ಸಮ್ಮರ್‌ ಟಿಪ್ಸ್‌


Team Udayavani, Feb 7, 2020, 5:00 AM IST

big-15

1 ತೀವ್ರ ಬಿಸಿಲಿಗೆ ಚರ್ಮವಷ್ಟೇ ಅಲ್ಲ, ಕೂದಲೂ ಹಾಳಾಗುತ್ತದೆ. ಧೂಳು ಮೆತ್ತಿಕೊಂಡು ಕೂದಲು ಹಳದಿಬಣ್ಣಕ್ಕೆ ತಿರುಗುವುಂಟು. ಆದ್ದರಿಂದ ವಾರಕ್ಕೊಮ್ಮೆ “ಹೇರ್‌ ಮಾಸ್ಕ್’ ಬಳಸಿ, ಮಾಲೀಷು ಮಾಡಿ ಕೂದಲಿನ ಆರೈಕೆ ಮಾಡಿಕೊಳ್ಳುವುದು ಉತ್ತಮ. ದಾಸವಾಳದ ಎಲೆಯನ್ನು ಅರೆದು ತಯಾರಿಸಿದ ರಸ ಅಥವಾ ನಿಂಬೆ ರಸವನ್ನು ಆಗಾಗ ಕೂದಲಿಗೆ ಹಚ್ಚಿಕೊಳ್ಳಬಹುದು.

2 ಇನ್ನು ಉಷ್ಣತೆ ಹೆಚ್ಚಾದಾಗ ತುಟಿಗಳು ಬಿಳುಚಿಕೊಂಡಿರುವುದು, ಒಡೆದು ಹೋಗುವುದು ಸಾಮಾನ್ಯ. ಹಲವು ಬಣ್ಣಗಳ ಲಿಪ್‌ಸ್ಟಿಕ್‌ ಬಳಕೆಯಿಂದ ತುಟಿಗಳು ಸೋತು ಹೋದಂತೆ ಕಾಣಿಸಬಹುದು. ಲಿಪ್‌ಬಾಮ್‌ಗಳು ತುಟಿಗಳ ತಾಜಾತನವನ್ನು ಕಾಪಾಡುತ್ತವೆ. ತೀವ್ರ ಸೆಕೆಯ ದಿನಗಳಲ್ಲಿ ಲಿಪ್‌ಸ್ಟಿಕ್‌ ಬಳಸದೇ, ಲಿಪ್‌ಬಾಮ್‌ ಬಳಸಿದರೆ ತುಟಿಯ ಬಣ್ಣ ಕಲೆಸಿ ಹೋಗುವ ಸಂಭವ ಕಡಿಮೆ.

3 ಬೆವರುವಿಕೆಯು ಚರ್ಮದ ಸೊಬಗನ್ನು ಕಡಿಮೆ ಮಾಡುತ್ತವೆ. ಪದೇ ಪದೇ ಬೆವರು ಒರೆಸಿಕೊಂಡು ಚರ್ಮ ಕೆಂಪಗಾಗುವುದೂ ಇದೆ. ಮುಖ ಮಾತ್ರವಲ್ಲದೆ, ಬೆನ್ನು, ಕೈಗಳು, ತೋಳುಗಳಲ್ಲಿ ಬೆವರು ಶೇಖರಣೆಯಾಗಿ ಮಧ್ಯಾಹ್ನದ ವೇಳೆಗೆ ಬಹಳ ಕಿರಿಕಿರಿಯಾಗುವುದುಂಟು. ಆದ್ದರಿಂದ ಸ್ನಾನಕ್ಕೆ ಮುನ್ನ “ಸðಬರ್‌’ ಬಳಸಿ ಮೈ ತಿಕ್ಕಿಕೊಳ್ಳುವುದು ಒಳಿತು. ಇದರಿಂದ ಬೆವರಿನ ಅಂಟು, ಘಮಲು ಹೊರಟು ಹೋಗುತ್ತದೆ. ಆದರೆ, ಮೃದುವಾದ ಬ್ರಶ್‌ ಅಥವಾ ಸðಬರ್‌ ಬಳಸುವುದನ್ನು ಮರೆಯಬಾರದು.

