ತುಸ್ಸಾರ್ ಸೀರೆ
Team Udayavani, Jul 19, 2019, 5:15 AM IST
ಜಾರ್ಖಂಡ್‌ನ ಮಹಿಳೆಯರ ಸಾಂಪ್ರದಾಯಕ ಉಡುಗೆ ಪಂಚಿ ಮತ್ತು ಪರಹನ್. ಇದನ್ನು ಹೆಚ್ಚಾಗಿ ಬುಡಕಟ್ಟು ಜನಾಂಗದ ಮಹಿಳೆಯರು ವಿಶಿಷ್ಟ ರೀತಿಯಲ್ಲಿ ಧರಿಸುತ್ತಾರೆ. ಪಂಚಿ ಸೊಂಟದ ಸುತ್ತ ಸುತ್ತುವ ಉಡು ವಸ್ತ್ರವಾಗಿದ್ದರೆ, ಪರಹನ್ ಅದರ ಮೇಲೆ ಧರಿಸುವ ತೊಡುಗೆಯಾಗಿದೆ.
ತಸರ್ ಅಥವಾ ತುಸ್ಸಾರ್ ರೇಷ್ಮೆ ಸೀರೆಗಳು ಜಾರ್ಖಂಡ್ ಮಹಿಳೆಯರ ವಿಶೇಷ ಸೀರೆಯ ವಿಧವಾಗಿವೆ. ಭಾರತದ ಅತ್ಯುತ್ತಮ ಸಾಂಪ್ರದಾಯಕ ಸೀರೆಗಳ ವಿನ್ಯಾಸದಲ್ಲಿ ತುಸ್ಸಾರ್ ಸಿಲ್ಕ್ ಸೀರೆಗಳು ಬಹು ಮಹತ್ವ ಪಡೆದಿವೆ. ಭಾರತದ ವಿವಿಧ ಭಾಗಗಳಲ್ಲಿ ಮಾತ್ರವಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಇಂದು ಈ ಸೀರೆ ಬೇಡಿಕೆ ಹೊಂದಿದೆ.
ತುಸ್ಸಾರ್ ರೇಷ್ಮೆ ಸೀರೆಯ ನೇಯ್ಗೆ ಸಾಂಪ್ರದಾಯಿಕವಾಗಿ ಆರಂಭವಾದದ್ದು ಸರಿಸುಮಾರು ಮಧ್ಯಕಾಲೀನ ಯುಗದ ಸಮಯದಲ್ಲಿ. ಇದನ್ನು ವಿಶೇಷವಾದ ರೇಷ್ಮೆ ಹುಳ (ಅಂಧೇರಿ ಯಾ ಪಪಿಯಾ) ದಿಂದ ತಯಾರಿಸಲಾಗುತ್ತಿತ್ತು. ಇದಕ್ಕೆ “ಕಚ್ಚಾ ರೇಷ್ಮೆ’ ಎಂದೇ ಹೆಸರು. ಸಂಸ್ಕೃತದಲ್ಲಿ “ಕೋಸಾ’ ರೇಶೆ¾ ಎಂದು ಕರೆಯುವ ಈ ಸೀರೆಯ ಬಂಗಾರದ ಬಣ್ಣ ಹಾಗೂ ವಿಶೇಷ ವಿನ್ಯಾಸವು ಈ ಸೀರೆಯನ್ನು ಜನಪ್ರಿಯವಾಗಿಸಿದೆ. ಈ ಸೀರೆಯನ್ನು ಜಾನಪದೀಯರು ಹಾಗೂ ಬುಡಕಟ್ಟು ಜನಾಂಗದವರು ನೇಯ್ದು ಪ್ರಸ್ತುತಪಡಿಸುತ್ತಿದ್ದರು. ಆರಂಭದಲ್ಲಿ ಕೈಮಗ್ಗದಲ್ಲೇ ತಯಾರಾಗುತ್ತಿದ್ದ ಈ ಸೀರೆಗಳು ಇಂದು ಅಧಿಕ ಬೇಡಿಕೆಯಿಂದಾಗಿ ಯಾಂತ್ರೀಕೃತ ಮಗ್ಗಗಳಿಂದಲೂ ತಯಾರಾಗುತ್ತಿವೆ.
ಆದರೆ ಇಂದಿಗೂ ಹೆಚ್ಚಿನ ಬೇಡಿಕೆ ಇರುವುದು ಹಾಗೂ ಆಕರ್ಷಕವಾಗಿರುವುದು ಸಾಂಪ್ರದಾಯಿಕ ಶೈಲಿಯ ವಿನ್ಯಾಸ ಹೊಂದಿರುವ ಕೈಮಗ್ಗದ ತುಸ್ಸರ್ ಸೀರೆಗಳು!
