ಇದು ಮುಖಪುಸ್ತಕದ ಕಾಲ


Team Udayavani, Sep 29, 2017, 6:10 AM IST

CjdmoQnUUAEqnKk.jpg

ನೀನಿಲ್ಲದ ನನ್ನ ಬಾಳನ್ನು ಊಹಿಸಲೂ ಸಾಧ್ಯವಿಲ್ಲ. ನೀನಿಲ್ಲದೇ ನಾನಿಲ್ಲ. ನೀನೇ ನನ್ನ ಸರ್ವಸ್ವ. (ಇಂತಿಪ್ಪ) ನಿನಗೆ ಹುಟ್ಟುಹಬ್ಬದ ಶುಭಾಶಯಗಳು… ಇತಿ, ನಿನ್ನ ಮುದ್ದಿನ  ಸಂಗಾತಿ’ ಏನಪ್ಪಇದು? ಯಾರು ಬರೆದಿರಬಹುದು ಈ ಪತ್ರ? ಎಂದೆಲ್ಲ ಯೋಚಿಸುತ್ತಿದ್ದೀರಾ? ಖಂಡಿತ ಇದು ಯಾವುದೇ ಖಾಸಗಿ ಪತ್ರವಲ್ಲ. ಹೆಂಡತಿಯೊಬ್ಬಳು ಖುಲ್ಲಂಖುಲ್ಲ ಫೇಸ್‌ಬುಕ್‌ನಲ್ಲಿ ತನ್ನ ಗಂಡನಿಗೆ ವಿಶ್‌ ಮಾಡಿದ ಪರಿ. ಹೌದು ಸ್ವಾಮಿ, ಫೇಸ್‌ಬುಕ್‌ನಲ್ಲಿ ಎಲ್ಲಾ ಹೀಗೆಯೇ! ಯಾವ ವಿಷಯವೂ ಖಾಸಗಿಯಲ್ಲ. ಅದನ್ನು ಇಡೀ ಪ್ರಪಂಚಕ್ಕೆ ಸಾರಿಸಾರಿ ಹೇಳಬೇಕು. ಆಗ ಮಾತ್ರ ಸಮಾಧಾನ. ಗಂಡ-ಹೆಂಡತಿ ಪರಸ್ಪರ ತಮ್ಮ ಮದುವೆಯ ವಾರ್ಷಿಕೋತ್ಸವದಂದು  ವಿಶ್‌ ಮಾಡಿಕೊಳ್ಳುವುದು ಫೇಸ್‌ಬುಕ್‌ ಮುಖಾಂತರವೇ.  anniversary my dear, u r the best wife in the world ಎಂಬ ಗಂಡನ  ವಿಶ್‌ಗೆ wish u the same my love ಎಂದು ಹೆಂಡತಿಯ ರಿಪ್ಲೆ„ ಮತ್ತು ಇದನ್ನು ಓದಿ ಲೈಕ್‌ ಮಾಡಿ best couple in the world ಎಂದು ಕಮೆಂಟ್‌ ಮಾಡುವ ಅಸಂಖ್ಯಾತ ಫ್ರೆಂಡ್‌ಗಳು.

