ಸ್ಟನ್ನಿಂಗ್ ಸಾರಿ ಬ್ಲೌಸ್ ಬ್ಯಾಕ್ ಡಿಸೈನ್ಸ್
Team Udayavani, May 4, 2018, 6:00 AM IST
ಮೆಶ್ ಡಿಟೈಲ್ಡ್ ಬ್ಯಾಕ್ ನೆಕ್ ಬ್ಲೌಸ್: ಇವುಗಳು ಬ್ರೈಡಲ್ ಸೀರೆಗಳಿಗೆ ಬಹಳ ಚೆನ್ನಾಗಿ ಹೊಂದುವಂತಹ ಬಗೆಯವಾಗಿದ್ದು ಗ್ರ್ಯಾಂಡ್ ಲುಕ್ಕನ್ನು ನೀಡುತ್ತವೆ. ಹಿಂಭಾಗದಲ್ಲಿ ಸುಂದರವಾದ ಡೆಕೋರೇಟಿವ್ ತ್ರೆಡ್ಡುಗಳಿಂದ ತಯಾರಿಸಲಾದ ಮೆಶ್ ಡಿಟೈಲ್ ಇರುವ ಬಗೆಯ ಬ್ಲೌಸುಗಳಾಗಿವೆ. ಬ್ಲೌಸಿನ ಬಣ್ಣಕ್ಕನುಗುಣವಾಗಿ ತ್ರೆಡ್ಡುಗಳನ್ನು ಬಳಸಿ ಹೆಣೆದಂತಹ ಮಾದರಿಯುಳ್ಳ ಮೆಶ್ ಡೀಟೈಲಿಂಗ್ ಕೊಡುವ ಇವುಗಳು ಕಣ್ಮನ ಸೆಳೆಯುವಂತಿರುತ್ತವೆ. ಮೆಶ್ ಇರುವ ಭಾಗದಲ್ಲಿ ಯಾವ ಆಕಾರದ ನೆಕ್ ಡಿಸೈನನ್ನೂ ಮಾಡಿಕೊಡಲಾಗುತ್ತದೆ.
ಡಬಲ್ ನಾಟ್ ಬ್ಲೌಸ್: ಇವುಗಳು ಬ್ಯಾಕ್‌ನೆಕ್‌ನ ಮೇಲ್ಭಾಗ ಮತ್ತು ಕೆಳಭಾಗ ಎರಡೂ ಕಡೆಗಳಲ್ಲಿ ನಾಟ್ ಮಾಡುವಂತಹ ಸ್ಟೈಲಿನ ಬ್ಲೌಸುಗಳಿವುಗಳು. ಸ್ಲೀವ್ಲೆಸ್ ಬಗೆಯ ಬ್ಲೌಸುಗಳಿಗೆ ಈ ಸ್ಟೈಲಿನ ಬ್ಯಾಕ್‌ನೆಕ್ ಬಹಳ ಚೆನ್ನಾಗಿ ಕಾಣುತ್ತವೆ. ಮೇಲ್ಭಾಗದ ನಾಟ್ಗಳಲ್ಲಿ ಸುಂದರವಾದ ಟ್ಯಾಸೆಲ್ಲುಗಳನ್ನು ಬಳಸುವುದರಿಂದ ಬ್ಲೌಸಿನ ಅಂದ ಇಮ್ಮಡಿಗೊಳ್ಳುತ್ತದೆ.
ಡೀಪ್ ವಿ ಬ್ಯಾಕ್ ನೆಕ್ ವಿದ್ ಸೈಡ್ ಕಟ್ ಔಟ್: ಇವುಗಳು ಕ್ರಾಪ್ ಟಾಪುಗಳಲ್ಲಿ ಮತ್ತು ಲೆಹೆಂಗಾ ಬ್ಲೌಸುಗಳಲ್ಲಿ ಮೊದಲು ಬಳಸಲಾಗುತ್ತಿದ್ದು ಇದೀಗ ಸೀರೆಯ ಬ್ಲೌಸುಗಳಿಗಳಲ್ಲಿಯೂ ಮಾಡರ್ನ್ ಟಚ್ಚನ್ನು ಕೊಡುವಂತಹ ಈ ಬಗೆಯ ಬ್ಲೌಸುಗಳು ದೊರೆಯುತ್ತವೆ. ಫ್ಯಾನ್ಸಿ ಸೀರೆಗಳೊಂದಿಗೆ ಈ ಬಗೆಯ ಬ್ಲೌಸುಗಳು ಒಪ್ಪವಾಗಿ ಕಾಣುತ್ತದೆ. ಈ ಬಗೆಯ ಪ್ಲೆ„ನ್ ಬ್ಲೌಸುಗಳು ಸ್ಟೈಲಿಶ್ ಲುಕ್ಕನ್ನು ನೀಡುವಂಥವು. ಬದಿಯಲ್ಲಿ ತ್ರಿಕೋನಾಕಾರದ ಕಟ್ ಇರುವ ಈ ಬ್ಲೌಸುಗಳು ಯುವತಿಯರನ್ನು ಬಹುಬೇಗ ತನ್ನೆಡೆಗೆ ಆಕರ್ಷಿಸುತ್ತವೆ.
