ನುಣುಪಾದ ಪಾದ !
Team Udayavani, Feb 15, 2019, 12:30 AM IST
ಚಳಿಗಾಲದಲ್ಲಿ ಪಾದಗಳು ಒರಟಾಗಿ, ಒಡೆಯುವುದು ಸರ್ವೇಸಾಮಾನ್ಯ. ಅಂದದ ಹಾಗೂ ಆರೋಗ್ಯಕರ ಪಾದಗಳಿಗಾಗಿ ಮನೆಯಲ್ಲೇ ಇದೇ ಸರಳ ಆರೈಕೆಯ ಉಪಾಯಗಳು.
ಪಾದ ಸ್ನಾನ
ಒಂದು ಟಬ್‌ನಲ್ಲಿ ಪಾದಗಳು ಮುಳುಗುವಷ್ಟು ಬೆಚ್ಚಗಿನ ನೀರು ತೆಗೆದುಕೊಳ್ಳಬೇಕು. ಅದಕ್ಕೆ ಸ್ವಲ್ಪ ಉಪ್ಪು , 15 ಹನಿ ನಿಂಬೆರಸ, 5 ಚಮಚ ಗ್ಲಿಸರಿನ್ ಹಾಗೂ 2 ಚಮಚ ಗುಲಾಬಿ ಜಲ, ಸ್ವಲ್ಪ ತಾಜಾ ಗುಲಾಬಿ ಪಕಳೆಗಳನ್ನು ಬೆರೆಸಬೇಕು. ಈ ಸುಖೋಷ್ಣ ಸುಗಂಧಿತ ಜಲದಲ್ಲಿ ಪಾದಗಳನ್ನು ಅದ್ದಿ 15-20 ನಿಮಿಷ ಇರಬೇಕು.
ನಯವಾದ ಪ್ಯುಮಿಸ್ ಸ್ಟೋನ್‌ನಿಂದ ಅಥವಾ ಪಾದಗಳ ಸðಬರ್ ಬಳಸಿ, ಪಾದಗಳನ್ನು ಮಾಲೀಶು ಮಾಡಬೇಕು. ತದನಂತರ 2 ಚಮಚ ಗ್ಲಿಸರಿನ್, 2 ಚಮಚ ರೋಸ್‌ವಾಟರ್, ಒಂದು ಚಮಚ ನಿಂಬೆರಸ ಬೆರೆಸಿ ಪಾದಗಳಿಗೆ ಲೇಪಿಸಿ ಮಾಲೀಶು ಮಾಡಬೇಕು. 2 ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆಯಬೇಕು.
ಬೆಣ್ಣೆಹಣ್ಣು ಹಾಗೂ ಬಾಳೆಹಣ್ಣು ಹಾಗೂ ಪಪ್ಪಾಯ ಫೂಟ್ ಮಾಸ್ಕ್
2 ಚಮಚದಷ್ಟು ಬಾಳೆಹಣ್ಣು , 2 ಚಮಚ ಕಳಿತ ಬೆಣ್ಣೆಹಣ್ಣು ಹಾಗೂ 2 ಚಮಚ ಕಳಿತ ಪಪ್ಪಾಯ ಹಣ್ಣು- ಈ ಮೂರು ಹಣ್ಣುಗಳನ್ನು ಚೆನ್ನಾಗಿ ಬೆರೆಸಿ ನಯವಾದ ಪೇಸ್ಟ್ ತಯಾರಿಸಬೇಕು. ಇದನ್ನು ಕಾಲಿಗೆ ಲೇಪಿಸಿ ಮಾಲೀಶು ಮಾಡಿ 1/2 ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆದರೆ ಪಾದಗಳು ಸ್ನಿಗ್ಧ ಹಾಗೂ ಕಾಂತಿಯುತವಾಗಿ ಹೊಳೆಯುತ್ತವೆ.
ಜೇನುಮೇಣ ಹಾಗೂ ಸಾಸಿವೆ ಎಣ್ಣೆಯ ಲೇಪ
2 ಚಮಚ ಜೇನುಮೇಣವನ್ನು ಕರಗಿಸಿ ಅದಕ್ಕೆ ಸಾಸಿವೆ ಎಣ್ಣೆಯನ್ನು (2 ಚ) ಬೆರೆಸಬೇಕು. ಚೆನ್ನಾಗಿ ಮಿಶ್ರಮಾಡಿದ ಬಳಿಕ ಪಾದಗಳಿಗೆ ಲೇಪಿಸಿ ವರ್ತುಲಾಕಾರದಲ್ಲಿ ಮಾಲೀಶುಮಾಡಬೇಕು. ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆಯಬೇಕು. ಪಾದಗಳಲ್ಲಿ (ಹಿಮ್ಮಡಿಯಲ್ಲಿ) ಬಿರುಕು, ತುರಿಕೆ ಕಂಡುಬಂದಾಗ ಜೇನುಮೇಣ, ಸಾಸಿವೆ ಎಣ್ಣೆಯ ಈ ಮಿಶ್ರಣಕ್ಕೆ ಜೇನುತುಪ್ಪ ಬೆರೆಸಿ ರಾತ್ರಿ ಒಡೆದ ಹಿಮ್ಮಡಿಗಳಿಗೆ ಲೇಪಿಸಬೇಕು. ಮರುದಿನ ಬೆಚ್ಚಗೆ ನೀರಿನಲ್ಲಿ ಕಾಲು ಅದ್ದಿ , ಸðಬರ್ ಮೂಲಕ ಅಥವಾ ಹತ್ತಿಯ ಉಂಡೆಯಲ್ಲಿ ಪಾದಗಳನ್ನು ಮಾಲೀಶುಮಾಡಿ ತೊಳೆದರೆ ಹಿಮ್ಮಡಿ ಒಡೆಯುವುದು ಗುಣವಾಗುತ್ತದೆ.