ಇದನ್ನೆಲ್ಲ ನೋಡುವಾಗ ನನಗೋ ದೊಡ್ಡ ಅನುಮಾನ, ಫೇಸ್‌ಬುಕ್‌ ಗೋಡೆಯ  ಮೇಲೆ ವಿಶ್‌ ಮಾಡಿಕೊಳ್ಳುವ ಆ ದಂಪತಿಗಳು ಮನೆಯ ನಾಲ್ಕು ಗೋಡೆಯೊಳಗೆ ಒಬ್ಬರನ್ನೊಬ್ಬರು ಮಾತನಾಡಿಸುತ್ತಾರೋ ಇಲ್ಲವೋ ಎಂದು! ಈ anniversary ವಿಷಯ ಬಿಡಿ, ಮೊನ್ನೆ ಗೆಳತಿಯೊಬ್ಬಳು ತನ್ನ ಮಗನ ಮುಂದಿನ ಶಿಕ್ಷಣಕ್ಕೆ  ಫೇಸ್‌ಬುಕ್‌ನಲ್ಲಿ ಶುಭ ಹಾರೈಸಿದಳು. ಇದರಲ್ಲೇನು ವಿಶೇಷವೆನ್ನುವಿರಾ? ಆಕೆಯ ಮಗ ನರ್ಸರಿ ಮುಗಿಸಿ ಎಲ…ಕೆಜಿಗೆ ಕಾಲಿಟ್ಟಿದ್ದ. ಆತ ಶಾಲೆಯ ಸಮವಸ್ತ್ರ, ಶೂ ಧರಿಸಿದ ಫೋಟೊ ಹಾಕಿದ್ದಳು. ಸರಿ ತಾನೇ? ಮೊನ್ನೆ ತಾಯಂದಿರ ದಿನದಂದು ಒಬ್ಟಾತ ತಾಯಿಯ ಫೋಟೊ ಹಾಕಿ  happy mothers day amma ಎಂದು ವಿಶ್‌ ಮಾಡಿದ್ದ. ಆದರೆ ಅದನ್ನು ಲೈಕ್‌ ಮಾಡಿದವರಾರಿಗೂ ಆತನ ತಾಯಿ ಆಶ್ರಮದಲ್ಲಿರುವುದು ಗೊತ್ತೇ ಇರಲಿಲ್ಲ.

ಇನ್ನು ಪ್ರವಾಸದ ಫೋಟೊಗಳಿಗಂತೂ ಕೊನೆ ಮೊದಲಿಲ್ಲ. enjoying holidays at shimla ಎಂದೋ ಅಥವಾ vacation masti at ಎಂತಲೋ ತಾವು ತಿರುಗಾಡಿದ್ದನ್ನು ಜಗಜ್ಜಾಹೀರು ಮಾಡದೇ ನಿದ್ರೆ ಬೀಳುವುದಿಲ್ಲ. ನಮ್ಮ ಪಕ್ಕದ ಮನೆಯವರು ಸುದ್ದಿ ಮಾಡದೆ ರಜೆಯಲ್ಲಿ ಹೋಗಿದ್ದೆಲ್ಲಿ ಎಂದು ನಮಗೆ ತಿಳಿಯುವುದು ಈ ಮುಖಪುಸ್ತಕದಿಂದಲೇ. ಇಷ್ಟು ಮಾತ್ರವಲ್ಲ, ನೀವು ಯಾವ ಮಲ್ಟಿಪ್ಲೆಕ್ಸ್‌ನಲ್ಲಿ ಯಾವ ಸಿನೆಮಾ ನೋಡುತ್ತಿದ್ದೀರಿ ಎಂದು ಫೇಸ್‌ಬುಕ್‌ನಲ್ಲಿ ಎಲ್ಲರಿಗೆ ತಿಳಿಸಿದಾಗಲೇ ಸಿನೆಮಾ ನೋಡಿದಂತಾಗುವುದು. ನಿಮಗೆ ಗೊತ್ತೇ? ನೀವು ಫೇಸ್‌ಬುಕ್‌ನಲ್ಲಿ  ತಿಳಿಸದೆಯೂ ವಿಮಾನ ಪ್ರಯಾಣ ಮಾಡಬಹುದು ಎಂಬ ಜೋಕ್‌ ಓದಿ ಹೌದೆನ್ನಿಸಿ ನಗು ಬಂತು. ಫೇಸ್‌ಬುಕ್‌ನಲ್ಲಿ  ತಿಳಿಸದಿದ್ದರೆ ನಮ್ಮ ವಿಮಾನಯಾನ ಜಗತ್ತಿಗೆ ಗೊತ್ತಾಗುವುದು ಹೇಗೆ? 

