ಪ್ರೇಮ ಪಯಣ
Team Udayavani, Oct 25, 2019, 4:53 AM IST
ಏಯ್, ಅಲ್ಲಿ ನೋಡು, ಫಸ್ಟ್ ಇಯರ್‌ನ ಹುಡುಗಿಯರು ತುಂಬ ಸುಂದರವಾಗಿದ್ದಾರೆ. ಆ ಹೊಸ ಮೇಡಂ ತುಂಬ ಜೋರಿದ್ದಾರಂತೆ”- ಕ್ಲಾಸಿನ ಹೊರಗಡೆಯ ಕಾರಿಡಾರ್‌ನಲ್ಲಿ ಕುಳಿತ ಎರಡನೆಯ ವರ್ಷದ ಕಿಲಾಡಿ ಹುಡುಗರ ಗುಂಪಿನಿಂದ ಕೇಳಿ ಬರುತ್ತಿದ್ದ ಮಾತುಗಳಿವು. ಇವರೊಂದಿಗೆ ನಾನೂ ಕೂಡ ಸೇರಿ ಕೊಂಡಿದ್ದೆ. ನಮ್ಮ ಮುಂದಿನಿಂದ ಪಕ್ಕದ ಕ್ಲಾಸಿನ ಹುಡುಗಿಯರು ನಮ್ಮ ಎದುರುಗಡೆಯಿಂದ ಹಾದು ಹೋಗುವು ದಕ್ಕೆ ಹೆದರುತ್ತಿದ್ದರು.
ಪ್ರತಿದಿನ ಮಧ್ಯಾಹ್ನ ಊಟದ ವಿರಾಮದ ವೇಳೆ ನಮಗೆ ಪ್ರಿಯವಾದ ಸ್ಥಳವೊಂದರಲ್ಲಿ ಒಟ್ಟಾಗುತ್ತಿದ್ದೆವು. ನೆಚ್ಚಿನ ಸ್ಥಳ ಸೇರುವ ನಾವು ಹರಟೆಯಿಂದ ಮೊದಲ್ಗೊಂಡು ಒಮ್ಮೊಮ್ಮೆ ಜಗಳವಾಡಿ ಪ್ರಾಂಶುಪಾಲರ ತನಕ ಸುದ್ದಿ ಹೋಗಿ ಕ್ಷಮಾಪಣ ಪತ್ರ ಬರೆಯುವ ದಿನಗಳೂ ಇದ್ದಿತ್ತು. ಎಷ್ಟೇ ಜಗಳವಾಡಿದರೂ ನಮ್ಮ ಹರಟೆಯ ತಂಡ ಬದಲಾಗುತ್ತಿರಲಿಲ್ಲ. ಪ್ರತಿಯೊಬ್ಬರನ್ನೂ ಗಮನಿಸುತ್ತಿದ್ದ ನಾನು ಒಮ್ಮೆ ಸುಮ್ಮನೆ ಕುಳಿತಿರುವ ನಮ್ಮದೇ ಗುಂಪಿನ ಗೆಳೆಯನನ್ನು ನೋಡಿದೆ. ಅವನು ಇತ್ತೀಚಿನ ದಿನಗಳಲ್ಲಿ ನಮ್ಮೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಅವನ ಮನಸ್ಸು ಯಾವಾಗಲೂ ಪಕ್ಕದ ಕ್ಲಾಸಿನಲ್ಲಿ , ಮತ್ತು ಅವನ ಕಣ್ಣುಗಳು ಆ ಕ್ಲಾಸಿನ ಕಿಟಕಿಗಳನ್ನೇ ನೋಡುತ್ತಿವೆ ಎಂದು ಗೊತ್ತಾಯಿತು.
