ದ್ರಾಕ್ಷಿ ಹಣ್ಣಿನ ವೈವಿಧ್ಯ
Team Udayavani, Nov 29, 2019, 4:32 AM IST
ಕಬ್ಬಿಣಾಂಶ, ಕ್ಯಾಲ್ಸಿಯಂ, ಪೊಟಾಷಿಯಂ ಇತ್ಯಾದಿ ಉತ್ತಮ ಅಂಶಗಳು ತುಂಬಿರುವ ದ್ರಾಕ್ಷಿಹಣ್ಣನ್ನು ಮೆದುಳಿನ ಟಾನಿಕ್ ಎಂದೇ ಕರೆಯುತ್ತಾರೆ. ದ್ರಾಕ್ಷಿಹಣ್ಣನ್ನು ಬಳಸಿ ಹಲವಾರು ವೈವಿಧ್ಯಗಳನ್ನು ತಯಾರಿಸಬಹುದು. ದ್ರಾಕ್ಷಿಹಣ್ಣುಗಳನ್ನು ಅರಸಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ ಅರ್ಧ ಗಂಟೆ ನೆನೆಸಿ ಸ್ವತ್ಛಮಾಡಿ ಉಪಯೋಗಿಸಿದರೆ ಉತ್ತಮ.
ಗ್ರೇಪ್ ವಿದ್ ಬ್ರೆಡ್ ಕಸ್ಟ್‌ರ್ಡ್
ಬೇಕಾಗುವ ಸಾಮಗ್ರಿ: ಬ್ರೆಡ್‌ಪೀಸ್- ನಾಲ್ಕು, ದಪ್ಪಹಾಲು- ಒಂದು ಕಪ್, ವೆನಿಲಾ ಕಸ್ಟ್‌ರ್ಡ್ ಪುಡಿ- ಎರಡು ಚಮಚ, ಕಪ್ಪು ದ್ರಾಕ್ಷಿಹಣ್ಣು- ಹತ್ತು, ಸಣ್ಣಗೆ ಹೆಚ್ಚಿದ ಬಾಳೆಹಣ್ಣು- ಆರು ಚಮಚ, ಬಾದಾಮಿ, ಖರ್ಜೂರ ಮತ್ತು ಟೂಟಿಫ್ರೂಟಿ ಚೂರುಗಳು- ಎರಡು ಚಮಚ, ಸಕ್ಕರೆ ರುಚಿಗೆ.
ತಯಾರಿಸುವ ವಿಧಾನ: ಹಾಲಿಗೆ ಸಕ್ಕರೆ ಸೇರಿಸಿ ಕಾಯಲು ಇಡಿ. ಆರಿದ ಅರ್ಧ ಕಪ್ ಹಾಲಿಗೆ ಕಸ್ಟ್‌ರ್ಡ್ ಪುಡಿಯನ್ನು ಸೇರಿಸಿ ಗಂಟಿಲ್ಲದಂತೆ ಕಲಕಿ, ಕುದಿಯುತ್ತಿರುವ ಹಾಲಿಗೆ ಸೇರಿಸಿ ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಸೌಟಿನಿಂದ ಮಗುಚುತ್ತಾ ಕುದಿಸಿ, ಒಲೆಯಿಂದ ಇಳಿಸಿ. ಆರಿದ ನಂತರ, ಇದನ್ನು ಫ್ರಿಜ್‌ನಲ್ಲಿಟ್ಟು ತಂಪಾಗಿಸಿ. ಬ್ರೆಡ್‌ನ್ನು ಮಧ್ಯಭಾಗದಿಂದ ಕತ್ತರಿಸಿ ಜಾಮ್ ಸೇರಿಸಿ, ಒಂದರ ಮೇಲೆ ಒಂದು ಇಟ್ಟು ಸರ್ವಿಂಗ್ ಬೌಲ್‌ನಲ್ಲಿ ಹಾಕಿ, ಮೇಲಿನಿಂದ ಕಸ್ಟ್‌ರ್ಡ್ ಹಾಕಿ, ನಂತರ ಹಣ್ಣುಗಳನ್ನು ಹರಡಿ ಸರ್ವ್ ಮಾಡಬಹುದು.
