![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Dec 28, 2018, 6:00 AM IST
ಸ್ತ್ರೀಯಾಗಿ ಬೆಚ್ಚಿಬೀಳಿಸಿದ ಶ್ರದ್ಧಾ ಕಪೂರ್ ಪಾಲಿಗೆ 2018 ಯಶಸ್ವಿ ವರ್ಷ. ಹಾರರ್ ಚಿತ್ರ ಸ್ತ್ರೀ ಬಾಕ್ಸಾಫೀಸಿನಲ್ಲಿ ಹಿಟ್ ಆಗಿರುವುದು ಮಾತ್ರವಲ್ಲದೆ, ಶ್ರದ್ಧಾಳ ನಟನೆಗೂ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ಕೇಳಿ ಬಂದಿದೆ. ಹಾರರ್ ಛಾಯೆ ಇದ್ದರೂ ಸ್ತ್ರೀ ಬರೀ ದೆವ್ವದ ಕತೆಯಾಗಿರಲಿಲ್ಲ. ಸ್ತ್ರೀ ಬಿಡುಗಡೆಯಾದ ಬೆನ್ನಿಗೆ ಶ್ರದ್ಧಾ ತೆಲುಗಿನಲ್ಲಿ ಫುಲ್ ಬ್ಯುಸಿಯಾಗಿದ್ದಾಳೆ. ಪ್ರಭಾಸ್ ನಾಯಕನಾಗಿರುವ ಸಾಹೊ ಚಿತ್ರದಲ್ಲಿ ನಟಿಸುತ್ತಿದ್ದು, ಇದರೊಂದಿಗೆ ತೆಲುಗಿನಿಂದ ಇನ್ನೂ ಹಲವು ಆಫರ್‌ಗಳು ಬರುತ್ತಿವೆಯಂತೆ.
ಈಗಾಗಲೇ ಕಾಲ್‌ಶೀಟ್ ಕೊಟ್ಟಿರುವ ಹಲವು ಚಿತ್ರಗಳು ಇರುವುದರಿಂದ ಶ್ರದ್ಧಾ ತೆಲುಗಿನ ಆಫರ್‌ಗಳನ್ನೆಲ್ಲ ತಿರಸ್ಕರಿಸುತ್ತಿದ್ದಾಳೆ. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನ ಆಧರಿಸಿದ ಸೈನಾ ಶ್ರದ್ಧಾ ಕೈಯಲ್ಲಿರುವ ಮುಖ್ಯ ಚಿತ್ರ. ಜದರ ಜತೆಗೆ ಚಿಚ್ಚೋರ್ ಎಂಬ ಚಿತ್ರದಲ್ಲಿ ಎರಡು ಭಿನ್ನ ಛಾಯೆಯ ಪಾತ್ರಗಳಲ್ಲಿ ಶ್ರದ್ಧಾ ಕಾಣಿಸಿಕೊಳ್ಳಲಿದ್ದಾಳೆ. ಸುಶಾಂತ್ ಸಿಂಗ್ ರಜಪೂತ್ ಚಿತ್ರದ ನಾಯಕ. ಚಿಚ್ಚೋರ್‌ನಲ್ಲಿ ಶ್ರದ್ಧಾಳದ್ದು ಸಂಪೂರ್ಣ ಹೊಸ ಲುಕ್ ಅಂತೆ. ಕೂದಲಿನಿಂದ ಹಿಡಿದು ಉಗುರಿನ ತನಕ ಇಷ್ಟರ ತನಕ ಕಾಣಿಸದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಶ್ರದ್ಧಾ ಹೇಳಿ ಕೊಂಡಿದ್ದಾಳೆ.
You seem to have an Ad Blocker on.
To continue reading, please turn it off or whitelist Udayavani.