ಬಿಸಿಲುಗಂದು ಮನೆಮದ್ದು


Team Udayavani, Apr 19, 2019, 6:00 AM IST

14

ಬೇಸಿಗೆ ಬಿಸಿಲಿನಲ್ಲಿ ನಡೆದಾಡಿದರೆ ಹಲವರನ್ನು ಕಾಡುತ್ತದೆ. ಚರ್ಮವು ಕಂದು ಬಣ್ಣಕ್ಕೆ ಬದಲಾಗುವುದರ ಜೊತೆಗೆ ಕೆಲವರಲ್ಲಿ ಮೊಗದ ಚರ್ಮದಲ್ಲಿ ಉರಿ, ತುರಿಕೆ ಕಾಣಿಸಿಕೊಳ್ಳುತ್ತದೆ. ಬಿಸಿಲುಗಂದು ನಿವಾರಣೆಗೆ ಸುಲಭ-ಸರಳ ಮನೆಮದ್ದು ಇಂತಿವೆ.

ನಿಂಬೆರಸ ಹಾಗೂ ಜೇನು
ನಿಂಬೆರಸ ಹಾಗೂ ಜೇನು ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ತೊಳೆಯಬೇಕು. ಸುಕೋಮಲ ಚರ್ಮ ಉಳ್ಳವರು ನಿಂಬೆರಸ, ಸೌತೆಕಾಯಿರಸ ಹಾಗೂ ಶುದ್ಧ ಗುಲಾಬಿ ಜಲ ಬೆರೆಸಿ ನಿತ್ಯ ಲೇಪಿಸಿದರೂ ಪರಿಣಾಮಕಾರಿ. ನಿಂಬೆರಸದಲ್ಲಿ ಸಿಟ್ರಿಕ್‌ ಆಮ್ಲದ ಅಂಶವಿದ್ದು, ಅದು ಚರ್ಮದ ಕಂದುಬಣ್ಣವನ್ನು ತಿಳಿಗೊಳಿಸಿದರೆ, ಜೇನು-ಸೌತೆರಸ ಹಾಗೂ ಗುಲಾಬಿ ಜಲಗಳು ಚರ್ಮಕ್ಕೆ ತಂಪು ಉಂಟುಮಾಡುತ್ತವೆ.

ಕಡಲೆಹಿಟ್ಟು ಅರಸಿನ ಫೇಸ್‌ಪ್ಯಾಕ್‌
4 ಚಮಚ ಕಡಲೆಹಿಟ್ಟು , 2 ಚಿಟಿಕೆ ಅರಸಿನ ಪುಡಿ, 5 ಚಮಚ ಗುಲಾಬಿ ಜಲ, 5 ಚಮಚ ಹಾಲು ಬೆರೆಸಿ ಫೇಸ್‌ಪ್ಯಾಕ್‌ ಮಾಡಬೇಕು. ಮುಖಕ್ಕೆ ಲೇಪಿಸಿ, 20 ನಿಮಿಷಗಳ ಬಳಿಕ ತೊಳೆಯಬೇಕು.

ಮಸೂರ್‌ದಾಲ್‌-ಕುಮಾರೀಲೇಪ
5 ಚಮಚ ಮಸೂರ್‌ದಾಲ್‌ ಪುಡಿ, 5 ಚಮಚ ಕುಮಾರೀ ತಿರುಳು (ಅಲೋವೆರಾ) ಹಾಗೂ 5 ಚಮಚ ಟೊಮೆಟೋ ರಸ- ಇವುಗಳನ್ನು ಬೆರೆಸಿ ಫೇಸ್‌ಪ್ಯಾಕ್‌ ಮಾಡಿ 1/2 ಗಂಟೆಯ ಬಳಿಕ ತೊಳೆಯಬೇಕು. ಎರಡು ದಿನಗಳಿಗೊಮ್ಮೆ ಬಳಸಿದರೆ ಬಿಸಿಲುಗಂದು ನಿವಾರಕ.

