ತಾಯ್ತನವೂ ಬಾಡಿಗೆಗೆ!

surrogacy mother

Team Udayavani, Mar 13, 2020, 5:53 AM IST

ತಾಯ್ತನವೂ ಬಾಡಿಗೆಗೆ!

ಸಾಂದರ್ಭಿಕ ಚಿತ್ರ

9-10 ತಿಂಗಳ ಅವಧಿಯ ಬಾಡಿಗೆ ತಾಯ್ತನಕ್ಕೆ ಈಗ ಕಾನೂನಿನ ಶ್ರೀರಕ್ಷೆ ಇದೆ. ಈ ನಿಟ್ಟಿನಲ್ಲಿ 2020ರ ಫೆಬ್ರವರಿ 26ರಂದು ರಾಜ್ಯಸಭೆಯ ಆಯ್ಕೆ ಸಮಿತಿ ಮಾಡಿದ್ದ ಶಿಫಾರಸನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ಮನೆ, ಕಟ್ಟಡ, ಬಟ್ಟೆ , ಆಭರಣಗಳು ಮಾತ್ರವಲ್ಲ ತಾಯಂದಿರೂ ಬಾಡಿಗೆಗೆ ಸಿಗುವ ಕಾಲವಿದು. ಮಕ್ಕಳು ಯಾರಿಗೆ ಬೇಡ? ದಂಪತಿಗಳಿಗೆ ಮಾತ್ರ ಅಲ್ಲ ಹೆಚ್ಚಿನವರಿಗೆ ತಮ್ಮದೇ ಆದ ಸಂತಾನ, ತಮ್ಮ ವಂಶದ ಹೆಸರನ್ನು ಉಳಿಸುವ, ತಾವು ಗಳಿಸಿ, ಉಳಿಸಿದ ಆಸ್ತಿಪಾಸ್ತಿಗೆ ವಾರಸುದಾರ ಬೇಕೆಂದು ಬಯಸುತ್ತಾರೆ. ಬಯಸಿದ್ದು ಕೈಗೆಟುಕಲು ಅಡಚಣೆಗಳು ಇರುವುದೂ ಇದೆ. ಆದರೆ, ನಿರಾಶರಾಗಬೇಕಿಲ್ಲ, ಅಡಚಣೆಗಳಿಗೂ ಪರಿಹಾರ ಅಥವಾ ಬದಲೀ ವ್ಯವಸ್ಥೆಯೂ ಇದೆಯೆನ್ನಿ. ಬದಲಿ ವ್ಯವಸ್ಥೆಯಲ್ಲಿ ಒಂದರ ಹೆಸರು “ಬಾಡಿಗೆ ತಾಯ್ತನ’. ಇದನ್ನೇ ಇಂಗ್ಲಿಷ್‌ನಲ್ಲಿ ಹೇಳಬಹುದಾದರೆ “ಸರೊಗೆಸಿ’. ಈ 9-10 ತಿಂಗಳ ಅವಧಿಯ ಬಾಡಿಗೆ ತಾಯ್ತನಕ್ಕೆ ಈಗ ಕಾನೂನಿನ ಶ್ರೀರಕ್ಷೆ ಇದೆ. ಈ ನಿಟ್ಟಿನಲ್ಲಿ 2020ರ ಫೆಬ್ರವರಿ 26ರಂದು ರಾಜ್ಯಸಭೆಯ ಆಯ್ಕೆ ಸಮಿತಿ ಮಾಡಿದ್ದ ಶಿಫಾರಸನ್ನು ಕೇಂದ್ರ ಸಚಿವ ಸಂಪುಟ ಅಸ್ತು ಎಂದಿತು.

ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವ ವ್ಯವಸ್ಥೆ ಬೇಕೇ, ಬೇಡವೇ ಎಂದು ಸಾಕಷ್ಟು ವಾದ, ವಿವಾದಗಳು ನಡೆಯುತ್ತಿವೆ. ಬದಲಿ ವ್ಯವಸ್ಥೆಯಿಂದ ಮಕ್ಕಳನ್ನು ಪಡೆದರೆ ತಪ್ಪೇನು? ಮಕ್ಕಳನ್ನು ಹೊರುವ, ಹೆರುವ ವಯಸ್ಸನ್ನು ಮೀರಿದವರು, ಗರ್ಭಕೋಶದ ತೊಂದರೆ ಇರುವವರು, ಒಬ್ಬಂಟಿಗರು ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆದು ಮಾತೃತ್ವದ ಸಿಹಿ ಉಣ್ಣಬಹುದು. ಮಾತೃತ್ವದಿಂದ ವಂಚನೆಗೊಂಡವರಿಗೆ ಇದೊಂದು ವರವಲ್ಲದೆ ಮತ್ತೇನು. ದಂಪತಿಗಳು ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವಾಗ ಗಂಡ, ಹೆಂಡತಿಯರಲ್ಲಿ ಕನಿಷ್ಠ ಪಕ್ಷ ಒಬ್ಬರ ಅಂಡಾಣುವಾಗಲಿ ಅಥವಾ ಬೀಜಾಣುವಾಗಲಿ ಇರುವುದರಿಂದ ಅವರದ್ದೇ ಗುಣ, ರೂಪ ಮಗುವಿಗೆ ಬರುವ ಸಾಧ್ಯತೆ ಇರುತ್ತದೆ, ಮತ್ತು ಮಗುವಿನ ಬಗ್ಗೆ ಸಹಜವಾದ ಪ್ರೀತಿಯೂ ಮೂಡುತ್ತದೆ. ಅಲ್ಲದೆ ಅಂಡಾಣು ಅಥವಾ ಬೀಜಾಣುವಿನ ದಾನ ತೆಗೆದುಕೊಂಡಿದ್ದಲ್ಲಿ ದಾನಿಗಳ ಹೆಸರು, ವಿಳಾಸವು ಗೌಪ್ಯವಾಗಿರುತ್ತದೆ. ಸಮಾಜವೂ ಮುಕ್ತವಾಗಿಯೇ ಇಂತಹ ವ್ಯವಸ್ಥೆಯನ್ನು ಸ್ವೀಕರಿಸುತ್ತಿದೆ.

ಸಿನೆಮಾ ತಾರೆಯರಾದ ಅಮೀರ್‌ ಖಾನ್‌, ಶಾರುಖ್‌ ಖಾನ್‌, ಅವಿವಾಹಿತರಾದ ಏಕತಾ ಕಪೂರ್‌, ಕರಣ್‌ ಜೋಹರ್‌ ಕೂಡ ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆದು ಸುದ್ದಿಯಾದರು. ಇತ್ತೀಚೆಗೆ ಆ ಪಟ್ಟಿಗೆ ಸೇರಿದವರು ಶಿಲ್ಪಾ ಶೆಟ್ಟಿ . ಯೋಗ ಮಾಡಿ ಅಚ್ಚುಕಟ್ಟಾದ ಶರೀರ ಹೊಂದಿರುವ ಶಿಲ್ಪಾ , ಹಿಂದಿನ ದಿನದವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಬಸುರಿಯ ಯಾವ ಲಕ್ಷಣಗಳೂ ಅವರಲ್ಲಿ ಇರಲಿಲ್ಲ. ಮರುದಿನ ಟ್ವಿಟ್ಟರ್‌ನಲ್ಲಿ , ತಾವು ಹೆಣ್ಣು ಮಗುವಿನ ತಾಯಿಯಾದ ಸಂತೋಷ ಹಂಚಿಕೊಂಡರು. ಅಂತೆಯೇ “ಅನಾಮಧೇಯ ಬಾಡಿಗೆ ತಾಯಿಗೆ ಧನ್ಯವಾದ’ ಎಂದೂ ಹೇಳಿದರು. ಮೊದಲೊಂದು ಮಗವನ್ನು ಹಡೆದ ಶಿಲ್ಪಾ ಎರಡನೆಯ ಮಗುವಿಗಾಗಿ ಬಾಡಿಗೆಯ ತಾಯಿಯ ಮೊರೆ ಹೋಗಿದ್ದೇಕೋ?

ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವುದು ತರವಲ್ಲ ಎನ್ನುವವರ ವಾದದತ್ತ ಹೊರಳಿದರೆ, ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವುದನ್ನು ಬಿಟ್ಟು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡರೆ ಅನಾಥ ಮಕ್ಕಳಿಗೊಂದು ಆಸರೆ ಆಗುತ್ತಿರಲಿಲ್ಲವೇ? ಹಲವು ಪ್ರಸಿದ್ಧ ತಾರೆಯರೂ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ, ಹಾಲಿವುಡ್‌ ತಾರೆ ಎಂಜಲಿನಾ ಜೋಲಿ, ಐದಾರು ಮಂದಿ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಹಾಗೆಯೇ ಭಾರತೀಯ ತಾರೆಯರಾದ ಸುಶ್ಮಿತಾ ಸೇನ್‌, ಸನ್ನಿ ಲಿಯೋನ್‌ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು. ಹಾಗೆಯೇ ಏಡ್ಸ್‌ ಮಕ್ಕಳನ್ನು, ಅಂಗವಿಕಲ ಮಕ್ಕಳನ್ನು ದತ್ತು ತೆಗೆದುಕೊಂಡ ಪುಣ್ಯಾತ್ಮರೂ ಇದ್ದಾರೆ. ಇದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎನ್ನುವವರೂ ಇದ್ದಾರೆ.

ಕೆಟ್ಟ ಸಂಪ್ರದಾಯಕ್ಕೆ ದಾರಿಯೇ?
ತಾಯ್ತನವನ್ನು ಬಾಡಿಗೆ ಪಡೆಯುವ ಸಂಪ್ರದಾಯ ಮುಂದುವರಿದರೆ ಅದು ಹಲವು ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಡಬಹುದು. ಸಿನೆಮಾ ತಾರೆಯರು, ಫ್ಯಾಷನ್‌ ಜಗತ್ತಿನಲ್ಲಿ ಹೆಸರು ಮಾಡಿದವರು, ಉನ್ನತ ಹುದ್ದೆಯಲ್ಲಿರುವವರು, ಶ್ರೀಮಂತರು ಸಹಜವಾಗಿ ಬಸುರಿಯಾಗಿ ಮಕ್ಕಳನ್ನು ಹೆರುವುದನ್ನು ಬಿಟ್ಟು ಹೆರಲು ಬಾಡಿಗೆಯವರನ್ನು ಗೊತ್ತು ಮಾಡುವುದೇ ವಾಡಿಕೆಯಾಗಿಬಿಟ್ಟರೆ? “ಹೆರಿಗೆಯ ನೋವಿಲ್ಲ, ರೂಪಕ್ಕೆ ಚ್ಯುತಿ ಬಾರದು, ನೋ ವೇಸ್ಟ್‌ ಆಫ್ ಟೈಮ…’ ಎಂಬೆಲ್ಲ ಸಮರ್ಥನೆಗಳು ಇಲ್ಲಿ ಇಣುಕುತ್ತವೆ. ಕಾನೂನು ಈ ಎಲ್ಲ ಅಂಶಗಳನ್ನು ಪರಿಗಣಿಸಿ ರೂಪುಗೊಂಡಿದೆಯೇ ಎಂದು ಗಮನಿಸಬೇಕಾಗಿದೆ.

