕ್ಕಿದ ಅಲ್ಪ ಅವಕಾಶಗಳಲ್ಲೇ ಬಹುಕಾಲ ನೆನಪಿನಲ್ಲಿ ಉಳಿಯುವಂಥ ಅಭಿನಯ ನೀಡುವಲ್ಲಿ ಶಹನಾ ಸೈ ಎನಿಸಿಕೊಂಡಿದ್ದಾಳೆ. ಇತ್ತೀಚೆಗೆ ಬಿಡುಗಡೆಯಾಗಿರುವ ತು ಹೈ ಮೇರಾ ಸಂಡೇ ಚಿತ್ರ ಕೂಡ ಇದಕ್ಕೆ ಹೊರತಾಗಿಲ್ಲ. ಕಿರುತೆರೆ ನಟ ಬರುಣ್ ಸೋಬಿ¤ ನಾಯಕನಾಗಿರುವ ತು ಹೈ ಮೇರಾ ಸಂಡೇ ಬಾಲಿವುಡ್‌ನ ಹೈಪ್ರೊಫೈಲ್ ಹೀರೊ ಅಥವಾ ನಿರ್ದೇಶಕರನ್ನೊಳಗೊಂಡಿಲ್ಲ. ಆದರೆ, ವಿಭಿನ್ನವಾದ ಕತೆ ಮತ್ತು ಕಲಾವಿದರ ಅಭಿನಯದಿಂದ ಈ ಚಿತ್ರ ಗಮನ ಸೆಳೆದಿದೆ.
ಶಹನಾ ಮತ್ತು ಸೋಬಿ¤ಯ ಚುಂಬನ ದೃಶ್ಯ ಕೂಡ ಭಾರೀ ಚರ್ಚೆಗೊಳಗಾಗಿದೆ. ಈಗ ಬಾಲಿವುಡ್ ಸಿನೆಮಾಗಳಲ್ಲಿ ಲಿಪ್‌ಲಾಕ್ ಚರ್ಚಿಸುವಂಥ ವಿಷಯವೇ ಅಲ್ಲ. ಹಾಗಿದ್ದರೂ ಶಹನಾಳ ಲಿಪ್‌ಲಾಕ್ ಚರ್ಚೆಗೊಳಗಾಗಿರುವುದು ಅದರ ಕಲಾತ್ಮಕತೆಯಿಂದಾಗಿ. ದಿಲ್ಲಿಯ ಹುಡುಗಿ ಶಹನಾ ಬಾಲಿವುಡ್‌ಗೆ ಬಂದು ಆಗಲೇ 11 ವರ್ಷವಾಗಿದೆ. ಯೋ ಹೋತಾ ಥೋ ಕ್ಯಾ ಹೋತಾ ಅವಳು ನಟಿಸಿದ ಮೊದಲ ಚಿತ್ರ. ಅನಂತರ ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್, ಫಿರಾಕ್, ಜಶ್°, ಮಿರ್ಚ್, ಬ್ರೇಕ್ ಕೆ ಬಾದ್, ತೇರಾ ಕ್ಯಾ ಹೋಗಾ ಜಾನಿ, ರಾ ಒನ್, ಮಿಡ್‌ನೈಟ್ ಚಿಲ್ಡ್ರನ್ ಎಂದು ಹಲವಾರು ಚಿತ್ರಗಳಲ್ಲಿ ನಾನಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಚಿತ್ರ ಗೆಲ್ಲಲಿ ಸೋಲಲಿ ಶಹನಾಳ ಪಾತ್ರ ಶ್ಲಾಘನೆಗೆ ಪಾತ್ರವಾಗಿದೆ. ಇದು ಶಹನಾಳ ವೈಶಿಷ್ಟé. ಕೆಲ ಸಮಯ ಬಾಲಿವುಡ್ ಗೊಡವೆಯೇ ಬೇಡವೆಂದು ಪ್ಯಾರಿಸ್‌ಗೆ ಹೋಗಿ ನೆಲೆಯಾಗಿದ್ದ ಶಹನಾ ತು ಹೈ ಮೇರಾ ಸಂಡೇಗಾಗಿ ಮತ್ತೂಮ್ಮ ಬಂದಿದ್ದಾಳೆ. ಇದರ ಬೆನ್ನಿಗೆ ಹಇಲವು ಚಿತ್ರಗಳು ಶಹನಾ ಬುಟ್ಟಿಗೆ ಬಿದ್ದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.