ದಂತ ರಕ್ಷಣಂ!
Team Udayavani, Aug 2, 2019, 5:15 AM IST
ಬೆಳಗ್ಗೆ-ರಾತ್ರಿ ಬ್ರಶ್ ಮಾಡ್ತೀನಿ, ಮಧ್ಯಾಹ್ನವೂ ಮೌತ್‌ವಾಶ್ ಬಳಸೋಕೆ ಮರೆಯೋದಿಲ್ಲ, ಆದರೂ ಹಲ್ಲು ಹಳದಿಗಟ್ಟಿದೆ. ಇದು ಹಲವರ ಸಮಸ್ಯೆ. ಹಲ್ಲಿನಣ್ಣದ ಕಾರಣದಿಂದ, ಮುಕ್ತವಾಗಿ ನಗುವುದನ್ನೂ ನಿಲ್ಲಿಸಿದ್ದಾರೆ ಕೆಲವರು. ಅಂಥವರಿಗಾಗಿ ಕೆಲವು ಟಿಪ್ಸ್‌ಗಳು ಇಲ್ಲಿವೆ.
ಮನೆಯಲ್ಲೇ ಸಿಗುವ ವಸ್ತುಗಳಿಂದ ಹಲ್ಲನ್ನು ಫಳ ಫಳ ಹೊಳೆಯುವಂತೆ ಮಾಡುವುದು ಹೇಗೆಂದರೆ…
.ಪ್ರತಿದಿನ ಬೆಳಗ್ಗೆ ಅಥವಾ ವಾರಕ್ಕೆ ಮೂರು ಬಾರಿ, ಬ್ರಶ್ ಮಾಡುವ ಮುನ್ನ ಕೊಬ್ಬರಿ ಎಣ್ಣೆಯಿಂದ 15-20 ನಿಮಿಷ ಬಾಯಿ ಮುಕ್ಕಳಿಸಿ.
.ವಾರಕ್ಕೆರಡು ಬಾರಿ ಟೂತ್‌ಪೇಸ್ಟ್‌ನ ಬದಲು, ಅಡುಗೆ ಸೋಡಾ ಬಳಸಿ ಬ್ರಶ್ ಮಾಡಿ.
.ಆ್ಯಪಲ್ ಸಿಡರ್ ವಿನೇಗರ್ ಅನ್ನು ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸಿ. (ಪ್ರತಿದಿನವೂ ಇದನ್ನು ಬಳಸಬಾರದು)
.ತಾಜಾ ಸ್ಟ್ರಾಬೆರಿ ತುಂಡನ್ನು ಅಡುಗೆ ಸೋಡಾದಲ್ಲಿ ಅದ್ದಿ, ಹಲ್ಲು ಉಜ್ಜಿದರೆ ಹಲ್ಲಿಗೆ ಹೊಳಪು ಸಿಗುತ್ತದೆ.
.ಲಿಂಬೆಹಣ್ಣಿನ ರಸಕ್ಕೆ, ಉಪ್ಪು ಬೆರೆಸಿ, ಬಾಯಿ ಮುಕ್ಕಳಿಸಿ.
.ಅನಾನಸ್ ಹಣ್ಣಿನಲ್ಲಿರುವ ಬ್ರೊಮೆಲೈನ್ ಅಂಶವು ಹಲ್ಲಿಗೆ ಹೊಳಪು ನೀಡುತ್ತದಂತೆ. ಅನಾನಸ್ ಹಣ್ಣಿನ ಸೇವನೆಯಿಂದ, ಬ್ರೊಮೆಲೈನ್ ಅಂಶವಿರುವ ಟೂತ್‌ಪೇಸ್ಟ್ ಬಳಕೆಯಿಂದ ಹಲ್ಲು ಬಿಳಿಯಾಗುತ್ತದೆ.
.ಬಾಳೆಹಣ್ಣು, ಲಿಂಬೆಹಣ್ಣು, ಕಿತ್ತಳೆ ಹಣ್ಣಿನ ಸಿಪ್ಪೆಯ ಒಳಗಿನ ಬಿಳಿಭಾಗದಿಂದ ಹಲ್ಲುಜ್ಜಿ.
.ಇದ್ದಿಲಿನ ಪುಡಿ ಜೊತೆಗೆ ಉಪ್ಪು ಸೇರಿಸಿ ಬ್ರಷ್ ಮಾಡಬಹುದು.
.ಹೆಚ್ಚು ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ. ಜಾಯಿಕಾಯಿಯ ಪುಡಿಯನ್ನು ಮೈಗೆ ಉಜ್ಜಿ ಸ್ನಾನ ಮಾಡಿದ ರೆ, ಕಜ್ಜಿ, ತುರಿಕೆ, ಮೊಡವೆಗಳು ಗುಣವಾಗುತ್ತವೆ.
ಇವುಗಳಿಗೆ ಬೈ ಬೈ ಮಾಡಿ
.ಅತಿಯಾದ ಕಾಫಿ, ಟೀ ಸೇವನೆ
.ಧೂಮಪಾನ, ಮದ್ಯಪಾನ
.ಸೋಡಾ ಮಿಶ್ರಿತ ತಂಪು ಪಾನೀಯ
.ಆಹಾರದಲ್ಲಿ ಅತಿಯಾದ ಸಕ್ಕರೆ ಪ್ರಮಾಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.