ಬಡವರ ಮೇಲೆ ಶ್ರೀಮಂತರ ಸವಾರಿ
ಭಾರತದಲ್ಲಿ ಬಾಡಿಗೆ ತಾಯ್ತನದ ಸೌಲಭ್ಯದ ಖರ್ಚು ಅಂದಾಜು ಏಳೆಂಟು ಲಕ್ಷ. ಇದು ಅಮೆರಿಕ ಮತ್ತು ಯೂರೋಪ್‌ ದೇಶಗಳ ಖರ್ಚನ್ನು ಗಮನಿಸಿದರೆ ಈ ಮೊತ್ತ ಬಹಳ ಕಮ್ಮಿ. ಒಂದು ಕಾಲದಲ್ಲಿ ಅತೀ ಕಡಿಮೆ ಖರ್ಚಿನಲ್ಲಿ ಬಾಡಿಗೆಗೆ ತಾಯಂದಿರು ಸಿಕ್ಕುವ ಕಾರಣಕ್ಕೆ, ಹೊರದೇಶದವರಿಗೆ ಭಾರತ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ವೈದ್ಯಕೀಯ ಪ್ರವಾಸ ಹಾಕಿಕೊಂಡು ಭಾರತಕ್ಕೆ ಬಂದು ಕಡಿಮೆ ಖರ್ಚಿನಲ್ಲಿ ಮಗುವನ್ನು ತೆಗೆದುಕೊಂಡು ಹೋಗುವವರಿಗೇನು ಕಡಿಮೆ ಇರಲಿಲ್ಲ, ಈಗ ಆ ನಿಟ್ಟಿನಲ್ಲಿ ಕಾನೂನು ಬಿಗಿಯಾಗಿದೆ. ಬಾಡಿಗೆ ತಾಯ್ತನದ ಹೆಸರಿನಲ್ಲಿ ನಡೆಯುವ ದಂಧೆಯನ್ನು ಹತ್ತಿಕ್ಕಲು ಮತ್ತು ಬಾಡಿಗೆ ತಾಯಿಯ ಹಿತ ಹಾಗೂ ಹುಟ್ಟಿದ ಮಗುವಿನ ರಕ್ಷಣೆಗೊಸ್ಕರ ಹಲವು ಮಸೂದೆಗಳು ಜಾರಿಗೊಂಡವು. ಭಾರತದಲ್ಲೀಗ ಬಾಡಿಗೆ ತಾಯ್ತನ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಿದರೆ ದಂಗು ಬಡಿಯುವುದು ಸುಳ್ಳಲ್ಲ. ವರ್ಷಕ್ಕೆ ಭಾರತದಲ್ಲಿ ಸುಮಾರು 25 ಸಾವಿರ ಮಕ್ಕಳು ಬಾಡಿಗೆ ತಾಯಂದಿರಿಂದ ಜನ್ಮತಾಳುತ್ತವೆ. ಇದರಲ್ಲಿ ಅರ್ಧದಷ್ಟು ಪ್ರಕರಣಗಳು ಅಡ್ಡದಾರಿಯಿಂದ ಬಂದ ಹೊರದೇಶದ ಬೇಡಿಕೆಗಳು. ಇದೊಂದು ಕೋಟಿಗಟ್ಟಲೆ ಹಣದ ಅವ್ಯವಹಾರವಾಗಿ ಬೆಳೆದಿದೆ. ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯಂತೆ. ಇದಕ್ಕೆ ಮುಖ್ಯ ಕಾರಣ ಬಂಜೆತನ.

ಬಾಡಿಗೆ ತಾಯ್ತನದ ಬಗ್ಗೆ ಭಾರತದ ಕಾನೂನು ಏನು ಹೇಳುತ್ತದೆಯೆಂದರೆ 2013ರಲ್ಲಿ ಜಾರಿಯಾದ ಮಸೂದೆಯ ಪ್ರಕಾರ ವಿದೇಶಿ ಸಲಿಂಗ ವಿವಾಹಿತರು ಮತ್ತು ಒಂಟಿ ತಂದೆ/ತಾಯಿ ಭಾರತದಲ್ಲಿ ಬಾಡಿಗೆ ತಾಯ್ತನದ ಸೌಲಭ್ಯ ಪಡೆಯುವಂತಿಲ್ಲ. 2015ರಲ್ಲಿ ಜಾರಿಯಾದ ಮಸೂದೆಯ ಪ್ರಕಾರ ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯಬಹುದು. ಆದರೆ, ಇದೊಂದು ವ್ಯಾಪಾರವಾಗಿರಬಾರದು. ಆ ನಿಟ್ಟಿನಲ್ಲಿ 2016ರಲ್ಲಿ ಇನ್ನೊಂದು ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದರೂ ಸಾಧ್ಯವಾಗದೆ 2020 ಫೆಬ್ರವರಿಯಲ್ಲಿ ಹಲವು ಸುಧಾರಣೆಗಳೊಂದಿಗೆ ಅಂಗೀಕಾರಗೊಂಡಿತು. ಆ ಮಸೂದೆ ಏನು ಹೇಳುತ್ತದೆಯೆಂದರೆ ಮದುವೆಯಾಗಿ ಮಕ್ಕಳಿಲ್ಲದ ಭಾರತೀಯ ದಂಪತಿಗಳು, ಭಾರತೀಯ ಮೂಲದ ದಂಪತಿಗಳು, ವಿವಾಹ ವಿಚ್ಛೇದನ ಹೊಂದಿದ ಅಥವಾ ವಿಧವೆಯರು ಮಾತ್ರ ಭಾರತದಲ್ಲಿ ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯಬಹುದು. ಎಲ್ಲಿಯೂ ಇದೊಂದು ವ್ಯಾಪಾರವಾಗಿ ಪರಿಗಣಿಸಬಾರದು, ಪರೋಪಕಾರದ ಉದ್ದೇಶ ಹೊಂದಿರಬಹುದು ಹಾಗೂ ಬಾಡಿಗೆ ತಾಯಿ ಸಂಬಂಧಿಯಾಗಿರಬೇಕಿಂದಿಲ್ಲ.