ಮಜ್ಜಿಗೆ ಹಾಗೂ ಓಟ್‌ಮೀಲ್‌ ಫೇಸ್‌ ಸ್ಕ್ರಬ್‌
15 ಚಮಚ ಮಜ್ಜಿಗೆಗೆ 10 ಚಮಚ ಓಟ್‌ಮೀಲ್‌ ಬೆರೆಸಿ ಚೆನ್ನಾಗಿ ಕಲಸಿ ಪೇಸ್ಟ್‌ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ ಮಾಲೀಶು ಮಾಡಬೇಕು. 15 ನಿಮಿಷಗಳ ಬಳಿಕ ತೊಳೆಯಬೇಕು. ಬಿಸಿಲುಗಂದು ನಿವಾರಣೆ ಮಾಡುವ ಈ ಸ್ಕ್ರಬ್‌ ವಾರಕ್ಕೆ 2 ಬಾರಿ ಬಳಸಬೇಕು.

ಸ್ಟ್ರಾಬೆರಿ ಹಾಗೂ ಹಾಲಿನ ಫೇಸ್‌ಮಾಸ್ಕ್
ಎರಡು ಚೆನ್ನಾಗಿ ಕಳಿತ ಸ್ಟ್ರಾಬೆರಿ ಹಣ್ಣುಗಳನ್ನು ಮಸೆದು ಹಾಲು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಮುಖಕ್ಕೆ ವರ್ತುಲಾಕಾರದಲ್ಲಿ ಮಾಲೀಶು ಮಾಡುತ್ತ ಲೇಪಿಸಿ 15 ನಿಮಿಷಗಳ ಬಳಿಕ ತೊಳೆದರೆ ಪರಿಣಾಮಕಾರಿ.

ಹಸಿ ಆಲೂಗಡ್ಡೆ ರಸ ಹಾಗೂ ನಿಂಬೆರಸ ಸಮಪ್ರಮಾಣದಲ್ಲಿ ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಲೇಪಿಸಬೇಕು. 15 ನಿಮಿಷಗಳ ಬಳಿಕ ತೊಳೆಯಬೇಕು.

ಚಂದನ ಪುಡಿ ಹಾಗೂ ರೋಸ್‌ವಾಟರ್‌
3 ಚಮಚ ಚಂದನ ಹಾಗೂ ರೋಸ್‌ವಾಟರ್‌ ಪುಡಿಯನ್ನು ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಲೇಪಿಸಬೇಕು. 15 ನಿಮಿಷದ ನಂತರ ತೊಳೆಯಬೇಕು. ಇದನ್ನು ನಿತ್ಯ ಲೇಪಿಸಿದರೆ ಬಿಸಿಲುಗಂದು ನಿವಾರಣೆಯಾಗುತ್ತದೆ. ಜೊತೆಗೆ ಬಿಸಿಲುಗಂದು ಬಾರದಂತೆ ತಡೆಗಟ್ಟಲೂ ಪರಿಣಾಮಕಾರಿ.

ಚಂದನ ಹಾಗೂ ಕಾಯಿಹಾಲಿನ ಫೇಸ್‌ಮಾಸ್ಕ್
5 ಚಮಚ ಚಂದನ ಪುಡಿ, 10 ಚಮಚ ದಪ್ಪ ಕಾಯಿಹಾಲು ಬೆರೆಸಿ ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ತೊಳೆಯಬೇಕು. ಇದೇ ರೀತಿ ಚಂದನ, ಎಳನೀರು, ಬಾದಾಮಿ ಅರೆದು ಲೇಪಿಸಿದರೂ ಪರಿಣಾಮಕಾರಿ. ಉರಿ ಇರುವಾಗ ಇದು ಉತ್ತಮ.

ಅನಾನಸು, ಜೇನಿ ಲೇಪ
10 ಚಮಚ ಅನಾನಸು ರಸ, 5 ಚಮಚ ಜೇನು ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಹಚ್ಚಬೇಕು. 20 ನಿಮಿಷದ ನಂತರ ತೊಳೆಯಬೇಕು.

ತಾಜಾ ಎಳೆ ಕ್ಯಾಬೇಜ್‌ ಎಲೆಯನ್ನು ಫ್ರಿಜ್‌ ನೀರಿನಲ್ಲಿ ಅದ್ದಿ ಬಿಸಿಲುಗಂದು ಇರುವ ಭಾಗದ ಮೇಲೆ ಇರಿಸಬೇಕು. 15 ನಿಮಿಷಗಳ ಬಳಿಕ ತೆಗೆಯಬೇಕು. ಕ್ಯಾಬೇಜ್‌ ಎಲೆರಸ ಹಾಗೂ ಜೇನು ಬೆರೆಸಿ ಲೇಪಿಸಿದರೂ ಹಿತಕರ.

