ಮಂಡಕ್ಕಿ ವೈವಿಧ್ಯ

Team Udayavani, Sep 13, 2019, 5:00 AM IST

q-25

ಸಾಮಾನ್ಯವಾಗಿ ಮಂಡಕ್ಕಿ ಎಂದರೆ ಎಲ್ಲಾ ವಯೋಮಾನದವರೂ ಇಷ್ಟಪಟ್ಟು ಸವಿಯುತ್ತಾರೆ. ಈ ಮಂಡಕ್ಕಿಯನ್ನು ಹಲವಾರು ರೀತಿಯಲ್ಲಿ ಬಳಸಿ ಸಂಜೆಯ ಟೀಯೊಂದಿಗೆ ಸವಿಯಬಹುದು.

ಮಂಡಕ್ಕಿ ಚಾಟ್‌
ಬೇಕಾಗುವ ಸಾಮಗ್ರಿ: ಮಂಡಕ್ಕಿ- ಒಂದು ಕಪ್‌, ಸ್ವೀಟ್‌ಕಾರ್ನ್- ಆರು ಚಮಚ, ಖರ್ಜೂರ-ಹುಣಸೆಬೆಲ್ಲ ಸೇರಿಸಿ ರುಬ್ಬಿದ ಚಟ್ನಿ- ಎರಡು ಚಮಚ, ಕೋಡುಬಳೆ- ನಾಲ್ಕು, ಕ್ಯಾರೆಟ್‌ತುರಿ- ನಾಲ್ಕು ಚಮಚ, ನೀರುಳ್ಳಿ- ಆರು ಚಮಚ, ಹೆಚ್ಚಿದ ಟೊಮೆಟೋ- ನಾಲ್ಕು ಚಮಚ, ಕೆಂಪುಮೆಣಸಿನಪುಡಿ ಮತ್ತು ಚುರುಮುರಿ ಮಸಾಲ- ಒಂದು ಚಮಚ, ಹಸಿಮೆಣಸಿನ ಪೇಸ್ಟ್‌- ಒಂದು ಚಮಚ, ಚಾಟ್‌ಮಸಾಲ- ಅರ್ಧ ಚಮಚ, ಕೊತ್ತಂಬರಿಸೊಪ್ಪು ಮತ್ತು ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ಬೆಣ್ಣೆಹಾಕಿ ಕಾದ ಕೂಡಲೇ ಸ್ವೀಟ್‌ಕಾರ್ನ್ ಹಾಕಿ ಉಪ್ಪು ಮತ್ತು ಕಾಳುಮೆಣಸಿನಪುಡಿ ಸೇರಿಸಿ ಬಾಡಿಸಿಕೊಳ್ಳಿ. ಸರ್ವಿಂಗ್‌ ಪ್ಲೇಟ್‌ಗೆ ಸ್ವೀಟ್‌ಕಾರ್ನ್ ಹಾಕಿ ಇದಕ್ಕೆ ಚಾಟ್‌ಮಸಾಲ, ಸಿಹಿ ಚಟ್ನಿ, ಮಸಾಲೆಪುಡಿ, ನೀರುಳ್ಳಿ, ಟೊಮೆಟೋ , ಕತ್ತರಿಸಿದ ಕೋಡುಬಳೆ, ಹುರಿದ ಶೇಂಗಾ ಹೀಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮೇಲಿನಿಂದ ಮಂಡಕ್ಕಿ ಹರಡಿ ಅದರ ಮೇಲೆ ಕೊತ್ತಂಬರಿಸೊಪ್ಪು ಹರಡಿ ಸರ್ವ್‌ ಮಾಡಿ.

