ದ್ರಾಕ್ಷಿ ಸೌಂದರ್ಯದ ಆಗರ
Team Udayavani, Feb 17, 2017, 3:45 AM IST
ಎಲ್ಲಾ ಕಾಲದಲ್ಲೂ ಹಸಿ ಅಥವಾ ಒಣದ್ರಾಕ್ಷಿಗಳು ಲಭ್ಯವಾಗುತ್ತವೆ. ಆದ್ದರಿಂದಲೇ ಒಂದಲ್ಲ ಒಂದು ವಿಧದಿಂದ ವೈವಿಧ್ಯಮಯ ದ್ರಾಕ್ಷಿಯ “ಕಾಸೆಟಿಕ್’ಗಳನ್ನು ಅರ್ಥಾತ್ ಮನೆಯಲ್ಲಿಯೇ ಸುಲಭ ಸರಳ ರೀತಿಯಲ್ಲಿ ತಯಾರಿಸಬಹುದಾದ ಸೌಂದರ್ಯವರ್ಧಕಗಳನ್ನು ಯಾವುದೇ ಕಾಲದಲ್ಲೂ , ಬೇರೆ ಬೇರೆ ಮೊಗದ ಚರ್ಮವುಳ್ಳವರಿಗಾಗಿ ತಯಾರಿಸಿ ವೈವಿಧ್ಯಮಯವಾಗಿ ಬಳಸಬಹುದು.
ದ್ರಾಕ್ಷಿಯ ಕ್ಲೆನ್ಸರ್
15 ಹಸಿ ದ್ರಾಕ್ಷಿಗಳನ್ನು ಅರೆದು ಅದಕ್ಕೆ 1 ಚಮಚ ಹಾಲಿನ ಪುಡಿ ಬೆರೆಸಿ, 1/4 ಚಮಚ ಬೇಕಿಂಗ್ ಸೋಡಾ ಸೇರಿಸಬೇಕು. ಇದನ್ನು ಚೆನ್ನಾಗಿ ಬೆರೆಸಿ 15-20 ಆಲಿವ್ ಅಥವಾ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ತುದಿ ಬೆರಳುಗಳಿಂದ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಬೇಕು. 10 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದರೆ ಇದು ಉತ್ತಮ ನೈಸರ್ಗಿಕ ಫೇಶಿಯಲ್ ಕ್ಲೆನ್ಸರ್ ಆಗಿದೆ. ಮೊಗ ಶುಭ್ರ, ಮೃದು ಕಾಂತಿಯಿಂದ ನಳನಳಿಸುತ್ತದೆ.
ಗ್ರೇಪ್ ಟೋನರ್
ಮುಖದಲ್ಲಿ ನೆರಿಗೆಗಳು ಕಂಡುಬಂದಾಗ ಚರ್ಮ ಕಾಂತಿಹೀನವಾಗಿದ್ದು ಸಡಿಲವಾದಾಗ ಈ ವಿಧಾನದಿಂದ ತಯಾರಿಸಿದ ಗ್ರೇಪ್ ಟೋನರ್ ಬಳಸಿದರೆ ಚರ್ಮ ತಾಜಾ ಹಾಗೂ ಕಾಂತಿಯಿಂದ ಕೂಡಿದ್ದು ಬಿಗುತನ ಪಡೆಯುತ್ತದೆ. ನೆರಿಗೆಗಳು ನಿವಾರಣೆಯಾಗುತ್ತವೆ.
ವಿಧಾನ: 2 ಚಮಚ ಅರೆದ ದ್ರಾಕ್ಷಿಯ ತಿರುಳು, 1 ಚಮಚ ಹುಳಿ ಮೊಸರು, 1 ಚಮಚ ಅಕ್ಕಿಹಿಟ್ಟು ಹಾಗೂ 1 ಚಮಚ ಕ್ಯಾರೆಟ್ ಜ್ಯೂಸ್ ಇವೆಲ್ಲವನ್ನು ಚೆನ್ನಾಗಿ ಬೆರೆಸಿ, ಲೇಪ ತಯಾರಿಸಿ ಮುಖಕ್ಕೆ ಲೇಪಿಸಿ ಮೃದುವಾಗಿ 10 ನಿಮಿಷ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದರೆ ಬಲು ಪರಿಣಾಮಕಾರಿ.