ಅವನು ಆ ಕ್ಲಾಸಿನ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ, ಅವನದು ಒಂಟಿ ದಾರಿಯ ಪ್ರೀತಿಯಾಗಿತ್ತು. ಆ ಹುಡುಗಿಯನ್ನು ನೋಡುವುದಕ್ಕಾಗಿ ಒಮ್ಮೆ ಕ್ಲಾಸು ತಪ್ಪಿಸಿದ್ದ. ಬೆಳಗ್ಗೆ ಬಸ್ ನಿಲ್ದಾಣ ದಲ್ಲಿ ಅವಳಿಗಾಗಿ ಕಾದು ಅವಳು ಬಸ್ ಇಳಿದು ಕಾಲೇಜಿಗೆ ಹೋಗುವವರೆಗೂ ಹಿಂಬಾಲಿಸುತ್ತಿದ್ದ. ಸಂಜೆ ಕೂಡ ಈ ಚಾಳಿ ಪುನರಾವರ್ತನೆಯಾಗುತ್ತಿತ್ತು. ಇವನದ್ದು ಈಗಿನ ಪ್ರೇಮ ಕಥ ನವಲ್ಲ, ಒಂದು ವರುಷದ ಸುದೀರ್ಘವಾದ ಪ್ರೇಮ ಪಯ ಣವೆಂದು ತಿಳಿದದ್ದು ಅವನಿಂದಲೇ! ಆತ ಇದುವರೆಗೂ ಆಕೆಗೆ ತಾನು ಪ್ರೀತಿಸುತ್ತಿರುವುದರ ಬಗ್ಗೆ ಹೇಳಿಕೊಂಡಿಲ್ಲವಂತೆ. ಹುಡುಗಿಯರ ಜೊತೆ ಹೆಚ್ಚಾಗಿ ಮಾತನಾಡದವನಿಗೆ ಆ ಧೈರ್ಯ ಎಲ್ಲಿಂದ ಬರಬೇಕು.
ಇವನ ಅವಸ್ಥೆ ನೋಡಿದ ನನಗೆ ಈ ಪ್ರೀತಿ ಮಾಡುವುದು ಅಂದರೆ ಹೀಗೆನಾ- ಎಂದು ಯೋಚಿಸುವಂತೆ ಮಾಡಿತ್ತು. ಕಳೆದ ದಿನಗಳು ಮರಳಿ ಬಾರವು. ಇವರ ಎಂದೆಂದಿಗೂ ಒಂದಾಗದ ಪ್ರೀತಿ ಹೀಗೆ ಸಾಗುತ್ತಿದೆ. “ಇನ್ನೆಷ್ಟು ದಿನ ಹೀಗೇ ಇರುತ್ತೀಯಾ?’ ಎಂದೆ. ಅವನಾದರೂ ಹೇಳುವನೋ! “ಇವತ್ತು ಬೇಡ, ನಾಳೆ ಖಂಡಿತವಾಗಿಯೂ ಹೇಳುತ್ತೇನೆ’ ಎಂದು ದಿನ ದೂಡುತ್ತ ಮೂರನೆಯ ಸೆಮಿಸ್ಟರ್ ಮುಗಿಸಿದ. “ಇನ್ನಾದರೂ ಹೇಳು, ಅವಳಿಗೂ ನಿನ್ನ ಮೇಲೆ ಪ್ರೀತಿಯಿದೆ ಎಂದಾದರೆ ಒಪ್ಪಿಕೊಳ್ಳುತ್ತಾಳೆ’ ಎಂದೆ. ಆಕೆ ನನ್ನನ್ನು ಇಷ್ಟಪಡದಿದ್ದರೆ ಎಂದು ಮುಖ ಸಪ್ಪಗೆ ಮಾಡಿಕೊಂಡು ಹೇಳಿಬಿಟ್ಟ.
ಸುದೀಪ್
ದ್ವಿತೀಯ ಬಿಎ (ಪತ್ರಿಕೋದ್ಯಮ )
ಎಂಜಿಎಂ ಕಾಲೇಜು, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.