10 ಮೀಟರ್‌ನ ತುಸ್ಸಾರ್ ಸಿಲ್ಕ್ ಸೀರೆ ತಯಾರಾಗಲು 3 ದಿನಗಳು ಹಾಗೂ ಹಲವು ಮಹಿಳೆಯರ ಕೈಚಳಕ ಒಂದುಗೂಡಿರುತ್ತದೆ!
ಇದರ ವಿವಿಧ ವಿನ್ಯಾಸ ಹಾಗೂ ರಚನಾ ವೈವಿಧ್ಯದಿಂದಾಗಿ ಕಟಿಯಾ, ಗಿಚ್ಛಾ ಬಗೆಯ ತುಸ್ಸರ್ ರೇಶೆ¾ ಸೀರೆಗಳೂ ಜನಜನಿತವಾಗಿವೆ.
ತುಸ್ಸಾರ್ ಸೀರೆಗಳು ದೇಹವನ್ನು ತಂಪಾಗಿಸಿಡುವುದು ಈ ರೇಶೆ¾ ಸೀರೆಯ ವಿಶೇಷತೆ! ಈ ಸೀರೆಗೆ ತಯಾರಿಸುವ ಕಚ್ಚಾ ರೇಶೆ¾ಯು ಮಾತ್ರ “ತಂಪು’ ಗುಣವನ್ನು ಹೊಂದಿರುವುದಲ್ಲ- ಸೀರೆ ತಯಾರಿಸುವಾಗ ನಡುವೆ ಗಾಳಿಯಾಡುವಂತೆ ವಿನ್ಯಾಸ ಮಾಡಿರುತ್ತಾರೆ! ಆದ್ದರಿಂದ ಉಷ್ಣ ಪ್ರದೇಶಗಳಲ್ಲಿ, ಬೇಸಿಗೆಯಂತಹ ಉಷ್ಣತೆ ಅಧಿಕವಾಗಿರುವ ಕಾಲದಲ್ಲಿ ಈ ಸೀರೆ ಉಡಲೂ ಆರಾಮದಾಯಕ ಜೊತೆಗೆ ಅಂದಚಂದವೂ ಹೆಚ್ಚು !
ಆಧುನಿಕ ಕಾಲದಲ್ಲಿ ತುಸ್ಸಾರ್ ರೇಶೆ¾ ಬಟ್ಟೆಯ ಕುರ್ತಾ, ಕುರ್ತಿ, ಪೈಜಾಮಾ, ಸೆಲ್ವಾರ್ ಕಮೀಜ್‌ನಂತಹ ವಸ್ತ್ರಗಳನ್ನು ಧರಿಸುತ್ತಾರೆ. ಇದು ಪ್ರಾಚೀನ ಕಲಾತ್ಮಕ ಸೀರೆಯ ಆಧುನಿಕ ರೂಪವಾಗಿದೆ.
ಮದುವೆ ಹಾಗೂ ವಿಶೇಷ ಸಮಾರಂಭಗಳಲ್ಲಿ ತೊಡುವ ತುಸ್ಸಾರ್ ಸಿಲ್ಕ್ ಸೀರೆಗಳಿಗೆ ವೈಭವೋಪೇತ ಕಸೂತಿಯ ವಿನ್ಯಾಸಗಳನ್ನು , ಜರಿಯ ವಿಶಿಷ್ಟ ಅಂಚಿನ ಕಲಾತ್ಮಕತೆಯನ್ನು ಮೋತಿ, ಹರಳು ಇತ್ಯಾದಿಗಳಿಂದ ಅಲಂಕಾರವನ್ನೂ ಮಾಡಲಾಗುತ್ತದೆ.
ಭಾರತದ ಹಲವೆಡೆ ತುಸ್ಸಾರ್ ಸಿಲ್ಕ್ ಸೀರೆಯನ್ನು ವಧುವು ಮೆಚ್ಚಲು ಹಾಗೂ ಅಧಿಕವಾಗಿ ಧರಿಸುವ ಕಾರಣವೆಂದರೆ ವೈಭವೋಪೇತ ವಿನ್ಯಾಸವಿದ್ದರೂ ಸೀರೆ ಲಘುವಾಗಿ ಭಾರವನ್ನು ಹೊಂದಿರುವುದಿಲ್ಲದಿರುವುದು. ಈ ಸೀರೆ ಧರಿಸಿದರೆ ಕೆಲವು ಭಾರೀ ವಿನ್ಯಾಸದ, ಭಾರದ ಸೀರೆಗಳನ್ನು ಉಟ್ಟಂತೆ “ದಪ್ಪ’ವಾಗಿಯೂ ಕಾಣಿಸುವುದಿಲ್ಲ. ಆದ್ದರಿಂದ ಈ ಸೀರೆ ಇಂದಿನ ಜನಪ್ರಿಯ ಟ್ರೆಂಡ್!
