ಸೂಪ್ ವೈವಿಧ್ಯ
Team Udayavani, Jan 3, 2020, 4:38 AM IST
ಚಳಿಗಾಲದಲ್ಲಿ ಬಿಸಿಬಿಸಿಯಾದ ಸೂಪ್ ಕುಡಿಯಲು ಹಿತವಾಗಿರುತ್ತದೆ. ಆರೋಗ್ಯಕರ ಹಾಗೂ ರುಚಿಕರವಾದ ಸೂಪ್‌ಗ್ಳನ್ನು ಮಾಡುವ ವಿಧಾನಗಳು ಇಲ್ಲಿವೆ.
ಕ್ಯಾರೆಟ್ ಸೂಪ್
ಬೇಕಾಗುವ ಸಾಮಗ್ರಿ: ಕ್ಯಾರೆಟ್ ತುಂಡುಗಳು- 2 ಕಪ್, ನೀರುಳ್ಳಿ- 1, ಹಸಿಶುಂಠಿ- ಅರ್ಧ ಇಂಚು, ಬೆಣ್ಣೆ- 2 ಚಮಚ, ಜೀರಿಗೆ ಪುಡಿ- ಅರ್ಧ ಚಮಚ, ಕಾಳುಮೆಣಸಿನ ಪುಡಿ- 1 ಚಮಚ, ಮೆಣಸಿನ ಪುಡಿ- ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ನೀರುಳ್ಳಿ ಮತ್ತು ಶುಂಠಿಯನ್ನು ಹೆಚ್ಚಿಟ್ಟುಕೊಳ್ಳಿ. ಕುಕ್ಕರ್ ಗೆ ಒಂದು ಚಮಚ ಬೆಣ್ಣೆ ಹಾಕಿ, ಅದು ಕರಗುತ್ತಿರುವಾಗ ಹೆಚ್ಚಿದ ನೀರುಳ್ಳಿ ಹಾಕಿ ಸ್ವಲ್ಪ ಕೆಂಪಗಾಗುವಂತೆ ಹುರಿಯಿರಿ. ಇದಕ್ಕೆ ಕ್ಯಾರೆಟ್, ಶುಂಠಿ, ಮೆಣಸಿನಪುಡಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ. ನಂತರ ಮುಚ್ಚಳ ಮುಚ್ಚಿ ಎರಡು ವಿಷಲ್ ಕೂಗಿಸಿ. ಇದು ಆರಿದ ಮೇಲೆ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಜೀರಿಗೆ ಪುಡಿ, ಬೇಕಾದಷ್ಟು ನೀರು ಸೇರಿಸಿ ಕುದಿಸಿ. ಈಗ ಕ್ಯಾರೆಟ್ ಸೂಪ್ ಸವಿಯಲು ಸಿದ್ಧ. ಸರ್ವ್ ಮಾಡುವಾಗ ಕಾಳುಮಣಸಿನ ಪುಡಿಯುದುರಿಸಿ ಕ್ರೀಮ್ ಹಾಕಿ.
ಬಾರ್ಲಿ ಸೂಪ್
ಬೇಕಾಗುವ ಸಾಮಗ್ರಿ: ಬಾರ್ಲಿ- ಅರ್ಧ ಕಪ್, ಹೆಚ್ಚಿದ ನೀರುಳ್ಳಿ- 1/4 ಕಪ್, ಹೆಚ್ಚಿದ ಕ್ಯಾರೆಟ್- 1/4 ಕಪ್, ಹೆಚ್ಚಿದ ಬೀನ್ಸ್ – 1/4 ಕಪ್, ಬೆಳ್ಳುಳ್ಳಿ- 2 ಎಸಳು, ಶುಂಠಿ- 1/2 ಇಂಚು, ಬೆಣ್ಣೆ- 2 ಚಮಚ, ಕಾಳುಮೆಣಸಿನ ಪುಡಿ- 1/2 ಚಮಚ, ಉಪ್ಪು ಸ್ವಲ್ಪ, ಎಣ್ಣೆ- 2 ಚಮಚ.
ತಯಾರಿಸುವ ವಿಧಾನ: ಬಾರ್ಲಿಯನ್ನು 4 ಗಂಟೆ ನೀರಿನಲ್ಲಿ ನೆನೆ ಹಾಕಿಟ್ಟು ನಂತರ ಕುಕ್ಕರ್‌ನಲ್ಲಿ 4 ವಿಷಲ್ ಕೂಗಿಸಿ ಬೇಯಿಸಿಟ್ಟುಕೊಳ್ಳಿ. ಶುಂಠಿ-ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಶುಂಠಿ-ಬೆಳ್ಳುಳ್ಳಿಯನ್ನು ಸೇರಿಸಿ ಬಾಡಿಸಿ. ನಂತರ ನೀರುಳ್ಳಿ ಸೇರಿಸಿ ಕೆಂಪಗಾಗುವಂತೆ ಹುರಿದು ಬೀನ್ಸ್, ಕ್ಯಾರೆಟ್ ಹಾಕಿ ಸ್ವಲ್ಪ ಬಾಡಿದ ಮೇಲೆ ಬೇಯಿಸಿಟ್ಟುಕೊಂಡ ಬಾರ್ಲಿ, ಸೂಪ್‌ಗೆ ಬೇಕಾದಷ್ಟು ನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಕಾಳುಮೆಣಸಿನ ಪುಡಿ ಸೇರಿಸಿ. ಆರೋಗ್ಯಕರವಾದ ಬಾರ್ಲಿ ಸೂಪ್ ರೆಡಿ.