ಮಂಡಕ್ಕಿ ಚೂಡಾ ಮಸಾಲ
ಬೇಕಾಗುವ ಸಾಮಗ್ರಿ: ಹೆಚ್ಚಿದ ಕೊಬ್ಬರಿ ಚೂರು- ಆರು ಚಮಚ, ಶೇಂಗಾ- ಆರು ಚಮಚ, ಬೆಳ್ಳುಳ್ಳಿ- ಆರು ಎಸಳು, ಕರಿಬೇವು- ಸ್ವಲ್ಪ, ಕೆಂಪುಮೆಣಸು- ಎರಡು, ಮಂಡಕ್ಕಿ- ನಾಲ್ಕು ಕಪ್‌, ಅರಸಿನಪುಡಿ- ಒಂದು ಚಮಚ.

ತಯಾರಿಸುವ ವಿಧಾನ: ಬಾಣಲೆಗೆ ಆರು ಚಮಚ ಎಣ್ಣೆಹಾಕಿ ಜಜ್ಜಿದ ಬೆಳ್ಳುಳ್ಳಿ ಹಾಕಿ ಕೆಂಪಾದಮೇಲೆ ಸಾಸಿವೆ, ಕರಿಬೇವು, ಶೇಂಗಾ, ಕೊಬ್ಬರಿ, ಕೆಂಪುಮೆಣಸು ಇತ್ಯಾದಿ ಒಂದೊಂದಾಗಿ ಹಾಕಿ ಹುರಿದು ನಂತರ ಹಳದಿ ಹಾಗೂ ಚರುಮುರು ಮಸಾಲ ಸೇರಿಸಿ ಕೊನೆಗೆ ಮಂಡಕ್ಕಿ ಹಾಕಿ ಸುಮಾರು ಹತ್ತು ನಿಮಿಷ ಸಣ್ಣ ಉರಿಯಲ್ಲಿ ಸಂಪೂರ್ಣ ಬಿಸಿ ಆಗುವವರಗೂ ಹುರಿದು ಒಲೆಯಿಂದ ಇಳಿಸಿ ಆರಿದ ಮೇಲೆ ಡಬ್ಬದಲ್ಲಿ ತುಂಬಿಸಿ ಬೇಕೆಂದಾಗ ಉಪಯೋಗಿಸಬಹುದು.

ಸ್ಪೆಷಲ್‌ ಚುರುಮುರಿ
ಬೇಕಾಗುವ ಸಾಮಗ್ರಿ: ಮಂಡಕ್ಕಿ- ನಾಲ್ಕು ಕಪ್‌, ಖಾರಪುಡಿ- ಒಂದು ಚಮಚ, ಹಸಿಮೆಣಸು- ಎರಡು, ಚರುಮುರಿ ಮಸಾಲ- ಒಂದು ಚಮಚ, ತೆಂಗಿನತುರಿ- ಆರು ಚಮಚ, ಲಿಂಬೆರಸ- ನಾಲ್ಕು ಚಮಚ, ಹುರಿದ ಶೇಂಗಾ- ಆರು ಚಮಚ, ಹೆಚ್ಚಿದ ಈರುಳ್ಳಿ- ಎಂಟು ಚಮಚ, ಕೊಬ್ಬರಿಎಣ್ಣೆ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಕ್ಯಾರೆಟ್‌ತುರಿ- ಎರಡು ಚಮಚ.

ತಯಾರಿಸುವ ವಿಧಾನ: ಬಿಸಿಯಾದ ಬಾಣಲೆಗೆ ಮಂಡಕ್ಕಿ ಹಾಕಿ ಗರಿಗರಿಯಾಗಿಸಿಕೊಳ್ಳಿ. ಶೇಂಗಾವನ್ನು ಒಂದು ಚಮಚ ಎಣ್ಣೆ ಹಾಕಿ ಹುರಿದು ಇದಕ್ಕೆ ಸೇರಿಸಿ ಮಿಶ್ರಮಾಡಿ. ತೆಂಗಿನ ತುರಿಯನ್ನು ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಮಸಾಲೆ ತಯಾರಿಸಿ. ನಂತರ ಸರ್ವಿಂಗ್‌ ಪ್ಲೇಟ್‌ಗೆ ಶೇಂಗಾಮಿಶ್ರಿತ ಮಂಡಕ್ಕಿ ಹಾಕಿ ಮೇಲಿನಿಂದ ಕಲಸಿಟ್ಟ ಮಸಾಲೆ ಮತ್ತು ಬೇಕಿದ್ದರೆ ಸೇವ್‌ ಅಥವಾ ಕೋಡುಬಳೆ ಚೂರುಗಳನ್ನು ಹರಡಿ ಸರ್ವ್‌ ಮಾಡಬಹುದು.

