ಶೇನಾಜ್‌ ಟ್ರೆಶರಿವಾಲಾ


Team Udayavani, Sep 29, 2017, 7:10 AM IST

shenaz-treasurywala.jpg

ಶೇನಾಜ್‌ ಟ್ರೆಶರಿವಾಲಾ ಇದು ಬಾಲಿವುಡ್‌ನ‌ಲ್ಲಿ ಅಪರೂಪಕ್ಕೊಮ್ಮೆ ಕೇಳಿ ಬರುವ ಹೆಸರು. ಹೆಚ್ಚಿನವರಿಗೆ ಹೀಗೊಬ್ಬಳು ನಟಿ ಇರುವ ವಿಷಯ ಕೂಡ ಗೊತ್ತಿಲ್ಲ. ಇದಕ್ಕೆ ಕಾರಣ ಶೇನಾಜ್‌ ಎಲ್ಲರಂತೆ  ಪದೇ ಪದೇ ಸಿನೆಮಾಗಳಲ್ಲಿ ಕಾಣಿಸಿಕೊಳ್ಳದಿರುವುದು. ಹಾಗೆಂದು ಶೇನಾಜ್‌ ಬಹಳ ಚೂಸಿ ಎಂದೇನೂ ಅಲ್ಲ. 

ನಟನೆ ಅವಳಿಗೆ ಒಂದು ರೀತಿಯಲ್ಲಿ ಪಾರ್ಟ್‌ಟೈಮ್‌ ವೃತ್ತಿಯಿದ್ದಂತೆ. ನಟಿಸಬೇಕೆಂಬ ಮನಸಾದಾಗ, ಒಳ್ಳೆಯ ಕತೆ ಸಿಕ್ಕಿದರೆ, ಮೂಡ್‌ ಸರಿ ಇದ್ದರೆ ಸೈ ಎನ್ನುತ್ತಾಳೆ. ಇಲ್ಲದಿದ್ದರೆ ಮುಲಾಜಿಲ್ಲದೆ ಆಗುವುದಿಲ್ಲ ಎಂದು ಹೇಳಿ ಬಿಡುತ್ತಾಳೆ. ಹಾಗಾದರೆ ಉಳಿದ ಸಮಯದಲ್ಲಿ ಶೇನಾಜ್‌ ಏನು ಮಾಡುತ್ತಾಳೆ? ತಿರುಗಾಡುವುದು ಶೇನಾಜ್‌ಳ ಮೆಚ್ಚಿನ ಹವ್ಯಾಸ. ತಿರುಗಾಡುವುದೆಂದರೆ ಒಟ್ಟಾರೆ ಎಲ್ಲಿಗಾದರೂ ಹೋಗಿ ಬರುವುದಲ್ಲ. ಹೊಸ ಹೊಸ ದೇಶ ಪ್ರದೇಶಗಳಿಗೆ ಹೋಗಿ ಅಲ್ಲಿನ ಜನರ ಜತೆಗೆ ಬೆರೆತು ಅಲ್ಲಿರುವ ವಿಶೇಷತೆಗಳನ್ನು ಕಂಡು ಅನುಭವಿಸಿ ಆ ಕುರಿತು ಬರೆಯುವುದು, ವೀಡಿಯೊ ಶೂಟ್‌ ಮಾಡಿಕೊಂಡು ಬಂದು ತೋರಿಸುವುದು ಇವೆಲ್ಲ ಶೇನಾಜ್‌ಗೆ ತುಂಬ ತೃಪ್ತಿ ಕೊಡುವ ಕೆಲಸ. 

