ಇನಾಫಿ, ಫನೇಕ್, ಫೊಟ್ಲೋಯ್
ಮಣಿಪುರದ ಮಹಿಳೆಯರ ಸಾಂಪ್ರದಾಯಿಕ ಉಡುಗೆ
Team Udayavani, Sep 20, 2019, 4:48 AM IST
ಮಣಿಪುರದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ವೈಶಿಷ್ಟéವೆಂದರೆ ಹಲವು ಗಾಢರಂಗಿನ ವೈವಿಧ್ಯಮಯ ಹಲವು ಬುಡಕಟ್ಟು ಪಂಗಡಗಳ ಉಡುಗೆಗಳ ಆಗರ!
ಈ ಕೆಳಗೆ ಹಲವು ಬಗೆಯ ಮಣಿಪುರದ ಮಹಿಳೆಯರ ಉಡುಗೆ-ತೊಡುಗೆಗಳ ಚಿತ್ರಣ ನೀಡಲಾಗಿದೆ.
ಇನಾಫಿ
ಇದು ಮಣಿಪುರದ ಮಹಿಳೆಯರು ಶಾಲ್‌ನಂತೆ ಸುತ್ತಿ ಧರಿಸುವ ಮೇಲ್‌ವಸ್ತ್ರ. ಹೇಗೆ ಕಾಶ್ಮೀರಿ ಶಾಲ್‌ಗಳು ತಮ್ಮ ವಿಶಿಷ್ಟತೆಗಾಗಿ ಹೆಸರು ಪಡೆದಿವೆಯೋ, ಅದೇ ರೀತಿಯಲ್ಲಿ ಮಣಿಪುರೀ “ಇನಾಫಿ’ ಬಗೆಯ ಮೇಲ್‌ವಸ್ತ್ರದ ಶಾಲ್‌ಗಳು ತಮ್ಮದೇ ವಿಶಿಷ್ಟತೆ ಪಡೆದಿವೆ.
ಅರೆ ಪಾರದರ್ಶಕವಾಗಿ ರುವ ಈ ಶಾಲ್‌ಗಳು, ಕೈಮಗ್ಗದ ವಿಶಿಷ್ಟ ಕಲಾಕಾರರಿಂದ ಜತನದಿಂದ ವಿನ್ಯಾಸ ಪಡೆಯುತ್ತಿದ್ದು, ಇಂದು ಆಧುನಿಕ ವಿನ್ಯಾಸಗಳೊಂದಿಗೆ ಸಾಂಪ್ರದಾಯಿಕ ವೈಭವವನ್ನೂ ಉಳಿಸಿಕೊಂಡಿದೆ.
ಫನೇಕ್
ಇದು ಸ್ಕರ್ಟ್ ನಂತೆ ಸುತ್ತಿಕೊಳ್ಳುವ ತೊಡುಗೆಯಾಗಿದ್ದು ಹತ್ತಿ, ರೇಶಿಮೆ ನೂಲುಗಳಿಂದ ಅರೆಪಾರದರ್ಶಕವಾಗಿ ತಯಾರಿಸಲಾಗುತ್ತದೆ. ಫನೇಕ್‌ನ ವೈಶಿಷ್ಟವೆಂದರೆ ಇದರಲ್ಲಿ ಎಲ್ಲೂ ಹೂವಿನ ಬಗೆಯ ವಿನ್ಯಾಸಗಳು ಕಾಣಸಿಗುವುದಿಲ್ಲ. ಉದ್ದುದ್ದದ ಅಡ್ಡ ಗೆರೆಗಳ ಅಥವಾ ಚೌಕಗಳ ಚಿತ್ತಾರವೇ ಈ ತೊಡುಗೆಯ ವಿಶೇಷತೆ. ಫನೇಕ್ ತೊಡುಗೆಗೆ ಮೇಲ್‌ವಸ್ತ್ರವಾಗಿ ಕುಪ್ಪಸದಂತಹ ತೊಡುಗೆಯನ್ನು ಧರಿಸಲಾಗುತ್ತದೆ. ಇದನ್ನು ಸರಳವಾಗಿ ವಿವರಿಸುವುದೆಂದರೆ ಉತ್ತರ ಭಾರತೀಯ ಸೀರೆಗಳ ರೀತಿ ತೊಡಲಾಗುತ್ತಿದೆ! ಇದನ್ನು ಬೇಸಿಗೆಯ ಕಾಲದಲ್ಲಿ ಅಧಿಕವಾಗಿ ಎಲ್ಲೆಡೆಯೂ ಬಳಸಲಾಗುತ್ತದೆ.
