ಕ್ರಿಸ್‌ಮಸ್‌ ಸಂಭ್ರಮಕ್ಕೆ ಮೆಟ್ಟಿಲಿನ ಅಲಂಕಾರ


Team Udayavani, Dec 22, 2017, 1:18 PM IST

22-36.jpg

ಹಬ್ಬದ ಮನೆಯನ್ನು ಸುಂದರವಾಗಿ, ಮನೋಹರವಾಗಿ ಸಿಂಗರಿಸಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲ ಧರ್ಮದವರು ತಮ್ಮ ತಮ್ಮ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲೂ ಕ್ರಿಶ್ಚಿಯನ್‌ ಬಂಧುಗಳಿಗೆ ಪ್ರಿಯವಾದ ಕ್ರಿಸ್‌ಮಸ್‌ ಹಬ್ಬ ಬಂದೇ ಬಿಟ್ಟಿದೆ. ಕೇವಲ ಮೂರೇ ದಿನ ಉಳಿದಿವೆ. ಸಂಭ್ರಮವೆಂಬುದರಲ್ಲಿ ಮತಧರ್ಮಗಳ ಭೇದವಿಲ್ಲ. ಕೆಲವೆಡೆ ಎಲ್ಲರೂ ಸಮಾನ ಪ್ರೀತಿಯಿಂದ ಮತ್ತು ಮೋಜಿನಿಂದ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಬ್ಬವನ್ನು ಆಚರಿಸಲು ಸಿದ್ಧರಾಗುತ್ತಾರೆ. ಮುಖ್ಯವಾಗಿ, ಹಬ್ಬದ ಸಂದರ್ಭದಲ್ಲಿ  ತಮ್ಮ ಮನೆಯನ್ನು ಹೇಗೆ ಅಲಂಕರಿಸುವುದು ಎನ್ನುವ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ.     ಹಬ್ಬದ ಸಮಯದಲ್ಲಿ ಮಾಡುವ ಅಲಂಕಾರಗಳು ಹಬ್ಬವನ್ನು ಸ್ವಾಗತಿಸುವಲ್ಲಿ, ಮೆರುಗನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಮನೆಯ ವಿವಿಧ ಭಾಗಗಳಿಗೆ ಮಾಡಬೇಕಾದ ಅಲಂಕಾರಗಳ ಬಗ್ಗೆ ಆಯಾ ಮನೆಯವರಲ್ಲಿ ಹಲವಾರು ಆಲೋಚನೆಗಳಿರಬಹುದು. ಅದನ್ನು ಹೇಗೆ ಮಾಡುವುದು ಎನ್ನುವ ಗೊಂದಲ. ಸ್ವಲ್ಪ ಪರಿಶ್ರಮ ವಹಿಸಿದರೆ, ಮನೆಯನ್ನು ಸುಂದರವಾಗಿಸಬಹುದಾಗಿದೆ. ಕ್ರಿಸ್‌ಮಸ್‌ ಅಲಂಕಾರಗಳಲ್ಲಿ ಮೆಟ್ಟಿಲಿನ ಅಲಂಕಾರ ಒಂದು ಆಸಕ್ತಿದಾಯಕ ಭಾಗವಾಗಿದೆ. ಹೊರಾಂಗಣ ಅಲಂಕಾರ, ಕ್ರಿಸ್‌ಮಸ್‌ ಟ್ರೀ ಅಲಂಕಾರ ಮತ್ತು ಮಾಂಟಲ್‌ ಅಲಂಕಾರಗಳನ್ನು ಪೂರ್ಣಗೊಳಿಸಲು ಮೆಟ್ಟಲಿನ ಅಲಂಕಾರವನ್ನು ಮಾಡಲೇಬೇಕು. ಹೊಸ್ತಿಲಿನ ಅಲಂಕಾರವು ಇಡೀ ಮನೆಯ ಸೌಂದರ್ಯ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ.

