ಪಂಡಿತನ ಪ್ರತಿಭೆ
Team Udayavani, Mar 1, 2020, 4:54 AM IST
ಹಿಂದೆ ಧಾರಾನಗರಿಯಲ್ಲಿ ಭೋಜರಾಜನು ರಾಜ್ಯವಾಳುತ್ತಿದ್ದನು. ಪ್ರಜೆಗಳನ್ನು ತನ್ನ ಮಕ್ಕಳಂತೆ ಪರಿಪಾಲಿಸುವ ಆ ರಾಜನು ಸಂಸ್ಕೃತ ಭಾಷೆಯೊಂದಿಗೆ ಸಕಲ ಶಾಸ್ತ್ರಗಳನ್ನು ಅರಿತಿದ್ದನು. ಭೋಜರಾಜನ ಆಸ್ಥಾನದಲ್ಲಿ ಕವಿರತ್ನನಾದ ಕಾಳಿದಾಸನಿದ್ದನು. ಅವನು ತನ್ನ ಕಾವ್ಯ ಪ್ರೌಢಿಮೆಯಿಂದ ಹಾಗೂ ಬುದ್ಧಿವಂತಿಕೆಯಿಂದ ರಾಜ್ಯದಲ್ಲೆಲ್ಲ ಪ್ರಸಿದ್ಧನಾಗಿದ್ದನು. ಧಾರಾನಗರಿಯಲ್ಲಿ ಒಬ್ಬ ಪಂಡಿತನೂ ಇದ್ದನು. ಅವನು ವ್ಯಾಕರಣದಲ್ಲಿ ಪರಿಣತನಾಗಿದ್ದನಲ್ಲದೆ ಪಾಣಿನಿಯ ಅಷ್ಟಾಧ್ಯಾಯಿ ಶ್ಲೋಕಗಳನ್ನು ಬಾಯಿಪಾಠ ಮಾಡಿದ್ದನು. ವ್ಯಾಕರಣದ ಅಂಗಗಳಾದ ಸಂಧಿ, ಸಮಾಸ, ಅಲಂಕಾರ ಮತ್ತು ಛಂದಸ್ಸುಗಳ ಬಗ್ಗೆ ಅಪಾರವಾದ ಜ್ಞಾನವನ್ನು ಸಂಪಾದಿಸಿದ್ದನು.
ಈ ಪಂಡಿತನು ತನ್ನ ಹೆಂಡತಿಯೊಡನೆ ಚಿಕ್ಕ ಮನೆಯಲ್ಲಿ ವಾಸವಾಗಿದ್ದನು. ಸದಾ ವ್ಯಾಕರಣ ಅಭ್ಯಾಸದಲ್ಲಿ ತೊಡಗಿದ್ದ ಅವನಿಗೆ ಬಡತನ ಬಂದೊದಗಿತು. ದುಡಿಯುವ ಮಾರ್ಗ ತೋರದೆ ಬಡತನವನ್ನು ಅನುಭವಿಸುತ್ತ ಆ ಪಂಡಿತನು ಕಾಲ ಕಳೆಯುತ್ತಿದ್ದನು.
ಒಂದು ದಿನ ಅವನ ಹೆಂಡತಿಯು ಪತಿಗೆ, “”ನೀವು ಪಂಡಿತರಿದ್ದೀರಿ. ಮಹಾರಾಜರನ್ನು ಕಂಡು ನಿಮ್ಮ ಬಡತನದ ಬಗ್ಗೆ ಹೇಳಿರಿ. ಅವರು ಸಹಾಯ ಮಾಡಬಹುದು” ಎಂದು ಸಲಹೆ ಮಾಡಿದಳು.
ಅವನು ವ್ಯಾಕರಣ ಜ್ಞಾನದಿಂದ ಒಂದು ಸಂಸ್ಕೃತದ ಶ್ಲೋಕವನ್ನು ರಚಿಸಿದನು. ಆ ಶ್ಲೋಕವನ್ನು ತೆಗೆದುಕೊಂಡು ಆ ಪಂಡಿತನು ಕಾಳಿದಾಸನಲ್ಲಿಗೆ ಹೋಗಿ ಅದನ್ನು ಕವಿಯ ಕೈಗಿತ್ತು, ಈ ಶ್ಲೋಕದ ಅಂತರಾರ್ಥವನ್ನು ಹಾಗೂ ಅದರ ಜತೆಗೆ ತನ್ನ ಬಡತನ ವಿಷಯವನ್ನೂ ತಿಳಿಸಿದನು. ಕಾಳಿದಾಸನು ಆ ಶ್ಲೋಕವನ್ನು ಓದಿ ಆನಂದಭರಿತನಾಗಿ ಆ ಪಂಡಿತನನ್ನು ಉದ್ದೇಶಿಸಿ, “”ನೀನು ಪ್ರತಿಭಾವಂತ ವ್ಯಾಕರಣ ಪಂಡಿತನಾಗಿದ್ದಿ. ನಾಳೆ ನೀನು ರಾಜನ ಆಸ್ಥಾನಕ್ಕೆ ಬಾ. ರಾಜನಿಗೆ ನಿನ್ನ ಪ್ರತಿಭೆಯನ್ನು ವಿವರಿಸಿ ನಿನಗೆ ಧನಸಹಾಯ ಮಾಡಲು ತಿಳಿಸುತ್ತೇನೆ” ಎಂದನು.