ಮಯೇಕ್ ನೈಬಿ
ಇದು ಫನೇಕ್‌ನಂತಹ ತೊಡುಗೆ. ಆದರೆ, ವಿಶೇಷ ಸಮಾರಂಭಗಳಲ್ಲಿ ತೊಡುವಂತೆ ವೈಭವಯುತವಾಗಿ ಆಕರ್ಷಕವಾಗಿ ತಯಾರಿಸಲಾಗುತ್ತದೆ.
ಇದನ್ನು ಅಂದದ ತುಂಬ ಕಸೂತಿ ಕಲೆಯ ಸಿಂಗಾರದಿಂದ ವಿವಿಧ ಬಗೆಯ ಹರಳು, ಮಣಿಗಳಿಂದಲೂ ತಯಾರಿಸಲಾಗುತ್ತದೆ.
ಲೈಫೀ ಹಾಗೂ ಬೆನ್‌ಫೀ
ಇದು ಫನೇಕ್ ತೊಡುಗೆಯಂತೆಯೇ. ಆದರೆ, ಮದುವೆ, ಸಭೆ, ಸಮಾರಂಭಗಳಲ್ಲಿ ಉಡುವಂತೆ ವಿಶೇಷ ರೀತಿಯಲ್ಲಿ ತಯಾರಿಸಲಾದ ಉಡುಗೆಯಿದು. ಲೈಫೀಯು ಬಿಳಿಯ ಬಣ್ಣದ ವಸ್ತ್ರಕ್ಕೆ ಹಳದಿ ರಂಗಿನ ಅಂಚನ್ನು ಹೊಂದಿರುತ್ತದೆ.
ಬೆನ್‌ಫೀ ಎಂದರೆ ಅಂದದ ಕಸೂತಿಯಿಂದ ಸಿಂಗರಿಸಲಾದ ಕುಪ್ಪಸದಂತಹ ತೊಡುಗೆ. ಇದನ್ನು ತೊಡುವಾಗ ಇದರ ವಿನ್ಯಾಸಕ್ಕೆ ಹೊಂದುವಂತೆ ಫನೇಕ್ ತೊಡುಗೆಯನ್ನೂ ಆಯ್ಕೆ ಮಾಡಲಾಗುತ್ತದೆ. ಹೀಗೆ ಅಂದದ ಫನೇಕ್ ಹಾಗೂ ಬೆನ್‌ಫೀ ತೊಡುಗೆ ಸಾಂಪ್ರದಾಯಿಕ ಪ್ರಾಚೀನ ತೊಡುಗೆಯಾಗಿದ್ದರೂ, ಅದರ ಪ್ರಾದೇಶಿಕ ವಿಶೇಷತೆಯಿಂದ ಹಾಗೂ ಅಂದದಿಂದಾಗಿ ಆಧುನಿಕ ಕಾಲದಲ್ಲೂ ಜನಪ್ರಿಯ ಮಣಿಪುರೀ ಉಡುಗೆಯಾಗಿದೆ.
ಪೊಟ್ಲೋಯ್
ಮಣಿಪುರದ ಮದುವೆ ಸಮಾರಂಭಗಳಲ್ಲಿ ಅಧಿಕವಾಗಿ ಕಂಡುಬರುವ ದಿರಿಸು ಎಂದರೆ ಸಾಂಪ್ರದಾಯಿಕ ಸಿಲಿಂಡರ್‌ನಂತಹ ಸ್ಕರ್ಟ್. ಅದೇ ಪೊಟೊÉಯ್. ಇದು ವಧುವೂ ಸಹಿತ ತೊಡುವ ವಿಶೇಷ ಉಡುಗೆ. ಇದರ ಮೇಲೆ ಕುಪ್ಪಸವೂ ಜೊತೆಗೆ ಸೊಂಟಪಟ್ಟಿಯನ್ನೂ ಧರಿಸಲಾಗುತ್ತದೆ.
