ಸೋನಮ್‌ಳ ತಾಳಮೇಳ
Team Udayavani, Apr 20, 2018, 6:15 AM IST
ಯಶಸ್ವಿ ನಟಿಯರ ಪೈಕಿ ಒಬ್ಬಳಾಗಿರುವ ಸೋನಮ್ ಕಪೂರ್ ಹಸೆಮಣೆಯೇರಲು ತಯಾರಾಗಿದ್ದಾಳೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋನಮ್ ಮದುವೆ ಹಲವು ವೈಶಿಷ್ಟéದಿಂದ ಕೂಡಿರಲಿದೆ.
ಸೋನಮ್‌ಳನ್ನು ಹಲವು ಚಿತ್ರಗಳಲ್ಲಿ ಕುಣಿಸಿರುವ ಬಾಲಿವುಡ್‌ನ ನೃತ್ಯ ನಿರ್ದೇಶಕಿ ಫರ್ಹಾ ಖಾನ್ ಇದೀಗ ಮದುವೆಯಲ್ಲೂ ಕುಣಿಸಲಿದ್ದಾಳಂತೆ. ಮದುವೆಯ ಮುಂಚಿತವಾಗಿ ನಡೆಯುವ “ಸಂಗೀತ್’ ಕಾರ್ಯಕ್ರಮದ ನೃತ್ಯ ನಿರ್ದೇಶನ ಮಾಡಲು ಕಪೂರ್ ಮನೆಯವರು ಫರ್ಹಾಳನ್ನು ವಿನಂತಿಸಿದ್ದಾರೆ. ಸಂಗೀತ್ ಎಂದರೆ ನಮ್ಮಲ್ಲಿ ಮೆಹಂದಿ ಇದ್ದ ಹಾಗೇ. ಮದುವೆ ಮನೆಯವರೆಲ್ಲರೂ ಸಂಭ್ರಮದಿಂದ ಹಾಡು ಹೇಳಿ ಕುಣಿಯುವ ಸಾಂಪ್ರದಾಯಿಕ ವಿಧಿಯಿದು. ಉತ್ತರಭಾರತದಲ್ಲಿ ಮೆಹಂದಿಗಿಂತ ಸಂಗೀತ್ ಹೆಚ್ಚು ಮಹತ್ವ ಪಡೆದಿದೆ.
ಶ್ರೀಮಂತರ ಮದುವೆಗಳಲ್ಲಿ ಸಂಗೀತ್‌ಗೆ ನುರಿತ ನೃತ್ಯ ನಿರ್ದೇಶಕರ ತಂಡವೇ ನೃತ್ಯ ನಿರ್ದೇಶನ ಮಾಡುತ್ತದೆ. ಹೀಗೆ ಸೋನಮ್‌ಳ ಸಂಗೀತ್‌ನೃತ್ಯ ನಿರ್ದೇಶನದ ಹೊಣೆ ಫರ್ಹಾಳ ಹೆಗಲೇರಿದೆ. ವಿಶೇಷವೆಂದರೆ, ಕಳೆದ ವಾರವಷ್ಟೇ ಫರ್ಹಾ ವೀರೆ ದಿ ವೆಡ್ಡಿಂಗ್ ಎಂಬ ಚಿತ್ರದ ಸಂಗೀತ್ ಕಾರ್ಯಕ್ರಮದ ದೃಶ್ಯದಲ್ಲಿ ಸೋನಮ್‌ಳನ್ನು ಕುಣಿಸಿದ್ದಳು. ಇನ್ನೂ ಒಂದು ವಿಶೇಷತೆಯೆಂದರೆ ನಿದೇರ್ಶಕ-ನಿರ್ಮಾಪಕ ಕರಣ್ ಜೋಹರ್ ಕೂಡಾ ಸಂಗೀತ್ ಕಾರ್ಯಕ್ರಮದಲ್ಲಿ ಕೆಲವು ಹಾಡುಗಳಿಗೆ ಕುಣಿಯಲಿದ್ದಾನೆ. ಬಾಲಿವುಡ್ ಕಾರ್ಯಕ್ರಮಗಳಲ್ಲಿ ಕರಣ್ ಉಪಸ್ಥಿತಿ ಮಾಮೂಲಾಗಿದ್ದರೂ ಡ್ಯಾನ್ಸ್‌ಗೆಲ್ಲ ಅವನು ಬರುವುದಿಲ್ಲ.
ಆದರೆ, ಕಪೂರ್ ಕುಟುಂಬದ ಜತೆಗೆ ವಿಶೇಷವಾದ ಬಾಂಧವ್ಯ ಇರುವುದರಿಂದ ಫರ್ಹಾ ನಿರ್ದೇಶನದಲ್ಲಿ ಕುಣಿಯಲು ಕರಣ್ ಕೂಡ ಒಪ್ಪಿದ್ದಾನಂತೆ. ಅಂದ ಹಾಗೆ ಸೋನಮ್ ತನ್ನ ಬಹುಕಾಲದ ಗೆಳೆಯ ಆನಂದ್ ಅಸುಜಾನ ಕೈಹಿಡಿಯಲಿದ್ದಾಳೆ. ಹೀಗೆ, ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಮದುವೆ ದಿನಾಂಕವಿನ್ನೂ ನಿಗದಿಯಾಗಿಲ್ಲ. ಬಹುತೇಕ ಈ ಮಾಸಾಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲೇ ಮದುವೆ ನೆರವೇರಲಿದೆ. ಮದುವೆಗಾಗಿ ಅನಿಲ್ ಕಪೂರ್ ಮನೆಯನ್ನು ಸಜ್ಜುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.