ಹೂವಿನ ಅಲಂಕಾರ
ಮನೆಯ ಮೆಟ್ಟಿಲಿನ ಶೈಲಿಯನ್ನು ಆಧರಿಸಿ ಸಿಂಗರಿಸಬೇಕಾಗುತ್ತದೆ. ಹಳೆಯ ಅಥವಾ ಆಧುನಿಕ ಶೈಲಿಯ ಮೆಟ್ಟಿಲಾಗಿರಬಹುದು, ಹೂವಿನ ಅಲಂಕಾರ ಮೆಟ್ಟಿಲಿನ ಸುಂದರತೆಯನ್ನು ಹೆಚ್ಚಿಸಬಹುದು. ರೆಡ್‌, ಎಲ್ಲೋ, ಪಿಂಕ್‌ ರೋಸ್‌ಗಳನ್ನು ಬಳಸಿದರೆ ಉತ್ತಮ. ಇವುಗಳ ನಡುವೆ ಒಂದೊಂದು ಡೇಲಿಯಾ ಮತ್ತು ಲ್ಯಾವೆಂಡರ್‌ಗಳ ಹೂಗುತ್ಛಗಳಿಂದ ಸಿಂಗರಿಸಬಹುದಾಗಿದೆ. 

ಬೆಳಕುಗಳ ಅಲಂಕಾರ
ಹೂಗಳ ಅಲಂಕಾರದ ನಂತರ ದೀಪಾಲಂಕಾರದ ವೈಭವ ಮ್ಯಾಜಿಕ್‌ ಮಾಡುತ್ತದೆ. ಕ್ರಿಸ್‌ಮಸ್‌ ಅಲಂಕಾರವನ್ನು ಹೆಚ್ಚಿಸಲು ಮೆಟ್ಟಿಲಿನ ಕಟಕಟೆಯ ಸುತ್ತ ಸುಮಾರು ಸಣ್ಣ ದೀಪಗಳಿಂದ ಆಕರ್ಷಕ ಶೃಂಗಾರ ಮಾಡಬೇಕು. ಇದು ಮೆಟ್ಟಿಲಿನ ಅಲಂಕಾರಕ್ಕೆ ಹೊಸ ಸೊಬಗನ್ನು ನೀಡುತ್ತದೆ. ಹೂಮಾಲೆಯಂತೆ ಹೆಣೆದ ದೀಪಗಳು ಕಣ್ಣುಗಳಿಗೆ ನಿಜವಾದ ಹಬ್ಬದ ಅನುಭವವನ್ನು ನೀಡುತ್ತದೆ.

ಸ್ಯಾಟಿನ್‌ ಬಟ್ಟೆ , ಸ್ಯಾಟಿನ್‌ ರಿಬ್ಬನ್‌ನಿಂದ ಅಲಂಕಾರ 
ವಿವಿಧ ಬಣ್ಣಗಳ ಸ್ಯಾಟಿನ್‌ ಬಟ್ಟೆಯನ್ನು ಆಯ್ಕೆ ಮಾಡಬೇಕು. ಒಳ್ಳೆಯ ಕಾಂಬಿನೇಷನ್‌ ಇರುವ ಬಣ್ಣದ ಬಟ್ಟೆಯಿಂದ ಮೆಟ್ಟಿrಲನ್ನು ಸಿಂಗರಿಸಬೇಕು. ರೆಡ್‌, ವೈಟ್‌ ಮತ್ತು ಗೋಲ್ಡನ್‌ ಕಲರ್‌ ಉತ್ತಮವಾಗಿ ಕಾಣುತ್ತದೆ. ಇದು ಮನೆಗೆ ರೊಮ್ಯಾಂಟಿಕ್‌ ಮತ್ತು ಲಕ್ಷುರಿ ಲುಕ್‌ ನೀಡುತ್ತದೆ. ಇದರೊಂದಿಗೆ ವಿವಿಧ ಬಣ್ಣಗಳ ರಿಬ್ಬನ್‌ಗಳನ್ನು ಖರೀದಿಸಿ ಮೆಟ್ಟಲಿನ ಬದಿಗಳಿಗೆ ಸುತ್ತಿದರೆ ಮೆಟ್ಟಿrಲಿಗೆ ಮಾಡರ್ನ್ ಲುಕ್‌! 