ಸಾಮಾನ್ಯವಾಗಿ ಹಸಿರು, ಗುಲಾಬಿ ಹಾಗೂ ಕೆಂಪು ರಂಗಿನ ಈ ಉಡುಗೆ ಹರಳು, ಮಣಿ ಹಾಗೂ ವೈಭವಯುತ ಕಸೂತಿ ವಿನ್ಯಾಸಗಳೊಂದಿಗೆ ಶ್ರೀಮಂತ ನೋಟ ಬೀರುವಂತೆ ತಯಾರಿಸಲಾಗುತ್ತದೆ.
ಹಬ್ಬದ ಸಮಯದ ವಿಶೇಷ ತೊಡುಗೆ
ಮಣಿಪುರವು ಹಲವು ವಿಶೇಷ ಹಬ್ಬ ಹಾಗೂ ನೃತ್ಯ ಶೈಲಿಗಳಿಂದ ಜನಪ್ರಿಯವಾಗಿದೆ. ಹಬ್ಬದ ಸಮಯದಲ್ಲಿ ಅದು ವಿಶೇಷವಾಗಿ “ರಾಸ್‌ಲೀಲಾ’ ಹಬ್ಬದ ಆಚರಣೆಯ ಸಮಯದಲ್ಲಿ ಪೊಟೊಯ್‌ನೊಂದಿಗೆ “ಕುಮಿನ್’ ಎಂಬ ದಿರಿಸು ಧರಿಸಲಾಗುತ್ತದೆ. ಇದನ್ನು ನೃತ್ಯಕ್ಕಾಗಿಯೇ ಆರಾಮದಾಯಕ ಹಾಗೂ ಆಕರ್ಷಕವಾಗಿ ವಿಶೇಷ ರೀತಿಯಲ್ಲಿ ತಯಾರಿಸಲಾಗಿರುತ್ತದೆ. ಮಣಿಪುರ ರಾಜ್ಯದಲ್ಲಿ ಇಂದಿಗೂ ಕೈಮಗ್ಗ ಹಾಗೂ ಯಾಂತ್ರಿಕ ಮಗ್ಗಗಳಿಂದ ವಸ್ತ್ರವಿನ್ಯಾಸ ಮಾಡುವುದು ದೊಡ್ಡ ಉದ್ಯಮವಾಗಿ ಬೆಳೆಯುತ್ತಲೇ ಇದೆ.
ಮಲ್‌ಬರಿ ರೇಶಿಮೆಯ “ಕಬ್ರಂಗ್’ ವಸ್ತ್ರಗಳ ಮೇಲಿನ ವಿನ್ಯಾಸಗಳು ಎಲ್ಲೆಡೆ ಜನಪ್ರಿಯವಾಗಿವೆ. ಟಿನ್‌ಡೋಗಿ ಎಂಬ ರೇಶಿಮೆಯ ವಿನ್ಯಾಸ ಅದರಲ್ಲೂ ಸರ್ಪದ ಕಸೂತಿ ವಿನ್ಯಾಸ (ಅಕೊಯ್‌ಬಿ) ಅತೀ ಆಕರ್ಷಕವಾಗಿದೆ. ಈ ವಿನ್ಯಾಸವನ್ನು ಮಣಿಪುರದ ದಿರಿಸುಗಳಲ್ಲಿ ಮಾತ್ರ ಕಾಣುವಂತಹದಾಗಿದೆ! ಇದರೊಂದಿಗೆ ಆಭರಣಗಳನ್ನೂ ವಿಶೇಷ ರೀತಿಯಲ್ಲಿ ಧರಿಸಲಾಗುತ್ತದೆ. ಮಣಿಪುರದ ಸಾಂಪ್ರದಾಯಿಕ ಆಭರಣಗಳೆಂದರೆ ಕಿಯಾಮ್ ಹಾಗೂ ಲಿಪಂಗ್, ಇವು ಸಾಂಪ್ರದಾಯಿಕ ತೊಡುಗೆಗೆ ವಿಶೇಷ ಮೆರುಗನ್ನು ನೀಡುತ್ತದೆ.
ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.