ಸ್ಟನ್ನಿಂಗ್ ಬ್ಲೌಸ್ ಬ್ಯಾಕ್ ಡಿಸೈನುಗಳು
Team Udayavani, Jun 1, 2018, 6:00 AM IST
ಸೃಜನಶೀಲತೆಯ ಪರಿಣಾಮವಾಗಿ ಒಂದಕ್ಕಿಂತ ಒಂದು ಭಿನ್ನವೆನಿಸುವ ಬ್ಯಾಕ್ ಡಿಸೈನುಗಳು ಮಾದರಿಗೊಳ್ಳುತ್ತಿವೆ. ಇಂದಿನ ಅಂಕಣದಲ್ಲಿ ಇನ್ನೂ ಹಲವು ಡಿಸೈನುಗಳ ಮಾಹಿತಿಯನ್ನು ನೀಡಲಾಗಿದೆ.
ಓವರ್‌ಲ್ಯಾಪಿಂಗ್ ಸ್ಟೈಲ್ ಬ್ಲೌಸ್: ಇದು ಹಿಂಭಾಗದಲ್ಲಿ ಎರಡೆರಡು ಲೇಯರುಗಳನ್ನು ತೆಗೆದುಕೊಂಡು ತಯಾರಿಸಲಾದ ಬಗೆಯ ಬ್ಯಾಕ್ ಡಿಸೈನಾಗಿದೆ. ಡಬಲ್ ಶೇಡೆಡ್ ಬ್ಲೌಸುಗಳಲ್ಲಿ ಈ ಬಗೆಯ ಬ್ಯಾಕ್ ಡಿಸೈನನ್ನು ಹೆಚ್ಚಾಗಿ ಬಳಸಲಾಗುತ್ತದೆ. ಡಬಲ್ ಲೇಯರ್ ಅನ್ನು ಹೈಲೈಟ್ ಮಾಡಲು ಬಾರ್ಡರ್ ಲೇಸುಗಳನ್ನು ಬಳಸಲಾಗುತ್ತದೆ. ಲೇಯರುಗಳ ಡಿಸೈನು ಹಲವು ವಿಧಗಳಲ್ಲಿ ಮಾಡಬಹುದಾದ ಸಾಧ್ಯತೆಗಳಿವೆ. ಸುಂದರವಾದ ಡಿಸೈನರ್ ಬ್ಲೌಸಾದ ಇವುಗಳು ಎಲ್ಲಾ ಬಗೆಯ ಸೀರೆಗಳಿಗೂ ಹೊಂದುತ್ತವೆ.
ಟಿ ಶೇಪ್ಡ್ ಓಪನ್ ಬ್ಯಾಕ್‌ನೆಕ್ ಬ್ಲೌಸ್:
ಇವುಗಳು ಅತ್ಯಂತ ಬೋಲ್ಡ್ ಎನಿಸುವಂತಹ ಬ್ಯಾಕ್ ಡಿಸೈನುಗಳು. ಪೂರ್ತಿಯಾಗಿ ಬ್ಯಾಕ್ಲೆಸ್ ಎನಿಸಿದರೂ ಕುತ್ತಿಗೆಯಲ್ಲಿ ಪಟ್ಟಿ ಬಂದು, ಮಧ್ಯದಲ್ಲಿ ಒಂದು ಪಟ್ಟಿ, ಕೊನೆಯಲ್ಲಿ ಕೆಳಗಿನ ಪಟ್ಟಿಗೆ ಸೇರುವುದರ ಮೂಲಕ “ಟಿ’ ಆಕಾರವನ್ನು ಕೊಡುತ್ತದೆ. ಬಾರ್ಡರ್ ಲೇಸುಗಳನ್ನು ಪಟ್ಟಿಯಾಗಿ ಬಳಸಿದರೆ ಬ್ಲೌಸಿನ ಅಂದ ದ್ವಿಗುಣಗೊಳ್ಳುವುದರಲ್ಲಿ ಸಂಶಯವಿಲ್ಲ. ಯುವತಿಯರನ್ನು ಆಕರ್ಷಿಸುತ್ತಿರುವ ಈ ಬಗೆಯ ಬ್ಯಾಕ್ ಡಿಸೈನುಗಳು ಟ್ರೆಂಡಿಯಾಗಿರುವ ಬಗೆಗಳಾಗಿವೆ.