ಮುಗಾ ತುಸ್ಸಾರ್ ಸೀರೆಯ ವೈವಿಧ್ಯವೆಂದರೆ ಅಸ್ಸಾಂನ ಮುಗಾ ರೇಶೆ¾ ಸೀರೆಯ ವಸ್ತ್ರ ಹಾಗೂ ಜಾರ್ಖಂಡ್‌ನ ತುಸ್ಸಾರ್ ರೇಶೆ¾ಯ ವಸ್ತ್ರದ ವಿನ್ಯಾಸವನ್ನು ಜೊತೆಗೂಡಿಸಿ ತಯಾರು ಮಾಡಲಾಗುತ್ತದೆ. ಆಧುನಿಕ ಭಾರತದಲ್ಲಿ ಈ ಸೀರೆಗಳಿಗೂ ಅಧಿಕ ಬೇಡಿಕೆ ಇದೆ. “ಸುಬರ್ಣರೇಖಾ’ ಜಾರ್ಖಂಡ್‌ನಲ್ಲಿ ಹರಿಯುವ ನದಿ ಹಾಗೂ ಜೀವನಾಡಿಯಾಗಿದ್ದು ಸುಬರ್ಣರೇಖಾ ಸಿಲ್ಕ್ ಸೀರೆಗಳೂ ಆಧುನಿಕ ಮೆರುಗಿನೊಂದಿಗೆ ಜಗತ್ತಿಗೆ ತೆರೆದುಕೊಂಡಿವೆ.
ಜಾರ್ಖಂಡ್‌ನ ತುಸ್ಸಾರ್ ಬಗೆಯ ಸೀರೆಗಳು ವಿಶ್ವಾದ್ಯಂತ ರಫ್ತಾಗುತ್ತವೆ.
ಬೇಡಿಕೆ ಹೆಚ್ಚುತ್ತಿರುವುದರಿಂದ ಈ ಕಲಾತ್ಮಕ ಸೀರೆಯ ಸಾಂಪ್ರದಾಯಕತೆಯನ್ನು , ಆಧುನಿಕತೆಯ ಮೆರುಗನ್ನು ಉಳಿಸಿ ಬೆಳೆಸಲು ಸರ್ಕಾರ ಹಾಗೂ ಹಲವು ಸಂಘಸಂಸ್ಥೆಗಳು ಸೀರೆಯ ನೇಯ್ಗೆಕಾರರಿಗೆ ವಿಧವಿಧದ ಸೌಲಭ್ಯ-ಪ್ರೋತ್ಸಾಹ ನೀಡುತ್ತಿವೆ.
ಈ ತುಸ್ಸಾರ್ ಸೀರೆ ಉಡುವಾಗ ಧರಿಸುವ ಆಭರಣಗಳಲ್ಲಿಯೂ ಜಾರ್ಖಂಡ್‌ನ ಜನಜೀವನದ ಸೊಗಡು ಹಾಗೂ ಅಂದ ಜೊತೆಗೂಡಿರುತ್ತದೆ.ಒಂದು ಪ್ರದೇಶದ ಸಾಂಪ್ರದಾಯಕ ಉಡುಗೆ-ತೊಡುಗೆ ಆ ಪ್ರದೇಶದ ಮೆರುಗನ್ನು ಹೆಚ್ಚಿಸುವುದರ ಜೊತೆಗೆ ಘನತೆಯನ್ನೂ ಸಾರುತ್ತವೆ, ಎನ್ನುವುದಕ್ಕೆ ಜಾರ್ಖಂಡ್‌ನ ತುಸ್ಸಾರ್ ಸೀರೆಯ ಜನಪ್ರಿಯ ಗಾಥೆ ಉದಾಹರಣೆಯಾಗಿದೆ.
ಹೌದು, ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭೂಮಿ! ಭರತಭೂಮಿಯ ಪರಿಪೂರ್ಣ ಸಾರಸಂಗ್ರಹವನ್ನು ಆಸ್ವಾದಿಸಬೇಕೆಂದರೆ ಇಂತಹ ಪ್ರಾದೇಶಿಕ ಸೊಗಸು ಹಾಗೂ ಸಾಂಪ್ರದಾಯಕತೆಯನ್ನು ಹೊಕ್ಕು ನೋಡಬೇಕು!
-ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.