ಡೀಪ್ ಟ್ರೈಆಂಗಲ್ ಕಟ್ ಬ್ಲೌಸ್: ಹೆಸರಿಗೆ ತಕ್ಕಂತೆ ಡೀಪ್ ಟ್ರೈ ಆಂಗಲ್ ಕಟ್ ಇರುವ ಬ್ಲೌಸುಗಳಿವು. ಡಬಲ್ ನಾಟ್ ಬ್ಲೌಸುಗಳನ್ನೇ ಹೋಲುವ ಇವುಗಳು ಫ್ಯಾನ್ಸಿ, ನೆಟ್ ಸೀರೆಗಳೊಂದಿಗೆ ಬಹಳ ಸುಂದರವಾಗಿ ಕಾಣುತ್ತವೆ.
ಓಪನ್ ಬ್ಯಾಕ್ (ಡಬಲ್ ಸ್ಟ್ರಿಂಗ್-ಟ್ಯಾಸೆಲ್) ಬ್ಯಾಕ್ ಬ್ಲೌಸ್: ಈ ಬಗೆಯ ಬ್ಲೌಸುಗಳಲ್ಲಿ ಟ್ಯಾಸೆಲ್ಲುಗಳೇ ಹೈ ಲೈಟಾಗಿರುತ್ತವೆ. ಡಬಲ್ ನಾಟ್ ಬ್ಲೌಸುಗಳಿವಾಗಿದ್ದು ನಾಟುಗಳಿರುವೆಡೆ ಗ್ರ್ಯಾಂಡ್ ಆಗಿರುವ ಟ್ಯಾಸೆಲ್ಲುಗಳನ್ನು ಬಹಳ ಸಂಖ್ಯೆಯಲ್ಲಿ ಬಳಸಲಾಗಿರುತ್ತದೆ. ಮ್ಯಾಚಿಂಗ್ ಪಾಮ್ ಪಾಮ್ ಟ್ಯಾಸೆಲ್ಲುಗಳು ಇಲ್ಲಿ ಹೆಚ್ಚು ಬಳಸಲ್ಪಡುವಂಥವುಗಳು.
ಡಬಲ್ ರೌಂಡ್ ಬ್ಯಾಕ್ ಕಟ್ ಬ್ಲೌಸ್: ಎರಡು ವೃತ್ತಾಕರದ ಕಟ್ಗಳು ಒಂದರ ಕೆಳಗೆ ಒಂದರಂತೆ ಬರುವಂತೆ ತಯಾರಿಸಲಾದ ಬ್ಲೌಸುಗಳು ಇವುಗಳು. ಬಟನ್ ಅಥವಾ ಹುಕ್ ಕ್ಲೋಸರ್ ಸಿಸ್ಟಮ್ ಇರುವಂಥವುಗಳಾಗಿದ್ದು ಎಲ್ಲಾ ಬಗೆಯ ಸೀರೆಗಳಿಗೂ ಒಪ್ಪುವಂತಹ ಬಗೆಗಳು. ಟ್ರೆಡಿಶನಲ್ ಮತ್ತು ಮಾಡರ್ನ್ ಎರಡೂ ಲುಕ್ಕುಗಳಿಗೂ ಹೊಂದಿಕೊಳ್ಳುವ ಬ್ಯಾಕ್ ಡಿಸೈನುಗಳಿವು.
ಶೀರ್ ಓಪನ್ ಬ್ಯಾಕ್ ಬ್ಲೌಸ್: ಬ್ಯಾಕ್ ಪೋರ್ಶನ್ ನೆಟ್ ಕ್ಲಾತಿನಿಂದ ಕವರ್ ಆಗಿರುತ್ತವೆಯಾದ್ದರಿಂದ ಒಂದರ್ಥದಲ್ಲಿ ಬ್ಯಾಕ್‌ಲೆಸ್ ಬ್ಲೌಸುಗಳಂತೆಯೇ ತೋರುತ್ತವೆ. ನೆಟ್ ಸೀರೆಗಳಿಗೆ ಈ ಬಗೆಯ ಬ್ಲೌಸುಗಳು ಬಹಳ ಚೆನ್ನಾಗಿ ಕಾಣುತ್ತವೆ. ಹೈನೆಕ್‌ಗಳಿರುವ ಈ ಬಗೆಯ ಬ್ಲೌಸುಗಳು ಸ್ಟೈಲಿಶ್ ಆದ ಲುಕ್ಕನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅಷ್ಟೇ ಅಲ್ಲದೆ ವಿವಿಧ ಆಕಾರದ ಕಟ್‌ಗಳು ಕೂಡ ಹಿಂಭಾಗದಲ್ಲಿ ಇರುತ್ತವೆ.