ವಿಶೇಷವೆಂದರೆ ಈಗ ಅವಳ ಪಾಲಿಗೆ ಈ ಹವ್ಯಾಸವೇ ಪೂರ್ಣ ಪ್ರಮಾಣದ ವೃತ್ತಿಯಾಗಿದೆ. ಅದರಲ್ಲೂ ರಸ್ತೆ ಪ್ರಯಾಣವನ್ನೇ ಅವಳು ಹೆಚ್ಚಾಗಿ ಆರಿಸಿಕೊಳ್ಳುತ್ತಾಳೆ. ಒಂದು ಪ್ರದೇಶದ ನಿಜವಾದ ಅರಿವು ಆಗ ಬೇಕಾದರೆ ರಸ್ತೆ ಮೂಲಕ ಪ್ರಯಾಣಿಸಬೇಕು ಎನ್ನುವುದು ಶೇನಾಜ್‌ ಅನುಭವದಿಂದ ಕಂಡುಕೊಂಡಿರುವ ಸತ್ಯ. ಈ ರೀತಿ ಪ್ರವಾಸ ಮಾಡಿಯೇ ಅವಳು ಹಲವಾರು ಲೇಖನ ಮತ್ತು ಪುಸ್ತಕಗಳನ್ನು ಬರೆದಿದ್ದಾಳೆ. ಟಿವಿಗಳಿಗೆ ಅನೇಕ ಕಾರ್ಯಕ್ರಮ ಮಾಡಿಕೊಟ್ಟಿದ್ದಾಳೆ. ಕರ್ನಾಟಕ ಮತ್ತು ಓಲಾ ಟ್ಯಾಕ್ಸಿ ಅವಳ ಜತೆಗೆ ಪ್ರವಾಸೋದ್ಯಮದ ಒಪ್ಪಂದ ಮಾಡಿಕೊಂಡಿದೆ. ಇನ್ನು ಶೇನಾಜ್‌ಳ ಸಿನೆಮಾ ಕುರಿತು ಹೇಳುವುದಾದರೆ ಅವಳು ಮೊದಲು ನಟಿಸಿದ್ದು ತೆಲುಗಿನಲ್ಲಿ. ಹಿಂದಿಯಲ್ಲಿ ಇಶ್ಕ್ವಿಶ್ಕ್, ಹಮ್‌ತುಮ್‌, ಉಮರ್‌, ಆಗೇ ಸೇ ರೈಟ್‌, ರೇಡಿಯೊ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದರೂ ಯಾಕೋ ಬಾಲಿವುಡ್‌ ಈ ಅದ್ಭುತ ಚೆಲುವೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸದ್ಯಕ್ಕೆ ಸೈಫ್ ಅಲಿಖಾನ್‌ ಎದುರು ಕಾಲಾಕಾಂಡಿ ಎಂಬ ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾಳೆ. ಇದರ ಜತೆಗೆ ದ ಬಿಗ್‌ ಸಿಕ್‌ ಮತ್ತು ಬ್ರೌನ್‌ ನೇಶನ್‌ ಎಂಬೆರಡು ಇಂಗ್ಲಿಶ್‌ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. 

ಎಲ್ಲ ನಟಿಯರಂತೆ ಸಿನೆಮಾ ರಂಗಕ್ಕೆ ಬರುವ ಮೊದಲು ಶೇನಾಜ್‌ ಮಾಡೆೆಲ್‌ ಆಗಿದ್ದಳು. ಪಾರ್ಸಿ ಸಮುದಾಯಕ್ಕೆ ಸೇರಿದ ಶೇನಾಜ್‌ಳ ತಂದೆ ಮರ್ಚಂಟ್‌ ಮೆರಿನ್‌ ಇಂಜಿನಿಯರ್‌ ಆಗಿದ್ದಾರೆ. ಮೂರು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಸಚಿನ್‌ ತೆಂಡೂಲ್ಕರ್‌, ಅಮಿತಾಭ್‌ ಬಚ್ಚನ್‌, ಸಲ್ಮಾನ್‌ ಖಾನ್‌, ಶಾರೂಕ್‌ ಖಾನ್‌, ಅಮೀರ್‌ ಖಾನ್‌, ಅನಿಲ್‌ ಅಂಬಾನಿ ಸೇರಿದಂತೆ ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ಮಹಿಳಾ ಸುರಕ್ಷತೆಯ ಬಗ್ಗೆ ಬಹಿರಂಗ ಪತ್ರ ಬರೆದಾಗ ಶೇನಾಜ್‌ ಹೆಸರು ಕೆಲ ದಿನ ಚರ್ಚೆಯಲ್ಲಿತ್ತು. ಮುಂಬಯಿಯಲ್ಲಿ ಶಾಲಾಕಾಲೇಜು ಮುಗಿಸಿದ ಬಳಿಕ ನ್ಯೂಯಾರ್ಕ್‌ಗೆ ಹೋಗಿ ಅಭಿನಯ, ಬರವಣಿಗೆ ಮತ್ತಿತರ ವಿಚಾರಗಳ ಬಗ್ಗೆ ಕಲಿತುಕೊಂಡು ಬಂದಿರುವ ಪ್ರತಿಭಾವಂತೆ ಆಕೆ. 

ಟಾಪ್ ನ್ಯೂಸ್

10

‌Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ

Hanuma-mala

SriRangapattana: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶ ಯತ್ನ

1-KMY

UKP; ಕೃಷ್ಣೆಯ ಮೌನ ರೋದನ: ಇನ್ನೂ ಕೈಗೂಡದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

1-phd

PhD; ಅಪಮೌಲ್ಯಗೊಳ್ಳುತ್ತಿದೆಯೇ ಅತ್ಯುನ್ನತ ಶೈಕ್ಷಣಿಕ ಪದವಿ?

11

Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ

NZ-ENg

England vs Newzeland Test: ನ್ಯೂಜಿಲ್ಯಾಂಡ್‌ ಹಿಡಿತದಲ್ಲಿ ಹ್ಯಾಮಿಲ್ಟನ್‌ ಟೆಸ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

10

‌Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ

Hanuma-mala

SriRangapattana: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶ ಯತ್ನ

1-KMY

UKP; ಕೃಷ್ಣೆಯ ಮೌನ ರೋದನ: ಇನ್ನೂ ಕೈಗೂಡದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

1-phd

PhD; ಅಪಮೌಲ್ಯಗೊಳ್ಳುತ್ತಿದೆಯೇ ಅತ್ಯುನ್ನತ ಶೈಕ್ಷಣಿಕ ಪದವಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.