ಥೈರಾಯ್ಡ ತರಲೆ

Team Udayavani, Feb 8, 2019, 12:30 AM IST

15.jpg

ಹ‌ದಿನಾರು ವರ್ಷದ ಶುಭಾ, ಹತ್ತನೇ ತರಗತಿಯವರೆಗೂ ಓದಿನಲ್ಲಿ ಕ್ಲಾಸ್‌ಗೆà ಟಾಪರ್‌. ದ್ವಿತೀಯ ಪಿಯುಸಿಗೆ ಬಂದ ಮೇಲೆ, ಓದಿನಲ್ಲಿ ಹಿಂದೆ ಬೀಳಲು ಆರಂಭಿಸಿದಳು. ಬರೀ ಓದಿನಲ್ಲಿ ಮಾತ್ರವಲ್ಲ, ಆಕೆಯ ಆರೋಗ್ಯದಲ್ಲೂ ಏರುಪೇರಾಗಲು ಶುರುವಾಯಿತು. ಕ್ಲಾಸ್‌ನಲ್ಲಿ ಕುಳಿತು ಬೋರ್ಡ್‌ ನೋಡಿದರೆ, ಕಣ್ಣೆಲ್ಲ ಮಂಜುಮಂಜು… ಅಕ್ಷರಗಳು ತೇಲುತ್ತಿರುವಂತೆ, ಸ್ವಲ್ಪ ನಡೆದಾಡಿದರೂ ಸುಸ್ತು. ಜತೆಗೆ ಋತುಚಕ್ರದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಳು. ವೈದ್ಯರಲ್ಲಿ ಹೋದಾಗ ಗೊತ್ತಾಗಿದ್ದು ಆಕೆಗೆ ಹೈಪೋಥೈರಾಯಿಡಿಸಂ ಇದೆ ಎಂದು!

ಕುತ್ತಿಗೆಯ ಕೆಳಗಿರುವ ಥೈರಾಯ್ಡ ಗ್ರಂಥಿ, ಚಿಟ್ಟೆಯ ಆಕಾರದಲ್ಲಿ ಚಿಕ್ಕದಾಗಿದ್ದರೂ, ಅತ್ಯಂತ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತದೆ. ಇದು ಜೀವಕೋಶಗಳಿಗೆ ರಕ್ತನಾಳಗಳ ಮೂಲಕ ಹಾರ್ಮೋನನ್ನು ಪೂರೈಸುತ್ತದೆ. ಪ್ರತಿಕೋಶಗಳು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡುತ್ತದೆ. ಜೊತೆಗೆ, ಹೃದಯದ ಬಡಿತವನ್ನು ಸರಿಯಾಗುವಂತೆ ಮಾಡಿ ದೇಹದ ಉಷ್ಣತೆಯನ್ನೂ ಕಾಪಾಡುತ್ತದೆ. ಈ ಥೈರಾಯ್ಡನ ಸಮಸ್ಯೆಯಲ್ಲಿ ಎರಡು ವಿಧಗಳಿವೆ.

ಹೈಪೋಥೈರಾಯಿಡಿಸಂ: ಸಾಮಾನ್ಯವಾಗಿ ತೂಕ ಹೆಚ್ಚಳ, ಸುಸ್ತು, ಜಡತ್ವ, ಅನಿಯಮಿತ ಋತುಚಕ್ರ ಹಾಗೂ ಅಧಿಕ ರಕ್ತಸ್ರಾವ, ಖನ್ನತೆ, ಹೆಚ್ಚಿದ ಹೃದಯಬಡಿತ, ತಲೆ ಸುತ್ತುವುದು, ಕೂದಲು ಉದುರುವಿಕೆ, ಉಗುರುಗಳಲ್ಲಿ ಬಿರುಕು ಕಂಡುಬರುವುದು.

ಹೈಪರ್‌ ಥೈರಾಯಿಡಿಸಂ: ತೂಕ ಇಳಿಕೆ ಅಥವಾ ತೆಳ್ಳಗಿನ ಶರೀರ, ಮೈನಡುಕ, ಕಡಿಮೆ ರಕ್ತಸ್ರಾವ ಅಥವಾ ಅನಿರೀಕ್ಷಿತ ಋತುಚಕ್ರ, ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಥೈರಾಯ್ಡ ಸಮಸ್ಯೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಕಂಡುಬರಬಹುದು. ಹಾರ್ಮೋನುಗಳಲ್ಲಿ ಆಗುವ ಏರುಪೇರುಗಳಿಂದ, ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ದೇಹಕ್ಕೆ ದೊರೆಯದಿದ್ದರೆ, ಹೆಚ್ಚಿದ ಒತ್ತಡದಿಂದಾಗಿ ಅಥವಾ ಅನುವಂಶೀಯವಾಗಿಯೂ ಈ ಸಮಸ್ಯೆ ಬರಬಹುದು. ಮುಟ್ಟು ನಿಲ್ಲುವ ಸಮಯದಲ್ಲೂ ಅಥವಾ ಗರ್ಭಿಣಿ ಆದ ಸಂದರ್ಭದಲ್ಲೂ ಈ ಸಮಸ್ಯೆಗಳು ಎದುರಾಗಬಹುದು.