ಹಾಗಲಕಾಯಿರಸ ಲೇಪ
ತಾಜಾ ಹಾಗಲಕಾಯಿಯನ್ನು ಕತ್ತರಿಸಿ, ಅರೆದು ಜ್ಯೂಸ್‌ ತೆಗೆಯಬೇಕು. ಇದನ್ನು ಮುಖಕ್ಕೆ ಲೇಪಿಸಿ 5 ನಿಮಿಷ ಮಾಲೀಶು ಮಾಡಬೇಕು. 10 ನಿಮಿಷಗಳ ಬಳಿಕ ತೊಳೆಯಬೇಕು. ಉರಿ, ತುರಿಕೆ ಇರುವ ಬಿಸಿಲುಗಂದು ನಿವಾರಣೆ ಮಾಡಲು ಇದು ಉತ್ತಮ. ದಿನಕ್ಕೆ 2 ಬಾರಿ ಇದನ್ನು ಉಪಯೋಗಿಸಬೇಕು.

ಮುಲ್ತಾನಿಮಿಟ್ಟಿ , ಅಲೋವೆರಾ ತಿರುಳು ಹಾಗೂ ಮೊಸರಿನ ಫೇಸ್‌ಮಾಸ್ಕ್
3 ಚಮಚ ಮುಲ್ತಾನಿಮಿಟ್ಟಿ , 2 ಚಮಚ ಅಲೋವೆರಾ ತಿರುಳು ಹಾಗೂ 5 ಚಮಚ ದಪ್ಪ ಸಿಹಿಮೊಸರು ಬೆರೆಸಿ ಮುಖಕ್ಕೆ ಲೇಪಿಸಬೇಕು. 1/2 ಗಂಟೆಯ ಬಳಿಕ ತೊಳೆದರೆ

ಬಿಸಿಲುಗಂದು ನಿವಾರಕ.
ಹಾಲಿನ ಕೆನೆ ಹಾಗೂ ಕೇಸರಿ ಲೇಪ
4 ಚಮಚ ಹಾಲಿನ ಕೆನೆಗೆ 8-10 ಕೇಸರಿ ದಳಗಳನ್ನು ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಬಿಸಿಲುಗಂದು ಇರುವ ಭಾಗಕ್ಕೆ ಹಚ್ಚಿ ಮಾಲೀಶು ಮಾಡಿ 15 ನಿಮಿಷಗಳ ಬಳಿಕ ತೊಳೆಯಬೇಕು. ಕೇಸರಿಯು ಉತ್ತಮ ವರ್ಣದ್ರವ್ಯ. ಹಾಲಿನ ಕೆನೆಯೂ ಚರ್ಮಕ್ಕೆ ಪೋಷಣೆ ಹಾಗೂ ಕಾಂತಿ ನೀಡುತ್ತದೆ.

ಕಾರ್ನ್ಮೀಲ್‌ ಹಾಗೂ ನಿಂಬೆರಸದ ಲೇಪ
4 ಚಮಚ ಕಾರ್ನ್ಮೀಲ್‌, 8 ಚಮಚ ನಿಂಬೆರಸ ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಲೇಪಿಸಿ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. 20 ನಿಮಿಷದ ಬಳಿಕ ತೊಳೆಯಬೇಕು. ಇದು ಉತ್ತಮ ಸðಬ್‌. ವಾರಕ್ಕೆ 2-3 ಬಾರಿ ಬಳಸಬೇಕು.

ಪಪ್ಪಾಯ, ಜೇನಿ ಲೇಪ
ಕಳಿತ ಪಪ್ಪಾಯದ ತಿರುಳು 4 ಚಮಚ ತೆಗೆದುಕೊಂಡು 4 ಚಮಚ ಜೇನು ಬೆರೆಸಿ, ಫೇಸ್‌ಪ್ಯಾಕ್‌ ಮಾಡಬೇಕು. 1/2 ಗಂಟೆಯ ಬಳಿಕ ತೊಳೆಯಬೇಕು. ಇದರ ನಿತ್ಯಲೇಪನ ಪರಿಣಾಮಕಾರಿ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.