ಸೌಖ್ಯ ಸಂಧಾನ
Team Udayavani, Nov 22, 2019, 12:32 PM IST
ನನ್ನ ವಯಸ್ಸು 44 ಹಾಗೂ ನನ್ನ ಪತ್ನಿಯದು 40. ನನಗೆ ಕಳೆದ 6 ತಿಂಗಳಿನಿಂದ ಸಕ್ಕರೆ ಕಾಯಿಲೆಯಿದೆ. ಅದರಿಂದಾಗಿ ಶೀಘ್ರ ಸ್ಖಲನದ ತೊಂದರೆ ಉಂಟಾಗಿದೆ. ನನ್ನ ಪತ್ನಿಗೆ ರಕ್ತಸ್ರಾವದ ತೊಂದರೆ ಇದೆ. ಮುಟ್ಟಿನ ಸಮಯದಲ್ಲಿ ಅತಿಯಾದ ನೋವು ಇರುತ್ತದೆ. 2-3 ದಿನಗಳ ಕಾಲ ಹಾಸಿಗೆಯಿಂದ ಏಳಲಾಗುವುದಿಲ್ಲ. ತಿಂಗಳಿಗೆ ಎರಡು ಬಾರಿ ರಕ್ತಸ್ರಾವವಾಗುತ್ತದೆ. ವೈದ್ಯರ ಬಳಿ ತೋರಿಸಿದಾಗ ಅವರು ಕೊಡುವ ಔಷಧಿ ಸೇವಿಸಿದಾಗ ರಕ್ತಸ್ರಾವ ಕೆಲವು ತಿಂಗಳವರೆಗೆ ಸರಿಯಾಗಿದ್ದು ಮತ್ತೆ ಮೊದಲಿನಂತಾಗುತ್ತದೆ. ತಾವು ಸರಿಯಾದ ಸಲಹೆ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. –ಶಂಕರ್, ಬೆಂಗಳೂರು
–ನಿಮ್ಮ ಶೀಘ್ರಸ್ಖಲನದ ತೊಂದರೆಗೆ ಚಿಕಿತ್ಸೆ ಇದೆ. ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿ. ನಿಮ್ಮ ಪತ್ನಿಯ ರಕ್ತಸ್ರಾವ ಮತ್ತು ಅದರಿಂದಾಗುವ ನೋವಿನ ತೊಂದರೆಗೆ ಕೆಲವು ಪರೀಕ್ಷೆ ಗಳನ್ನು ಮಾಡಬೇಕು. ತೊಂದರೆ ವಿಪರೀತವಾಗಿದ್ದರೆ ಗರ್ಭಕೋಶವನ್ನೇ ತೆಗೆಯಬೇಕಾಗಬಹುದು. ನೀವು ಸಹಾಯವಾಣಿ 080-23154293ಯನ್ನು ಸಂಪರ್ಕಿಸಬಹುದು.
ನನ್ನ ವಯಸ್ಸು 24. 10-14 ವರ್ಷಗಳಿಂದ ಮೊಡವೆಯ ನೋವು ತಿಂದು ಸುಸ್ತಾಗಿದ್ದೇನೆ. ತುಂಬಾ ದೊಡ್ಡ ಗಾತ್ರದ ಮೊಡವೆಗಳು ಮುಖ, ತಲೆ ಹಾಗೂ ಬೆನ್ನಿನಲ್ಲಿ ಕೂಡ ಇವೆ. ನನ್ನ ಮುಖ ನೋಡಿದವರೆಲ್ಲ ಔಷಧಿ ಹೇಳುತ್ತಿದ್ದರು. ಆದರೆ, ಈಗ ಎರಡು ವರ್ಷಗಳಿಂದ ಯಾರೂ ಏನೂ ಹೇಳುತ್ತಿಲ್ಲ. ಕಾರಣ ಈಗ ನನ್ನ ಮುಖದಲ್ಲಿ ಮೊಡವೆಗಳಿಲ್ಲ. ವೈದ್ಯರು doxy 1 ಮಾತ್ರೆ ಹಾಗೂ ಯಾವುದೋ ಕ್ರೀಮ್ ಕೊಟ್ಟಿದ್ದರು. ಕ್ರೀಮ್ ಮುಗಿದ ನಂತರ ಮಾತ್ರೆಯನ್ನು ದಿನಾಲು ತೆಗೆದುಕೊಳ್ಳುತ್ತಿದ್ದೇನೆ. ಒಂದು ವಾರ ನಿಲ್ಲಿಸಿದರೂ ಮತ್ತೆ ಶುರುವಾಗುತ್ತದೆ. ನನ್ನ ಸಮಸ್ಯೆ ಎಂದರೆ doxy 1 ಮಾತ್ರೆ ತಿನ್ನುವುದರಿಂದ ಬೇರೇನಾದರೂ ಸಮಸ್ಯೆ ಉಂಟಾಗುತ್ತದೆಯೇ.ಇದರಿಂದ ನನಗೆ ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆಯಾಗಿದೆ. ಏಕೆಂದರೆ ನನ್ನ ಜನನಾಂಗ ಮೊದಲಿನಂತೆ ನಿಮಿರುವುದಿಲ್ಲ. ದಯವಿಟ್ಟು ಪರಿಹಾರ ತಿಳಿಸಿ. –ರಾಕೇಶ್, ಮುಂಬಯಿ