ನಿಯಮಗಳು
ಕಾನೂನು ಆಯೋಗ ವಿಧಿಸಿರುವ ಕೆಲವು ನಿಯಮಗಳು ಹೀಗಿವೆ, ಬಾಡಿಗೆ ತಾಯಿ ಮದುವೆಯಾದವಳಾಗಿದ್ದರೆ ಗಂಡ, ಇಲ್ಲವಾದಲ್ಲಿ ಮನೆಯವರ ಒಪ್ಪಿಗೆ ಪಡೆದುಕೊಳ್ಳಬೇಕು. ಬಸುರಿಯಾದಾಗ ಮತ್ತು ಹೆತ್ತಾಗ ಆಗುವ ಎಲ್ಲ ಖರ್ಚುಗಳನ್ನೂ ಬಾಡಿಗೆ ತೆಗೆದುಕೊಂಡವರೇ ಭರಿಸಬೇಕು, ಅಲ್ಲದೆ ಬಾಡಿಗೆತಾಯಿಗೆ ವಿಮೆ ಮಾಡಿಸಿರಬೇಕು. ಮಗುವಿನ ಜನನ ಪತ್ರದಲ್ಲಿ ಬಾಡಿಗೆ ತೆಗೆದುಕೊಂಡ ತಂದೆ, ತಾಯಿಯ ಹೆಸರು ಮಾತ್ರ ಇರುತ್ತದೆ. ಬಾಡಿಗೆ ತಾಯಿಯ ಹೆಸರು ಮತ್ತು ವೀರ್ಯ ಅಥವಾ ಅಂಡಾಣು ದಾನಿಗಳ ಹೆಸರು ಗೌಪ್ಯವಾಗಿಡಬೇಕು. ಬಾಡಿಗೆ ತಾಯಿ ಮಗುವನ್ನು ಹೆತ್ತು ಕೊಡುತ್ತಿದ್ದಂತೆ ಅವಳಿಗೂ, ಮಗುವಿಗೂ ಯಾವುದೇ ಸಂಬಂಧವಿರುವುದಿಲ್ಲ. ದಂಪತಿಗಳಲ್ಲಿ ಒಬ್ಬರ¨ªಾದರೂ ವೀರ್ಯಾಣು ಅಥವಾ ಅಂಡಾಣುವನ್ನು ಉಪಯೋಗಿಸಿ ಮಗುವನ್ನು ಪಡೆಯಬೇಕು. ಮಗುವಿನ ಲಿಂಗಪೂರ್ವ ನಿರ್ಧಾರವಾಗಿರಬಾರದು.

ತಾಯ್ತನ ಮಹಿಳೆಯರಿಗೆ ಶಾಪವಲ್ಲ, ಅದೊಂದು ವರ, ನೈಸರ್ಗಿಕವಾಗಿ ಮಕ್ಕಳನ್ನು ಪಡೆಯಲು ಪ್ರಯತ್ನಿಸಬೇಕು. ಅಡಚಣೆಗಳಿದ್ದ ಪಕ್ಷದಲ್ಲಿ ಮಾತ್ರ ಕಾನೂನಿನ ಮಿತಿಯಲ್ಲಿ ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯಬಹುದು. ಹೀಗೆಂದು ಬರೆಯುತ್ತ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಆಯ್ಕೆ ಸಹ ಇದ್ದು ಸಾಧ್ಯವಾದರೆ ಅದನ್ನೇ ಆಯ್ದು ಕೊಳ್ಳಬೇಕು.

ಗೀತಾ ಕುಂದಾಪುರ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.