ಪಂಡಿತನು, “”ಹಾಗೆಯೇ ಆಗಲಿ. ನಾನು ನಾಳೆ ರಾಜರ ಆಸ್ಥಾನಕ್ಕೆ ಬರುತ್ತೇನೆ” ಎಂದು ಹೇಳಿ ತನ್ನ ಮನೆಗೆ ಹೊರಟುಹೋದನು. ಮರುದಿನ ಪಂಡಿತನು ತಾನು ರಚಿಸಿದ ಶ್ಲೋಕವನ್ನು ಸುಂದರವಾದ ಹಾಳೆಯಲ್ಲಿ ಬರೆದುಕೊಂಡು ಭೋಜರಾಜನ ಆಸ್ಥಾನಕ್ಕೆ ಹೋದನು. ಕಾಳಿದಾಸನು ಪಂಡಿತನ ಪ್ರತಿಭೆ ಕುರಿತು ರಾಜನಿಗೆ ತಿಳಿಸಿ ಹೇಳಿದನು. ರಾಜನ ಅನುಮತಿ ಪಡೆದು ಪಂಡಿತ ತನ್ನ ಶ್ಲೋಕವನ್ನು ಓದಿದನು.
ದ್ವಂಧ್ವೋಸ್ಮಿ, ದ್ವಿಗು ರಶ್ಮಿ ಚ, ಮದ್ಗೆಹೇ
ನಿತ್ಯ ಮಯ್ಯಯೀಭಾವಃ| ತತು³ರುಷ, ಕರ್ಮಧಾರಾಯ
ಯೇ ನಾ ಹಂ, ಸ್ಯಾ ಬಹುವ್ರಿಹಿಃ ||
ಆಗ ಆ ಕಾಳಿದಾಸನು ಪಂಡಿತನಿಗೆ, “”ನೀನು ಈ ಶ್ಲೋಕದಲ್ಲಿ ದ್ವಂದ್ವ, ದ್ವಿಗು, ಅವ್ಯಯೀಭಾವ, ತತು³ರುಷ, ಕರ್ಮಧಾರಾಯ, ಬಹುವ್ರಿಹಿ ಸಮಾಸಗಳ ಹೆಸರುಗಳನ್ನು ಬಳಸಿರುವಿಯಲ್ಲ. ಶ್ಲೋಕದ ಅಂತರಾರ್ಥವನ್ನು ತಿಳಿಸು” ಎಂದನು. ಪಂಡಿತನು ಬಹಳ ಉತ್ಸಾಹದಿಂದ ಶ್ಲೋಕದ ಅರ್ಥ ವಿವರಿಸಿದನು:
“”ದ್ವಂಧ್ವೋಸ್ಮಿ (ನಾವಿಬ್ಬರಿದ್ದೇವೆ) ದ್ವಿಗು ರಶ್ಮಿಚ -ಬಾಳೆಂಬ ಬಂಡಿಗೆ ಎತ್ತುಗಳಂತೆ ಗಂಡಹೆಂಡತಿಯರಿಬ್ಬರಿದ್ದೇವೆ. (ದ್ವಿಗು ಸಮಾಸ) ಮದ್ಗೆಹೇ (ನನ್ನ ಮನೆಯಲ್ಲಿ) ಅವ್ಯಯೀಭಾವಃ (ಹಣವೇ ಇಲ್ಲದ್ದರಿಂದ ಖರ್ಚೇ ಇಲ್ಲ).
ಆದ್ದರಿಂದ “ತತು³ರುಷ’ (ಹೇ ರಾಜನೇ) ಬಹುವ್ರಿಹಿ (ಬತ್ತದೇ ಇರುವ ಬಹಳ ಸಂಪತ್ತುಳ್ಳವನಾದ ನೀನು) ಕರ್ಮಧಾರಾಯ (ಬತ್ತದೇ ಇರುವ ನಿನ್ನ ಸಂಪತ್ತಿನಲ್ಲಿ ಒಂದಿಷ್ಟನ್ನು ಕೊಡುವಂಥ ಕೆಲಸ ಮಾಡು).
ಸಮಾಸಗಳನ್ನೇ ಬಳಸಿ ಸೃಜನಶೀಲವಾಗಿ ಬರೆದ ಶ್ಲೋಕವನ್ನು ಕೇಳಿ, ಅದರ ಅಂತರಾರ್ಥವನ್ನು ಅರಿತು ಭೋಜರಾನು ಸಂತೋಷಭರಿತನಾದನು. ಪಂಡಿತನ ಪ್ರತಿಭೆಯನ್ನು ಪ್ರಶಂಸಿಸಿ ಅವನಿಗೆ ನೂರು ಸುವರ್ಣ ನಾಣ್ಯಗಳನ್ನು ಕೊಟ್ಟು ಕಳಿಸಿದನು.
ಬಸವರಾಜ ಹೂಗಾರ, ಹಿರೇಸಿಂಗನಗುತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.