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲೇ ಥೈರಾಯ್ಡ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿದೆ. ಈ ಸಮಸ್ಯೆಗೆ ನಿಗದಿತ ಚಿಕಿತ್ಸೆ ಇಲ್ಲ ಹಾಗೂ ವೈದ್ಯಶಾಸ್ತ್ರದಲ್ಲಿ ಇದಕ್ಕೆ ಇನ್ನೂ ಶಾಶ್ವತ ಪರಿಹಾರ ದೊರೆತಿಲ್ಲ. ಕಾಲಕಾಲಕ್ಕೆ ಪರೀಕ್ಷಿಸಿಕೊಂಡು, ನಿಯಮಿತ ಔಷಧಗಳ ಸೇವನೆಯಿಂದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು. ಅಲ್ಲದೆ, ಥೈರಾಯ್ಡ ಸಮಸ್ಯೆಗೆ ನೈಸರ್ಗಿಕ ಪರಿಹಾರೋಪಾಯಗಳು ಇರುವುದರಿಂದ ಹೆಚ್ಚಿನ ಭಯಪಡುವ ಅಗತ್ಯವಿಲ್ಲ.

ಪರಿಹಾರ ಸಿಂಪಲ್‌
.ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವುದು.
.ಒತ್ತಡ ನಿವಾರಣೆಗಾಗಿ ಹಾಗೂ ಹಾರ್ಮೋನುಗಳ ಸ್ಥಿರತೆಗೆ, ಧ್ಯಾನ, ಪ್ರಾಣಾಯಾಮ, ಯೋಗಾಭ್ಯಾಸ ಮಾಡುವುದು.
.ಯೋಗದಲ್ಲಿ ಪ್ರಮುಖವಾಗಿ ಸರ್ವಾಂಗಾಸನ, ಹಲಾಸನ, ಉಷಾjಸನ, ಭುಜಂಗಾಸನ, ಮತ್ಸಾéಸನ ಹಾಗೂ ಭಾÅಮರಿ ಪ್ರಾಣಾಯಾಮವೂ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
.ತಣ್ಣೀರಿನ ಕಟಿಸ್ನಾನ ಮಾಡುವುದರಿಂದ ಥೈರಾಯ್ಡ ನಿಂದ ಉಂಟಾಗುವ ಋತುಚಕ್ರದ ತೊಂದರೆ ಹಾಗೂ ತೂಕವನ್ನು ನಿಯಂತ್ರಣದಲ್ಲಿಡಬಹುದು.
.ಪ್ರತಿನಿತ್ಯ ಗಂಟಲಿನ ಮೇಲೆ ತಣ್ಣೀರಿನ ಪಟ್ಟಿಯನ್ನು 20 ನಿಮಿಷ ಇಡುವುದರಿಂದಲೂ ಥೈರಾಯ್ಡ ಸಮಸ್ಯೆಗೆ ಪರಿಹಾರ ದೊರೆಯುವುದು.
.ಕಾಫಿ. ಟೀ, ಎಣ್ಣೆ ಪದಾರ್ಥ, ಚಾಕೋಲೇಟ್‌, ಸೋಯಾಬಿನ್‌, ಕೋಸು, ಹೂಕೋಸುಗಳನ್ನು ದೂರವಿಡಬೇಕು.
.ಕಬ್ಬಿಣಾಂಶಯುಕ್ತ ಆಹಾರಗಳನ್ನು ಜಾಸ್ತಿ ಸೇವಿಸಬಾರದು.
.ಒಮೆಗಾ 3 ಕೊಬ್ಬಿನ ಅಂಶವಿರುವ ಆಹಾರಗಳನ್ನು ತಿನ್ನಬೇಕು.

ಡಾ. ಶ್ರೀಲತಾ ಪದ್ಯಾಣ

ಟಾಪ್ ನ್ಯೂಸ್

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.