ಇಂದಿನ ಮಕ್ಕಳೇ ನಾಳಿನ ಸಾಧಕರು


Team Udayavani, Jun 7, 2019, 6:00 AM IST

f-23

ಅಂದು ಪುಟಾಣಿ ಸಂಜನಾ, ತನಗೆ ಶಾಲೆಯಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದ ಬಗ್ಗೆ ಚೈತ್ರಾ ಆಂಟಿಯ ಬಳಿ ಹೇಳಿ ಸಂಭ್ರಮಿಸುತ್ತಿದ್ದಳು. “ಹೌದಾ ಚಿನ್ನಿ? ಎಲ್ಲಿ, ಒಂದ್ಸಲ ಆ ಹಾಡನ್ನು ನಂಗಾಗಿ ಹಾಡ್ತೀಯಾ?’ ಅಂತ ಹುರಿದುಂಬಿಸಿದಳು. ಮರಿ ಕೋಗಿಲೆಯಂತೆ ಹಾಡತೊಡಗಿದ ಆ ಪುಟಾಣಿಯ ಹಾಡು ಕೇಳಲು ಸುಮಾರು ಜನ ನೆರೆದಿದ್ದರು. ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಸಂಜನಾಳನ್ನು ಚೈತ್ರಾ, “ನೀನು ಸಂಗೀತ ಕ್ಲಾಸ್‌ಗೆ ಹೋಗ್ತಿದ್ದೀಯಾ?’ ಅಂತ ಕೇಳಿದಾಗ, ಹುಡುಗಿಯ ಮುಖ ಸಪ್ಪಗಾಯಿತು. ಯಾಕೆ ಅಂತ ವಿಚಾರಿಸಿದಾಗ, ಸಂಜನಾ ಕೊಟ್ಟ ಉತ್ತರ ಕೇಳಿ ಚೈತ್ರಾಳಿಗೆ ಬೇಸರವಾಯಿತು.

“ಅಮ್ಮ ಬೆಳಿಗ್ಗೆ ಎದ್ದು, ನನ್ನನ್ನು ಎಬ್ಬಿಸಿ ಶಾಲೆಗೆ ರೆಡಿ ಮಾಡಿ, ಅಪ್ಪನ ಡಬ್ಬಿಗೂ ತಿಂಡಿ ತುಂಬಿ, ಅಪ್ಪನನ್ನು ಕಚೇರಿಗೆ, ನನ್ನನ್ನು ಶಾಲೆಗೆ ಕಳಿಸ್ತಾಳೆ. ಆಮೇಲೆ, ಅವಳೂ ಆಫೀಸಿಗೆ ಹೊರಡ್ತಾಳೆ. ಅಪ್ಪ-ಅಮ್ಮ ಬರೋದೇ ರಾತ್ರಿ 8 ಗಂಟೆಗೆ. ನಾನು ಶಾಲೆ ಮುಗಿಸಿ, ನೇರವಾಗಿ ಅಜ್ಜ-ಅಜ್ಜಿ ಮನೆಗೆ ಹೋಗ್ತಿàನಿ. ಅಲ್ಲಿಂದ ಸಂಗೀತ ಕ್ಲಾಸ್‌ಗೆ ತುಂಬಾ ದೂರ ಆಗುತ್ತೆ. ಅಜ್ಜ-ಅಜ್ಜಿಗೆ ನನ್ನ ಜೊತೆ ಅಲ್ಲಿಯ ತನಕ ನಡೆಯೋಕೆ ಆಗಲ್ಲ. ನಾನು ಒಬ್ಬಳೇ ಹೋಗೋದು ಬೇಡ ಅಂತಾಳೆ ಅಮ್ಮ. ಅಜ್ಜಿ ಮನೆಯ ಪಕ್ಕದಲ್ಲೇ ಇದೆ ಅಂತ ಕರಾಟೆ ಕ್ಲಾಸ್‌ಗೆ ಸೇರಿಸಿದ್ದಾರೆ ನನ್ನ. ನನಗೆ ಕರಾಟೆಗಿಂತ ಸಂಗೀತ ಕಲಿಯಬೇಕು ಅಂತ ಆಸೆ ಇದೆ’ ಎಂದಳು ಸಪ್ಪೆಯಾಗಿ.

ಇಂದು ಬಹುತೇಕ ತಾಯಂದಿರಿಗೆ ನೌಕರಿಗೆ ಹೋಗುವುದು ಅನಿವಾರ್ಯ. ದಿನನಿತ್ಯ ಮನೆ, ಕಚೇರಿ, ಮಕ್ಕಳನ್ನು ಶಾಲೆಗೆ ಕಳುಹಿಸುವ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ಅವರಿಗೆ, ಮಕ್ಕಳ ಜೊತೆಗೆ ಸಮಯ ಕಳೆಯಲು ಟೈಮ್‌ ಇಲ್ಲ. ಅಡುಗೆ ಮಾಡಿ, ಮಕ್ಕಳಿಗೆ ತಿನ್ನಿಸಿ, ಅವರನ್ನು ಶಾಲೆಗೆ ಕಳುಹಿಸಿ, ಹೋಂವರ್ಕ್‌ ಮಾಡಿಸಿದರೆ ದೊಡ್ಡ ಜವಾಬ್ದಾರಿ ಕಳೆದಂತೆ ಎಂದು ಭಾವಿಸುವ ಅವರಿಗೆ ತಮ್ಮ ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪೋಷಿಸಲು ಸಾಧ್ಯವಾಗದೇ ಇರಬಹುದು.

ಎಲ್ಲ ಮಕ್ಕಳಲ್ಲೂ ಪ್ರತಿಭೆಯೊಂದು ಅಡಗಿರುತ್ತದೆ. ಅದನ್ನು ಮೊದಲು ಗುರುತಿಸಬೇಕಾದವರು ಹೆತ್ತವರು. ಆಗ ಮಾತ್ರ ಮಕ್ಕಳಲ್ಲಿ ಒಬ್ಬ ಮಹಾನ್‌ ಸಂಗೀತಕಾರ, ನಿರ್ದೇಶಕ, ಕ್ರೀಡಾಪಟು ಬೆಳೆಯುತ್ತಾನೆ. ಕೆಲಸದ ಒತ್ತಡದಲ್ಲಿ ಪೋಷಕರು, ಮಕ್ಕಳನ್ನು ಸರಿಯಾಗಿ ಅರಿತುಕೊಳ್ಳದಿದ್ದರೆ ಅವರ ಪ್ರತಿಭೆ ಹೊರಬರಲು ಸಾಧ್ಯವಿಲ್ಲ. ಹಾಗಂತ ಮಕ್ಕಳ ಮೇಲೆ ಸಲ್ಲದ ಒತ್ತಡ ಹೇರುವುದೂ ಸರಿಯಲ್ಲ. ಯಾವ ಕ್ಷೇತ್ರದಲ್ಲಿ ಮಕ್ಕಳು ಆಸಕ್ತಿ ತೋರಿಸುತ್ತಾರೋ, ಅದರಲ್ಲಿಯೇ ಮುಂದುವರಿಯುವಂತೆ ಪ್ರೇರೇಪಿಸಿದರೆ ಒಳ್ಳೆಯದು.

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.