ಗಿರ್ಮಿಟ್‌
ಬೇಕಾಗುವ ಸಾಮಗ್ರಿ:
ಮಂಡಕ್ಕಿ- ನಾಲ್ಕು ಕಪ್‌, ಈರುಳ್ಳಿ- ಒಂದು, ಹುರಿಗಡ್ಲೆ ಪೌಡರ್‌- ನಾಲ್ಕು ಟೀ ಚಮಚ, ಟೊಮೆಟೋ- ಒಂದು, ಕೊತ್ತಂಬರಿಸೊಪ್ಪು ಸ್ವಲ್ಪ, ಸೇವ್‌ ಸ್ವಲ್ಪ.

ಮಸಾಲೆಗೆ : ಈರುಳ್ಳಿ- ಒಂದು, ಟೊಮೆಟೊ- ಒಂದು, ಹುರಿಗಡಲೆ ಪೌಡರ- ಎರಡು ಟೀ ಚಮಚ, ಹುಣಸೆ ರಸ- ಅರ್ಧ ಕಪ್‌, ಬೆಲ್ಲ- ಒಂದೂವರೆ ಟೀ ಚಮಚ, ಹಸಿಮೆಣಸಿನಕಾಯಿ- ಎರಡು, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಕೂಡಲೆ ಸಾಸಿವೆ, ಜೀರಿಗೆ, ಕರಿಬೇವು ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ಅರಸಿನ, ಉಪ್ಪು ಹಾಕಿ ಮಿಶ್ರಮಾಡಿಕೊಳ್ಳಿ. ಟೊಮೆಟೋ ಹಾಕಿ ಬೆಂದ ನಂತರ ಹುಣಸೆ ಮತ್ತು ಬೆಲ್ಲದ ಮಿಶ್ರಣ ಹಾಕಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಎರಡು ಚಮಚ ಹುರಿಗಡಲೆ ಪುಡಿ ಹಾಕಿ ಮಸಾಲೆ ಗಟ್ಟಿಯಾದ ನಂತರ ಒಲೆಯಿಂದ ಇಳಿಸಿ. ಮಂಡಕ್ಕಿಯನ್ನು ಸರ್ವಿಂಗ್‌ ಪ್ಲೇಟ್‌ನಲ್ಲಿ ಹಾಕಿ ಇದಕ್ಕೆ ಟೊಮೆಟೋ, ನೀರುಳ್ಳಿ, ಹುರಿಗಡಲೆ ಪೌಡರ್‌ ಮತ್ತು ಬೇಕಷ್ಟು ಮಸಾಲೆ ಸೇರಿಸಿ ಮೇಲಿನಿಂದ ಕೊತ್ತಂಬರಿಸೊಪ್ಪು ಮತ್ತು ಸೇವ್‌ನ್ನು ಹರಡಿ ಸರ್ವ್‌ ಮಾಡಿ.

ಗೀತಸದಾ

ಟಾಪ್ ನ್ಯೂಸ್

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Baba Budan Dargah: Accusations of applying saffron on the tombs

Baba Budan Dargah: ಗೋರಿಗಳ ಮೇಲೆ ಕುಂಕುಮ‌ ಹಚ್ಚಿರುವ ಆರೋಪ

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

ಹೊಸ ಸೇರ್ಪಡೆ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Baba Budan Dargah: Accusations of applying saffron on the tombs

Baba Budan Dargah: ಗೋರಿಗಳ ಮೇಲೆ ಕುಂಕುಮ‌ ಹಚ್ಚಿರುವ ಆರೋಪ

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.