4 ಸುಗಂಧ ದ್ರವ್ಯಗಳು ಹಿಂದಿನಕಾಲದಿಂದಲೂ ಬಳಕೆಯಲ್ಲಿದ್ದ ವಸ್ತುಗಳು. ಅವು ಮನಸ್ಸಿನ ಆಹ್ಲಾದವನ್ನು ಹೆಚ್ಚಿಸುತ್ತವೆ. ದಣಿವನ್ನು ತುಸು ಹೊತ್ತು ಮಾಯವಾಗಿಸಿಬಿಡುತ್ತವೆ. ಬೇಸಿಗೆಯಲ್ಲಿ ಇವುಗಳ ಅಗತ್ಯ ಖಂಡಿತಾ ಇರುತ್ತದೆ. ಓಡಾಟದ ವೃತ್ತಿಯವರಿಗಂತೂ ದಿನಕ್ಕೆರಡು ಬಾರಿ ಸುಗಂಧದ್ರವ್ಯ ಬಳಸಬೇಕು ಎನಿಸುತ್ತದೆ. ಆದರೆ, ಸುಗಂಧದ್ರವ್ಯ ಅಥವಾ ಡ್ಯುಯೋಡರೆಂಟ್‌ಗಳು ಇತರರ ಮೂಗಿಗೆ ಅಡರುವಂತೆ ಕಡುವಾಸನೆ ಬೀರದೇ, ಹಿತವಾದ ಕಂಪು ಸೂಸುವಂತೆ ಇರಲಿ. ಸುಗಂಧವು ಸ್ವಯಂ ಮನಸ್ಸಿಗೂ ಆಹ್ಲಾದಕರ ಭಾವನೆಯನ್ನು ಮೂಡಿಸುತ್ತದೆ.

5 ಬಾಹ್ಯ ಸೌಂದರ್ಯವೇನಿದ್ದರೂ ಅಂತರಂಗವನ್ನು ಅವಲಂಬಿಸಿಯೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಬೇಸಿಗೆಯಲ್ಲಿ ಬಳಸುವ ಆಹಾರವೂ ಆದಷ್ಟು ಸರಳವಾಗಿರಬೇಕು. ಸಿಹಿ ಮತ್ತು ಎಣ್ಣೆಯ ಪದಾರ್ಥ ಸೇವಿಸಿದಾಗ, ದೇಹವು ವ್ಯಾಯಾಮವನ್ನು ಬೇಡುತ್ತದೆ. ಅದು ಸಾಧ್ಯವಾಗದೇ ಇದ್ದಾಗ ಮೈಕೈಯಲ್ಲಿ ಆಲಸ್ಯಉಂಟಾಗುತ್ತದೆ. ಆದ್ದರಿಂದ ಸಿಹಿ ಮತ್ತು ಎಣ್ಣೆಯ ಪದಾರ್ಥವನ್ನು ಆದಷ್ಟು ಕಡಿಮೆ ಸೇವಿಸಿದರೆ ಮನಸ್ಸು ಉಲ್ಲಸಿತವಾಗಿರುತ್ತದೆ.

6 ಇತ್ತೀಚೆಗೆ ಯುವಜನತೆಗೆ ಪಾದಗಳ ಸೌಂದರ್ಯದ ಬಗೆಗಿನ ಕಾಳಜಿ ಹೆಚ್ಚು. ಬೇಸಿಗೆ ಸಂದರ್ಭದಲ್ಲಿ ಬಟ್ಟೆಯ ಕಾಲುಚೀಲಗಳನ್ನೇ ಧರಿಸಿದರೆ ಕಾಲಿನ ಚರ್ಮದ ಆರೋಗ್ಯಕ್ಕೆ ಉತ್ತಮ.

ವೀಣಾ ಕೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.