ಕಪ್ಪು ದ್ರಾಕ್ಷಿ ಮಾಸ್ಕ್
10 ಕಪ್ಪು ದ್ರಾಕ್ಷಿಗಳನ್ನು ಅರೆದು 2 ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ 4 ಚಮಚ ರೋಸ್‌ವಾಟರ್, 2 ಚಮಚ ಜೇನು, 2 ಚಮಚ ನಿಂಬೆರಸ ಬೆರೆಸಿ ಮೊಡವೆ ಹೊಂದಿರುವ, ತೈಲಯುಕ್ತ ಚರ್ಮದವರಿಗೆ ಫೇಸ್‌ಮಾಸ್ಕ್ ಮಾಡಿದರೆ ಮೊಡವೆ ಹಾಗೂ ಕಲೆ ನಿವಾರಕ, ಜಿಡ್ಡು ನಿವಾರಕವೂ ಹೌದು.
ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು. ವಾರಕ್ಕೆ 2-3 ಸಾರಿ ಬಳಸಿದರೆ ಹಿತಕಾರಿ.
ಕಾಂತಿವರ್ಧಕ ಮಾಸ್ಕ್
ಕಪ್ಪು ದ್ರಾಕ್ಷಿಯ ಪೇಸ್ಟ್ ಮೂರು ಚಮಚ, ಚೆನ್ನಾಗಿ ಕಳಿತ ಪಪ್ಪಾಯದ ತಿರುಳಿನ ಪೇಸ್ಟ್ 2 ಚಮಚ, ಗುಲಾಬಿ ಜಲ 2 ಚಮಚ, ಶುದ್ಧ ಚಂದನದ ತೈಲ 20 ಹನಿ ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಬೇಕು. ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ತೊಳೆಯಬೇಕು. ಹೀಗೆ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ 1-2 ವಾರ ಬಳಸಿದರೆ ಮುಖ ಕಾಂತಿ, ಮೃದುತ್ವ ಹಾಗೂ ಬೆಳ್ಳಗಾಗಿ ಹೊಳೆಯುತ್ತದೆ.
ಒಣಚರ್ಮಕ್ಕೆ ಲೇಪ
5 ಚಮಚ ದ್ರಾಕ್ಷಿಯ ತಿರುಳಿನ ಪೇಸ್ಟ್‌ಗೆ 2 ಚಮಚ ಕಾಟೇಜ್ ಚೀಸ್ ಬೆರೆಸಿ ಚೆನ್ನಾಗಿ ಕಲಕಿ ಪೇಸ್ಟ್ ತಯಾರಿಸಬೇಕು. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ಒಣಚರ್ಮ, ಕಾಂತಿಹೀನತೆ, ತುರಿಕೆ ನಿವಾರಣೆಯಾಗಿ ಮುಖ ಹೊಳೆಯುತ್ತದೆ.
ಬಿಸಿಲುಗಂದು ನಿವಾರಕ ಮಾಸ್ಕ್
ಕಪ್ಪು ದ್ರಾಕ್ಷಿ ತಿರುಳಿನ ಪೇಸ್ಟ್ 4 ಚಮಚ, ಕೀವಿ ಹಣ್ಣಿನ ಅರೆದ ತಿರುಳು 2 ಚಮಚ, ಜೇನು 2 ಚಮಚ ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಬೇಕು. ಇದನ್ನು ಸೂರ್ಯನ ಕಿರಣಗಳಿಂದ ಕಪ್ಪಾದ/ಕೆಂಪಾದ ಭಾಗ ಅಥವಾ ಬಿಸಿಲುಗಂದು ಇರುವ ಭಾಗಕ್ಕೆ ದಪ್ಪಕ್ಕೆ ಪದರದಂತೆ ಲೇಪಿಸಬೇಕು. 20 ನಿಮಿಷಗಳ ಬಳಿಕ ತೊಳೆದು ಸೌತೆಕಾಯಿ ರಸ ಹಾಗೂ ಜೇನಿನ ಮಿಶ್ರಣ ಲೇಪಿಸಿಬೇಕು.
ಇದರಿಂದ ಬಿಸಿಲುಗಂದು (ಸನ್ ಟ್ಯಾನ್) ಕ್ರಮೇಣ ನಿವಾರಣೆಯಾಗುತ್ತದೆ. ನಿತ್ಯ ಲೇಪನ ಹಿತಕರ. ಮೆಲಾಸ್ಮಾ ಎಂಬ ಅಧಿಕ ಪಿಗ್‌ಮೆಂಟ್ ಸ್ರಾವದಿಂದ ಉಂಟಾಗುವ ತೊಂದರೆಯಲ್ಲೂ ಈ ಲೇಪ ಹಿತಕಾರಕ. ಅಂತಹ ಸಂದರ್ಭದಲ್ಲಿ ಬಾದಾಮಿ ತೈಲ ಅಥವಾ ಬಾದಾಮಿ ಪೇಸ್ಟ್ , ಆಲೂಗಡ್ಡೆ ರಸ ಬೆರೆಸಿದರೆ ಶೀಘ್ರ ಪರಿಣಾಮ ಉಂಟಾಗುತ್ತದೆ.
– ಡಾ| ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.