ಟಿ ಶೇಪ್ಡ್ ಓಪನ್ ಬ್ಯಾಕ್‌ನೆಕ್ ಬ್ಲೌಸ್:
ಇವುಗಳು ಕೂಡ ಹೈನೆಕ್ಡ್ ಬ್ಲೌಸುಗಳಾಗಿದ್ದು ಹಿಂಭಾಗದಲ್ಲಿ ಜಿಪ್ಪರ್ ಕ್ಲೋಸ್ ವ್ಯವಸ್ಥೆಯಿರುತ್ತದೆ. ಇವುಗಳು ಬೇಸಿಗೆಯಲ್ಲಿ ಧರಿಸಲು ಆಷ್ಟೊಂದು ಸೂಕ್ತವಾದುದಲ್ಲ. ಸಿಂಪಲ್ ಮತ್ತು ಎಲಿಗ್ಯಾಂಟ್ ಸ್ಟೆ çಲ್ ಎನಿಸುವ ಇವುಗಳು ಕಾಟನ್ ಸೀರೆಗಳಿಗ ಹೆಚ್ಚು ಸೂಕ್ತವೆನಿಸುತ್ತವೆ.
ವೈಡ್ ಯು-ಕಟ್ ಬ್ಲೌಸ್ (ಜ್ಯುವೆಲ್ಡ್):
ಇವುಗಳನ್ನು ಮಧುವಣಗಿತ್ತಿಯ ಸೀರೆಗೆ ಬ್ಲೌಸ್ ಮಾದರಿಗೊಳಿಸುವಲ್ಲಿ ಬಳಸಿಕೊಳ್ಳಬಹುದು. ಓಪನ್ ಬ್ಯಾಕ್‌ನೆಕ್ ಆಗಿದ್ದು ವಿವಿಧ ಬಗೆಯ ಮಣಿಗಳ ಮಾಲೆಗಳಿಂದ ಅಲಂಕರಿಸಲಾಗಿರುತ್ತದೆ. ರಿಚ್ ಲುಕ್ಕನ್ನು ಕೊಡುವ ಸಲುವಾಗಿ ಗೋಲ್ಡನ್ ಚೈನುಗಳು ಅಥವಾ ಮಾಲೆಗಳಿಂದ ಬ್ಯಾಕ್ ಅನ್ನು ಅಲಂಕರಿಸುವುದರ ಮೂಲಕ ನಿಮ್ಮ ಸಾಂಪ್ರದಾಯಿಕ ರೇಷ್ಮೆ ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಲೇಯರುಗಳಲ್ಲಿ ಒಂದರ ಕೆಳಗೆ ಒಂದರಂತೆ ಜೋಡಿಸುವುದರ ಮೂಲಕ ಬ್ರೈಡಲ್ ಲುಕ್ಕನ್ನು ಪರಿಪೂರ್ಣಗೊಳಿಬಹುದು.
ಓಪನ್ ಬ್ಯಾಕ್ (ಮಲ್ಟಿಪಲ್ ವರ್ಟಿಕಲ್ ಸ್ಟ್ರಿಪ್ಸ್) ಬ್ಲೌಸ್:
ಹಾರಿಸಾಂಟಲ್ ಸ್ಟ್ರಿಪ್ಪುಗಳ ಬದಲು ವರ್ಟಿಕಲ್ ಸ್ಟ್ರಿಪ್ಪುಗಳಿರುವಂತಹ ಡಿಸೈನನ್ನು ಹೊಂದಿರುವ ಬ್ಲೌಸುಗಳಿವು. ಅಗಲವಾದ ಓಪನ್ ಬ್ಯಾಕ್ ಅನ್ನು ಹೊಂದಿರುವ ಈ ಡಿಸೈನ್ ಬಹಳ ಟ್ರೆಂಡಿಯಾಗಿರುವ ಮಾದರಿಯಾಗಿದೆ. ಕಾಂಟ್ರಾಸ್ಟ್ ಬಣ್ಣದ ಬ್ಲೌಸುಗಳಿರುವ ಸೀರೆಗಳಿಗೆ ಸೀರೆಯ ಬಣ್ಣದ ಸ್ಟ್ರಿಪ್ಪುಗಳನ್ನು ಈ ರೀತಿಯಾಗಿ ವರ್ಟಿಕಲ್ ಆಗಿ ಜೋಡಿಸುವುದರ ಮೂಲಕ ಈ ಬಗೆಯ ಬ್ಲೌಸುಗಳು ಸಿದ್ಧಗೊಳ್ಳುತ್ತದೆ.