ಪಾದಗಳಿಗೆ ಸ್ಕ್ರಬ್
5 ಚಮಚ ಅಕ್ಕಿಹಿಟ್ಟು , 1 ಚಮಚ ಜೇನು, ಆಲಿವ್ ತೈಲ 2 ಚಮಚ, ಸ್ವಲ್ಪ ಆ್ಯಪಲ್ ಸಿಡಾರ್ ವಿನೆಗರ್- ಇವೆಲ್ಲವನ್ನೂ ಬೆರೆಸಿ ಪೇಸ್ಟ್ ತಯಾರಿಸಬೇಕು. ಮೊದಲು ಬೆಚ್ಚಗಿನ ನೀರಿನಲ್ಲಿ ಕಾಲು ಅದ್ದಿ 10 ನಿಮಿಷ ಬಿಡಬೇಕು. ತದನಂತರ ಈ ಫೂಟ್ ಸðಬ್ ಲೇಪಿಸಿ ಮೃದುವಾಗಿ ಪಾದಗಳನ್ನು ಮಾಲೀಶು ಮಾಡಬೇಕು. 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆಯಬೇಕು. ಇದರಿಂದ ಪಾದಗಳು ಮೃದು ಹಾಗೂ ಕಾಂತಿಯುತವಾಗುತ್ತವೆ.
ಪಾದಗಳ ಕಾಂತಿವರ್ಧಕ ತೈಲ
ಎಳ್ಳೆಣ್ಣೆ 1/2 ಕಪ್, 1/4 ಚಮಚ ಅರಸಿನ ಹುಡಿ, 1 ಚಮಚ ಚಂದನದ ಪುಡಿ, ಎಲೋವೆರಾ ಎಲೆಯ ಸಣ್ಣ ತುಂಡುಗಳು 8-10 ಇವೆಲ್ಲವನ್ನೂ ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ಈ ತೈಲವನ್ನು ನಿತ್ಯ ಪಾದಗಳಿಗೆ ಲೇಪಿಸಿ ಮಾಲೀಶು ಮಾಡಬೇಕು. ರಾತ್ರಿ ಲೇಪಿಸಿ ಮರುದಿನ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆದರೆ ಪಾದಗಳು ಸ್ನಿಗ್ಧ ಹಾಗೂ ಸುಂದರವಾಗುತ್ತವೆ. ಪಾದಗಳಲ್ಲಿ ಬಿರುಕು, ತುರಿಕೆ, ಕಜ್ಜಿ ಇರುವಾಗ ಇದೇ ಎಣ್ಣೆಗೆ 2 ಚಮಚ ಕಹಿಬೇವಿನ ಎಣ್ಣೆ , 4 ತುಳಸೀ ಎಲೆಗಳನ್ನು ಬೆರೆಸಿ ಕುದಿಸಬೇಕು. ಈ ತೈಲ ಲೇಪಿಸಿದರೆ ಪರಿಣಾಮಕಾರಿ.
ಓಟ್‌ಮೀಲ್ ಲೇಪ
5 ಚಮಚ ಓಟ್‌ಮೀಲ್‌ನ ಪುಡಿಗೆ 10-15 ಹನಿ ಆಲಿವ್‌ತೈಲ ಬೆರೆಸಿ, ಸ್ವಲ್ಪ ಹಾಲು ಹಾಗೂ ನೀರು ಬೆರೆಸಿ ಪೇಸ್ಟ್ ತಯಾರಿಸಬೇಕು. ಈ ಲೇಪವನ್ನು ಪಾದವನ್ನು ಚೆನ್ನಾಗಿ ತೊಳೆದು ಬಳಿಕ ಲೇಪಿಸಬೇಕು. ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ಕಾಲು ತೊಳೆದರೆ ಪಾದಗಳ ಒರಟು, ಒಣ ಚರ್ಮ ಮೃದು ಹಾಗೂ ಸ್ನಿಗ್ಧವಾಗಿ ಹೊಳೆಯುತ್ತದೆ. 2 ದಿನಗಳಿಗೊಮ್ಮೆ ಈ ಲೇಪ ಬಳಸಿದರೆ ಕಾಲು ಒಡೆಯುವುದು ನಿವಾರಣೆಯಾಗುವುದು.