– ಒಂದು ವಯಸ್ಸಿನಲ್ಲಿ ಮೊಡವೆಗಳು ಬರುವುದು ಸಹಜ. ಸಾಧಾರಣ ಮುಖವನ್ನು ಆಗಾಗ ಸೋಪು ನೀರಿನಲ್ಲಿ ತೊಳೆದುಕೊಳ್ಳುತ್ತಿರಿ. ಮೊಡವೆಗಳನ್ನು ಕೀಳಲು ಹೋಗಬೇಡಿ. ಹಾಗೆಯೇ doxy ಮಾತ್ರೆಗಳನ್ನು ಪ್ರತಿನಿತ್ಯ ತೆಗೆದುಕೊಳ್ಳುತ್ತ ಇರಬಾರದು. ಅದರಿಂದ ನಿಮ್ಮ ರಕ್ತದ ಮೇಲೆ ಪರಿಣಾಮ ಬೀರಿ ತೊಂದರೆಯುಂಟಾಗಬಹುದು. ನಿಮ್ಮ ದಿನನಿತ್ಯದ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಿ. ನಿಮಿರು ದೌರ್ಬಲ್ಯ ತಾತ್ಕಾಲಿಕವಾಗಿ ಆಗಿರಬಹುದು. ಅದು ಹಾಗೆಯೇ ಉಳಿದರೆ ನುರಿತ ಲೈಂಗಿಕ ತಜ್ಞರಿಂದ ಚಿಕಿತ್ಸೆ ಪಡೆದುಕೊಳ್ಳಿ.
ನನ್ನ ವಯಸ್ಸು 21. ಮದುವೆಯಾಗಿ 8 ತಿಂಗಳಾಗಿದೆ. ನನ್ನ ಸಮಸ್ಯೆ ಎಂದರೆ, ನನ್ನ ಗುಪ್ಯ ಭಾಗದಲ್ಲಿ ತುಂಬಾ ರೋಮಗಳು ಬೆಳೆದಿವೆ. ಇದರಿಂದ ಲೈಂಗಿಕ ಕ್ರಿಯೆಗೆ ತುಂಬಾ ತೊಂದರೆಯಾಗುತ್ತಿದೆ. ಬ್ಲೇಡ್‌ನಿಂದ ಶೇವ್ ಮಾಡಿಕೊಂಡರೆ ಗಾಯವಾಗುತ್ತದೆ. ಯಾವುದಾದರೂ ಕ್ರೀಮ್ ಅಥವಾ ಆಯಿಲ್ ಹಚ್ಚಿದರೆ ಸರಿಯಾಗುತ್ತದೆಯಾ? ದಯವಿಟ್ಟು ಪರಿಹಾರ ತಿಳಿಸಿ. –ಕವಿತಾ ಮೈಸೂರು
-ಶೇವ್ ಮಾಡಿಕೊಳ್ಳಲು ಕಷ್ಟವಾಗುವುದಾದರೆ ಚಿಕ್ಕ ಕತ್ತರಿಯಿಂದ ರೋಮವನ್ನು ಚಿಕ್ಕದಾಗಿ ಆಗಾಗ ಕತ್ತರಿಸಿಕೊಳ್ಳಿ. ಹಾಗೆಯೇ ಕೂದಲು ತೆಗೆಯುವ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದನ್ನು ಹಚ್ಚಿ ಹತ್ತಿಯಿಂದ ಉಜ್ಜಿ ತೆಗೆಯಬಹುದು. ಆದರೆ ಅದನ್ನು ಮೊದಲ ಬಾರಿ ಉಪಯೋಗಿಸುವ ಮೊದಲು ಬೇರೊಂದು ಕಡೆ ಉಪಯೋಗಿಸಿ ಅದರಿಂದ ಅಲರ್ಜಿ ಆಗುವುದಿಲ್ಲವೇ ಎಂದು ತಿಳಿದುಕೊಳ್ಳಬೇಕು. ಬ್ಲೇಡ್ ಅನ್ನು ಉಪಯೋಗಿಸಿದರೆ ಪ್ರತಿ ಬಾರಿಯೂ ಹೊಸದನ್ನು ಬಳಸಬೇಕು. ಕೂದಲನ್ನು ಕತ್ತರಿಸಿದ ನಂತರ ಡೆಟ್ಟಾಲ್ ಅಥವಾ ಸಾವ್ಲಾನ್‌ನಿಂದ ತೊಳೆದುಕೊಳ್ಳಬೇಕು.