ಮೊನ್ನೆ ಕಾರಣಾಂತರಗಳಿಂದ ಪರಿಚಯದವರೊಬ್ಬರ ಮಗನ ಮದುವೆ ರದ್ದಾಯಿತು. ಅದನ್ನು ಅವರು ಫೇಸ್‌ಬುಕ್‌ನಲ್ಲಿ ಹಾಕಿದರು. ಅದಕ್ಕೂ ಕೂಡ ಲೈಕ್‌ ಬರಬೇಕೆ? ಹಾಗೆಯೇ ಇನ್ನು ಕೆಲವರು ನಿಧನದ ಸುದ್ದಿಯನ್ನು ಹಾಕಿದಾಗ ಅದು ಕೂಡ ಲೈಕ್‌ಗೆ ಹೊರತಾಗಿರಲಿಲ್ಲ!  ಇನ್ನು ಮನೆಯಲ್ಲಿ ತಯಾರಿಸಿದ ತಿಂಡಿತಿನಿಸುಗಳ ಫೋಟೊ ಪೋಸ್ಟ್‌ ಮಾಡುವುದಂತೂ ಸರ್ವೇಸಾಮಾನ್ಯ. ಅದಕ್ಕೆ ಬರುವ ಕಮೆಂಟ್‌ಗಳು ಅಷ್ಟೇ ರಂಗುರಂಗಾಗಿರುತ್ತವೆ. delicious, yummy, tasty ಎಂದು. ಇಲ್ಲಿ ನನಗೆ ತಿಳಿಯದಿರುವುದೇನೆಂದರೆ ಫೋಟೋ ನೋಡಿ ರುಚಿಯ ಬಗ್ಗೆ ಹೇಗೆ ತಿಳಿಯುತ್ತದೆ ಎಂದು!

ಇನ್ನು ಚಿತ್ರ ವಿಚಿತ್ರ ಭಂಗಿಯಲ್ಲಿ  ನಿಂತು, ಕಣ್ಣು ಮೇಲೆ ಮಾಡಿ, ನಾಲಗೆ ಹೊರಹಾಕಿ (ಗಾಬರಿಪಡಬೇಡಿ!) ಕೈ ಬೆರಳುಗಳಿಂದ ಎಂದು  ತೋರಿಸಿ ಪೋಸ್ಟ್‌ ಮಾಡಿರುವ ಫೋಟೊಗಳಿಗೇನೂ ಕಡಿಮೆಯಿಲ್ಲ. ಇಂತಹುದೇ ಒಂದು ಫೋಟೊ ನೋಡಿದ ನನ್ನ ಪುಟ್ಟ ಮಗಳು, “”ಅಮ್ಮ, ಆ ಅಕ್ಕನಿಗೆ ಏನಾಗಿದೆ? ಅರ್ಜೆಂಟಾಗೆ ನಂಬರ್‌ ಟೂಗೆ ಹೋಗಬೇಕಿತ್ತಾ?” ಎಂದು ಕೇಳಿದಾಗ ಅಲ್ಲೇ ಇದ್ದ ಅವಳಿಗಿಂತ ಸ್ವಲ್ಪ ದೊಡ್ಡವನಾದ  ಮಗರಾಯ, “”ಹೋಗೆ, ಅದು ಫೋಟೊಗೆ ಫೋಸ್‌ ಕೊಡುವ ರೀತಿ, ಏನೇನೋ ಹೇಳಬೇಡ, ಅಲ್ವೇನಮ್ಮಾ?” ಎಂದು ನನ್ನತ್ತ ನೋಡಿದ. 
  