ಶೀರ್ ಎಂಬ್ರಾಯಿಡ್ ಬ್ಲೌಸ್: ಇವುಗಳು ಮೇಲಿನ ಬಗೆಗಳಂತೆಯೇ ಆಗಿದ್ದು ಪ್ಲೆ„ ಆಗಿರದೆ ಹಿಂಭಾಗದಲ್ಲಿ ಎಂಬ್ರಾಯಿಡರಿ ಇರುತ್ತವೆ. ಎಂಬ್ರಾಯಿಡರಿ ಪ್ಯಾಚುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಬ್ಲೌಸುಗಳಿಗೆ ಮತ್ತು ಸೀರೆಗಳ ಬಣ್ಣಕ್ಕೆ ಹೋಲುವ ಪ್ಯಾಚ್‌ಗಳನ್ನು ಬ್ಯಾಕ್ ಮತ್ತು ಸ್ಲಿವ್ಸ್ಗೆ ಹಚ್ಚಿಕೊಳ್ಳುವುದರ ಮೂಲಕ ಸಾಧಾರಣ ಬ್ಲೌಸುಗಳನ್ನೂ ಕೂಡ ಡಿಸೈನರ್ ಬ್ಲೌಸಗಳನ್ನಾಗಿ ಬದಲಿಸಿಕೊಳ್ಳಬಹುದು.
ಶೀರ್ ರೆಕ್ಟ್ಯಾಂಗಲ್ ಕಟ್ ಬ್ಲೌಸ್: ಹೈನೆಕ್ ಬ್ಲೌಸುಗಳಾಗಿದ್ದು ಹಿಂಬದಿಯಲ್ಲಿ ರೆಕ್ಟ್ಯಾಂಗಲ್ ಕಟ್ನಲ್ಲಿ ನೆಟ್ ಬಟ್ಟೆಯಿದ್ದು ಬಟನ್ ಎನ್‌ಕ್ಲೋಸರ್ ಇರುತ್ತವೆ. ಬಹಳ ಸುಂದರವಾದ ಡಿಸೈನುಗಳಿವಾಗಿದ್ದು ಕಾಟನ್ ಸೀರೆಗಳಿಗೆ ಮತ್ತು ಫ್ಯಾನ್ಸಿ ಸೀರೆಗಳಿಗೂ ಒಪ್ಪುತ್ತವೆ. ಆದರೆ ಟ್ರೆಡಿಶನಲ್ ರೇಷ್ಮೆ ಅಥವಾ ಬಾರ್ಡರ್ ಸೀರೆಗಳಿಗೆ ಈ ಬಗೆಯ ಬ್ಲೌಸುಗಳು ಒಪ್ಪುದಿಲ್ಲ. ಡೆಕೋರೇಟಿವ್ ಬಟನ್ನುಗಳನ್ನು ಬಳಸುವುದರ ಮೂಲಕ ಬ್ಲೌಸುಗಳ ಬ್ಯಾಕ್ ಅನ್ನು ಸುಂದರವಾಗಿ ಡಿಸೈನ್ ಮಾಡಿಕೊಳ್ಳಬಹುದು.
ಸ್ಪೈಡರ್ ವೆಬ್ ಬ್ಲೌಸ್: ಇವುಗಳೂ ಒಂದು ಬಗೆಯಲ್ಲಿ ಬ್ಯಾಕ್ಲೆಸ್ ಬ್ಲೌಸುಗಳನ್ನೇ ಹೋಲುತ್ತವೆ. ಆದರೆ ಹಿಂಬದಿಯಲ್ಲಿ ಡೀಪ್ ವಿ ನೆಕ್ ಇದ್ದು ಉಳಿದ ಭಾಗದಲ್ಲಿ ಮೆಶ್ ಮಾದರಿಯ ಬಟ್ಟೆಯನ್ನು ಬಳಸಲಾಗಿರುತ್ತದೆ. ಇವುಗಳು ಶಿಫಾನ್ ಅಥವಾ ಜಾರ್ಜೆಟ್ ಸೀರೆಗಳಿಗೆ ಹೇಳಿಮಾಡಿಸಿದ ಡಿಸೈನುಗಳಾಗಿವೆ. ಸಿಂಪಲ್ ಮತ್ತು ಎಲಿಗ್ಯಾಂಟ್ ಲುಕ್ಕನ್ನು ಕೊಡುವ ಈ ಡಿಸೈನುಗಳು ಹೆಂಗಳೆಯರನ್ನು ಬಹುಬೇಗ ಆಕರ್ಷಿಸುತ್ತವೆ.