ಇನ್ವರ್ಟೆಡ್ ಯು ಕಟ್ (ಡಿಟೈಲ್ಡ್ ವಿತ್ ಟ್ಯಾಸೆಲ್ಸ…, ಹ್ಯಾಂಗಿಂಗ್ಸ್) ಬ್ಲೌಸ್ : ಕಿಟಕಿಯಂಥ ಆಕಾರದ ಎಂದರೆ ಉಲ್ಟಾ ಯುಕಟ್ ಔಟನ್ನು ಹೊಂದಿರುವ ಈ ಬಗೆಯ ಬ್ಯಾಕ್ ನೆಕ್ಕುಗಳು ಬಹಳ ಹೊಸದಾಗಿರುವ ಮತ್ತು ಸುಂದರವಾಗಿರುವ ಸ್ಟೆಲಾಗಿದೆ. ಕಟೌಟ್ ಬಾರ್ಡರುಗಳಲ್ಲಿ ಚಿಕ್ಕ ಚಿಕ್ಕ ಟ್ಯಾಸೆಲ್ ಲೇಸುಗಳನ್ನು ಹಾಕುವುದರ ಮೂಲಕ ಬ್ಲೌಸನ್ನು ಇನ್ನಷ್ಟು ಅಂದಗೊಳಿಸಿಕೊಳ್ಳಬಹುದು.
ವೈಡ್ ಯು ವಿಂಡೋ ಬ್ಯಾಕ್‌ನೆಕ್( ಸ್ಟ್ರಿಪ್ ಮತ್ತು ಸ್ಟ್ರಿಂಗ್ಸ್):
ವೈಡ್ ಆಗಿರುವ ಬ್ಯಾಕ್‌ನೆಕ್ ಇದಾಗಿದ್ದು ಮೇಲ್ಭಾಗದಲ್ಲಿ ಸ್ಟ್ರಿಪ್ ಮತ್ತು ಕೆಳಭಾಗದಲ್ಲಿ ಸ್ಟ್ರಿಂಗ್ಸ್ ಇರುತ್ತವೆ. ಬಹಳ ಸುಂದರವಾಗಿರುವ ಇವುಗಳು ಎಲ್ಲಾ ಬಗೆಯ ಸೀರೆಗಳಿಗೂ ಮತ್ತು ಎಲ್ಲಾ ವಯೋಮಾನದವರಿಗೂ ಒಪ್ಪುವಂತಹ ಬಗೆಯಾಗಿದೆ.
ಹೈನೆಕ್ ಸ್ಕ್ವೇರ್ ಬ್ಯಾಕ್ ನೆಕ್ ಬ್ಲೌಸ್:
ಇವುಗಳು ಬಹಳ ಸ್ಟೈಲಿಶ್ ಆದ ಬಗೆಯ ಬ್ಲೌಸ್ ಡಿಸೈನುಗಳಾಗಿವೆ. ಹೆಸರಿಗೆ ತಕ್ಕಂತೆ ಹೈನೆಕ್ ಬ್ಲೌಸುಗಳಾಗಿದ್ದು ಕುತ್ತಿಗೆಯ ಮೇಲೆ ಒಂದು ಪಟ್ಟಿಯಿದ್ದು ಅಗಲವಾದ ಸ್ಕ್ವೇರ್‌ಬ್ಯಾಕ್ ಡಿಸೈನನ್ನು ಹೊಂದಿರುತ್ತವೆ. ಬಟನ್ ಅಥವ ಹುಕ್ ಕ್ಲೋಸ್ ಇರುವ ಈ ಬಗೆಯ ಬ್ಲೌಸ್ ಡಿಸೈನುಗಳು ಸ್ಲಿವ್ಲ್ಸ್ ಡಿಸೈನಿನೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ಕಾಟನ್ ಸೀರೆಗಳೊಂದಿಗೆ ಬಹಳ ಚೆನ್ನಾಗಿ ಒಪ್ಪುವ ಇವುಗಳು ಸೀರೆಗಳಿಗೆ ಮಾಡರ್ನ್ ಲುಕ್ಕನ್ನು ನೀಡುತ್ತದೆ.
ಲಾಂಗ್ ವರ್ಟಿಕಲ್ ಸ್ಲಿಟ್ ಬ್ಯಾಕ್‌ನೆಕ್ ಬ್ಲೌಸ್:
ಬ್ಲೌಸಿನ ಹಿಂಭಾಗದಲ್ಲಿ ಉದ್ದನೆಯ ಸ್ಲಿಟ್ ಇರುತ್ತವೆ. ಮೇಲ್ಭಾಗದಲ್ಲಿ ಹುಕ್ ಅಥವ ಬಟನ್ ಕ್ಲೋಷರ್ ಮಾದರಿಯಿರುವುದನ್ನು ನೋಡಬಹುದು. ಇವುಗಳು ಸ್ಲಿವ್ಲ್ಸ್ ಅಥವಾ ಶಾರ್ಟ್ ಸ್ಲಿವ್ಲ್ಸ್ ಬ್ಲೌಸುಗಳೊಂದಿಗೆ ಉತ್ತಮವಾಗಿ ಮ್ಯಾಚ್ ಆಗುತ್ತವೆ.
