ಇದೀಗ ಕೆಂದುಟಿಯ ಕಾಲ
Team Udayavani, Mar 10, 2017, 3:45 AM IST
ಕಾಲೇಜ್ ಮುಗ್ಸಿ ಬೇರೇನೂ ಮಾಡ್ಬೇಕಿಲ್ಲ ಗುರೂ, ಲಿಪ್‌ಸ್ಟಿಕ್ ಕಂಪೆನಿ ಓಪನ್ ಮಾಡಿದ್ರೆ ಸಾಕು, ಬೆಳಗಾಗೋದೊಳಗೆ ಕೋಟಿ ಕೋಟಿ ಎಣಿಸಬಹುದು’ ಹುಡುಗ್ರ ಮಾಮೂಲಿ ಡೈಲಾಗ್.
ತನಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ನಿರ್ಲಿಪ್ತವಾಗಿ ನಡೆದುಬಿಡುತ್ತಾಳೆ ಹುಡುಗಿ, ಒಳಗೊಳಗೇ ನಗುತ್ತಿರುತ್ತಾಳೆ. ಮರುದಿನ ತುಟಿ ಬಣ್ಣ ಬದಲಾಗಿರುತ್ತದೆ. “ಬದಲಾವಣೆ ಜಗದ ನಿಯಮ’ ಅನ್ನೋದು ಜಗತ್ತಿಗೆ ಎಷ್ಟೇ ಹಳೆಯ ಸ್ಟೇಟ್‌ಮೆಂಟ್ ಆದರೂ ಅವಳಿಗೆ ನಿತ್ಯ ಹೊಸತು. ನಿದ್ದೆಯಿಂದೆದ್ದರೆ ಅವಳಿಗೆ ಹೊಸ ದಿನ, ಹೊಸ ಜನ, ಹೊಸ ಮೇಕಪ್.
ಈ ಪುರಾಣ ಎಲ್ಲ ಪಕ್ಕಕ್ಕಿಟ್ಟು ನೋಡೋಣ. ಲಿಪ್‌ಸ್ಟಿಕ್ ಟ್ರೆಂಡ್ ಅತಿ ವೇಗದಲ್ಲಿ ಬದಲಾಗ್ತಾ ಇರೋದು ನಿಮ್ಮ ಗಮನಕ್ಕೂ ಬಂದಿರಬಹುದು. ಕಡು ನೇರಳೆ ಲಿಪ್‌ಸ್ಟಿಕ್ ಹಚೊRಂಡು ಐಶ್ವರ್ಯಾ ಕ್ಯಾನ್‌ನಲ್ಲಿ ಸುದ್ದಿಯಾಗಿದ್ದು ಮರೆತು ಹೋಗಿರ್ಲಿಕ್ಕಿಲ್ಲ. ಹೋಗಿದ್ರೆ ಇನ್ನೊಮ್ಮೆ ನೆನಪು ಮಾಡಿಕೊಳ್ಳಿ. ರ್‍ಯಾಂಪ್ ಮೇಲೆ ಹೆಜ್ಜೆ ಹಾಕೋ ಮಾಡೆಲ್‌ಗಳನ್ನು ನೋಡ್ಬೇಕು, ಕಂಡರಿಯದ ಚಿತ್ರ ವಿಚಿತ್ರ ಬಣ್ಣಗಳೆಲ್ಲ ಅವರ ತುಟಿಯ ಮೇಲೆ ಚಕ್ಕಲಮಕ್ಕಳ ಹಾಕಿ ಕೂತಿರುತ್ತವೆ. ನೀಲಿ, ನೇರಳೆ, ಚಿನ್ನದ ಬಣ್ಣ, ಪೀಚ್ ಕಲರ್, ರೇಡಿಯಂ ಬಣ್ಣ ಎಲ್ಲವನ್ನು ಲಿಪ್‌ಸ್ಟಿಕ್ ರೂಪದಲ್ಲಿ ಅವರ ತುಟಿಯಲ್ಲೇ ನೋಡ್ಬೇಕು.