ಕೊಬ್ಬರಿ ಎಣ್ಣೆ , ಎಲೊವೇರಾ ತಿರುಳಿನ ಫೂಟ್ ಮಾಸ್ಕ್
2 ಚಮಚ ಎಲೋವೆರಾ ತಿರುಳಿಗೆ, 4 ಚಮಚ ಕೊಬ್ಬರಿ ಎಣ್ಣೆ , 1 ಚಮಚ ಜೇನು ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಈ ಮಿಶ್ರಣವನ್ನು ಪಾದಗಳಿಗೆ ಲೇಪಿಸಿ, ವರ್ತುಲಾಕಾರದಲ್ಲಿ ಮಸಾಜು ಮಾಡಬೇಕು. ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆದರೆ ಪಾದಗಳಲ್ಲಿ ರಕ್ತಸಂಚಾರ ವೃದ್ಧಿಯಾಗಿ, ಕಾಲು ಸ್ನಿಗ್ಧ, ಮೃದುವಾಗುತ್ತವೆ.
ಪಾದಗಳಿಗೆ ಮಾಯಿಶ್ಚರೈಸರ್ ಕ್ರೀಮ್
ಕೊಬ್ಬರಿ ಎಣ್ಣೆ 20 ಚಮಚ, ಎಲೋವೆರಾ ತಿರುಳು 20 ಚಮಚ, ಲ್ಯಾವೆಂಡರ್ ತೈಲ 5 ಹನಿಗಳಷ್ಟು.
ವಿಧಾನ: ಒಂದು ಬೌಲ್‌ನಲ್ಲಿ ಕೊಬ್ಬರಿ ಎಣ್ಣೆ , ಎಲೋವೆರಾ ತಿರುಳು ಬೆರೆಸಿ ಚೆನ್ನಾಗಿ ಕಲಕಬೇಕು. ಕೊನೆಯಲ್ಲಿ ಲ್ಯಾವೆಂಡರ್ ತೈಲ ಬೆರೆಸಿ ಮಿಶ್ರಮಾಡಬೇಕು. ಈ ತೇವಾಂಶಕಾರಕ ಕ್ರೀಮನ್ನು ನಿತ್ಯ ರಾತ್ರಿ ಮಲಗುವಾಗ ಪಾದಗಳಿಗೆ ಲೇಪಿಸಿದರೆ ಕಾಲುಗಳ ಸೌಂದರ್ಯವರ್ಧಕ, ದಣಿದ ಪಾದಗಳಿಗೂ ಆರಾಮದಾಯಕವಾಗಿದೆ.
ಗ್ರೀನ್‌ಟೀ, ಗ್ಲಿಸರಿನ್ ಮಾಯಿಶ್ಚರೈಸರ್ ಕ್ರೀಮ್
4 ಚಮಚ ಗ್ರೀನ್ ಟೀ, 4 ಚಮಚ ಗ್ಲಿಸರಿನ್, 1 ಚಮಚ ಜೇನು, 1/2 ಚಮಚ ನಿಂಬೆರಸ- ಇವೆಲ್ಲವನ್ನೂ ಒಂದು ಬೌಲ್‌ನಲ್ಲಿ ಚೆನ್ನಾಗಿ ಬೆರೆಸಿ ಕ್ರೀಮ್ ತಯಾರಿಸಬೇಕು. ಚಳಿಗಾಲದಲ್ಲಿ ತೇವಾಂಶವರ್ಧಕವಾಗಿ ಇದನ್ನು ನಿತ್ಯ ರಾತ್ರಿ ಪಾದಗಳಿಗೆ ಲೇಪಿಸಿದರೆ ಪಾದಗಳ ಬಿರುಕು, ಶುಷ್ಕತೆ ನಿವಾರಣೆಯಾಗಿ, ನುಣುಪು ಹೆಚ್ಚುತ್ತದೆ.
ಉಣ್ಣೆಯ ಕಾಲುಚೀಲ ಅಥವಾ ಹತ್ತಿಯ ಕಾಲುಚೀಲಗಳ ಬಳಕೆ, ಮೃದುವಾದ ಚಪ್ಪಲಿಗಳ ಧಾರಣೆ, ದಿನಕ್ಕೆ 3 ಲೀಟರ್‌ನಷ್ಟು ನೀರಿನ ಸೇವನೆ, ತಾಜಾ ಹಣ್ಣು , ತರಕಾರಿ, ಒಣಹಣ್ಣುಗಳ ಸೇವನೆ ಪಾದಗಳ ಸೌಂದರ್ಯ, ಆರೋಗ್ಯವರ್ಧಕಗಳಾಗಿವೆ.
ಡಾ. ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.