ಮಾತನಾಡುತ್ತಾಳೆ ಮೌನಿ


Team Udayavani, Jan 5, 2018, 1:05 PM IST

05-30.jpg

ಹಿಂದಿ ಧಾರಾವಾಹಿಗಳನ್ನು ನೋಡುವ ಅಭ್ಯಾಸ ಇರುವವರಿಗೆ ಈಕೆಯ ಪರಿಚಯ ಇರಬಹುದು. ಕ್ಯೂಕಿ ಸಾಸ್‌ ಭಿ ಕಭಿ ಬಹೂ ಥಿಯಿಂದ  ತೊಡಗಿ ಇತ್ತೀಚೆಗಿನ ಎಂಟರ್‌ಟೈನ್‌ಮೆಂಟ್‌ ಕಿ ಸಾಥ್‌  ತನಕ ಮೌನಿ ರಾಯ್‌ ಎಂಬ ಈ ಬಂಗಾಲಿ ಮೂಲದ ಚೆಲುವೆ  ಕಾಣಿಸಿಕೊಂಡಿರುವ ಸೀರಿಯಲ್‌ಗ‌ಳು, ರಿಯಾಲಿಟಿ ಶೋಗಳು ಮತ್ತು ಡ್ಯಾನ್ಸ್‌ ಪ್ರೊಗ್ರಾಮ್‌ಗಳು ಅಸಂಖ್ಯಾತ.

ನಾಗಿನ್‌ ಎಂಬ ಸೀರಿಯಲ್‌ನಿಂದ ಫೇಮಸ್‌ ಆಗಿರುವ ಆಕೆಯನ್ನು ಈಗಲೂ ಜನರು ನಾಗಿನ್‌ ಎಂದೇ ಗುರುತಿಸುತ್ತಿದ್ದಾರೆ. ಇದಕ್ಕಾಗಿ ಮೌನಿಗೆ ಬೇಸರವೇನೂ ಇಲ್ಲ. ನಟನೆಯ ಜತೆಗೆ ಮಾಡೆಲಿಂಗ್‌ನಲ್ಲೂ ಪಳಗಿರುವ ಮೌನಿಯ ಹಿರಿತೆರೆಯ ಕನಸು ಈಗ ನನಸಾಗುತ್ತಿದೆ. ಹಾಗೆಂದು ಆಕೆ ಬಾಲಿವುಡ್‌ಗೆ ಆರಂಗೇಟ್ರಂ ಮಾಡುತ್ತಿರುವುದು ಇದೇ ಮೊದಲಲ್ಲ. ನಾಲ್ಕು ವರ್ಷದ ಹಿಂದೆಯೇ ರನ್‌ ಎಂಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಅನಂತರ ಒಂದು ಪಂಜಾಬಿ ಚಿತ್ರಕ್ಕೆ ನಾಯಕಿಯಾದಳು. ಒಂದು ಅನಿಮೇಶನ್‌ ಚಿತ್ರವೂ ಅವಳ ಅನುಭವದ ಬುಟ್ಟಿಯಲ್ಲಿದೆ. ತುಮ್‌ ಬಿನ್‌ನಲ್ಲಿ ತಾನೇ ಆಗಿ ಕಾಣಿಸಿಕೊಂಡಿದ್ದಾಳೆ. 

ಇವೆಲ್ಲ ಚಿಕ್ಕಪುಟ್ಟ ಪಾತ್ರಗಳಾಗಿದ್ದ ಕಾರಣ ಮೌನಿ ರಾಯ್‌ ಏಕೋ ಮುನ್ನೆಲೆಗೆ ಬಂದಿರಲಿಲ್ಲ. ಇದೀಗ ಅಕ್ಷಯ್‌ ಕುಮಾರ್‌ ಜತೆಗೆ ಗೋಲ್ಡ್‌ ಎಂಬ ಚಿತ್ರದ ನಾಯಕಿಯಾಗುವ ಮೂಲಕ ಮೌನಿಯ ಬಹುಕಾಲದ ಆಶೆ ಈಡೇರಿದೆ. 1948ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದ ಬಲಬೀರ್‌ ಸಿಂಗ್‌ ಸೀನಿಯರ್‌ ಅವರ ಬದುಕು ಆಧರಿಸಿರುವ ಗೋಲ್ಡ್‌ ಚಿತ್ರ ಮುಂಬರುವ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಇದರ ಶೂಟಿಂಗ್‌ ಮುಗಿಸಿ ಕಾತರದಿಂದ ಕಾಯುತ್ತಿರುವ ಮೌನಿಗೆ ಬ್ರಹ್ಮಾಸ್ತ್ರ ಎಂಬ ಇನ್ನೊಂದು ಥ್ರಿಲ್ಲರ್‌ ಚಿತ್ರ ಸಿಕ್ಕಿದೆ. ಇದು ಶುರುವಾಗುವುದು ಮಾತ್ರ ಮುಂದಿನ ವರ್ಷ. ಹೀಗೆ, ಎರಡು ಬಿಗ್‌ ಬಜೆಟ್‌ ಚಿತ್ರಗಳು ಸಿಕ್ಕಿದ ಬಳಿಕ ಮೌನಿಯಲ್ಲಿ ಸಾವಿರ ಕನಸುಗಳು ಮೊಳಕೆಯೊಡೆದಿವೆ. ಬಾಲಿವುಡ್‌ನ‌ಲ್ಲಿ ಬಂಗಾಳಿ ನಟಿಯರಿಗೆ ವಿಶೇಷ ಮನ್ನಣೆಯಿದೆ. ಇತ್ತೀಚೆಗಿನ ಬಿಪಾಶಾ ಬಸುವಿನಿಂದ ತೊಡಗಿ ಹಿಂದಿನ ಅಪರ್ಣಾ ಸೇನ್‌ ತನಕ ಹಲವು ಬೆಡಗಿಯರು ಬಾಲಿವುಡ್‌ ಆಳಿ ಹೋಗಿದ್ದಾರೆ. ಅವರ ಸಾಲಿಗೆ ತಾನೂ ಸೇರಬೇಕೆನ್ನುವುದು ಮೌನಿಯ ಹಂಬಲ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.