ಟಾಯ್ಲೆಟ್ ಸನಾ ಕಥಾ !
Team Udayavani, Aug 4, 2017, 11:29 AM IST
ಸನಾ ಖಾನ್‌ಗೆ ಕುದುರೆ ರೇಸ್ ಹುಚ್ಚು ಶುರುವಾಗಿದೆಯೇ? ಹೀಗೊಂದು ಪ್ರಶ್ನೆ ಕೆಲದಿನಗಳ ಹಿಂದೆ ಬಾಲಿವುಡ್‌ನಲ್ಲಿ ಸುಳಿದಾಡುತ್ತಿತ್ತು. ಇದಕ್ಕೆ ಕಾರಣ ಸನಾ ಖಾನ್ ಪ್ರತಿದಿನ ತಪ್ಪದೆ ಮುಂಬಯಿಯ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆಯುವ ಕುದುರೆ ರೇಸ್‌ಗೆ ಹೋಗುತ್ತಿದ್ದದ್ದು. ಸನಾ ಕುದುರೆ ರೇಸ್‌ಗೆ ಹೋಗುತ್ತಿದ್ದದ್ದು ಮಾತ್ರವಲ್ಲದೆ ಅಲ್ಲಿದ್ದ ಜಾಕಿಗಳು ಮತ್ತು ಕುದುರೆ ಪಾಲಕರ ಜತೆಗೆ ಕುದುರೆಗಳ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದಳು. ಯಾವ ತಳಿಯ ಕುದುರೆ ಉತ್ತಮ, ರೇಸ್ ಕುದುರೆಯನ್ನು ಸಾಕುವುದು ಹೇಗೆ ಇತ್ಯಾದಿ ವಿಚಾರಗಳ ಕುರಿತು ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದಳು. ಹೀಗಾಗಿ ಎಲ್ಲರೂ ಸನಾ ಖಾನ್ ರೇಸ್ ಖಯಾಲಿ ಹತ್ತಿಸಿಕೊಂಡಿದ್ದಾಳೆ ಎಂದೇ ಭಾವಿಸಿದ್ದರು.
ನಿಜ ಸಂಗತಿ ಏನೆಂದರೆ, ಅಕ್ಷಯ್ ಕುಮಾರ್ ಹೀರೋ ಆಗಿರುವ ಟಾಯ್ಲೆಟ್- ಏಕ್ ಪ್ರೇಮ್ ಕಥಾದಲ್ಲಿ ಸನಾ ಖಾನ್‌ಗೂ ಒಂದು ಪ್ರಮುಖ ಪಾತ್ರವಿದೆ. ಇದರಲ್ಲಿ ಆಕೆ ಕುದುರೆ ಮಾಲಕಿಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಈ ಪಾತ್ರದ ತಯಾರಿಗಾಗಿ ಸನಾ ನಿತ್ಯ ಮಹಾಲಕ್ಷ್ಮಿ ರೇಸ್‌ಕೋರ್ಸ್‌ಗೆ ಹೋಗಿ ಕುದುರೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಳು. ಹೀಗೆ ಕುದುರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವಂತೆಯೇ ಕ್ರಮೇಣ ಅವಳಿಗೆ ಕುದುರೆ ಮೋಹ ಬೆಳೆದಿದೆ. ಈಗ ತಾನೇ ಒಂದು ಕುದುರೆ ಖರೀದಿಸಿ ಸಾಕುವ ನಿರ್ಧಾರ ಮಾಡಿದ್ದಾಳೆ. ಹೀಗಾಗಿ ಕುದುರೆ ಸಾಕುವ ವಿಧಾನಗಳನ್ನು ಕಲಿತುಕೊಳ್ಳುತ್ತಿದ್ದಾಳೆ. ಅಂದ ಹಾಗೆ ಸನಾ ಖಾನ್ ಎಂದರೆ ಯಾರು ಎಂಬ ಕುತೂಹಲ ಮೂಡಿರಬಹುದು. ಸಲ್ಮಾನ್ ಖಾನ್ ನಟಿಸಿದ ಜೈಹೋದಲ್ಲಿ ನಟಿಸಿದ ಬಳಿಕ ತುಸು ಪ್ರಚಾರಕ್ಕೆ ಬಂದಿರುವ ನಟಿಯೇ ಸನಾ ಖಾನ್. ಹಾಗೆಂದು ಜೈಹೋ ಅವಳ ಮೊದಲ ಚಿತ್ರವಲ್ಲ. ಒಂದು ಕನ್ನಡ ಚಿತ್ರವೂ ಸೇರಿದಂತೆ ಸುಮಾರು 15 ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾಳೆ. ಇನ್ನೂ ಆರು ಚಿತ್ರಗಳು ಶೂಟಿಂಗ್‌ನಲ್ಲಿವೆ. 12 ವರ್ಷದಲ್ಲಿ ಐದು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಅವಳದ್ದು. ಜತೆಗೆ 50ಕ್ಕೂ ಅಧಿಕ ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಬಿಗ್‌ಬಾಸ್ ಶೋ ಸ್ಪರ್ಧಿಯೂ ಆಗಿದ್ದಳು.
ಎಲ್ಲ ಬಾಲಿವುಡ್ ನಟಿಯರಂತೆಯೇ ಸನಾ ಖಾನ್ ಕೂಡ ಪ್ರಸಿದ್ಧಿಗೆ ಬಂದಿರುವುದು ತಮಿಳು ಮತ್ತು ತೆಲುಗು ಚಿತ್ರಗಳ ಮೂಲಕ. ದಕ್ಷಿಣದತ್ತ ಬರುವ ಮೊದಲು ಅವಳು ಹಿಂದಿಯ ಕಡಿಮೆ ಬಜೆಟ್‌ನ ಬ್ರಿ ಗ್ರೇಡ್ ಚಿತ್ರಗಳಿಗೆ ನಾಯಕಿಯಾಗಿದ್ದಳು. ಹಾಗೆಯೇ ಸನಾ ದಕ್ಷಿಣದವಳೂ ಹೌದು. ಅವಳ ತಂದೆ ಕೇರಳ ಕಣ್ಣೂರಿನವರು. ಆದರೆ ಸನಾ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲಿ. ಹೀಗಾಗಿ ದಕ್ಷಿಣದ ಯಾವ ಭಾಷೆಯೂ ಬರುವುದಿಲ್ಲ. ಜೈಹೋ ಬಳಿಕ ಆಕೆ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದಾಳೆ. ಈಗ ಒಳ್ಳೊಳ್ಳೆಯ ಪಾತ್ರಗಳು ಸಿಗುತ್ತಿವೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Belthangady: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಬಲಿಪೂಜೆ
Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್ ತೀರ್ಪು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.