ಸದ್ಯಕ್ಕೀಗ ಕಡುಗೆಂಪು ಬಣ್ಣದ ಲಿಪ್‌ಸ್ಟಿಕ್ ಮತ್ತೆ ಟ್ರೆಂಡ್ ಬೋರ್ಡ್ ಮೇಲೆ ನಿಂತಿದೆ. ಸೋನಂ ಕಪೂರ್ ರೆಡ್ ಲಿಪ್‌ಸ್ಟಿಕ್‌ನ್ನು ಮತ್ತೆ ಟ್ರೆಂಡಿಯಾಗಿಸಿದ ಬೆಡಗಿ. ಅಚ್ಚ ಬೆಳ್ಳನೆಯ ಹಾಲಿನಂಥ ಉಡುಪಿಗೆ ಆಕೆ ಅಪ್ಲೆ„ ಮಾಡಿಕೊಂಡಿದ್ದ ರೆಡ್ ಲಿಪ್‌ಸ್ಟಿಪ್ ಎಲ್ಲ ರೀತಿಯಿಂದಲೂ ಮ್ಯಾಚ್ ಆಗ್ತಿತ್ತು. ಜನ ಇದನ್ನು ನೋಡಿದ್ದೇ, “ಅರೆ, ಬಿಳಿ ಬಣ್ಣಕ್ಕೆ ಈ ಲಿಪ್‌ಸ್ಟಿಕ್ ಎಷ್ಟು ಚೆನ್ನಾಗಿ ಮ್ಯಾಚ್ ಆಗುತ್ತಲ್ಲ’ ಅಂದುಬಿಟ್ಟರು.
ಕಪ್ಪು ಬಟ್ಟೆಗೂ ಕಡುಗೆಂಪು ಲಿಪ್‌ಸ್ಟಿಕ್ ಮ್ಯಾಚ್ ಯಾಕಾಗಲ್ಲ ಅನ್ನೋದು ಕರಿಶ್ಮಾ ಪ್ರಶ್ನೆ. ಫ್ಯಾಶನೇಬಲ್ ಆಗಿರೋ ಕಡುಗಪ್ಪು ಔಟ್μಟ್ ಹಾಕ್ಕೊಂಡು ಕಡುಗೆಂಪು ಲಿಪ್‌ಸ್ಟಿಕ್‌ನಲ್ಲಿ ಕರಿಶ್ಮಾ ಥಳ ಥಳ ಹೊಳೆಯೋದು ನೋಡಿದ್ರೆ ಅರೆಗಳಿಗೆ ಎವೆಮುಚ್ಚದೇ ನೋಡ್ಯಾವು ಪಡ್ಡೆಗಳು.
ಇನ್ನು ಹ್ಯೂಮಾ ಖುರೇಶಿ ಸ್ಟೈಲ್, ಫ್ಯಾಶನ್‌ಗಿಂತಲೂ ಹೆಚ್ಚಾಗಿ ಡೀಸೆಂಟ್ ಹುಡುಗಿಯಾಗಿ ಅಭಿಮಾನಿಗಳ ಅಭಿಮಾನ ಹೆಚ್ಚಿಸಿದವಳು ಕರಿಶ್ಮಾ ರೀತಿ ಕಪ್ಪನೆಯ ಸ್ಪೆಗೆಟಿ ಓವರ್ ಕೋಟ್‌ಗೆ ಕಡುಗೆಂಪು ಲಿಪ್‌ಸ್ಟಿಕ್ ಮ್ಯಾಚ್ ಮಾಡಿದ್ದಾಳೆ. ಸಿಂಪಲ್ ಹುಡುಗಿ ಈ ಚೆಂದಕ್ಕೂ ಫ್ಯಾನ್ಸ್ ಕಣ್ಣರಳಿಸಿದ್ದಾರೆ.
. ಈ ಮೇಲಿನ ಸ್ಟೇಟ್‌ಮೆಂಟ್‌ಗಳಿಂದ ನಾವು ನೀವೂ ಕಲಿಯೋ ಪಾಠ ಬ್ಲ್ಯಾಕ್ ಆ್ಯಂಡ್ ವೈಟ್‌ಗೆ ಕಡುಗೆಂಪು ಲಿಪ್‌ಸ್ಟಿಕ್ ಸಖತ್ತಾಗಿರುತ್ತೆ.
.ಈವ್ನಿಂಗ್ ಪಾರ್ಟಿಗಳಿಗೆ ಹೇಳಿಮಾಡಿಸಿದ್ದು ರೆಡ್ ಲಿಪ್‌ಸ್ಟಿಕ್.
.ಈ ಲಿಪ್‌ಸ್ಟಿಕ್ ರಿಚ್‌ಲುಕ್ ಕೊಡುವ ಕಾರಣ ನಿಮ್ಮ ಡ್ರೆಸ್‌ಘನತೆಯಿಂದ ಕೂಡಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.