ಕ್ರಿಸ್‌ಮಸ್‌ ಆಭರಣಗಳಿಂದ ಶೃಂಗಾರ
ಮೆಟ್ಟಿಲುಗಳಿಗೆ ಕ್ರಿಸ್‌ಮಸ್‌ ಆಭರಣಗಳಿಂದ ಅಲಂಕರಿಸಬಹುದು. ಕ್ರಿಸ್‌ಮಸ್‌ ಟ್ರೀ ಅಲಂಕಾರದ ನಂತರ ಹೆಚ್ಚುವರಿ ಉಳಿದ ಕ್ರಿಸ್‌ಮಸ್‌ ಆಭರಣಗಳನ್ನು ಇಲ್ಲಿ ಬಳಸಬಹುದಾಗಿದೆ. 20-30 ಆಭರಣಗಳನ್ನು ಒಂದು ಮಾಲೆ ತರಹ ಮಾಡಿ ಮೆಟ್ಟಿrಲುಗಳಿಗೆ ನೇತಾಡುವ ರೀತಿಯಲ್ಲಿ ಕಟ್ಟಬಹುದು. ಉದಾಹರಣೆಗೆ ಗೋಲ್ಡನ್‌, ರೆಡ್‌ ಬಾಲ್ಸ್‌ಗಳು, ಸ್ಟಾರ್‌ಗಳು, ಗಿಫ್ಟ್ಗಳು. ಇವುಗಳ ಜೊತೆಗೆ ಮಿನುಗು ದೀಪಗಳನ್ನು ಸೇರಿಸಿದರೆ ಎಲ್ಲರ ಕಣ್ಣು ಅಲಂಕಾರದ ಮೇಲೆ ಇರುವ ಹಾಗೆ ಮಾಡುತ್ತದೆ.

ಸ್ನೋ ಲುಕ್‌ನ ಸೊಬಗು
ಮೆಟ್ಟಿಲುಗಳಿಗೆ ಚಳಿ ಪ್ರದೇಶದ ಅಥವಾ ಮಂಜಿನ ತರಹದ ಲುಕ್‌ ನೀಡಿದರೆ ಒಳ್ಳೆಯದು. ಹತ್ತಿಯ ಉಂಡೆಗಳನ್ನು ಮಾಡಿ ಹಿಮದುಂಡೆಗಳಂತೆ ಮೆಟ್ಟಲಿಗೆ ಅಂಟಿಸಬೇಕು. ಇದು ಮೆಟ್ಟಲು ಹಿಮದಿಂದ ಕೂಡಿದಂತೆ ಮಾಡುತ್ತದೆ. ಇದಲ್ಲದೆ ನೀವು ಬಿಳಿ ಬಣ್ಣದ ರಿಬ್ಬನ್‌, ಹೂ, ಸಿಲ್ವರ್‌ ಕಲರ್‌ ಚಿಕ್ಕ ಚಿಕ್ಕ ಕ್ರಿಸ್ಮಸ್‌ ಟ್ರೀಗಳನ್ನು ಬಳಸಿ ಮತ್ತು ಅಲ್ಲಲ್ಲಿ ಸಿಲ್ವರ್‌ ಬಣ್ಣದ ಚಿಕ್ಕ ಚಿಕ್ಕ ನಕ್ಷತ್ರಗಳಂತೆ ಹೋಲುವ ಗೂಡುದೀಪಗಳನ್ನು ಉಪಯೋಗಿಸಬಹುದು. ಮೆಟ್ಟಿಲುಗಳಿಗೆ ಬಿಳಿ ಬಣ್ಣದ ರತ್ನಗಂಬಳಿಯನ್ನು ಹೊದಿಸಬೇಕು. ಆದರೆ, ಬಿಳಿ ರತ್ನಗಂಬಳಿ ಕೊಳೆಯಾಗದಂತೆ ನೋಡಿಕೊಳ್ಳಬೇಕು. ಇದು ಮನೆಯ ವಾತಾವರಣವನ್ನು ಮತ್ತಷ್ಟು ಸುಂದರಗೊಳಿಸುತ್ತದೆೆ.

ಗ್ರೀನ್‌ ಲೀವ್ಸ್‌ ಬಂಚಸ್‌ ಮತ್ತು ವರ್ಣಮಯ ಹಣ್ಣುಗಳ ಬಳಕೆ
ಹಿತ್ತಲಲ್ಲಿ ವಿಧ ವಿಧದ ವಿನ್ಯಾಸದ ಕ್ರೋಟಾನ್‌ ಗಿಡಗಳಿದ್ದರೆ ಅದರ ಎಲೆಗಳನ್ನು ಬಳಸಬಹುದು. ಈ ಎಲೆಗಳನ್ನು ಕೆಂಪು ರಿಬ್ಬನ್‌ನಿಂದ ಒಂದೆಡೆ ಕಟ್ಟಿ ನಂತರ ಮೆಟ್ಟಿrಲಿನ ಕಟಕಟೆಗೆ ಕಟ್ಟಬಹುದು. ಇದರ ಜೊತೆಗೆ ಇಷ್ಟ ಎನಿಸುವ ಹೂ ಮತ್ತು ಹಣ್ಣುಗಳನ್ನು ಒಳಸಬಹುದು. ಇದು ನೈಸರ್ಗಿಕ ಪರಿಸರದ ಲುಕನ್ನು ನೀಡುತ್ತದೆ. ಅವರವರ ಅಭಿರುಚಿಗೆ ಅನುಸಾರವಾಗಿ ಯಾವುದೇ ಹಸಿರು ಎಲೆಗಳನ್ನು ಬಳಸಿ ಮೆಟ್ಟಿಲನ್ನು ಅಲಂಕರಿಸಬಹುದಾಗಿದೆ.