ಐ ಕ್ಯಾಚಿಂಗ್ ಕ್ರಾಪ್ಡ್ ಬ್ಯಾಕ್‌ನೆಕ್ ಬ್ಲೌಸ್:
ಮೇಲ್ಭಾಗದಲ್ಲಿ ಮಾತ್ರಾ ಬಟ್ಟೆ ಬಂದು ಕ್ರಾಪ್ ಟಾಪಿನಂತೆ ಕಾಣುವ ಇವುಗಳು ಕೆಳಭಾಗದಲ್ಲಿ ಓಪನ್ ಬ್ಯಾಕ್ ಇರುತ್ತದೆ. ಕೆಲವೊಮ್ಮೆ ಕೆಳಭಾಗದಲ್ಲಿ ಸ್ಟ್ರಿಂಗ್ ಟೈ ಮಾದರಿಯೂ ಕೂಡ ಇರುವುದನ್ನು ನೋಡಬಹುದಾಗಿದೆ. ಬಹಳ ಸ್ಟೆçಲಿಶ್ ಮತ್ತು ಬೋಲ್ಡ್ ಮಾದರಿಯ ಬ್ಲೌಸುಗಳಿವಾಗಿವೆ.
ಕ್ರಾಸೆಟ್ ಸ್ಟೈಲ್ (ಶೂ ಲೇಸ್) ಬ್ಲೌಸ್:
ಹೆಸರಿಗೆ ತಕ್ಕಂತೆ ಹಿಂಭಾಗದಲ್ಲಿ ಕ್ರಾಸೆಟ್ ಸ್ಟೆçಲ್ ನಾಟ್ ಮಾದರಿಯಿದ್ದು ಸಾದಾ ಬ್ಲೌಸುಗಳ ಉದ್ದಕ್ಕಿಂತ ಹೆಚ್ಚಿನ ಉದ್ದವನ್ನು ಹೊಂದಿರುತ್ತದೆ. ಶೂ ಲೇಸಿನಂತೆ ಕಟ್ಟುವ ಬ್ಯಾಕ್ ಡಿಸೈನನ್ನು ಹೊಂದಿರುವ ಬ್ಲೌಸುಗಳಿವಾಗಿವೆ. ಫ್ಯಾನ್ಸಿ ಸೀರೆಗಳೊಂದಿಗೆ ಈ ಬಗೆಯ ಬ್ಲೌಸುಗಳು ಸುಂದರವಾಗಿ ಕಾಣುತ್ತವೆ.
ರಾ ಸಿಲ್ಕ್ ಕ್ಲೋಸ್ಡ್ ಬ್ಯಾಕ್‌ನೆಕ್ ಡಿಸೈನ್ ಬ್ಲೌಸ್:
ಇವುಗಳು ಬಹಳ ಸಿಂಪಲ್ ಆದ ಬ್ಲೌಸ್ ಡಿಸೈನಾಗಿದೆ. ರಾ ಸಿಲ್ಕ್ ಬಟ್ಟೆಗಳಿಂದ ತಯಾರಿಸಲಾದ ಬ್ಲೌಸುಗಳಿವಾಗಿದ್ದು ಕ್ಲೋಸ್ಡ್ ಬ್ಯಾಕ್ ಡಿಸೈನಾಗಿದೆ. ಕಲವೊಮ್ಮೆ ಪ್ಯಾಚುಗಳೂ ಕೂಡ ಬಂದಿರಬಹುದು. ಅಲ್ಲದೆ ಇವುಗಳು ಸಾಮಾನ್ಯವಾಗಿ ಹೈ ಬೋಟ್ ನೆಕ್ ಡಿಸೈನನ್ನು ಹಿಂಬದಿಯಲ್ಲಿ ಹೊಂದಿರುತ್ತವೆ. ಕಾಟನ್ ಮತ್ತು ರಾ ಸಿಲ್ಕ್ ಸೀರೆಗಳೊಂದಿಗೆ ಈ ಮಾದರಿಯ ಬ್ಲೌಸುಗಳು ಸುಂದರವಾಗಿ ಕಾಣುತ್ತವೆ. ಇವುಗಳು ಬೇಸಿಗೆಯಲ್ಲಿ ಅಷ್ಟೊಂದು ಆರಾಮದಾಯಕವೆನಿಸುವುದಿಲ್ಲ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.