ದ್ರಾಕ್ಷಿಹಣ್ಣು ವಿದ್ ಕುಕುಂಬರ್ ಸಲಾಡ್
ಬೇಕಾಗುವ ಸಾಮಗ್ರಿ: ಹೆಚ್ಚಿದ ಸೀಡ್‌ಲೆಸ್ ಕಪ್ಪು ದ್ರಾಕ್ಷಿ- ಹತ್ತು, ಕುಕುಂಬರ್- ಒಂದು ಕಪ್, ಸ್ವೀಟ್‌ಕಾರ್ನ್- ಎಂಟು ಚಮಚ, ಮೊಳಕೆ ಹೆಸರು- ಎರಡು ಚಮಚ, ಟೊಮೆಟೋ- ಮೂರು ಚಮಚ, ನೀರುಳ್ಳಿ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ತೆಂಗಿನತುರಿ- ನಾಲ್ಕು ಚಮಚ, ಮೆಣಸಿನಪುಡಿ- ಅರ್ಧ ಚಮಚ, ಚಾಟ್‌ಪೌಡರ್- ಒಂದು ಚಮಚ, ಬ್ಲೇಕ್‌ಸಾಲ್ಟ್ ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಸೌತೆಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿ, ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಮೇಲಿನಿಂದ ದ್ರಾಕ್ಷಿಯಿಂದ ಅಲಂಕರಿಸಬಹುದು.
ದ್ರಾಕ್ಷಿಹಣ್ಣಿನ ಮಿಲ್ಕ್ಶೇಕ್
ಬೇಕಾಗುವ ಸಾಮಗ್ರಿ: ದ್ರಾಕ್ಷಿಹಣ್ಣು- ಅರ್ಧ ಕಪ್, ಫ್ರಿಜ್‌ನಲ್ಲಿಟ್ಟು ತಂಪಾದ ದಪ್ಪಹಾಲು- ಒಂದು ಕಪ್, ವೆನಿಲಾ ಐಸ್‌ಕ್ರೀಮ್- ಎಂಟು ಚಮಚ, ಸಕ್ಕರೆ ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ದ್ರಾಕ್ಷಿಹಣ್ಣಿಗೆ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ, ಇದಕ್ಕೆ ಹಾಲು ಸೇರಿಸಿ ಪುನಃ ರುಬ್ಬಿ ಸರ್ವಿಂಗ್ ಕಪ್‌ಗೆ ಹಾಕಿ ಮೇಲಿನಿಂದ ಐಸ್‌ಕ್ರೀಮ್ ತೇಲಿಸಿ ಸರ್ವ್ ಮಾಡಬಹುದು.
ದ್ರಾಕ್ಷಿಹಣ್ಣಿನ ಸ್ವೀಟ್‌ಮಿಕ್ಸ್
ಬೇಕಾಗುವ ಸಾಮಗ್ರಿ: ಸೀಡ್‌ಲೆಸ್ ದ್ರಾಕ್ಷಿಹಣ್ಣು- ಹತ್ತು, ಪಪ್ಪಾಯ, ಬಾಳೆಹಣ್ಣು, ಸೇಬು, ಖರ್ಜೂರ, ಸಪೋಟಾ, ಕಿತ್ತಳೆ ಇತ್ಯಾದಿ ಹಣ್ಣುಗಳ ಮಿಶ್ರಣ- ಒಂದು ಕಪ್, ಜೇನುತುಪ್ಪ- ಎರಡು ಚಮಚ, ವೈಟ್‌ಪೆಪ್ಪರ್- ಅರ್ಧ ಚಮಚ, ಬ್ಲೇಕ್‌ಸಾಲ್ಟ್ ಅಥವಾ ಏಲಕ್ಕಿಪುಡಿ- ರುಚಿಗೆ ಬೇಕಿದ್ದರೆ.
ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ದ್ರಾಕ್ಷಿಹಣ್ಣುಗಳನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ, ಊಟದ ನಂತರ ಸರ್ವ್ ಮಾಡಬಹುದು.
ಗೀತಸದಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.