ಡಬಲ್ ಪಟ್ಟಿ ಬ್ಲೌಸ್: ಬ್ಲೌಸುಗಳ ಹಿಂಭಾಗದಲ್ಲಿ ಕೇವಲ ಎರಡು ಪಟ್ಟಿಗಳು ನಿರ್ದಿಷ್ಟ ಅಂತರದಲ್ಲಿರುತ್ತವೆ. ಸೀರೆಗಳಿಗೆ ಬಂದಿರುವ ಬಾರ್ಡರುಗಳನ್ನು ಪಟ್ಟಿಗಳಾಗಿ ಬಳಸಿಕೊಳ್ಳುವುದರ ಮೂಲಕ ಮಾಡರ್ನ್ ಬಗೆಯ ಬ್ಲೌಸುಗಳನ್ನು ಡಿಸೈನುಗೊಳಿಸಲಾಗುತ್ತದೆ. ಮೇಲ್ಭಾಗದಲ್ಲಿ ಟ್ಯಾಗನ್ನು ಬಳಸಬಹುದು. ಅದಕ್ಕೆ ಸೂಕ್ತವಾದ ಟ್ಯಾಸೆಲ್ಲುಗಳನ್ನೂ ಕೂಡ ಉಪಯೋಗಿಸಿಕೊಂಡು ಬ್ಲೌಸನ್ನು ಇನ್ನಷ್ಟು ಅಂದಗೊಳಿಸಬಹುದು. ಇವುಗಳೊಂದಿಗೆ ಲಾಂಗ್ ನೆಟ್ ಸ್ಲಿವ್ಸ್ ಬಂದರಂತೂ ಬ್ಲೌಸಿನ ಅಂದ ಇಮ್ಮಡಿಗೊಳ್ಳತ್ತವೆ.
ಕರ್ವ್ ಕಟ್ ಔಟ್ ಬ್ಲೌಸ್: ಇವುಗಳು ಲೇಟೆಸ್ಟ್ ಮತ್ತು ಟ್ರೆಂಡಿ ಮಾದರಿಯ ಬ್ಯಾಕ್ ಬ್ಲೌಸಾಗಿದೆ. ಕ್ರಾಸ್ ಓವಲ್ ಆಕಾರದ ಕಟ್ ಇರುವ ಈ ಬಗೆಯ ಬ್ಲೌಸುಗಳು ಪ್ಲೆ„ನ್ ಬ್ಲೌಸುಗಳಿಗೆ ಬಹಳ ಸುಂದರವಾಗಿ ಕಾಣುತ್ತವೆ. ಇವುಗಳೊಂದಿಗೆ ಹಾಲ್ಫ್ ಸ್ಲಿವ್ಸ್ ಅಥವಾ ತ್ರೀಫೋರ್ತ್ ಸ್ಲಿವ್ಸ್ ಬಹಳವಾಗಿ ಒಪ್ಪುತ್ತವೆ. ಇವು ಎಲ್ಲಾ ವಯೋಮಾನದವರಿಗೂ ಒಪ್ಪುವಂತಹ ಬ್ಯಾಕ್ ಡಿಸೈನುಗಳಾಗಿವೆ.
ಓವಲ್ ಕಟ್ ಔಟ್ ಬ್ಲೌಸ್: ಹೆಸರಿಗೆ ತಕ್ಕಂತೆ ಹಿಂಭಾಗದಲ್ಲಿ ಓವಲ್ ಕಟ್ ಔಟಿದ್ದು ಇದರ ಬಾರ್ಡರಿನಲ್ಲಿ ಸೀರೆಯ ಬಣ್ಣದ ಪಾಮ್ ಪಾಮುಗಳನ್ನು ಜೋಡಿಸುವುದರ ಮೂಲಕ ಫಂಕಿ ಲುಕ್ಕನ್ನು ನೀಡುತ್ತವೆ. ಸಿಂಪಲ್ ಎನಿಸುವ ಡಿಸೈನಾದರೂ ವಿಭಿನ್ನ ಲುಕ್ಕನ್ನು ನೀಡುತ್ತವೆ. ತೋಳುಗಳ ತುದಿಗಳಲ್ಲಿಯೂ ಪಾಮ್ ಪಾಮುಗಳನ್ನು ಜೋಡಿಸಿದಾಗ ಬ್ಲೌಸಿನ ಲುಕ್ಕು ಪೂರ್ಣಗೊಳ್ಳುತ್ತದೆ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.