ಮಿಕ್ಸೆಡ್ ವೆಜಿಟೆಬಲ್ ಸೂಪ್
ಬೇಕಾಗುವ ಸಾಮಗ್ರಿ: ತರಕಾರಿ(ಕ್ಯಾರೆಟ್, ಬೀನ್ಸ್, ಎಲೆಕೋಸು, ದೊಣ್ಣೆಮೆಣಸು, ಬಟಾಣಿ)- ಒಂದೂವರೆ ಕಪ್, ನೀರುಳ್ಳಿ- 1, ಬೆಣ್ಣೆ- 1 ಚಮಚ, ಶುಂಠಿ ತುರಿ- 2 ಚಮಚ, ಬೆಳ್ಳುಳ್ಳಿ- 2 ಎಸಳು, ಕೋರ್ನ್ಫ್ಲೋರ್- 2 ಚಮಚ, ಕಾಳುಮೆಣಸಿನ ಪುಡಿ-ನಿಂಬೆರಸ- 1/2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ.
ತಯಾರಿಸುವ ವಿಧಾನ: ತರಕಾರಿಗೆ ಒಂದೂವರೆ ಕಪ್ ನೀರು, ಉಪ್ಪು ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಿಟ್ಟುಕೊಳ್ಳಿ. ಬಾಣಲೆಗೆ ಬೆಣ್ಣೆ ಹಾಕಿ, ಶುಂಠಿ-ಬೆಳ್ಳುಳ್ಳಿ, ನೀರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಬೇಯಿಸಿಟ್ಟುಕೊಂಡ ತರಕಾರಿ ಹಾಕಿ ಕುದಿಸಿ. ಕಾರ್ನ್ಫ್ಲೋರ್‌ಗೆ ಒಂದು ಕಪ್ ನೀರು ಹಾಕಿ ಕರಗಿಸಿ ಕುದಿಯುತ್ತಿರುವ ಸೂಪ್‌ಗೆ ಸೇರಿಸಿ ಗಂಟಾಗದಂತೆ ಕದಡುತ್ತಿರಿ. ಸಕ್ಕರೆ, ಕಾಳುಮೆಣಸಿನಪುಡಿ ಸೇರಿಸಿ ಕುದಿಸಿ. ನಂತರ ನಿಂಬೆರಸ, ಕೊತ್ತಂಬರಿ ಸೊಪ್ಪು ಸೇರಿಸಿ.
ಪಾಲಕ್ ಸೂಪ್
ಬೇಕಾಗುವ ಸಾಮಾಗ್ರಿ: ಹೆಚ್ಚಿದ ಪಾಲಕ್ ಸೊಪ್ಪು- 2 ಕಪ್, ಹೆಚ್ಚಿದ ನೀರುಳ್ಳಿ- 3/4 ಕಪ್, ಬೆಳ್ಳುಳ್ಳಿ ಎಸಳು -2, ಜೋಳದಹಿಟ್ಟು (ಕಾರ್ನ್ಫ್ಲೋರ್)- 2 ಚಮಚ, ಹಾಲು- 1 ಕಪ್, ಬೆಣ್ಣೆ- 2 ಚಮಚ, ಕ್ರೀಮ…- 2 ಚಮಚ, ಕರಿಮೆಣಸಿನ ಪುಡಿ- ಅರ್ಧ ಚಮಚ, ಉಪ್ಪು ಸ್ವಲ್ಪ, ಬೆಳ್ಳುಳ್ಳಿ.
ತಯಾರಿಸುವ ವಿಧಾನ: ಹಾಲಿಗೆ ಜೋಳದ ಹುಡಿ ಸೇರಿಸಿ ಚೆನ್ನಾಗಿ ಕದಡಿಟ್ಟುಕೊಳ್ಳಿ. ಬಾಣಲೆಗೆ ಬೆಣ್ಣೆ ಹಾಕಿ ಬಿಸಿಯಾದ ನಂತರ ಹೆಚ್ಚಿದ ನೀರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಪಾಲಕ್ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ ಉಪ್ಪು, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಆರಿದ ಮೇಲೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಜೀರಿಗೆ ಪುಡಿ, ಹಾಲಿನಲ್ಲಿ ಕಲಸಿಟ್ಟುಕೊಂಡ ಜೋಳದ ಹುಡಿ ಮಿಶ್ರಣವನ್ನು ಸೇರಿಸಿ. ಸೂಪ್‌ನ ಹದಕ್ಕೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ರುಚಿಯಾದ ಪಾಲಕ್ ಸೂಪ್ ಸಿದ್ಧ. ಸರ್ವ್ ಮಾಡುವಾಗ ಮೆಣಸಿನ ಕಾಳಿನ ಪುಡಿಯುದುರಿಸಿ ಕ್ರೀಮ್ ಹಾಕಿ.
ಪ್ರೇಮಾ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.