ಶಾಪಿಂಗೋ ಶಾಪಿಂಗು!
Team Udayavani, Jul 26, 2019, 5:00 AM IST
ಶಾಪಿಂಗ್ ಹೋಗೋಕೆ ಇಷ್ಟಪಡದ ಹುಡುಗಿಯರಿದ್ದಾರಾ? ಖಂಡಿತ ಇರಲಿಕ್ಕಿಲ್ಲ. ತಿಂಗಳ ಮೊದಲು ಸಂಬಳ ಕೈಗೆ ಬಂದಾಗ ಶಾಪಿಂಗ್, ತಿಂಗಳ ಕೊನೆಯಲ್ಲಿ ದುಡ್ಡು ಉಳಿದಿದ್ದರೂ ಶಾಪಿಂಗ್… ಹೀಗೆ ಸದಾ ಶಾಪಿಂಗ್ ಧ್ಯಾನದಲ್ಲಿರುವ ಸ್ತ್ರೀಯರೇ, ಕಂಟ್ರೋಲ್! ನೋಡೋಕೆ ಚಂದ ಇದೆ ಅಂತಲೋ, ಡಿಸ್ಕೌಂಟ್ ಸಿಗುತ್ತಿದೆ ಎಂಬ ಕಾರಣಕ್ಕೋ ಅನಗತ್ಯ ವಸ್ತುಗಳನ್ನು ಖರೀದಿಸುವ ಹುಚ್ಚು ಈಗ ಎಲ್ಲರಿಗೂ ಅಂಟಿಕೊಂಡಿದೆ. ಈ ಚಟಕ್ಕೆ ಕಡಿವಾಣ ಹಾಕಿಕೊಳ್ಳಿ. ಹೇಗೆ ಅಂತೀರಾ? ಇವಿಷ್ಟನ್ನು ಟ್ರೈ ಮಾಡಿ…
.ನೀವು ಖರೀದಿಸಬೇಕೆಂದಿರುವ ವಸ್ತುವಿನ ಅಗತ್ಯ ನಿಮಗೆ ಎಷ್ಟಿದೆ ಎಂದು ಲೆಕ್ಕ ಹಾಕಿ.
.ಯಾವುದೇ ವಸ್ತುವನ್ನಾಗಲಿ ಖರೀದಿಸಬೇಕು ಅನ್ನಿಸಿದ ಕೂಡಲೇ ಖರೀದಿ ಮಾಡಬೇಡಿ. ಒಂದೆರಡು ದಿನ ಕಾಯಿರಿ.
.ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಆಕರ್ಷಕ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತವೆ ಮತ್ತು ಪದೇ ಪದೇ ನೋಟಿಫಿಕೇಶನ್‌ಗಳ ಮೂಲಕ ನಿಮ್ಮನ್ನು ಖರೀದಿಗೆ ಪ್ರಚೋದಿಸುತ್ತವೆ. ಹಾಗಾಗಿ, ಶಾಪಿಂಗ್ ಸೈಟ್‌ಗಳ ನೋಟಿಫಿಕೇಷನ್ ಅನ್ನು ಆಫ್ ಮಾಡಿ.
.ಎಲ್ಲ ಶಾಪಿಂಗ್ ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ.
.ಪ್ರತಿ ತಿಂಗಳೂ ಆಯ-ವ್ಯಯದ ಬಜೆಟ್ ರೂಪಿಸಿ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ.
.ಶಾಪಿಂಗ್‌ಗೆ ಮುನ್ನ ನಿಮ್ಮ ಬೇಕು-ಬೇಡಗಳ ಕುರಿತು ಪ್ಲಾನ್ ರೂಪಿಸಿ.
. ಶಾಪಿಂಗ್‌ಗೆ ಹೋಗುವಾಗ ಅಗತ್ಯವಿದ್ದಷ್ಟು ಹಣ ಮಾತ್ರ ಕೊಂಡೊಯ್ಯಿರಿ.
.ಅಗತ್ಯವಿದ್ದರೆ ಮಾತ್ರ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್ ಪಡೆಯಿರಿ.
.ಸ್ನೇಹಿತರ, ಸಂಬಂಧಿಕರ ಬಳಿ ಇದೆ ಎಂಬ ಕಾರಣದಿಂದ ಅನಗತ್ಯ ವಸ್ತುಗಳ ಮೇಲೆ ಹಣ ಸುರಿಯಬೇಡಿ.
.ನಿಮ್ಮ ಶಾಪಿಂಗ್ ಕ್ರೇಜ್ ಮೇಲೆ ಕಡಿವಾಣ ಹಾಕಬಲ್ಲ ವ್ಯಕ್ತಿಯೊಂದಿಗೆ ಶಾಪಿಂಗ್‌ಗೆ ಹೋಗಿ.
.ನಿಮ್ಮ ಒಂದು ದಿನದ ಸಂಬಳ ಎಷ್ಟೆಂದು ಲೆಕ್ಕಹಾಕಿ (ಒಟ್ಟು ಸಂಬಳ/30 ದಿನ) ನಂತರ ನೀವು ಖರೀದಿಸಬೇಕೆಂದಿರುವ ವಸ್ತುವಿನ ಬೆಲೆಯ ಜೊತೆಗೆ ಅದನ್ನು ಹೋಲಿಸಿ. ಆ ವಸ್ತು ಪಡೆಯಲು ನೀವು ಎಷ್ಟು ದಿನ ದುಡೀಬೇಕು ಅಂತ ಯೋಚಿಸಿ. ಆಗ, ಅನಗತ್ಯ ವಸ್ತುಗಳ ಖರೀದಿ ನಿಯಂತ್ರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ
Bantwal: ಕಂಬಳದ ತೆರೆಮರೆ ಹೀರೊಗಳ ದಾಖಲೀಕರಣ
Yellapura: ಬಸ್- ಬೈಕ್ ಡಿಕ್ಕಿ; ಟಯರ್ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.