ನನ್ನ ವಯಸ್ಸು 25. ರಾತ್ರಿ ಮಲಗಿದಾಗ ಲೈಂಗಿಕ ಕನಸುಗಳು ಬೀಳುತ್ತವೆ. ಆಗ ಎಚ್ಚರವಾಗಿ ಜನನಾಂಗದಿಂದ ಬಿಳಿಯ ದ್ರವವೊಂದು ಹೊರಹೊಮ್ಮುತ್ತದೆ. ಇದರಿಂದ ಕಾಲುಗಳಲ್ಲಿ ತುಂಬಾ ಸುಸ್ತು ಆದಂತೆ ಆಗುತ್ತದೆ. ಇದರಿಂದ ಜುಗುಪ್ಸೆ ಉಂಟಾಗುತ್ತದೆ. ದಯವಿಟ್ಟು ಪರಿಹಾರ ತಿಳಿಸಿ. –ದಿನೇಶ್, ಬಳ್ಳಾರಿ
– ಸ್ವಪ್ನಸ್ಖಲನವೊಂದು ಸಹಜ ದೈಹಿಕ ಕ್ರಿಯೆ. ಅದಕ್ಕಾಗಿ ಭಯಪಡುವ ಕಾರಣವಿಲ್ಲ
ನನ್ನ ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಮಚ್ಚೆಗಳಿವೆ. (ಕಲೆಗಳಲ್ಲ). ಮಚ್ಚೆಗಳಿಲ್ಲದಿದ್ದರೆ ನನ್ನ ಮುಖ ಅಂದವಾಗಿರುತ್ತದೆಂದು ಗೆಳತಿಯರು ಹೇಳುತ್ತಾರೆ. ಮಚ್ಚೆಗಳನ್ನು ಹೋಗಲಾಡಿಸುವುದು ಸಾಧ್ಯವೇ. ನಾನು ಇದುವರೆಗೆ “ಐಬ್ರೋ’ ಮಾಡಿಸಿಕೊಂಡಿಲ್ಲ. ಇದನ್ನು ಮಾಡಿಸಿಕೊಂಡರೆ ಕಣ್ಣುಗಳಿಗೆ ತೊಂದರೆಯಾಗುತ್ತದೆಯಂತೆ ಹೌದೇ, ದಯವಿಟ್ಟು ತಿಲಇಸಿ. –ವಿದ್ಯಾ, ಕುಂದಾಪುರ
-ನೀವು ನುರಿತ “ಕಾಸ್ಮೆಟಿಕ್ ಸರ್ಜನ್’ (ಪ್ಲಾಸ್ಟಿಕ್ ಸರ್ಜನ್)ರನ್ನು ಭೆಟ್ಟಿಯಾಗಿ ಮಚ್ಚೆಗಳನ್ನು ತೆಗೆಸಬಹುದು ಚಿಕ್ಕ ಮಚ್ಚೆಯನ್ನು ದೊಡ್ಡದಾಗಿಸಲು ಸಾಧ್ಯವಿಲ್ಲ. ಐಬ್ರೋ- ಹೆಚ್ಚಿನ ಕೂದಲನ್ನು ತೆಗೆಯುವುದರಿಂದ ಕಣ್ಣುಗಳಿಗೆ ತೊಂದರೆ ಏನೂ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.