ಮೊನ್ನೆ ಸ್ವಲ್ಪದಿನಗಳಿಂದ ಪರಿಚಯದವರೊಬ್ಬರ  ಫೇಸ್‌ಬುಕ್‌ ಪೋಸ್ಟ್‌ಗಳು ಒಮ್ಮಿಂದೊಮ್ಮೆ ನಿಂತು ಹೋದವು. ಫೇಸ್‌ಬುಕ್‌ನಲ್ಲಿ ಅತ್ಯಂತ ಸಕ್ರಿಯವಾಗಿದ್ದ ಅವರ ದಿನ ಪ್ರಾರಂಭವಾಗುವುದೇ fbಯಲ್ಲಿ “ಗುಡ್‌ಮಾರ್ನಿಂಗ್‌’ ಸಂದೇಶದೊಂದಿಗೆ ಆಗಿತ್ತು.  ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅವೆಲ್ಲದರ ಫೋಟೊ ನಿಯತ್ತಾಗಿ fbಯಲ್ಲಿ ಪೋಸ್ಟ್‌ ಮಾಡುತ್ತಿದ್ದರು. ಅದು ಬೇಕಿದ್ದರೆ ಅವರ ಮಗುವಿನ ಹುಟ್ಟಿದ ಹಬ್ಬವಾಗಲಿ ಅಥವಾ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯಾಗಲಿ, ಅದನ್ನು fbಯಲ್ಲಿ ಹಾಕದೆ ಅವರಿಗೆ ಸಮಾಧಾನವಿರಲಿಲ್ಲ. ಹೀಗಿರುವಾಗ ಅವರು ದಿಢೀರ್‌ fbಯಿಂದ ದೂರವಾಗಿದ್ದು  ಏಕಿರಬಹುದು ಎಂದು ಹುಡುಕಲು, ತಿಳಿದು ಬಂದಿದ್ದೇನೆಂದರೆ  ಇತ್ತೀಚೆಗೆ ಅವರಿಗೆ ಸ್ವಲ್ಪ ಕೆಟ್ಟ ಸಮಯ ಬಂದಿತ್ತಂತೆ. ಅದಕ್ಕೆ ಕಾರಣವೇನೆಂದು ಜ್ಯೋತಿಷಿಗಳಲ್ಲಿ ಕೇಳಲಾಗಿ ಅವರು  ಕುಟುಂಬದ ಮೇಲೆ ಕೆಟ್ಟ ದೃಷ್ಟಿ  ಬಿದ್ದಿರುವುದರಿಂದ ಹಾಗಾಗಿದೆ, ಮುಂದೆ  ಆ ರೀತಿ ಆಗದಿರಲು  ಕುಟುಂಬದ ಸಂತಸದ ಕ್ಷಣಗಳನ್ನು fbಯಲ್ಲಿ ಹಾಕಬಾರದಾಗಿಯೂ, ಅಲ್ಲಿ ಈ ಹಿಂದೆ ಹಾಕಿದ ಫೋಟೊಗಳಿಗೆ ಕೆಟ್ಟ ಕಣ್ಣು ತಾಗಿಯೇ ಗ್ರಹಚಾರ ಕೆಟ್ಟಿರುವುದಾಗಿಯೂ ಹೇಳಿದ್ದಾರೆ ಎಂದು. ಎತ್ತಣ ಜಾತಕ, ಎತ್ತಣ fb! ಇಮಾಮ… ಸಾಬಿಗೂ ಗೋಕುಲಾಷ್ಟಮಿಗೂ ಸಂಬಂಧ ಕಲ್ಪಿಸಿದಂತಾಯಿತು.  ಅದಕ್ಕೇ ಫೇಸ್‌ಬುಕ್‌ಗೆ ಹೇಳುವುದು “ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ!’ ಎಂದು.

ಆದರೆ ಏನೇ ಹೇಳಿ, ಕೆಲವು ವಿಷಯಗಳು ಖಾಸಗಿಯಾಗಿದ್ದರೇ ಚೆನ್ನ. ಪತಿ-ಪತ್ನಿ ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಾರೆಂದು ಜಗತ್ತಿಗೆ ತಿಳಿದು ಆಗಬೇಕಾಗಿರುವುದಾದರೂ ಏನು? ಹಾಗೆಯೇ ನಮ್ಮ ಮಕ್ಕಳ ಸಾಧನೆ ನಾವೇ ಹೇಳಿಕೊಳ್ಳುವುದರಲ್ಲಿ ಏನು ಹಿರಿಮೆಯಿದೆ? ತಾಯಂದಿರ ದಿನದಂದು ಫೇಸ್‌ಬುಕ್‌ನಲ್ಲಿ ವಿಶ್‌ ಮಾಡುವುದಕ್ಕಿಂತ  ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದರಲ್ಲೇ ಗರಿಮೆಯಿಲ್ಲವೇ?  ಫೇಸ್‌ಬುಕ್‌ ಇರಲಿ, ಆದರೆ  ಒಂದು ಮಿತಿಯಲ್ಲಿರಲಿ, ಅದೇ ಜೀವನವಾಗದಿರಲಿ. ಏನೇನ್ನುವಿರಿ?

– ಶಾಂತಲಾ ಹೆಗಡೆ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.