ರೆಡ್‌ ಆ್ಯಂಡ್‌ ವೈಟ್‌ ಸಾಕ್ಸ್‌
    ಆಧುನಿಕ ಶೈಲಿಯ ಮೆಟ್ಟಿಲುಗಳಿಗೆ ರೆಡ್‌ ಮತ್ತು ವ್ಹೆ„ಟ್‌ ಸಾಕ್ಸ್‌ ನಿಂದ ಮಾಡಿದ ಅಲಂಕಾರ ತುಂಬಾ ಸುಂದರವಾಗಿ ಕಾಣುತ್ತದೆ. ಸಾಂತಾಕ್ಲಾಸ್‌ನ ನೆನಪನ್ನು ನೀಡುವ ಈ ಅಲಂಕಾರ ಮಕ್ಕಳಿಗೆ ತುಂಬಾ ಇಷ್ಟವಾಗಬಹುದು. ಈ ಸಾಕ್ಸ್‌ಗಳ ಮಧ್ಯೆ ಚಿಕ್ಕ ಚಿಕ್ಕ ಸಾಂತಾಕ್ಲಾಸ್‌ ಗೊಂಬೆಗಳನ್ನು ಇಡಬಹುದಾಗಿದೆ. 

ಮೆಟ್ಟಿಲಿನ ಬದಿಯಲ್ಲಿ ಕ್ರಿಸ್‌ಮಸ್‌ ಟ್ರೀ 
    ಮೆಟ್ಟಿಲಿನ ಆರಂಭದಲ್ಲಿಯೇ ಬದಿಯಲ್ಲಿ ಸುಂದರವಾಗಿ ಶೃಂಗರಿಸಿದ ಕ್ರಿಸ್‌ಮಸ್‌ ಟ್ರೀ ಇಟ್ಟರೆ, ಇದು ಮೆಟ್ಟಿಲಿನ ಅಲಂಕಾರಕ್ಕೆ ಇನ್ನಷ್ಟು  ಮೆರಗನ್ನು ನೀಡುತ್ತದೆ. ಅಲ್ಲದೆ, ಮೆಟ್ಟಿಲು ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಅದಲ್ಲದೆ, ಮನೆಯಲ್ಲಿ ಸಾಂತಾಕ್ಲಾಸ್‌ ದೊಡ್ಡ ಗೊಂಬೆ ಇದ್ದರೆ ಅದನ್ನು ಇನ್ನೊಂದು ಬದಿಗೆ ಇಡುವುದರ ಮೂಲಕ ಮೆಟ್ಟಿrಲಿನ ಸೊಬಗನ್ನು ಹೆಚ್ಚಿಸಬಹುದು. 

ಉಡುಗೊರೆಗಳು
ಮೆಟ್ಟಿಲಿನ ಬದಿಗಳಿಗೆ ನಿಜವಾದ ಅಥವಾ ನಕಲಿ ಉಡುಗೊರೆಗಳ ಡಬ್ಬಗಳನ್ನು ನೇತಾಡಿಸುವುದು ಮಕ್ಕಳನ್ನು ಆಕರ್ಷಿಸುತ್ತವೆ. ಮನೆಯಲ್ಲಿ ಸುಲಭವಾಗಿ ದೊರಕುವ ಕಲರ್‌ಫ‌ುಲ್‌ ಗಿಫ್ಟ್ ಪೇಪರ್‌ಗಳನ್ನು ಕಲಾತ್ಮಕತೆಗೆ ಅನುಸಾರವಾಗಿ ಬಳಸಿ ಮೆಟ್ಟಿಲನ್ನು ಅಲಂಕರಿಸಿ ಕ್ರಿಸ್‌ಮಸ್‌ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬಹುದು.

ಸುಲಭಾ ಆರ್‌ . ಭಟ್‌

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.